ಆಯುರ್ವೇದ ವೈದ್ಯರೂ ಈಗ ಶಸ್ತ್ರ ಚಿಕಿತ್ಸೆ ಮಾಡಬಹುದು
ಸೆಂಟ್ರಲ್
ಕೌನ್ಸಿಲ್ ಆಫ್
ಇಂಡಿಯನ್ ಮೆಡಿಸಿನ್
(ಸಿಸಿಐಎಂ) ತನ್ನ
ಗೆಜೆಟ್ ಅಧಿಸೂಚನೆಯಲ್ಲಿ ಆಯುರ್ವೇದ
ಸ್ನಾತಕೋತ್ತರ
ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಇಂತಹ ಕಾರ್ಯವಿಧಾನಗಳ ಔಪಚಾರಿಕ ತರಬೇತಿ
ಪಡೆಯಲು ಅವಕಾಶ
ಮಾಡಿಕೊಟ್ಟಿದೆ. ಈ ಬೆಳವಣಿಗೆಯು ಪ್ರಧಾನಿ ನರೇಂದ್ರ
ಮೋದಿ ಸರ್ಕಾರದ
ಅಡಿಯಲ್ಲಿ ಪಾರಂಪರಿಕ ಔಷಧಕ್ಕೆ ಹೆಚ್ಚುತ್ತಿರುವ ಒತ್ತನ್ನು ಸೂಚಿಸಿದೆ.
ಹೊಸ ಗೆಜೆಟ್ ಅಧಿಸೂಚನೆಯ
ಪ್ರಕಾರ ಶಸ್ತ್ರಚಿಕಿತ್ಸಾ ವಿಧಾನಗಳ
ತರಬೇತಿ ಮಾಡ್ಯೂಲ್ಗಳನ್ನು ಆಯುರ್ವೇದ
ಅಧ್ಯಯನಗಳ ಪಠ್ಯಕ್ರಮಕ್ಕೆ ಸೇರಿಸಲಾಗುತ್ತದೆ. ಆಯುರ್ವೇದದ
ಸ್ನಾತಕೋತ್ತರ
ವಿದ್ಯಾರ್ಥಿಗಳಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ಅಭ್ಯಾಸ
ಮಾಡಲು ಅನುವು
ಮಾಡಿಕೊಡುವ ನಿಯಮಾವಳಿಯನ್ನು ಸೇರಿಸಲು ಸಿಸಿಐಎಂ
ಇಂಡಿಯನ್ ಮೆಡಿಸಿನ್
ಸೆಂಟ್ರಲ್ ಕೌನ್ಸಿಲ್
(ಪಿಜಿ ಆಯುರ್ವೇದ
ಶಿಕ್ಷಣ) ನಿಯಮಗಳು,
೨೦೧೬ಕ್ಕೆ
ತಿದ್ದುಪಡಿ ಮಾಡಿದ ನಂತರ
ಈ ಬೆಳವಣಿಗೆ
ನಡೆದಿದೆ.
‘ಸಿಸಿಐಎಂ, ಕೇಂದ್ರ ಸರ್ಕಾರದ ಹಿಂದಿನ ಅನುಮೋದನೆಯೊಂದಿಗೆ, ಭಾರತೀಯ ಔಷಧ ಕೇಂದ್ರ ಮಂಡಳಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮಗಳು, ೨೦೧೬ಕ್ಕೆ ತಿದ್ದುಪಡಿ ಮಾಡಲು ಈ ಕೆಳಗಿನ ನಿಯಮಗಳನ್ನು ಸೇರ್ಪಡೆ ಮಾಡುತ್ತದೆ" ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಕಾಯಿದೆಯನ್ನು ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ (ಸ್ನಾತಕೋತ್ತರ
ಆಯುರ್ವೇದ ಶಿಕ್ಷಣ)/ ಇಂಡಿಯನ್ ಮೆಡಿಸಿನ್ ಸೆಂಟ್ರಲ್
ಕೌನ್ಸಿಲ್ (ಪೋಸ್ಟ್ ಗ್ರಾಜುಯೇಟ್ ಆಯುರ್ವೇದ ಎಜುಕೇಷನ್) ತಿದ್ದುಪಡಿ ನಿಯಮಗಳು,
೨೦೨೦ ಎಂದು
ಮರುನಾಮಕರಣ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಎರಡು
ಹಂತದ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿ
ನೀಡಲಾಗುವುದು ಮತ್ತು
ಎಂಎಸ್ (ಆಯುರ್ವೇದ)
ಶಲ್ಯ ತಂತ್ರ
ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು
ಎಂಎಸ್ ( ಆಯುರ್ವೇದ)
ಶಾಲಾಕ್ಯ
ತಂತ್ರ (ಕಣ್ಣು, ಕಿವಿ,
ಮೂಗು, ಗಂಟಲು,
ತಲೆ
ಮತ್ತು ಮತ್ತು ಒರೊಡೆಂಟಿಸ್ಟ್ರಿ ರೋಗ ಪದವಿಗಳನ್ನು ಪ್ರದಾನ ಮಾಡಲಾಗುವುದು.
No comments:
Post a Comment