Friday, December 26, 2025

ನೇಮದ ವೇಳೆ ಸರ ಕದ್ದರು, ವಿಡಿಯೋದಿಂದಾಗಿ ಸಿಕ್ಕಿಬಿದ್ದರು!

 ನೇಮದ ವೇಳೆ ಸರ ಕದ್ದರು, ವಿಡಿಯೋದಿಂದಾಗಿ ಸಿಕ್ಕಿಬಿದ್ದರು!

ಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀಬ್ರಹ್ಮಬೈದರ್ಕಳ ಗರಡಿ ನೇಮೋತ್ಸವದ ಸಂದರ್ಭದಲ್ಲಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ಮೂವರು ಕಳ್ಳಿಯರು ಲಪಟಾಯಿಸಿದ ಘಟನೆ ಘಟಿಸಿದ್ದು, ಮೂವರನ್ನೂ ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡಿನ ಶೀಥಲ್‌, ಕಾಳಿಯಮ್ಮ, ಮಾರಿ ಎಂಬುದಾಗಿ ಗುರುತಿಸಲಾಗಿದ್ದು ಅವರನ್ನು ವಾಹನವೊಂದರಲ್ಲಿ ಸಾಗುತ್ತಿದ್ದಾಗ ಸಾರ್ವಜನಿಕರೇ ಗುರುತಿಸಿ ಬಳಿಕ ಪೊಲೀಸರಿಗ ಒಪ್ಪಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


ಹೆಜಮಾಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವದ ಸಂದರ್ಭದಲ್ಲಿ ಹೆಜಮಾಡಿ ನಿವಾಸಿ ಕಮಲ ಎಂಬವನ್ನು ಮೂರೂ ಬದಿಯಿಂದ ಸುತ್ತುಗಟ್ಟಿ ಒಂದು ಬದಿಗೆ ಸರಿಸಿ ಚಿನ್ನದ ಸರವನ್ನು ಕತ್ತರಿಸಿ ಲಪಟಾಯಿಸಲಾಗಿತ್ತು. ಸರದ ಬೆಲೆ ಸುಮಾರು ೨ ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ಈ ಮೂವರು ಕಳ್ಳತನ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ವಿಡಿಯೋ ವಾಟ್ಸಪ್‌ ಗಳಲ್ಲಿ ವೈರಲ್‌ ಆಗಿತ್ತು. ಕಳ್ಳಿಯರು ಬಟ್ಟೆ ಬದಲಾಯಿಸಿಕೊಂಡು ಪುತ್ತೂರಿನಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ಸಹ ಪ್ರಯಾಣಿಕರು ಅವರನ್ನು ಗುರುತಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದರು.

ಕಳ್ಳಿಯರು ವಾಹನದಲ್ಲಿ ಸಿಕ್ಕಿ ಬಿದ್ದ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೂವರು ಕಳ್ಳಿಯರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಳಿಕ ಉಡುಪಿ ನ್ಯಾಯಾಲಯಕ್ಕೆ ಕಳ್ಳಿಯರನ್ನು ಹಾಜರು ಪಡಿಸಿದ ಪೊಲೀಸರು ಬಳಿಕ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿವೆ.

No comments:

Advertisement