Sunday, December 8, 2019

ಉನ್ನಾವೋ: ಪ್ರತಿಭಟನೆ ವೇಳೆ ಮಗಳ ಮೇಲೆ ಪೆಟ್ರೋಲ್ ಸುರಿದ ತಾಯಿ!

ಉನ್ನಾವೋ: ಪ್ರತಿಭಟನೆ ವೇಳೆ ಮಗಳ ಮೇಲೆ
ಪೆಟ್ರೋಲ್ ಸುರಿದ ತಾಯಿ!
ನವದೆಹಲಿ: ಉನ್ನಾವೋ ಜಿಲ್ಲೆಯ ಸಿಂಧುನಗರದಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಸುಟ್ಟುಕೊಂದ ಆರೋಪಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳ ಮೇಲೆಯೇ ಪೆಟ್ರೋಲ್ ಸುರಿದ ಕಳವಳಕಾರಿ ಘಟನೆ 2019 ಡಿಸೆಂಬರ್ 07ರ ಶನಿವಾರ ಘಟಿಸಿತು.

ಅಸ್ವಸ್ಥಳಾಗಿರುವ ಬಾಲಕಿಯನ್ನು ಕೂಡಲೇ ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಗೆ ಸೇರಿಸಲಾಯಿತು. ತುತು ಚಿಕಿತ್ಸಾ ಘಟಕದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ, ಕೃತ್ಯವೆಸಗಿದ ತಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆಗೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ.

ಉನ್ನಾವೋ ಜಿಲ್ಲೆಯ ಸಿಂಧುನಗರ ಪ್ರಕರಣದ ಸಂತ್ರಸ್ತೆ ಆರೋಪಿಗಳ ಹಲ್ಲೆಯಿಂದ ಶುಕ್ರವಾರ ತಡರಾತ್ರಿ ಕೊನೆಯುಸಿರು ಎಳೆದ ನಂತರದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ರೀತಿ ಪ್ರತಿಭಟನೆ ನಡೆಸುತ್ತಿರುವ ವೇಳೆ ತಾಯಿ ಮಗಳ ಮೇಲೆ ಪೆಟ್ರೋಲ್ ಸುರಿದುದು ಈಗ ದೇಶಾದ್ಯಂತ ಕಳವಳವನ್ನು ಹುಟ್ಟುಹಾಕಿದೆ.

No comments:

Advertisement