ಪುಸ್ತಕಗಳ ಬಿಡುಗಡೆ ಸಮಾರಂಭ
ಬೆಂಗಳೂರು: ಡಾ. ಶಂಕರ ಕೆ. ಪ್ರಸಾದ್ ಅವರು ಬರೆದಿರುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಇಂಗ್ಲಿಷ್ ಆವೃತ್ತಿ ʼರಿಬೂಟಿಂಗ್ ಡೆಮಾಕ್ರಸಿ ಇನ್ ಗ್ರಾಮ್ ಪಂಚಾಯತ್ಸ್ʼ ಪುಸ್ತಕಗಳ ಬಿಡುಗಡೆ ಸಮಾರಂಭವು 2023 ಡಿಸೆಂಬರ್ 09ರ ಶನಿವಾರ ಬೆಂಗಳೂರಿನ ಕುಮಾರ ಪಾರ್ಕಿನಲ್ಲಿ ಇರುವ ಗಾಂಧಿಭವನದಲ್ಲಿ ನಡೆಯಲಿದೆ.
ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ
ಸರ್ಕಾರದ ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ರಾಜ್ಯ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅವರು ಪುಸ್ತಕಗಳನ್ನು
ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸಭಾಪತಿ ಡಾ. ಬಿ. ಎಲ್. ಶಂಕರ್ ಅವರು
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ
ಡಾ. ಶ್ಯಾಮ್ ಕಶ್ಯಪ್ ಮತ್ತು ಕೋಲಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರಾಮ ವಿಕಾಸದ ಅಧ್ಯಕ್ಷ
ಶ್ರೀ ಎಮ್.ವಿ.ಎನ್. ರಾವ್ ಅವರು ಗೌರವಾನ್ವಿತ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದ ಚಾಣಕ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಸದಾನಂದ ಜಾನೆಕೆರೆ ಅವರು ಸಮಾರಂಭದ
ಅಧ್ಯಕ್ಷತೆ ವಹಿಸಲಿದ್ದಾರೆ.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು
ಸೀಮಾತೀತ ತಂತ್ರಜ್ಞಾನಗಳನ್ನು ಹೇಗೆ ಬಳಸಬಹುದು ಮತ್ತು ತನ್ಮೂಲಕ ಗ್ರಾಮ ಪಂಚಾಯಿತಿಗಳನ್ನು ಹೇಗೆ ಆತ್ಮನಿರ್ಭರವನ್ನಾಗಿ
ಮಾಡಬಹುದು ಎಂಬುದನ್ನು ವಿವರಿಸುವ ಈ ಪುಸ್ತಕಗಳನ್ನು ಬೆಂಗಳೂರಿನ ಸಂಪೂರ್ಣ ಸ್ವರಾಜ್ ಫೌಂಡೇಷನ್
ಪ್ರಕಟಿಸಿದೆ.
ಆಮಂತ್ರಣ ಪತ್ರಿಕೆಯ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿರಿ.
Book
Release
Bengaluru: A function on Release of Books ‘Rebooting
Democracy in Gram Panchayats’ and its Kannada Version “21ne Shatamanada
Atma-Nirbhara Grama Panchayiti’, written by Dr. Shankara K. Prasad, Founder and
Managing Trustee of Sampoorna Swaraj Foundation will be held on Saturday, 09th
December 2023 at Gandhi Bhavan, Kumar Park, Bengaluru.
Prof. B.K. Chandrashekhar, Former Minister of
State for Information Technology, Karnataka Government will release the books
wherein Dr. B.L. Shankar, Former Chairman, Legislative Council of Karnataka
will participate as Chief Guest.
Dr, Sham Kashyap, Research Professor, Azim
Premji University and Shri MVN Rao, President, Gram Panchayat Kolar and
Chairman, Gram Vikas will participate as hon’ble guests in the function. Prof.
Sadananda Janekere, Adjunt Professor, Chanakya University, Karnataka will
preside over the function.
Both books which explain how to use Frontier
Technologies to realize Mahatma Gandhi’s dream of Gram Swaraj and thereby make
Gram Panchayats self-reliant or Atma-Nirbhar, were published by Sampoorna
Swaraj Foundation of Bengaluru.
To Liston the news Click below:
No comments:
Post a Comment