Saturday, March 7, 2020

ಸಿಬಿಐ ವರ್ಸಸ್ ಸಿಬಿಐ: ರಾಕೇಶ್ ಅಸ್ಥಾನ ನಿರಾಳ

ಸಿಬಿಐ ವರ್ಸಸ್  ಸಿಬಿಐ: ರಾಕೇಶ್ ಅಸ್ಥಾನ ನಿರಾಳ
ಲಂಚ ಪ್ರಕರಣದಲ್ಲಿ ಕ್ಲೀನ್ ಚಿಟ್ಗೆ ವಿಶೇಷ ಕೋರ್ಟ್ ಅಸ್ತು
ನವದೆಹಲಿ: ಸಿಬಿಐಯ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಮತ್ತು ಡಿಎಸ್ಪಿ ದೇವೇಂದರ್ ಕುಮಾರ್ ಅವರಿಗೆ ಲಂಚ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿ, ಮನೋಜ್ ಪ್ರಸಾದ್ ವಿರುದ್ಧ ದಾಖಲಿಸಿದ ಸಿಬಿಐ ದೋಷಾರೋಪ ಪಟ್ಟಿಯನ್ನು ದೆಹಲಿಯ ರೋಸ್ ಅವೆನ್ಯೂ ಕಾಂಪ್ಲೆಕ್ಸಲಿನ ಸಿಬಿಐ ವಿಶೇಷ ನ್ಯಾಯಾಲಯವು 2020 ಮಾರ್ಚ್  07ರ ಶನಿವಾರ ಅಂಗೀಕರಿಸಿತು.
ಸಾರ್ವಜನಿಕ ಸೇವಕರಾದ ರಾಕೇಶ್ ಅಸ್ಥಾನ ಮತ್ತು ದೇವೇಂದರ್ ಕುಮಾರ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬುದಾಗಿ ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ ಅಗರ್ವಾಲ್ ಅವರು  ತಮ್ಮ ಆದೇಶದಲ್ಲಿ ತಿಳಿಸಿದರು.

ತಮ್ಮ ವಿರುದ್ಧ ಅಲೋಕ್ ವರ್ಮ ಕುಮ್ಮಕ್ಕಿನಿಂದಕಲ್ಪಿತಎಫ್ ಐಆರ್ ದಾಖಲಿಸಲಾಗಿದೆ ಎಂದು ಮೊದಲ ದಿನದಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದ ರಾಕೇಶ್ ಅಸ್ಥಾನ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವು ಭಾರೀ ನಿರಾಳತೆಯನ್ನು ಒದಗಿಸಿತು.

ಆರೋಪಿಗಳು ಎಂಬುದಾಗಿ ಹೆಸರಿಸಲಾಗಿರುವ ಮನೋಜ್ ಪ್ರಸಾದ್ ಮತ್ತು ಸೋಮೇಶ್ ಪ್ರಸಾದ್ ಅವರ ವಿರುದ್ಧ ದೋಷಾರೋಪ ಪಟ್ಟಿಯಲ್ಲಿ ಮಾಡಲಾಗಿರುವ ವಂಚನೆ ಮತ್ತು ಕ್ರಿಮಿನಲ್ ಸಂಚು ಆಪಾದನೆಗಳನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿದೆ.

ಸೋಮೇಶ್ ಪ್ರಸಾದ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರಲಿಲ್ಲ, ಆದರೆ ಈಗ ಅವರಿಗೂ ಆರೋಪಿಯಾಗಿ ಸಮನ್ಸ್ ಹೊರಡಿಸಲಾಗಿದೆ. ಏನಿದ್ದರೂ ಮನೋಜ್ ಪ್ರಸಾದ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಆರೋಪಿಯಾಗಿ ಹೆಸರಿಸಲಾಗಿದೆ.

ಮಾಜಿ ಸಿಬಿಐ ವಿಶೇಷ ನಿರ್ದೇಶಕರಾಗಿರುವ ರಾಕೇಶ್ ಅಸ್ಥಾನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ (ಪಿಸಿ ಕಾಯ್ದೆ) ಸಂಬಂಧಿತ ವಿಧಿಗಳ ಅಡಿಯಲ್ಲಿ ೨೦೧೮ರ ಅಕ್ಟೋಬರ್ ೧೫ರಂದು ಕ್ರಿಮಿನಲ್ ಸಂಚು, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರ್ವರ್ತನೆ ಆರೋಪಗಳನ್ನು ಹೊರಿಸಲಾಗಿತ್ತು. ಒಂದು ದಿನದ ಬಳಿಕ ದೆಹಲಿಯಲ್ಲಿದ್ದ ಮನೋಜ್ ಪ್ರಸಾದ್ ಅವರನ್ನು ಬಂಧಿಸಿದರೆ, ಡಿಎಸ್ಪಿ ದೇವಿಂದರ್ ಕುಮಾರ್ ಅವರನ್ನು ಒಂದು ವಾರದ ಬಳಿಕ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಕೇಂದ್ರೀಯ ತನಿಖಾ ದಳವು (ಸಿಬಿಐ) ೨೦೨೦ರ ಫೆಬ್ರುವರಿ ೧೧ರಂದು ಮನೋಜ್ ಪ್ರಸಾದ್ ವಿರುದ್ಧ ದೋಷಾರೋಪ ಪಟ್ಟಿಯನ್ನು ದಾಖಲಿಸಿ, ಅಸ್ಥಾನ ಮತ್ತು ದೇವೀಂದರ್ ಕುಮಾರ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಸ್ಥಾನ ಅವರು ಪ್ರಸ್ತುತ ಮಾದಕ ದ್ರವ್ಯಗಳ ನಿಯಂತ್ರಣ ದಳ (ಎನ್ಸಿಬಿ) ಮತ್ತು ನಾಗರಿಕ ವಿಮಾನಯಾನ ಭದ್ರತಾ ದಳದ (ಬಿಸಿಎಎಸ್) ಮುಖ್ಯಸ್ಥರಾಗಿದ್ದಾರೆ.

ಪ್ರಕರಣ ದಾಖಲಾದ ಮೊದಲ ದಿನದಿಂದಲೇ ಅವರು ತಮ್ಮ ವಿರುದ್ಧ ಅಲೋಕ್ ವರ್ಮ ಕುಮ್ಮಕ್ಕಿನಿಂದಕಲ್ಪಿತಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳುತ್ತಲೇ ಬಂದಿದ್ದರು. ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮ ಅವರ ಭ್ರಷ್ಟ ಚಟುವಟಿಕೆಗಳನ್ನು ತಾವು ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಸಂಪುಟ ಕಾರ್ಯದರ್ಶಿಯವರ ಮುಂದೆ ಬಯಲು ಮಾಡಿದ ಬಳಿಕ ತಮ್ಮ ವಿರುದ್ಧಕಲ್ಪಿತಎಫ್ಐಆರ್ ರೂಪಿಸಲಾಯಿತು ಎಂದು ಅವರು ಹೇಳಿದ್ದರು.

ಅಲೋಕ್ ಕುಮಾರ್ ಅವರು ಸತೀಶ್ ಬಾಬು ಸನಾ ಅವರಿಂದ ಕೋಟಿ ರೂಪಾಯಿಗಳನ್ನು ಪಡೆದಿರುವುದಾಗಿ ಅಸ್ಥಾನ ಅವರು ಸಿವಿಸಿ ಮತ್ತು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

ಮನೋಜ್ ಪ್ರಸಾದ್ ಅವರು ಸನಾ ಅವರಿಗೆ ಸಿಬಿಐಯಲ್ಲಿನ ತಮ್ಮಉತ್ತಮ ಸಂಪರ್ಕಗಳನ್ನು ತಿಳಿಸಿದ್ದರು ಮತ್ತು ಅವರ ಸಹೋದರ ಸೋಮೇಶ್ ಅವರು ೨೦೧೭ರಿಂದ ಅಸ್ಥಾನ ನೇತೃತ್ವದ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆ ನಡೆಸುತ್ತಿದ್ದ ಮೊಯಿನ್ ಖುರೇಷಿ ಪ್ರಕರಣದಿಂದ ಹೊರಬರಲು ನೆರವಾಗುವರು ಎಂದು ತಿಳಿಸಿದ್ದರು ಎಂದು ಎಫ್ಐಆರ್ ಹೇಳಿತ್ತು.

ಸೋಮೇಶ್ ಅವರನ್ನು ತಾನು ದುಬೈಯಲ್ಲಿ ಭೇಟಿ ಮಾಡಿದಾಗಅಸ್ಥಾನ ಅವರು ಖಚಿತವಾಗಿ ಕೆಲಸ ಮಾಡಿಕೊಡುತ್ತಾರೆ ಏಕೆಂದರೆ ದುಬೈ ಮತ್ತು ಲಂಡನ್ನಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಅಧಿಕಾರಿಯ (ರಾಕೇಶ್ ಅಸ್ಥಾನ)  ಹೂಡಿಕೆಗಳನ್ನು ಅವರೇ (ಸೋಮೇಶ್) ನಿಭಾಯಿಸಿದ್ದುದಾಗಿಹೇಳಿದ್ದರು ಎಂದು ಸನಾ ಅವರು ಪ್ರತಿಪಾದಿಸಿದ್ದರು.

ಸೋಮೇಶ್ ಅವರ ವಾಟ್ಸಪ್ನಲ್ಲಿ ಅಸ್ಥಾನ ಅವರ ಫೊಟೋಗಳು ಇದ್ದುದನ್ನು ಗಮನಿಸಿದ ನಾನು ಒಂದು ಕೋಟಿ ರೂಪಾಯಿಗಳ ಮೊದಲ ಕಂತನ್ನು ದುಬೈಯಲ್ಲಿ ಮನೋಜ್ಗೆ ಮತ್ತು .೯೫ ಕೋಟಿ ರೂಪಾಯಿಗಳನ್ನು ಮನೋಜ್ ಜೊತೆ ಸಂಪರ್ಕದಲ್ಲಿದ್ದ ಸುನಿಲ್ ಮಿತ್ತಲ್ ಅವರಿಗೆ ೨೦೧೭ರ ಡಿಸೆಂಬರ್ ೧೨ರಂದು ದೆಹಲಿಯ ರೈಸೀನಾ ರಸ್ತೆಯಲ್ಲಿನ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಪಾರ್ಕಿಂಗ್ ಪ್ರದೇಶದಲ್ಲಿ ನೀಡಿದೆಎಂದೂ ಸನಾ ಹೇಳಿದ್ದರು.

ಇದಲ್ಲದೆ ೨೦೧೮ರ ಅಕ್ಟೋಬರ್ ೧೦ರಂದು ೨೫ ಲಕ್ಷ ರೂಪಾಯಿ ಮತ್ತು ೨೫,೦೦೦ ದಿರ್ಹಮ್ಗಳು (ಅಂದಾಜು ಲಕ್ಷ ರೂ) ಮತ್ತು ೩೦,೦೦೦ ದಿರ್ಹಮ್ಗಳನ್ನು (ಸುಮಾರು ಲಕ್ಷ ರೂ) ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ದುಬೈಲ್ಲಿ ಮನೋಜ್ಗೆ ಪಾವತಿ ಮಾಡಿದುದಾಗಿಯೂ ಸನಾ ಆಪಾದಿಸಿದ್ದರು.

೨೦೧೭ರ ಡಿಸೆಂಬರಿನಲ್ಲಿ ತಾನು ದುಬೈಯಲ್ಲಿ ಇದ್ದಾಗ ಸೋಮೇಶ್ ಅವರು ಇಬ್ಬರು ಸಿಬಿಐ ಅಧಿಕಾರಿಗಳ ಸಂಭಾಷಣೆಯನ್ನು ದೂರವಾಣಿಯಲ್ಲಿ ತನಗೆ ಕೇಳಿಸಿದರು ಮತ್ತು  ಅದರಲ್ಲಿ ಒಬ್ಬರ ಧ್ವನಿ ಅಸ್ಥಾನ ಅವರದ್ದಾಗಿತ್ತು ಎಂದೂ ಸನಾ ಹೇಳಿದ್ದರು.

ಅಸ್ಥಾನ ಅವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಅಂಗೀಕರಿಸಿ ಶನಿವಾರ ನ್ಯಾಯಾಲಯವು ನೀಡಿದ ಆದೇಶ ಈಗ ಅಸ್ಥಾನ ಅಥವಾ ಕುಮಾರ್ ವಿರುದ್ಧ ಇನ್ನು ಯಾವುದೇ ಪ್ರಕರಣವೂ ಬಾಕಿ ಉಳಿದಿಲ್ಲ ಎಂಬುದನ್ನು ಸೂಚಿಸಿದೆ.

No comments:

Advertisement