ದಿಗ್ಬಂಧನ: ಕೇಂದ್ರದಿಂದ ೧.೭ ಲಕ್ಷ
ಕೋಟಿ ರೂ ಪರಿಹಾರ ಕೊಡುಗೆ ಘೋಷಣೆ
ನವದೆಹಲಿ: ದೇಶದಲ್ಲಿ ದಿನದಿಂದ
ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗನ್ನು ನಿಗ್ರಹಿಸಲು
ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಕ್ರಮದಿಂದ ನಷ್ಟ ಅನುಭವಿಸುವ ಮಧ್ಯಮ ಹಾಗೂ ಕೆಳ ವರ್ಗದಗಳ ಜನರಿಗೆ ನೆರವಾಗಲು ಕೇಂದ್ರ ಸರ್ಕಾರವು 2020
ಮಾರ್ಚ್ 26ರ ೧.೭ ಲಕ್ಷ ಕೋಟಿ ರೂಪಾಯಿ ಮೊತ್ತದ
ಪರಿಹಾರ ಕೊಡುಗೆಯನ್ನು ಘೋಷಣೆ ಮಾಡಿತು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮಾರ್ಚ್ 26ರ ಶುಕ್ರವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಿಗ್ಬಂಧನ ಪರಿಹಾರ ಕೊಡುಗೆಯನ್ನು ಪ್ರಕಟಿಸಿದರು. ಮುಂದಿನ ಮೂರು ತಿಂಗಳುಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪರಿಹಾರ ಕೊಡುಗೆಯನ್ನು ಪ್ರಕಟಿಸುತ್ತಿರುವುದಾಗಿ ಸೀತಾರಾಮನ್ ತಿಳಿಸಿದರು. ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಅನುಕೂಲವಾಗುವ ಹಲವಾರು ಹೊಸ ಯೋಜನೆಗಳನ್ನೂ ಅವರು ಘೋಷಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮಾರ್ಚ್ 26ರ ಶುಕ್ರವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಿಗ್ಬಂಧನ ಪರಿಹಾರ ಕೊಡುಗೆಯನ್ನು ಪ್ರಕಟಿಸಿದರು. ಮುಂದಿನ ಮೂರು ತಿಂಗಳುಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪರಿಹಾರ ಕೊಡುಗೆಯನ್ನು ಪ್ರಕಟಿಸುತ್ತಿರುವುದಾಗಿ ಸೀತಾರಾಮನ್ ತಿಳಿಸಿದರು. ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಅನುಕೂಲವಾಗುವ ಹಲವಾರು ಹೊಸ ಯೋಜನೆಗಳನ್ನೂ ಅವರು ಘೋಷಿಸಿದರು.
3 ತಿಂಗಳ ಕಾಲ ಉಚಿತ ಅಕ್ಕಿ, ಗೋಧಿ: ಸರ್ಕಾರದ ಘೋಷಣೆ ಪ್ರಕಾರ
ಮುಂದಿನ ದಿನ ಮೂರು ತಿಂಗಳ ಕಾಲ ಬಿಪಿಎಲ್ ಕಾರ್ಡುದಾರರಿಗೆ ೫ ಕೆಜಿ ಉಚಿತ ಅಕ್ಕಿ ಮತ್ತು ಗೋದಿಯನ್ನು
ನೀಡಲಾಗುವುದು. ಉಜ್ವಲ ಯೋಜನೆಯ ಅಡಿಯಲ್ಲಿ ೮.೩ ಕೋಟಿ
ಬಿಪಿಎಲ್ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಅಡುಗೆ ಅನಿಲ ಒದಗಿಸಲು ಕಾರ್ಯಕ್ರಮ
ರೂಪಿಸಲಾಗಿದೆ.
ರೈತನರಿಗೆ ಕಿಸಾನ್ ಸಮ್ಮಾನ್ ನಿಧಿ: ರೈತರ ಅನುಕೂಲಕ್ಕಾಗಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಅಂದಾಜು ೮.೯ ಕೋಟಿ ರೈತರ ಖಾತೆಗಳಿಗೆ ನೇರವಾಗಿ ಮುಂದಿನ ಮೂರು ತಿಂಗಳಲ್ಲಿ ತಲಾ ೨,೦೦೦ ರೂಪಾಯಿಗಳಂತೆ ಹಣ ಜಮಾವಣೆ ಮಾಡಲಾಗುವುದು. ಮೊದಲ ಕಂತಿನ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಭರ್ತಿ ಮಾಡಲಾಗುವುದು .
ಮಹಿಳೆಯರ ಅನುಕೂಲಕ್ಕಾಗಿ ಜನಧನ್ ಖಾತೆ ಹೊಂದಿರುವ ಎಲ್ಲ ಮಹಿಳೆಯರ ಖಾತೆಗಳಿಗೂ ನೇರವಾಗಿ ೫೦೦ ರೂಪಾಯಿ ವರ್ಗಾವಣೆ ಮಾಡಲಾಗುವುದು. ಅಲ್ಲದೆ, ಮಹಿಳಾ ಸ್ವಸಹಾಯ ಸಂಘಗಳಿಗೆ ೧೦ ಲಕ್ಷ ರೂಪಾಯಿಗಳವರೆಗೆ ಖಾತರಿ ರಹಿತ ಸಾಲ ಒದಗಿಸಲಾಗುವುದು. ಇದರಿಂದ ಸುಮಾರು ೨೦ ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ.
ದಿನಗೂಲಿ ಹೆಚ್ಚಳ: ದಿನಗೂಲಿ ನೌಕರರ ವೇತನವನ್ನು ೧೮೦ ರಿಂದ ೨೦೦ ರೂಪಾಯಿಗೆ ಏರಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಎಲ್ಲ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ
ನಿಧಿಯಲ್ಲಿರುವ ಸುಮಾರು ೩೧,೦೦೦ ಕೋಟಿ ಹಣವನ್ನು ಆಯಾ ರಾಜ್ಯಗಳು ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಬೇಕು
ಎಂದು ನಿರ್ದೇಶನ ನೀಡಲಾಗಿದೆ.
ಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ೨ ವಿಶೇಷ ಕೊಡುಗೆ ಘೋಷಿಸಲಾಯಿತು.
ಈ ವಲಯದ ಕಾರ್ಮಿಕರಿಗೆ ಸರ್ಕಾರ ದೀನ ದಯಾಳ ಉಪಾಧ್ಯಾಯ
ಯೋಜನೆಯ ಅಡಿಯಲ್ಲಿ ತಲಾ ೨೦ ಲಕ್ಷ ರೂ. ಸಾಲ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು ೨ ಕೋಟಿ
ಕುಟುಂಬಗಳು ಲಾಭ ಪಡೆಯಲಿವೆ. ಜೊತೆಗೆ ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್) ಹಣವನ್ನು ಹಿಂಪಡೆಯಲು ನಿಯಮವನ್ನು
ಸರಳಗೊಳಿಸಲಾಗಿದೆ. ೧೫,೦೦೦ ರೂಪಾಯಿಗಳಿಗಿಂತ ಕಡಿಮೆ
ವೇತನ ಹೊಂದಿರುವವರಿಗೆ ಕೇಂದ್ರ ಸರ್ಕಾರವೇ ಶೇ.೨೪ ರಷ್ಟು ಪಿಎಫ್ ಹಣ ಭರಿಸಲಿದೆ. ಶೇ.೭೫ರಷ್ಟು ಪಿಎಫ್
ಹಣವನ್ನು ಪಡೆಯಲು ಅವಕಾಶ ನೀಡಲಾಗಿದ್ದು, ಕಂಪೆನಿ ಮತ್ತು ಉದ್ಯೋಗಿ ಇಬ್ಬರ ಪಾಲನ್ನೂ ಸರ್ಕಾರವೇ ನೀಡಲಿದೆ.
ವೃದ್ದಾಪ್ಯ, ವಿಧವಾ ಮತ್ತು ಅಂಗವಿಕಲರಿಗೆ ೨೦೦೦ ರೂಪಾಯಿ ಹೆಚ್ಚುವರಿ ಪಿಂಚಣಿ ನಿಗದಿ
ಮಾಡಲಾಗಿದ್ದು ಈ ಹಣ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗುವಂತೆ ಆಯಾ ಇಲಾಖೆಗಳಿಗೆ ಸೂಚಿಸಲಾಗಿದೆ.
ಅಲ್ಲದೆ, ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣವನ್ನು ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ, ಚಿಕಿತ್ಸೆ ಮತ್ತು ಪರೀಕ್ಷಾ ಪ್ರಯೋಗಾಲಯ
(ಟೆಸ್ಟಿಂಗ್ ಲ್ಯಾಬೋರೇಟರಿ) ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ
ಸೂಚಿಸಲಾಗಿದೆ.
ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ
ಮೋದಿ ಅವರು 2020 ಮಾರ್ಚ್ ೨೫ ರ ಬುಧವಾರದಿಂದ ದೇಶದಲ್ಲಿ
೨೧ ದಿನಗಳ ದಿಗ್ಬಂಧನ ಘೋಷಿಸಿದ್ದರು. ಈ ದಿಗ್ಬಂಧನದಿಂದಾಗಿ
ದೇಶಕ್ಕೆ ೯ ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು
ತಜ್ಞರು ಅಂದಾಜು ಮಾಡಿದ್ದಾರೆ. ಇದರಿಂದಾಗಿ ಬಡ ಮತ್ತು
ಮಧ್ಯಮ ವರ್ಗದ ಜನ ತೀವ್ರ ನಷ್ಟ ಅನುಭವಿಸಲಿದ್ದಾರೆ.
ಮತ್ತು ಸಂಕಷ್ಟಕ್ಕೆ ಎದುರಿಸಲಿದ್ದಾರೆ ಎಂದು ಅನುಮಾನಿಸಲಾಗಿತ್ತು. ಇದನ್ನು ಅನುಸರಿಸಿಯೇ ಕೇಂದ್ರ ಸರ್ಕಾರ ಈದಿನ ವಿಶೇಷ ಕೊಡುಗೆ ಘೋಷಣೆ ಮಾಡಿತು.
ಭಾರತದಲ್ಲಿ ಗುರುವಾರ ಒಂದೇ ದಿನ ಅತೀ ಹೆಚ್ಚು ಅಂದರೆ 88 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 694ಕ್ಕೆ ಏರಿದೆ. ದೇಶೀ ವಿಮಾನಯಾನಗಳ ಜೊತೆಗೆ ವಿದೇಶೀ ವಿಮಾನಯಾನಗಳನ್ನು ಕೂಡಾ 2020 ಏಪ್ರಿಲ್ 20ರವರೆಗೆ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿತು.
No comments:
Post a Comment