ಸಿಬಿಎಸ್‌ಇ ಪರೀಕ್ಷೆ: ಮೇ ೪ರಿಂದ ಜೂನ್ ೧೦
ನವದೆಹಲಿ: ಸಿಬಿಎಸ್‌ಇ ಮಂಡಳಿ ನಡೆಸುವ ಸಿಬಿಎಸ್‌ಇ ೧೦ ನೇ ಮತ್ತು ೧೨ ನೇ ತರಗತಿಯ ಮಂಡಳಿ ಪರೀಕ್ಷೆಗಳು ೨೦೨೧ರ ಮೇ ೪ ರಿಂದ ಜೂನ್ ೧೦ ರವರೆಗೆ ನಡೆಯಲಿದೆ ಮತ್ತು ಜುಲೈ ೧೫ ರೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ 2020 ಡಿಸೆಂಬರ್ 31ರ ಗುರುವಾರ ಪ್ರಕಟಿಸಿದರು.
ಪ್ರಾಯೋಗಿಕ ಪರೀಕ್ಷೆಗಳು ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಲಿವೆ ಎಂದು ಸಚಿವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲೈವ್ ವಿಡಿಯೋ ಮೂಲಕ ದಿನಾಂಕಗಳನ್ನು ಘೋಷಿಸಿಸುತ್ತಾ ತಿಳಿಸಿದರು.
ಪ್ರತಿ ವರ್ಷ, ಮಂಡಳಿಯ
ಪರೀಕ್ಷೆಗಳು ಫೆಬ್ರುವರಿ ತಿಂಗಳಿನಿಂದ ಪ್ರಾರಂಭವಾಗಿ ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುತ್ತವೆ ಮತ್ತು ಫಲಿತಾಂಶಗಳನ್ನು ಮೇ ತಿಂಗಳೊಳಗೆ ಘೋಷಿಸಲಾಗುತ್ತದೆ. ಸಾಂಕ್ರಾಮಿಕ
ರೋಗದಿಂದಾಗಿ ಈ ವರ್ಷ ಶೈಕ್ಷಣಿಕ ವರ್ಷ ಸ್ವಲ್ಪ ತಡವಾಗಿ ಪ್ರಾರಂಭವಾಯಿತು ಮತ್ತು ಆನ್ಲೈನ್ನಲ್ಲಿ ತರಗತಿಗಳು ನಡೆದವು.
ಈ ತಿಂಗಳ ಆರಂಭದಲ್ಲಿ, ಫೆಬ್ರ್ರುವರಿ
ತನಕ ಮಂಡಳಿಯ ಪರೀಕ್ಷೆಯನ್ನು ನಡೆಸುವ ಸಾಧ್ಯತೆಯಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು ಮತ್ತು ರಾಜ್ಯಗಳಲ್ಲಿನ ಸಾಂಕ್ರಾಮಿಕ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರವೇ ಅದಕ್ಕೆ ಸಂಬಂಧಿಸಿದ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ. ಬೋರ್ಡ್
ಪರೀಕ್ಷೆಯನ್ನು ಯಾವಾಗಲೂ ಆಫ್ಲೈನ್ ಮೋಡ್ನಲ್ಲಿ ಮಾತ್ರ ನಡೆಸಲಾಗುವುದು ಎಂದು ಅವರು ದೃಢ ಪಡಿಸಿದ್ದರು.
‘ಸಿಬಿಎಸ್‌ಇ ಮಂಡಳಿ ಪರೀಕ್ಷೆ ಮೇ ೪ ರಿಂದ ಜೂನ್ ೧೦ ರವರೆಗೆ ನಡೆಯಲಿವೆ. ಜುಲೈ
೧೫ ರೊಳಗೆ ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್
೧ ರಿಂದ ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ಸಚಿವರು ಹೇಳಿದರು.
ಶಿಕ್ಷಕರ ಸಹಾಯದಿಂದ ಸಾಂಕ್ರಾಮಿಕ ರೋಗದ ನಡುವೆ ನಮ್ಮ ರಾಷ್ಟ್ರವು ರಾತ್ರೋರಾತ್ರಿ ಆನ್ಲೈನ್ ತರಗತಿಗೆ ಸ್ಥಳಾಂತರಗೊಂಡಿತು ಎಂದು ಸಚಿವರು ಹೇಳಿದರು.
ಇಂಟರ್ನೆಟ್ ಮತ್ತು ಸ್ಮಾರ್ಟ್ಫೋನ್ಗಳ ಪ್ರವೇಶವಿಲ್ಲದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಡಿಟಿಎಚ್ ಸೇವೆಗಳಿಂದ ‘ಒನ್
ಕ್ಲಾಸ್ ಒನ್ ಚಾನೆಲ್’
ಅನ್ನು ಪ್ರಾರಂಭಿಸಲಾಗಿದೆ ಎಂದು ಅವರು ನುಡಿದರು.
ವಿದ್ಯಾರ್ಥಿಗಳ ನಿರಂತರ ಬೆಂಬಲ ಮತ್ತು ಸಹಕಾರಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಸಾಂಕ್ರಾಮಿಕದ ನಡುವೆ ಶೈಕ್ಷಣಿಕ ವರ್ಷವನ್ನು ಉಳಿಸಲು ಹಗಲು ಮತ್ತು ರಾತ್ರಿ ಆನ್ ಲೈನ್ ತರಗತಿಗಳನ್ನು ನಡೆಸುವ ಮೂಲಕ ಶ್ರಮಿಸಿದ್ದಕ್ಕಾಗಿ ಶಿಕ್ಷಣ ಸಚಿವರು ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ವ್ಯವಸ್ಥೆಯು ವಿವಿಧ ಪರೀಕ್ಷೆಗಳನ್ನು ನಡೆಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡಿತು ಮತ್ತು ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ಉಳಿಸಿತು ಎಂದು ಅವರು ನುಡಿದರು.
No comments:
Post a Comment