ಮಗುವಿಗೆ ಜನ್ಮವಿತ್ತ
ಕೋವಿಡ್ ಶಿಳ್ಳೆಗಾರ ವೈದ್ಯ ಲಿ ವೆನ್ಲಿಯಾಂಗ್ ಪತ್ನಿ
ಬೀಜಿಂಗ್: ಫೆಬ್ರವರಿ ತಿಂಗಳಲ್ಲಿ ಕೋವಿಡ್-೧೯ ಸೋಂಕಿಗೆ ಬಲಿಯಾದ ೩೪ ವರ್ಷದ ವುಹಾನ್ ಶಿಳ್ಳೆಗಾರ ವೈದ್ಯ ಲಿ ವೆನ್ಲಿಯಾಂಗ್ ಅವರ ಪತ್ನಿ, ದಂಪತಿಯ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಚೀನಾದ
ಸೋಷಿಯಲ್ ಮೀಡಿಯಾ ವೇದಿಕೆಯಾದ ವೀಚಾಟ್ನಲ್ಲಿ ಲಿ ವೆನ್ಲಿಯಾಂಗ್ ಅವರ
ಪತ್ನಿ ಫೂ ಕ್ಸುಯೆಜಿ ಹೃದಯಸ್ಪರ್ಶಿ
ಸುದ್ದಿ ಹಂಚಿಕೊಂಡಿದ್ದಾರೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಲಿಚಿ ನ್ಯೂಸ್ 2020 ಜೂನ್
13ರ ಶನಿವಾರ ವರದಿ ಮಾಡಿತು.
"ನೀವು
ಅದನ್ನು ಸ್ವರ್ಗದಿಂದ ನೋಡಬಹುದೇ? ನೀವು ನನಗೆ ಕೊಟ್ಟ ಕೊನೆಯ ಉಡುಗೊರೆ ಇಂದು ಜನಿಸಿದೆ. ನಾನು ಖಂಡಿತವಾಗಿಯೂ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಫೂ ಕ್ಸುಯೆಜಿ ಚೀನಾದ
ಸಾಮಾಜಿಕ ಜಾಲತಾಣ ’ವಿಚಾಟ್’ನಲ್ಲಿ ಬರೆದಿದ್ದಾರೆ.
ಸಾಮಾಜಿಕ
ಜಾಲತಾಣದಲ್ಲಿ ಈ ಪೋಸ್ಟ್ ಜೊತೆಗೆ ಫೂ
ತನ್ನ ದಿವಂಗತ ಪತಿ ಲಿ ವೆನ್ಲಿಯಾಂಗ್ ಅವರ
ಅಂತಿಮ ಉಡುಗೊರೆಯಾದ ಗಂಡು
ಮಗುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕೊರೋನವೈರಸ್
ಬಗ್ಗೆ ಇತರ ವೈದ್ಯರಿಗೆ ಎಚ್ಚರಿಕೆ ನೀಡಿ, ಪೊಲೀಸರಿಂದ ಕಾನೂನು ಕ್ರಮಕ್ಕೆ ಒಳಗಾದ ಎಂಟು ಶಿಳ್ಳೆಗಾರರಲ್ಲಿ ಒಬ್ಬರಾದ ಲಿ, ವೈದ್ಯರಿಗೆ ಮಾತು ಸಾಂಕ್ರಾಮಿಕದ ಬಗ್ಗೆ ತಿಳಿಸಿದ ಒಂದು ವಾರದ ನಂತರ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದೃರು.
ಕಳೆದ
ವರ್ಷ ಡಿಸೆಂಬರಿನಲ್ಲಿ ಚೀನಾದ ಕೇಂದ್ರ ಹುಬೈ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ವುಹಾನ್ನಲ್ಲಿ ವೈರಸ್ ಹರಡುತ್ತಿರುವ ಬಗ್ಗೆ ಅವರು ಮೊತ್ತ ಮೊದಲು ವರದಿ ಮಾಡಿದ್ದರು.
ಚೀನಾದ
ಜನಪ್ರಿಯ ಮೆಸೇಜಿಂಗ್ ಆಪ್ ವಿಚಾಟ್ನಲ್ಲಿ ಅವರು ತಮ್ಮ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಗುಂಪಿನಲ್ಲಿ ಬಾಂಬ್ ಹಾಕಿದ್ದರು. ಸ್ಥಳೀಯ ಸಮುದ್ರಾಹಾರ ಮಾರುಕಟ್ಟೆಯ ಏಳು ರೋಗಿಗಳಿಗೆ ಸಾರ್ಸ್ ಮಾದರಿಯ ಕಾಯಿಲೆ ಇರುವುದು ಪತ್ತೆಯಾಗಿದೆ ಮತ್ತು ಅವರನ್ನು ತಮ್ಮ ಆಸ್ಪತ್ರೆಯಲ್ಲಿ ನಿರ್ಬಂಧಕ್ಕೆ (ಕ್ವಾರಂಟೈನ್) ಒಳಪಡಿಸಲಾಗಿದೆ ಎಂದು ಅವರು ಸಂದೇಶ ನೀಡಿದ್ದರು.
ತಮ್ಮ
ಪರೀಕ್ಷೆಯ ಪ್ರಕಾರ, ಈ ಅಸ್ವಸ್ಥತೆ ಕೊರೋನವೈರಸ್ನಿಂದ ಆಗಿದ್ದು - ಇದು ತೀವ್ರ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ವೈರಸ್ಸುಗಳ ದೊಡ್ಡ ಕುಟುಂಬಕ್ಕೆ ಸೇರಿದೆ ಎಂದು ಅವರು ತಿಳಿಸಿದ್ದರು. ಸಾರ್ಸ್ ವ್ಯಾಧಿಯಿಂದ ೨೦೦೩ ರಲ್ಲಿ ಚೀನಾ ಮತ್ತು ಪ್ರಪಂಚದ ಇತರ ಕಡೆUಳಲ್ಲಿ ೮೦೦ ಜನರು ಸಾವಿಗೀಡಾಗಿದ್ದರು.
’ನಿಮ್ಮ
ಪ್ರೀತಿಪಾತ್ರರನ್ನು ಈ ಬಗ್ಗೆ ಎಚ್ಚರಿಸಿ’ ಎಂದು
ಲಿ ತನ್ನ ಸ್ನೇಹಿತರಿಗೆ ಖಾಸಗಿಯಾಗಿ ಸಲಹೆ ಮಾಡಿದ್ದರು. ಆದರೆ
ಕೆಲವೇ ಗಂಟೆಗಳಲ್ಲಿ ಅವರ ಸಂದೇಶಗಳ ಸ್ಕ್ರೀನ್ಶಾಟ್ಗಳು ಅವರ ಹೆಸರಿನ ಸಹಿತವಾಗಿ ವೈರಲ್ ಆಗಿದ್ದವು.
"ಸಂದೇಶಗಳು
ಆ ರೀತಿಯಾಗಿ ಆನ್ಲೈನ್ನಲ್ಲಿ ಪ್ರಸಾರವಾಗುವುದನ್ನು ನೋಡಿ ಪರಿಸ್ಥಿತಿ ನನ್ನ ನಿಯಂತ್ರಣದಲ್ಲಿ ಇಲ್ಲ. ಬಹುಶಃ ನನಗೆ ಶಿಕ್ಷೆಯಾಗಬಹುದು ಎಂಬುದನ್ನು ನಾನು ಅರಿತುಕೊಂಡೆ’ ಲಿ
ವೆನ್ಲಿಯಾಂಗ್ ಹೇಳಿದ್ದನ್ನು ಸಿಎನ್ಎನ್ ಉಲ್ಲೇಖಿಸಿತ್ತು. ವೆನ್ಲಿಯಾಂಗ್ ಸಂದೇಶ ವೈರಲ್ ಆಗುತ್ತಿದ್ದಂತೆಯೇ ವುಹಾನ್ ಪೊಲೀಸರು ’ವದಂತಿ ಹಬ್ಬಿಸುತ್ತಿರುವುದಾಗಿ’ ವೈದ್ಯರ
ವಿರುದ್ಧ ಆಪಾದಿಸಿದರು.
ಕೊರೋನಾವೈರಸ್
ಆರಂಭದ ವಾರಗಳಲ್ಲಿ ಮಾರಣಾಂತಿಕ ವೈರಸ್ ಬಗ್ಗೆ ಶಿಳ್ಳೆ ಸ್ಫೋಟಿಸಲು ಯತ್ನಿಸಿದ್ದಕ್ಕಾಗಿ ಪೊಲೀಸರ ಸಿಟ್ಟು ಹಾಗೂ ಕಾನೂನು ಕ್ರಮಕ್ಕೆ ಗುರಿಯಾದ ಹಲವಾರು ವೈದ್ಯರಲ್ಲಿ ಲಿ ವೆನ್ಲಿಯಾಂಗ್ ಕೂಡಾ
ಒಬ್ಬರಾಗಿದ್ದರು.
ವೆನ್ಲಿಯಾಂಗ್
ಸಾವು ಸಂಭವಿಸಿದಾಗ, ರೋಗ ಹರಡುವಿಕೆ, ಕೈಗಾರಿಕಾ ಅಪಘಾತ, ನೈಸರ್ಗಿಕ ವಿಪತ್ತುಗಳು ಮತ್ತು ಹಣಕಾಸಿನ ವಂಚನೆಗಳ ಬಗ್ಗೆ ಸುಳ್ಳು ಅಥವಾ ಅಧಿಕಾರಿಗಳ ಮಾಹಿತಿ ಮರೆಮಾಚುವ ದೂರುಗಳ ಬಗೆಗಿನ ಆಡಳಿತ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣಗಳ ಮೇಲೆ ಹಾಗೂ ಶಿಳ್ಳೆ ಹೊಡೆಯುವವರು ಮತ್ತು ಸ್ವತಂತ್ರ ಪತ್ರಕರ್ತರಿಗೆ ಶಿಕ್ಷೆ ವಿಧಿಸುವ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿದ್ದವು.
No comments:
Post a Comment