‘ಫ್ರೀ ಕಾಶ್ಮೀರ’
ಭಿತ್ತಿಪತ್ರ: ಅರುದ್ರಾ ವಿರುದ್ಧ ಎಫ್ ಐಆರ್, 2 ವಾರಗಳ ನ್ಯಾಯಾಂಗ ಬಂಧನ
ಬೆಂಗಳೂರು:
ಪಾಕಿಸ್ತಾನ ಪರ ಘೋಷಣೆ ಕೂಗಿ ‘ಫ್ರೀ ಕಾಶ್ಮೀರ’ ಭಿತ್ತಿ
ಚಿತ್ರ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಫೆಬ್ರುವರಿ 21ರ ಶುಕ್ರವಾರ ಬಂಧಿತಳಾದ ಆರೋಪಿ ಅರುದ್ರಾಗೆ
ನ್ಯಾಯಾಲಯವು ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.
ನಗರದ ೬ನೇ
ಎಸಿಎಂಎ ನ್ಯಾಯಾಧೀಶ ಕೃಷ್ಣಮೂರ್ತಿ ನ್ಯಾಯಾಂಗ ಬಂಧನಕ್ಕೆ
ಆದೇಶಿಸಿದರು. ಮಾರ್ಚ್ ೫ರವೆಗೂ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅರುದ್ರಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಯಿತು.
2020 ಫೆಬ್ರುವರಿ
20ರ ಗುರುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾ
ಕಾರ್ಯಕ್ರಮದ ವೇಳೆಯಲ್ಲಿ ಎಕಾಏಕಿ ‘ಪಾಕಿಸ್ತಾನ್
ಜಿಂದಾಬಾದ್’ ಎಂದು ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದ
ಬೆಂಗಳೂರಿನ ಎನ್ ಎಂಕೆ ಆರ್ ವಿ ಕಾಲೇಜಿನ ವಿದ್ಯಾರ್ಥಿನಿ, ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ
ವಿರುದ್ಧ ಈದಿನ ಟೌನ್ ಹಾಲ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಹಿಂದೂಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅರುದ್ರಾ ಎಂಬ ಯುವತಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಲ್ಲದೆ ‘ಫ್ರೀ ಕಾಶ್ಮೀರ’ ಭಿತ್ತಿಚಿತ್ರ ಪ್ರದರ್ಶಿಸಿದಳು ಎಂಬುದಾಗಿ ಆರೋಪಿಸಲಾಯಿತು.
ಹಿಂದೂಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅರುದ್ರಾ ಎಂಬ ಯುವತಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಲ್ಲದೆ ‘ಫ್ರೀ ಕಾಶ್ಮೀರ’ ಭಿತ್ತಿಚಿತ್ರ ಪ್ರದರ್ಶಿಸಿದಳು ಎಂಬುದಾಗಿ ಆರೋಪಿಸಲಾಯಿತು.
ಸಿಎಎ ವಿರೋಧಿಸಿ
ಪ್ರತಿಭಟನೆ ವೇಳೆ ಸ್ವಾತಂತ್ರ್ಯ ಉದ್ಯಾನವನದಲ್ಲಿ
’ಪಾಕಿಸ್ತಾನ್ ಜಿಂದಾಬಾದ್’ ಎಂದು ಅಮೂಲ್ಯ ಲಿಯೋನಾ ಘೋಷಣೆ ಕೂಗಿದ್ದಳು. ಈಕೆ ವಿರುದ್ಧ ಹಿಂದೂಪರ
ಸಂಘಟನೆಗಳು ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದವು. ಆಗ ಅರುದ್ರಾ ಎಂಬಾಕೆ ದಿಢೀರ್, ‘ಮುಸಲ್ಮಾನ್,
ದಲಿತ, ಕಾಶ್ಮೀರಿ, ಟ್ರಾನ್ಸ್ , ಆದಿವಾಸ ಮುಕ್ತಿ’ ಎಂದು
ಬರೆದಿದ್ದ ಭಿತ್ತಿಪತ್ರ ಪ್ರದರ್ಶಿಸಿದಳು. ನಂತರ ಪಾಕಿಸ್ತಾನ ಪರ ಘೋಷಣೆ ಕೂಗಿದಳು ಎಂದು ಪ್ರತಿಭಟನೆ ಆಯೋಜಿಸಿದ್ದ ಸಂಘಟಕರು ಆರೋಪಿಸಿದರು.
ಪಾಕ್ ಪರ ಘೋಷಣೆ
ಕೂಗಿದ್ದಾಳೆ ಎನ್ನಲಾದ ಯುವತಿ ಅರುದ್ರಾ ವಿರುದ್ಧ ಸಿಲ್ವರ್ ಜ್ಯುಬಿಲಿ ಪಾರ್ಕ್ ಠಾಣೆಯಲ್ಲಿ ಪ್ರಕರಣ
ದಾಖಲಾಯಿತು. ಐಪಿಸಿ ೧೫೩ಎ ಮತ್ತು೧೫೩ಬಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡರು.
ಅರುದ್ರಾ ಗ್ರಾಫಿಕ್
ಡಿಸೈನರ್. ಮೂಲತ ಮಲ್ಲೇಶ್ವರ ನಿವಾಸಿ. ಆಕೆ ಖಾಸಗಿ ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿದ್ದಳು. ಸದ್ಯ
ಖಾಸಗಿ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು.
ಅರುದ್ರಾಳ ಮೂಲ ಹೆಸರು ಅನ್ನಪೂರ್ಣ ಎನ್ನಲಾಗಿದೆ. ಅರುದ್ರಾ ತಾಯಿ ರಮಾ, ತಂದೆ ನಾರಾಯಣ್. ಎರಡು ವರ್ಷದ ಹಿಂದೆ ಈಕೆ ಅಪ್ಪ ಅಮ್ಮನಿಂದ ದೂರವಾಗಿದ್ದಳು. ನಂತರ ಮಲ್ಲೇಶ್ವರಂನ ಅಜ್ಜಿ ಮನೆಯಲ್ಲಿ ಇದ್ದಳು. ಬಳಿಕ ಸ್ನೇಹಿತೆಯೊಂದಿಗೆ ವಾಸವಿದ್ದಳು. ಎಡಪಂಥೀಯ ಚಿಂತನೆಗಳತ್ತ ಒಲವು ಹೊಂದಿದ್ದ ಅರುದ್ರಾ, ತನ್ನ ಹೆಸರು ಬದಲಿಸಿಕೊಂಡಿದ್ದಳು.

ಅಮೂಲ್ಯ ವಿರುದ್ಧ
ನಡೆದ ಪ್ರತಿಭಟನೆಯ ವೇಳೆ ಆರ್ದಾ ಎಂಬಾಕೆ ಏಕಾಏಕಿ ಪಾಕ್ ಪರ ಘೋಷಣೆ ಕೂಗಿದ್ದಳು ಎಂದು ಮೊದಲು ಚಾನೆಲ್
ಗಳು ವರದಿ ಪ್ರಸಾರ ಮಾಡಿದ್ದವು. ಆದರೆ ಆಕೆ ಪಾಕ್ ಪರ ಘೋಷಣೆ ಕೂಗಿಲ್ಲ, ಫ್ರೀ ಕಾಶ್ಮೀರ ಭಿತ್ತಿಪತ್ರ
ಪ್ರದರ್ಶಿಸಿದ್ದಳು ಎಂದು ಪೊಲೀಸರು ಸ್ಪಷ್ಟನೆ ನೀಡಿದರು.
No comments:
Post a Comment