ಅಮ್ಮನ ಸಾವಿನ ನೋವಿನಲ್ಲೂ ದಿಶಾ
ಸಾಧನೆ
ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ೬೦೦ಕ್ಕೆ ೬೦೦ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಮಹತ್ಸಾಧನೆ ಮಾಡಿದ್ದಾಳೆ. ಈಕೆ ಪರೀಕ್ಷೆ ನಡೆಯುತ್ತಿದ್ದಾಗಲೇ ಅಮ್ಮನನ್ನು ಕಳೆದುಕೊಂಡು, ಅಮ್ಮನ ಆಸೆ ತೀರಿಸಬೇಕೆಂದು ಅಗಲಿಕೆಯ ನೋವಿನಲ್ಲೇ ಪರೀಕ್ಷೆಗೆ ಬರೆದು ಸುದ್ದಿಯಾಗಿದ್ದಳು. ಇದೀಗ ೨೦೨೬ ಏಪ್ರಿಲ್ ೦೯ರ ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯಫಲಿತಾಶ ಪ್ರಕಟಗೊಂಡಿದ್ದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಅಮ್ಮನ ಕನಸನ್ನು ಸಾಕಾರಗೊಳಿಸಿದ್ದಾಳೆ. ತನ್ನ ಸಾಧನೆಗೆ ಹೆತ್ತವರ ಪ್ರೋತ್ಸಾಹದ ಜೊತೆಗೆ ಕಾಲೇಜಿನ ಬೋಧಕ ವರ್ಗದ ಪ್ರೋತ್ಸಾಹವೂ ಕಾರಣ ಎಂಬುದಾಗಿ ಆಕೆ ಹೇಳಿದ್ದಾಳೆ. ಮೂರು ಪರೀಕ್ಷೆಗಳು ಮುಗಿಯುವ ವೇಳೆಗೆ ತಾಯಿಯನ್ನು ಕಳೆದುಕೊಂಡ ದಿಶಾಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ವಿಶೇಷ ಲಕ್ಷ್ಯ ವಹಿಸಿ ಪರೀಕ್ಷೆಗೆ ಅಣಿಗೊಳಿಸಿದ್ದೆವು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದ್ದಾರೆ. ದಿಶಾ ನಿನ್ನ ಸಾಧನೆಗೆ ಇದೋ ನಮ್ಮ ಪ್ರಣಾಮಗಳು.
&&&&&&
ಗುಡ್ಡದ ತುದಿಯಲ್ಲಿ ಕೆರೆ ನಿರ್ಮಿಸಿದ ಭಗೀರಥ
ಈ ವ್ಯಕ್ತಿಯ ಹೆಸರು ರೆಂಜಾಡಿ ನೀಲಪ್ಪ ಗೌಡ. ದಕ್ಷಿಣ ಕನ್ನಡ ಜಿಲ್ಲೆಯ
ವಿಟ್ಲ ಸಮೀಪದ ಅಳಿಕೆಯವರು. ಅಳಿಕೆ ಗ್ರಾಮದ ರೆಂಜಾಡಿ ತಿಮ್ಮಪ್ಪ ಗೌಡ ಮತ್ತು ಸೀತಮ್ಮ ದಂಪತಿಯ ಸುಪುತ್ರರು.
ಪ್ರಗತಿಪರ ಕೃಷಿಕ. ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು.
ಎಲ್ಲರೂ ನೀರಿಗಾಗಿ ಭೂಮಿಯನ್ನು ಬಗೆದು ಕೆರೆ, ಬಾವಿ, ಕೊಳವೆ ಬಾವಿ ತೋಡಿದರೆ, ಇವರು ಗುಡ್ಡ ತುದಿಯಲ್ಲಿ ಬೀಳುವ ಮಳೆಯ ನೀರನ್ನು ಒಂದಿಷ್ಟೂ ಕೆಳಕ್ಕೆ ಹೋಗದಂತೆ ಹಿಡಿದು ನಿಲ್ಲಿಸಿದವರು.
ಹಾಗೆ ಹಿಡಿದ ನೀರನ್ನು ವರ್ಷ ಪೂರ್ತಿ ಸಂಗ್ರಹಿಸಿ ಇಡಲು ಬೆಟ್ಟದ ತುದಿಯಲ್ಲೇ ಜಲಾಶಯ ನಿರ್ಮಿಸಿದ ಸಾಧಕ.ಈ ಸಾಧಕ ಇದನ್ನು ಮಾಡಿದ್ದು ಹೇಗೆ ಎಂದು ತಿಳಿಯಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿ. ನೋಡಿ.
&&&&&&ವಿದುಷಿ ವಿ. ದೀಕ್ಷಾ ಭರತನಾಟ್ಯ ವಿಶ್ವದಾಖಲೆ
ಉಡುಪಿ ಜಿಲ್ಲೆಯ ಭರತನಾಟ್ಯ ಕಲಾವಿದೆ ವಿದುಷಿ ವಿ. ದೀಕ್ಷಾ ಅವರು ಸತತ 216 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಮಾಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ.
2025 ಆಗಸ್ಟ್ 21 ರಂದು ಮಧ್ಯಾಹ್ನ 3:30 ಕ್ಕೆ ಆರಂಭವಾದ ಈ ಮ್ಯಾರಥಾನ್ ನೃತ್ಯ ಪ್ರದರ್ಶನವು ಒಂಬತ್ತು ದಿನಗಳ ಕಾಲ ನಿರಂತರವಾಗಿ ನಡೆದು ಆಗಸ್ಟ್ 30 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಮೂಲಕ ಅವರು ಈ ಹಿಂದೆ ಮಂಗಳೂರಿನ ರೆಮೋನಾ ಎವೆಟ್ಟೆ ಪಿರೇರಾ ಅವರು 170 ಗಂಟೆಗಳ ಕಾಲ ನಿರಂತರ ನೃತ್ಯ ಮಾಡಿದ ದಾಖಲೆಯನ್ನು ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿದರು.
ಈಕೆಗೆ ಒಂದು ಭೇಷ್ ಹೇಳಿ. ಹೆಚ್ಚಿನ ವಿವರ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
ಹಾಲಿಗಾಗಿ ಮಾತ್ರ ಜಾನುವಾರು ಸಾಕುವ ಬಹಳಷ್ಟು ಮಂದಿ ಹೋರಿ ಕರುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಾರೆ. ಆದರೆ ಅಗರ ಅಗತ್ಯವಿಲ್ಲ. ಹೋರಿಗಳ ಸೆಗಣಿಯಿಂದಲೇ ಲಕ್ಷಾಂತರ ರೂಪಾಯಿ ಸಂಪಾದನೆ ಸಾಧ್ಯ ಎಂಬುದಾಗಿ ಪ್ರತ್ಯಕ್ಷ ತೋರಿಸಿಕೊಟ್ಟಿರುವ ಈ ಸಾಧಕನ ಸಾಧನೆ ಮೆಚ್ಚಲಷ್ಟೇ ಅಲ್ಲ, ಅನುಕರಣೆಗೂ ಯೋಗ್ಯವಾದದ್ದು.
ಮೇಲಿನ ಚಿತ್ರದ ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್ ಮಾಡಿರಿ.
&&&&&&
ಈ ಕೃಷಿಕ ಪದವೀಧರನ ಸಾಧನೆಗೊಂದು ಸೆಲ್ಯೂಟ್!
ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್ ಮಾಡಿರಿ.










No comments:
Post a Comment