ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್: ಆರ್ ಬಿಐ
ನವದೆಹಲಿ: ಚಲಾವಣೆಯಲ್ಲಿ ಇರುವ ಎಲ್ಲ 2000 ರೂಪಾಯಿ ನೋಟುಗಳನ್ನು ತತ್ ಕ್ಷಣ ಚಲಾವಣೆಯಿಂದ ಹಿಂಪಡೆಯುವುದಾಗಿ 2023 ಮೇ 19ರ ಶುಕ್ರವಾರ ಭಾರತೀಯ ರಿಸರ್ವ ಬ್ಯಾಂಕ್ (ಆರ್ ಬಿಐ) ಘೋಷಿಸಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.
ನೋಟುಗಳನ್ನು
ಬದಲಾಯಿಸಿಕೊಳ್ಳಲು ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು ಮತ್ತು
ನೋಟು ಹಿಂತೆಗೆತದ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಎಲ್ಲ ಬ್ಯಾಂಕುಗಳು 2023 ಸೆಪ್ಟೆಂಬರ್ 30 ರವರೆಗೆ ರೂ 2000ದ ಬ್ಯಾಂಕ್ ನೋಟುಗಳ
ಠೇವಣಿ ಮತ್ತು ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್ ಬಿಐ (RBI) ಹೇಳಿದೆ.
ಈ ವಿಷಯಕ್ಕೆ
ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಪ್ರತ್ಯೇಕ
ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000
ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ
ಸೂಚಿಸಿದೆ.
“2000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳಲ್ಲಿ ಸುಮಾರು 89% ರಷ್ಟನ್ನು
ಮಾರ್ಚ್ 2017 ರ ಮೊದಲು ಬಿಡುಗಡೆ ಮಾಡಲಾಗಿತ್ತು. ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳು.
ಚಲಾವಣೆಯಲ್ಲಿರುವ ಈ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಪ್ರಕಾರ ಗರಿಷ್ಠ 6.73 ಲಕ್ಷ
ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ 37.3%) ರೂ 3.62 ಲಕ್ಷ ಕೋಟಿಗೆ ಇಳಿದಿದೆ. ಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ. ಇವುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂಬುದನ್ನು
ಸಹ ಗಮನಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ “ಕ್ಲೀನ್ ನೋಟ್ ಪಾಲಿಸಿ”ಗೆ ಅನುಗುಣವಾಗಿ ಚಲಾವಣೆಯಿಂದ ರೂ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು
ನಿರ್ಧರಿಸಲಾಗಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ
ಸೆಪ್ಟೆಂಬರ್ 30 ರವರೆಗೆ ಮುಂದುವರಿಯಲಿವೆ ಎಂದು ಆರ್‌ಬಿಐ ಪತ್ರಿಕಾ
ಪ್ರಕಟಣೆ ತಿಳಿಸಿದೆ.
No comments:
Post a Comment