My Blog List

Monday, December 2, 2019

೧.೦೩ ಲಕ್ಷ ಕೋಟಿ ರೂಪಾಯಿಗೆ ತಲುಪಿದ ಜಿಎಸ್‌ಟಿ ಸಂಗ್ರಹ

.೦೩  ಲಕ್ಷ ಕೋಟಿ ರೂಪಾಯಿಗೆ ತಲುಪಿದ ಜಿಎಸ್ಟಿ ಸಂಗ್ರಹ
ತಿಂಗಳ ಕುಸಿತದ ಬಳಿಕ ನವೆಂಬರಿನಲ್ಲಿ ಜಿಗಿದ ತೆರಿಗೆ ಸಂಗ್ರಹ
ನವದೆಹಲಿ: ಸರ್ಕಾರದ ಆರ್ಥಿಕ ನೆರವಿನ ಕ್ರಮಗಳ ಪರಿಣಾಮವಾಗಿ ನವೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ನವೆಂಬರ್ ತಿಂಗಳಲ್ಲಿ ,೦೩,೪೯೨ ಕೋಟಿ ರೂಪಾಯಿಗಳಿಗೆ ಜಿಗಿಯಿತು. ಒಟ್ಟಾರೆ ಆರ್ಥಿಕ ಬೆಳವಣಿಗೆ ಕುಸಿತದ ಮಧ್ಯೆ ಕಳೆದ ಮೂರು ತಿಂಗಳುಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಸತತವಾಗಿ ಕುಸಿದಿತ್ತು.

ಆರ್ಥಿಕ ಹಿನ್ನಡೆ ಮತ್ತು ದೇಶದ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತದ ಮಧ್ಯೆ, ಕೇಂದ್ರ ಸರ್ಕಾರಕ್ಕೆ ಜಿಎಸ್ಟಿ ಸಂಗ್ರಹದ ಹೆಚ್ಚಳವು ಸ್ವಲ್ಪ ಮಟ್ಟಿನ ಆಸರೆಯನ್ನು ಒದಗಿಸಿತು.

೨೦೧೯ರ ನವೆಂಬರ್ ತಿಂಗಳ ಜಿಎಸ್ಟಿ ಸಂಗ್ರಹವು ಜಿಎಸ್ಟಿ ಅನುಷ್ಠಾನದ ಬಳಿಕದ ಮೂರನೇ ಅತ್ಯಧಿಕ ಮಾಸಿಕ ತೆರಿಗೆ ಸಂಗ್ರಹವಾಗಿದೆ. ಇದಕ್ಕೆ ಮುನ್ನ ೨೦೧೯ರ ಏಪ್ರಿಲ್ ಮತ್ತು ೨೦೧೯ರ ಮಾರ್ಚ್ ತಿಂಗಳುಗಳಲ್ಲಿ ಅತ್ಯಧಿಕ ಜಿಎಸ್ಟಿ ಸಂಗ್ರಹವಾಗಿತ್ತು ಎಂದು ವಿತ್ತ ಸಚಿವಾಲಯವು 2019 ಡಿಸೆಂಬರ್ 01ರ ಭಾನುವಾರ ತಿಳಿಸಿತು.

ಅಕ್ಟೋಬರ್ ತಿಂಗಳಲ್ಲಿ ಆಗಿದ್ದ ಒಟ್ಟು ಜಿಎಸ್ಟಿ ಸಂಗ್ರಹ ಮೊತ್ತ ೯೫,೩೮೦ ಕೋಟಿ ರೂಪಾಯಿಗಳಾಗಿದ್ದವು. ಇದು ವರ್ಷದಲ್ಲಿ ಶೇಕಡಾ .೩ರಷ್ಟು ಕುಸಿತವಾಗಿತ್ತು.

ಹಿಂದಿನ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಶೇಕಡಾ .೮ರಷ್ಟು ಸುಧಾರಣೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ೯೧,೦೧೬ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದ್ದು, ಇದು ೨೦೧೮ರ ಫೆಬ್ರುವರಿಯಿಂದೀಚೆಗೆ ಅತ್ಯಂತ ಕನಿಷ್ಠ ಸಂಗ್ರಹವಾಗಿತ್ತು. ಆಗಸ್ಟ್ ತಿಂಗಳಲ್ಲಿ ಆಗಿದ್ದ ಜಿಎಸ್ಟಿ ಸಂಗ್ರಹ ೯೮,೨೦೨ ಕೋಟಿ ರೂಪಾಯಿಗಳು.

ಆರ್ಥಿಕ ಹಿನ್ನಡೆಯ ಪರಿಣಾಮವಾಗಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಲಕ್ಷ ಕೋಟಿ ರೂಪಾಯಿಗಳಿಗಿಂತ ಕೆಳಕ್ಕೆ ಇಳಿದಿತ್ತು. ಆರ್ಥಿಕ ಹಿನ್ನಡೆಯ ಪರಿಣಾಮವಾಗಿ ಗ್ರಾಹಕರು ತಮ್ಮ ವೆಚ್ಚ ಹಾಗೂ ಖಾಸಗಿ ಹೂಡಿಕೆಗಳನ್ನು ತಡೆ ಹಿಡಿದಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಮುಕ್ತಾಯವಾದ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆಯು (ಒಟ್ಟು ಆಂತರಿಕ ಉತ್ಪಾದನೆ- ಜಿಡಿಪಿ) ಶೇಕಡಾ .೫ಕ್ಕೆ ಕುಸಿದಿತ್ತು. ಶುಕ್ರವಾರ ಬಿಡುಗಡೆ ಮಾಡಲಾದ ಅಂಕಿ ಅಂಶಗಳ ಪ್ರಕಾರ ಇದು ಸತತ್ ೬ನೇ ತ್ರೈಮಾಸಿಕ ಜಿಡಿಪಿ ಕುಸಿತವಾಗಿತ್ತು.

ಆರ್ಥಿಕತೆಗೆ ಬಲ ತುಂಬಲು ಕೇಂದ್ರ ಸರ್ಕಾರವು ಹಲವಾರು ಸುತ್ತಿನ ಆರ್ಥಿಕ, ಆಡಳಿತಾತ್ಮಕ ಮತ್ತು ನೀತಿ ನಿರೂಪಣಾ ಕ್ರಮಗಳನ್ನು ಆಗಸ್ಟ್ ೨೩ರಿಂದ ಪ್ರಕಟಿಸಿತು. ಸೆಪ್ಟೆಂಬರ್ ೨೦ರಂದು ಕಾರ್ಪೋರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಿದ್ದು ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಲ್ಲಿ ಗರಿಷ್ಠ ಪ್ರಮಾಣದ್ದಾಗಿತ್ತು. ಸರ್ಕಾರದ ಕಾರ್ಪೋರೇಟ್ ತೆರಿಗೆ ಕಡಿತದ ಪರಿಣಾಮವಾಗಿ ಬೊಕ್ಕಸಕ್ಕೆ .೪೫ ಲಕ್ಷ ಕೋಟಿ ರೂಪಾಯಿಗಳ ಆದಾಯ ನಷ್ಟವಾಗಿತ್ತು.

ಪಿಡಬ್ಲ್ಯೂಸಿ ಇಂಡಿಯಾದಲ್ಲಿನ ಪರೋಕ್ಷ ತೆರಿಗೆ ತಜ್ಞ ಪ್ರತೀಕ್ ಜೈನ್ ಅವರು ಒಂದು ತಿಂಗಳ ತೆರಿಗೆ ಸಂಗ್ರಹ ಏರಿಕೆ ಬಗ್ಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದರು.

ಒಂದು ತಿಂಗಳ ತೆರಿಗೆ ಸಂಗ್ರಹ ಏರಿಕೆಯನ್ನು ವಿಶ್ಲೇಷಣೆ ಮಾಡುವುದು ತುಂಬಾ ಕಷ್ಟದ ವಿಚಾರ. ನಾವು ಪ್ರವೃತ್ತಿಯನ್ನು (ಟ್ರೆಂಡ್) ಗಮನಿಸಬೇಕಾಗಿದೆಎಂದು ಜೈನ್ ಹೇಳಿದರು.

ತಂತ್ರಜ್ಞಾನ/ ಮಾಹಿತಿ ವಿಶ್ಲೇಷಣೆಗಳ ದಕ್ಷ ಬಳಕೆಯನ್ನು ಹೆಚ್ಚಿಸುವ ಮೂಲಕ ತೆರಿಗೆ ವಂಚನೆ ನಿವಾರಣೆ ಮತ್ತು ತೆರಿಗೆ ದರ ಹೆಚ್ಚಳದ ಆಮಿಷಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಅನುಸರಣೆಗಳನ್ನು ಸರಳಗೊಳಿಸುವ ಸರಿಯಾದ ದಿಕ್ಕಿನಲ್ಲಿ ಸರ್ಕಾರ ಹೆಜ್ಜೆ ಇರಿಸಿದೆ. ಪ್ರಯತ್ನಗಳು ಮತ್ತು ಮುಂದಿನ ವರ್ಷದಿಂದ ಅಳವಡಿಕೆಯಾಗಲಿರುವ -ಇನ್ವಾಯ್ಸ್ ವ್ಯವಸ್ಥೆಯ ಪರಿಣಾಮವಾಗಿ ಜಿಎಸ್ಟಿ ಸಂಗ್ರಹ ಕ್ರಮೇಣ ಚೇತರಿಸಲಿದೆ. ಅಲ್ಲದೆ ಇದು ಒಟ್ಟಾರೆ ಆರ್ಥಿಕತೆಯನ್ನೂ ಅವಲಂಬಿಸಿದೆಎಂದು ಜೈನ್ ನುಡಿದರು.

ಜುಲೈ- ಸೆಪ್ಟೆಂಬರ್ ನಡುವಣ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇಕಡಾ .೫ರಷ್ಟು ದಾಖಲಾಗಿರುವುದು ೨೦೧೩ರ ಮಾರ್ಚ್ ತಿಂಗಳಿನಿಂದೀಚೆಗೆ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಜೊತೆಗೆ ಇದು ಬಳಕೆ ಪ್ರಮಾಣದ ಅಸ್ತವ್ಯಸ್ತ ಬೆಳವಣಿಗೆ ಮತ್ತು ಹೂಡಿಕೆಯಲ್ಲಿ ಚೇತರಿಕೆ ಕಾಣದಿರುವುದನ್ನು ಪ್ರತಿಬಿಂಬಿಸಿದೆ. ಪ್ರಸ್ತುತ ವರ್ಷದ ಪೂರ್ವಾರ್ಧದಲ್ಲಿ ಒಟ್ಟು ಆಂತರಿಕ ಉತ್ಪನ್ನವು ಶೇಕಡಾ .೮ರಷ್ಟಾಗಿದ್ದು, ೨೦೧೨-೧೩ರಿಂದೀಚೆಗೆ ಇದು ಅತ್ಯಂತ ಕಡಿಮೆಯಾಗಿದೆ.

ಸರ್ಕಾರವು ಪ್ರಸ್ತುತ ಆರ್ಥಿಕ ವರ್ಷವನ್ನು ಅತ್ಯುತ್ತಮ ಜಿಎಸ್ಟಿ ಆದಾಯ ಗಳಿಕೆಯೊಂದಿಗೆ ಆರಂಭಿಸಿತ್ತು. ಏಪ್ರಿಲ್ ತಿಂಗಳಲ್ಲಿ .೧೪ ಲಕ್ಷ ಕೋಟಿ ಜಿಎಸ್ಟಿ ತೆರಿಗೆ ಸಂಗ್ರಹವಾಗಿದ್ದು, ೨೦೧೭ರಲ್ಲಿ ನೂತನ ಪರೋಕ್ಷ ತೆರಿಗೆ ವ್ಯವಸ್ಥೆ ಜಾರಿ ಬಳಿಕದ ಗರಿಷ್ಠ ತೆರಿಗೆ ಸಂಗ್ರಹ ಇದಾಗಿತ್ತು.

ಜೂನ್ ತಿಂಗಳಲ್ಲಿ ೯೯,೯೪೦ ಕೋಟಿ ರೂಪಾಯಿಗಳಿಗೆ ಕುಸಿಯುವುದಕ್ಕೆ ಮುನ್ನ ಮೇ ತಿಂಗಳಲ್ಲಿ ಕೂಡಾ ಜಿಎಸ್ಟಿ ಸಂಗ್ರಹ ಲಕ್ಷ ಕೋಟಿ ರೂಪಾಯಿಗಳನ್ನು ದಾಟಿತ್ತು. ಜುಲೈ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಲಕ್ಷ ಕೋಟಿ ರೂಪಾಯಿಗಿಂತ ಸ್ವಲ್ಪವೇ ಹೆಚ್ಚಾಗಿತ್ತು.

ಪ್ರಾವಿಷನಲ್ (ಇಂಪುಟ್ ಟ್ಯಾಕ್ಸ್) ತೆರಿಗೆ ಮೇಲಿನ ಶೇಕಡಾ ೨೦ರ ಮಿತಿಯು ಜಿಎಸ್ಟಿ ಸಂಗ್ರಹ ಸ್ವಲ್ಪ ಕುಸಿಯಲು ಕಾರಣವಾಗಿರಬಹುದು ಎಂದು ಹಣಕಾಸು ತಂತ್ರಜ್ಞಾನ ಸಂಸ್ಥೆ ಕ್ಲೀಯರ್ಟ್ಯಾಕ್ಸ್ ಸ್ಥಾಪಕ ಹಾಗೂ ಸಿಇಒ ಅರ್ಚಿತ್ ಗುಪ್ತ ನುಡಿದರು.

ಆದಾಗ್ಯೂ, ಆರ್ಥಿಕತೆಯ ಮಂದಗತಿ ಮತ್ತು ಗ್ರಾಹಕ ವೆಚ್ಚದ ಇಳಿಕೆಯು ಸೋರಿಕೆಗಳಿಗೆ ತಡೆ ಹಾಕಬಲ್ಲ -ಇನ್ವಾಯ್ಸಿಂಗ್ ಅನುಷ್ಠಾನಕ್ಕೆ ಇನ್ನಷ್ಟು ಒತ್ತಡ ಹಾಕಲಿದೆ. ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳವನ್ನು ನೋಡಲು ಇನ್ನಷ್ಟು ಪ್ರಯತ್ನಗಳು ಬೇಕಾಗಬಹುದು ಎಂದು ಅವರು ಹೇಳಿದರು.

No comments:

Advertisement