Sunday, March 30, 2025

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

 ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಮಾರ್ಚ್‌ ೩೦ರ ಭಾನುವಾರ ವಿಶ್ವಾವಸು ಸಂವತ್ಸರ ಆರಂಭದ ಚಾಂದ್ರ ಯುಗಾದಿಯನ್ನು ಸಡಗರದೊಂದಿಗೆ ಆಚರಿಸಲಾಯಿತು.

ಹೊಸ ವರ್ಷಾರಂಭದ ಪ್ರಯುಕ್ತ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ, ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆದವು. ಬಡಾವಣೆಯ ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ದೇವರಿಗೆ ಈ ದಿನದ ವಸ್ತ್ರಾಲಂಕಾರ ಸೇವೆಯನ್ನು, ಶ್ರೀ ಮುನಿರಾಜು ಮತ್ತು ಕುಟುಂಬದವರು ಪ್ರಸಾದ ಹಾಗೂ ಹೂವಿನ ಅಲಂಕಾರವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಇಲ್ಲಿವೆ. ವಿಡಿಯೋ ನೋಡಲು ವಿಶೇಷ ವಸ್ತ್ರಾಲಂಕಾರದಲ್ಲಿ ಇರುವ ಎಡಬದಿಯ ಶ್ರೀ ವೆಂಕಟೇಶ್ವರ ಅಥವಾ ಕೆಳಗೆ ಇರುವ ಶ್ರೀ ಮಹಾಗಣಪತಿ ಇಲ್ಲವೇ ಅಭಯ ಆಂಜನೇಯ ಸ್ವಾಮಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಇವುಗಳನ್ನೂ ಓದಿರಿ:

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ


ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ


ರಾತ್ರಿ ಜ್ಯೋತಿಯ ಮಂದ ಬೆಳಕಿನಲ್ಲಿ ನಡೆದ ಪಂಚಾರತಿ, ಮಹಾರತಿ, ಮಹಾ ಮಂಗಳಾರತಿ ವೀಕ್ಷಣೆಯ ಅನಿರ್ವಚನೀಯ ಆನಂದವನ್ನು ಭಕ್ತರು ಪಡೆದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



No comments:

Advertisement