Friday, June 12, 2020

ಪಾಕಿಸ್ತಾನದಿಂದ ‘ವಿದ್ಯಾರ್ಥಿ ವೇತನ’ದ ಸಂಚು

ಪಾಕಿಸ್ತಾನದಿಂದ ‘ವಿದ್ಯಾರ್ಥಿ ವೇತನ’ದ ಸಂಚು

ನವದೆಹಲಿ: ಪಾಕಿಸ್ತಾನ ಮತ್ತು ಆಕ್ರಮಿತ ಪ್ರದೇಶಗಳಲ್ಲಿ ವೃತ್ತಿಪರ ಕೋರ್ಸ್ಗಳನ್ನು ತೆಗೆದುಕೊಳ್ಳಲು ,೬೦೦ ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಇಮ್ರಾನ್ ಖಾನ್ ಸರ್ಕಾರದ ಯೋಜನೆಯ ಬಗ್ಗೆ  ಭಾರತೀಯ ಭದ್ರತಾ ಸಂಸ್ಥೆಗಳು 2020 ಜೂನ್ 11ರ ಗುರುವಾರ ಎಚ್ಚರಿಕೆಯ ಕರೆಗಂಟೆ ಭಾರಿಸಿವೆ.

ವಿದ್ಯಾರ್ಥಿವೇತನ ಪ್ರಸ್ತಾಪವು ಯುವ ಕಾಶ್ಮೀರಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡಲು, ಭಾರತದ ವಿರುದ್ಧ ಪ್ರಚೋದಿಸಲು ಮತ್ತು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದಾದ (ಟ್ಯಾಪ್ ಮಾಡಬಹುದಾದ) ದೊಡ್ಡ ಸಂಖ್ಯೆಯ ಸಹಾನುಭೂತಿದಾರರನ್ನು ನಿರ್ಮಿಸುವ ಪಾಕಿಸ್ತಾನದ ಆಳವಾದ ಸಂಚಿನ ದೊಡ್ಡ ಯೋಜನೆಯ ಭಾಗವಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

"ಯುವ ಕಾಶ್ಮೀರಿಗಳು ವಾಘಾ-ಅಟ್ಟಾರಿ ಗಡಿ ಠಾಣೆ ಮೂಲಕ ಅಧ್ಯಯನ ಮಾಡಲು ಗಡಿ ದಾಟಿ ಹೋಗಿ ಭಯೋತ್ಪಾದಕರಾಗಿ ನಿಯಂತ್ರಣ ರೇಖೆಯ ಮೂಲಕ ಮರಳಿದ ಹಲವು ಉದಾಹರಣೆಗಳಿವೆ" ಎಂದು ಹೆಸರು ಹೇಳಲು ಇಚ್ಛಿಸದ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನವು ವರ್ಷದ ಆರಂಭದಲ್ಲಿ ತನ್ನ ರಾಷ್ಟ್ರೀಯ ಅಸೆಂಬ್ಲಿಯ ಸಮಿತಿಗೆ ,೬೦೦ ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಮೊದಲು ಘೋಷಿಸಿತ್ತು. ಇಸ್ಲಾಮಾಬಾದ್ ಹಲವಾರು ವರ್ಷಗಳಿಂದ ಕಾಶ್ಮೀರಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ವಿದ್ಯಾರ್ಥಿವೇತನವನ್ನು ನೀಡುತ್ತಿತ್ತು, ಆದರೆ ಇದು ಬಹುತೇಕ ಸಣ್ಣ ಪ್ರಮಾಣದಲ್ಲಿ ಇತ್ತು.

ಲಭ್ಯ ಮಾಹಿತಿ ಪ್ರಕಾರ, ಸುಮಾರು ೧೫೦ ಕಾಶ್ಮೀರಿಗಳು ಪಾಕಿಸ್ತಾನ ಮತ್ತು ಆಕ್ರಮಿತ ಪ್ರದೇಶಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳಿಗೆ ದಾಖಲಾಗಿದ್ದಾರೆ ಎಂದು ಕಾಶ್ಮೀರದ ಪೊಲೀಸರು ಅಂದಾಜು ಮಾಡಿದ್ದಾರೆ.

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆಲ್ಲ ಪಾಕ್ ಸರ್ಕಾರ ಏಕಾಏಕಿ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವುದಿಲ್ಲ. ವಿದ್ಯಾರ್ಥಿ ವೇತನ ಮಂಜೂರಾಗಲು ಅರ್ಜಿಗಳ ಜೊತೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮುಜಾಫರಾಬಾದ್ ಮೂಲದ  ಹುರಿಯತ್ ಅಥವಾ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಸಲಾಹುದ್ದೀನ್ ನೇತೃತ್ವದ ಯುನೈಟೆಡ್ ಜಿಹಾದ್ ಕೌನ್ಸಿಲಿನಂತಹ ಪ್ರತ್ಯೇಕತಾವಾದಿ ಗುಂಪುಗಳ ಶಿಫಾರಸನ್ನು ಅರ್ಜಿದಾರರು ಲಗತಿಸ್ತಿರಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹುರಿಯತ್ ನಾಯಕ ನಯೀಮ್ ಖಾನ್ ಅವರ ನಿವಾಸದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ವಶಪಡಿಸಿಕೊಂಡ ಒಂದು ದಾಖಲೆಯಲ್ಲಿ ಇದನ್ನು ಸಮರ್ಥಿಸುವಂತಹ ಮಾಹಿತಿ ಲಭ್ಯವಾಗಿದೆ.

ಯಾವ ವಿದ್ಯಾರ್ಥಿಯ ಕುಟುಂಬವು ಸ್ವಾತಂತ್ರ್ಯ ಹೋರಾಟಕ್ಕೆ ಬದ್ಧವಾಗಿದೆಯೋ ಅಂತಹ ವಿದ್ಯಾರ್ಥಿಗೆ ಪ್ರಮಾಣಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಒದಗಿಸಲು ಹುರಿಯತ್ ನಾಯಕ ನಯೀಮ್ ಖಾನ್ ಶಿಫಾರಸು ಮಾಡುತ್ತಿದ್ದ ವಿಚಾರ ವಶಪಡಿಸಿಕೊಳ್ಳಲಾದ ದಾಖಲೆಯ ಮಾಹಿತಿಯಿಂದ ಬೆಳಕಿಗೆ ಬಂದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ೨೦೧೮ರಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಭಯೋತ್ಪಾದನೆಗೆ ಧನಸಹಾಯ ಪ್ರಕರಣ ಒಂದರ ತನಿಖೆ ನಡೆಸುತ್ತಿರುವ ಎನ್ಐಎ, ವಿದ್ಯಾರ್ಥಿ ವೀಸಾಗಳಲ್ಲಿ ಪಾಕಿಸ್ತಾನಕ್ಕೆ ತೆರಳುವ ಅನೇಕ ವಿದ್ಯಾರ್ಥಿಗಳುಮಾಜಿ ಭಯೋತ್ಪಾದಕರ ಸಂಬಂಧಿಗಳು ಅಥವಾ ವಿವಿಧ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಸಕ್ರಿಯ ಉಗ್ರರ ಕುಟುಂಬಗಳ ಸಂಬಂಧಿಕರು ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದವರು ಅಥವಾ ಹುರಿಯತ್ ನಾಯಕರಿಗೆ ಪರಿಚಿತರಾಗಿದ್ದವರು ಎಂದು ಚಾರ್ಜ್ಶೀಟ್ ಹೇಳಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಶಿಕ್ಷಣ ಸಂಸ್ಥೆಗಳನ್ನು ಭಾರತ ಮಾನ್ಯ ಮಾಡಿಲ್ಲ, ಮತ್ತು ಶಿಕ್ಷಣ ಸಂಸ್ಥೆಗಳಿಂದ ಪಡೆಯುವ ಶಿಕ್ಷಣಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂಬುದಾಗಿ ಭಾರತ ಸರ್ಕಾರ ಇತ್ತೀಚೆಗೆ ಸ್ಪಷ್ಟ ಪಡಿಸಿತ್ತು. ಇಂತಹ ನಕಲಿ ಕಾಲೇಜುಗಳಿಂದ ವಿದ್ಯಾರ್ಥಿ ವೇತನ ಪಡೆಯುವ ಸಲುವಾಗಿ ಅಲ್ಲಿ ಸೇರ್ಪಡೆಯಾಗುವ ಕಾಶ್ಮೀರಿ ವಿದ್ಯಾರ್ಥಿಗಳು, ಪದವಿಗಳಿಗೆ ಭಾರತ ಮಾನ್ಯತೆ ನೀಡದ ಕಾರಣ ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದು ದೆಹಲಿಯ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದರು. 

ಸುದ್ದಿಯ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ

No comments:

Advertisement