ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ
ಚಂದ್ರನತ್ತ ಪಯಣ: ಭಾರತದ ದಾಪುಗಾಲು
ಚಂದ್ರಯಾನ ೧
೨೦೦೮ ಆಕ್ಟೋಬರ್ ೨೦೦೮: ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್
ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೧ ಉಡ್ಡಯನ
೨೦೦೮ ನವೆಂಬರ್ ೦೮: ಚಂದ್ರಯಾನ ೧ರಿಂದ ಚಂದ್ರನ ವರ್ಗಾವಣೆ ಪಥ ಪಯಣ
ಪ್ರಾರಂಭ.
೨೦೦೮ ನವೆಂಬರ್ ೧೪: ಚಂದ್ರಯಾನ ೧ರ ಮೊದಲ ಮೂನ್ ಇಂಪ್ಯಾಕ್ಟ್ ಪ್ರೋಬ್
ಹೊರ ಹಾರಿತು ಮತ್ತು ಚಂದ್ರನ ಮೇಲ್ಮೈಗೆ ಸಮೀಪ ಅಪ್ಪಳಿಸಿತು. ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ
ಅಸ್ತಿತ್ವ ದೃಢಪಟ್ಟಿತು.
೨೦೦೯ ಆಗಸ್ಟ್ ೨೮: ಇಸ್ರೋ ಪ್ರಕಾರ ಚಂದ್ರಯಾನ ೧ ಕಾರ್ಯಕ್ರಮ ಕೊನೆಗೊಂಡಿತು.
ಚಂದ್ರಯಾನ ೨
೨೦೧೯ ಜುಲೈ ೨೨: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ
ಚಂದ್ರಯಾನ-೨ ಉಡಾವಣೆ
೨೦೧೯ ಆಗಸ್ಟ್ ೨೦: ಚಂದ್ರಯಾನ -೨ ಬಾಹ್ಯಾಕಾಶ ನೌಕೆ ಚಂದ್ರಕಕ್ಷೆಯನ್ನು
ಪ್ರವೇಶಿಸಿತು.
೨೦೧೯ ಸೆಪ್ಟೆಂಬರ್ ೦೨: ಚಂದ್ರಧ್ರುವ ಕಕ್ಷೆಯಲ್ಲಿ ೧೦೦ ಕಿಮೀ ಎತ್ತರದಲ್ಲಿದ್ದಾಗ
ಚಂದ್ರಯಾನದಿಂದ ವಿಕ್ರಮ್ ಲ್ಯಾಂಡರನ್ನು ಬೇರ್ಪಡಿಸಲಾಯಿತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ೨.೧ ಕಿಮೀ ಎತ್ತದಲ್ಲಿದ್ದಾಗ ಭೂ ಕೇಂದ್ರದ
ಸಂಪರ್ಕ ಕಡಿದುಹೋಯಿತು.
ಚಂದ್ರಯಾನ ೩
೨೦೨೩ ಜುಲೈ ೧೪: ಚಂದ್ರಯಾನ -೩ ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾದ
ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
ಚಂದ್ರಯಾನ ೩ರ ಎಲ್ಲ ಪರೀಕ್ಷೆಗಳೂ ಸಫಲವಾಗಿದ್ದು, ಚಂದ್ರಕಕ್ಷೆಯಲ್ಲಿ
ಚಂದ್ರನಿಗೆ ಅತ್ಯಂತ ಸಮೀಪಕ್ಕೆ ತಲುಪಿದೆ. ಬಾಹ್ಯಾಕಾಶ ನೌಕೆಯನ್ನು ನಿಧಾನವಾಗಿ ವೇಗ ತಗ್ಗಿಸುತ್ತಾ
ಚಂದ್ರ ನೆಲದ ಸಮೀಪಕ್ಕೆ ಒಯ್ಯಲಾಗಿದೆ.
೨೦೨೩ ಆಗಸ್ಟ್ ೨೩: ಚಂದ್ರಯಾನ -೩ ವಿಕ್ರಮ್ ಲ್ಯಾಂಡರ್ ಮತ್ತು ರೋವರ್
ಚಂದ್ರನೆಲದ ಮೇಲೆ ʼಹಗುರ ಸ್ಪರ್ಶʼಕ್ಕೆ ಸಜ್ಜಾಗಿದೆ. ಕೊನೆಯ
ಕ್ಷಣಗಳಲ್ಲಿ ಏನಾದರೂ ಅನಿರೀಕ್ಷಿತ ಸಮಸ್ಯೆ ಕಂಡು ಬಂದರೆ ಚಂದ್ರ ಸ್ಪರ್ಶ ಕಾರ್ಯಕ್ರಮವನ್ನು ಆಗಸ್ಟ್
೨೭ರವರೆಗೆ ವಿಳಂಬಿಸಬಹುದು ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ಆದರೆ ಇಸ್ರೋದ ಎಲ್ಲ ವಿಜ್ಞಾನಿಗಳೂ ಈದಿನ ಯಶಸ್ವೀ ಚಂದ್ರ ಸ್ಪರ್ಶ ಖಚಿತ
ಎಂಬ ವಿಶ್ವಾಸದಲ್ಲಿದ್ದಾರೆ.
ಚಂದ್ರ ಸ್ಪರ್ಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಜೆ ೬ ಗಂಟೆ ಸುಮಾರಿಗೆ
ಚಂದ್ರಸ್ಪರ್ಶಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಈ ಸಾಧನೆಯೊಂದಿಗೆ ಚಂದ್ರನೆಲವನ್ನು ಈವರೆಗೆ ಯಾರೂ ಸ್ಪರ್ಶಿಸದ
ಭಾಗವನ್ನು ತಲುಪಿದ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.
ಈ ಕೌತುಕದ ಕ್ಷಣವನ್ನು ನೇರವಾಗಿ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ:
No comments:
Post a Comment