Showing posts with label ಪಾಕಿಸ್ತಾನ. Show all posts
Showing posts with label ಪಾಕಿಸ್ತಾನ. Show all posts

Wednesday, April 15, 2026

ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ್‌ ಪರದಾಟ!

  ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ್‌ ಪರದಾಟ!

ಸ್ಲಾಮಾಬಾದ್: ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ವಿಜಯ ಸಾಧಿಸಲು ಹೊರಟಿದ್ದ ಪಾಕಿಸ್ತಾನಕ್ಕೆ ಈಗ ಭಾರಿ ಮುಖಭಂಗವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉನ್ನತ ಮಟ್ಟದ ಮಾತುಕತೆಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನ ಸರ್ಕಾರಕಾರ್ಯಕ್ರಮ ನಡೆದ ಹೋಟೆಲ್‌ನ ಬಾಕಿ ಹಣವನ್ನು ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದೆ.

ಘಟನೆಯ ಹಿನ್ನೆಲೆ:

ಇಸ್ಲಾಮಾಬಾದ್‌ನ ಪ್ರತಿಷ್ಠಿತ **'ಸೆರೆನಾ ಹೋಟೆಲ್'**ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಮಹತ್ವದ ಚರ್ಚೆಗಳು ನಡೆದಿದ್ದವು. ಪ್ರಾದೇಶಿಕ ಮಧ್ಯಸ್ಥಿಕೆದಾರನಾಗಿ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಪಾಕಿಸ್ತಾನ ಈ ಅವಕಾಶವನ್ನು ಬಳಸಿಕೊಂಡಿತ್ತು. ಆದರೆಹೋಟೆಲ್ ಬಿಲ್ ಪಾವತಿಸುವಲ್ಲಿ ವಿಫಲವಾದ ಕಾರಣ ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಹರಾಜಾಗಿದೆ.

ವಿವಾದದ ಮುಖ್ಯಾಂಶಗಳು:

  • ಮಾಲೀಕರೇ ಬಿಲ್ ಕಟ್ಟುವ ಸ್ಥಿತಿ: ವರದಿಗಳ ಪ್ರಕಾರಹೋಟೆಲ್ ಬಿಲ್ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೊನೆಗೆ ಹೋಟೆಲ್ ಮಾಲೀಕರೇ ಮಧ್ಯಪ್ರವೇಶಿಸಿ ಬಾಕಿಯನ್ನು ಚುಕ್ತಾ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮೂಲಗಳು ತಿಳಿಸಿವೆ.
  • ದುಬಾರಿ ವಾಸ್ತವ್ಯ: ಈ ಪಂಚತಾರಾ ಹೋಟೆಲ್‌ನಲ್ಲಿ ಒಂದು ಸಾಮಾನ್ಯ ಕೋಣೆಯ ಬಾಡಿಗೆ ಸುಮಾರು ₹13,000 ($160) ಇದ್ದರೆಪ್ರೆಸಿಡೆನ್ಶಿಯಲ್ ಸೂಟ್‌ನ ಬೆಲೆ ಪ್ರತಿ ರಾತ್ರಿಗೆ ಅಂದಾಜು ₹2 ಲಕ್ಷಕ್ಕೂ ಅಧಿಕ ($2,375).
  • ಪ್ರತಿಷ್ಠೆಗೆ ಬಿದ್ದ ಪೆಟ್ಟು: "ಒಂದು ಕಡೆ ರಾಜತಾಂತ್ರಿಕ ವಿಜಯದ ಬಗ್ಗೆ ಮಾತನಾಡುತ್ತಾಇನ್ನೊಂದು ಕಡೆ ಹೋಟೆಲ್ ಬಿಲ್ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿ ಪಾಕಿಸ್ತಾನವಿದೆ" ಎಂದು ಗುಪ್ತಚರ ಮೂಲಗಳು ವ್ಯಂಗ್ಯವಾಡಿವೆ.

ಆರ್ಥಿಕ ಮುಗ್ಗಟ್ಟಿನ ಪ್ರತಿಬಿಂಬ:

ಪಾಕಿಸ್ತಾನವು ಈಗಾಗಲೇ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕಠಿಣ ನಿಗಾ ಮತ್ತು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿದೆ. ಇಂತಹ ಸಮಯದಲ್ಲಿ ಒಂದು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಕನಿಷ್ಠ ವೆಚ್ಚವನ್ನೂ ಭರಿಸಲಾಗದ ಪಾಕಿಸ್ತಾನದ ಸ್ಥಿತಿಆ ದೇಶದ ಆಡಳಿತಾತ್ಮಕ ಮತ್ತು ಆರ್ಥಿಕ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ.

"ರಾಜತಾಂತ್ರಿಕ ಮಹತ್ವಾಕಾಂಕ್ಷೆಗಳಿಗೂ ಮತ್ತು ದೇಶದ ಆರ್ಥಿಕ ವಾಸ್ತವಕ್ಕೂ ತಾಳೆಯೇ ಆಗುತ್ತಿಲ್ಲ" ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆಯಲ್ಲಿ ಯಾವುದೇ ದೊಡ್ಡ ಒಪ್ಪಂದ ನಡೆಯದಿದ್ದರೂಕದನ ವಿರಾಮ ಮುಗಿಯುವ ಮೊದಲು ಅಮೆರಿಕ ಮತ್ತು ಇರಾನ್ ಮತ್ತೊಮ್ಮೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೆ ಪಾಕಿಸ್ತಾನಕ್ಕೆ ಮಾತ್ರ ಈ ಘಟನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Saturday, January 31, 2026

ಭಿಕ್ಷೆ ಬೇಡುವಾಗ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್

 ಭಿಕ್ಷೆ ಬೇಡುವಾಗ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್

ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ತಮ್ಮ ದೇಶದ ಆರ್ಥಿಕ ಸಂಕಷ್ಟದ ಬಗ್ಗೆ ಅತ್ಯಂತ ಕಟು ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಉನ್ನತ ರಫ್ತುದಾರರ ಸಭೆಯಲ್ಲಿ ಮಾತನಾಡುತ್ತಾ, ತಮ್ಮ ದೇಶ ಸಾಲದ ಸುಳಿಗೆ ಸಿಲುಕಿರುವುದರ ಬಗ್ಗೆ ಅವರು ಸಂಕಟ ವ್ಯಕ್ತಪಡಿಸಿದ್ದಾರೆ ಎಂದು ಎನ್‌ ಡಿಟಿವಿ ವರದಿ ಮಾಡಿದೆ.

ಷರೀಫ್ ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ:

ಸಾಲ ಪಡೆಯುವುದು ಒಂದು ಹೊರೆ

"ನಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಹಣಕ್ಕಾಗಿ ಜಗತ್ತಿನಾದ್ಯಂತ ಕೈ ಚಾಚುತ್ತಾ (Begging) ಹೋಗುವಾಗ ನಮಗೆ ಅತೀವ ನಾಚಿಕೆಯಾಗುತ್ತದೆ. ಸಾಲ ಪಡೆಯುವುದು ನಮ್ಮ ಸ್ವಾಭಿಮಾನದ ಮೇಲೆ ಬಿದ್ದಿರುವ ದೊಡ್ಡ ಹೊರೆ. ಅವರ ಮುಂದೆ ಹೋದಾಗ ಅವಮಾನದಿಂದ ನಮ್ಮ ತಲೆ ತಗ್ಗಿ ಹೋಗುತ್ತದೆ," ಎಂದು ಷರೀಫ್ ಬಹಿರಂಗವಾಗಿ ಹೇಳಿದ್ದಾರೆ.

ಅನಿವಾರ್ಯವಾದ ರಾಜಿ

ಸಾಲ ನೀಡುವ ದೇಶಗಳ ಶರತ್ತುಗಳಿಗೆ ಬದ್ಧರಾಗಬೇಕಾದ ಅಸಹಾಯಕತೆಯನ್ನು ವಿವರಿಸುತ್ತಾ, "ಸಾಲ ಪಡೆಯುವವನ ತಲೆ ಯಾವಾಗಲೂ ಬಾಗಿರುತ್ತದೆ. ಅವರು ನಮಗೆ ಬೇಡವೆಂದರೂ ಕೆಲವು ಕೆಲಸಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆ, ಆಗ ನಾವು ಅವರಿಗೆ 'ಇಲ್ಲ' ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹಲವು ವಿಷಯಗಳಲ್ಲಿ ನಾವು ರಾಜೀ ಮಾಡಿಕೊಳ್ಳಬೇಕಾಗುತ್ತದೆ," ಎಂದು ಅವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು. 
ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ.

ಆರ್ಥಿಕ ಪರಿಸ್ಥಿತಿಯ ಏರುಪೇರು

ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯು ಸದ್ಯಕ್ಕೆ ದ್ವಿಗುಣಗೊಂಡಿದ್ದರೂ, ಅದರಲ್ಲಿ ಮಿತ್ರ ರಾಷ್ಟ್ರಗಳ ಸಾಲದ ಪಾಲು ಹೆಚ್ಚಿದೆ ಎಂದು ಅವರು ಸ್ಪಷ್ಟಪಡಿಸಿದರು. ಸದ್ಯ ಪಾಕಿಸ್ತಾನವು IMF (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಜೊತೆಗೆ ಆರ್ಥಿಕ ಬೆಳವಣಿಗೆಯ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯಲ್ಲಿದೆ.

  • ಇತ್ತೀಚಿನ ಬೆಳವಣಿಗೆ: ಪಾಕಿಸ್ತಾನವು ಇತ್ತೀಚೆಗೆ IMF ನಿಂದ $1.2 ಬಿಲಿಯನ್ ಸಾಲವನ್ನು ಪಡೆದಿದೆ.
  • ಮೀಸಲು ನಿಧಿ: ಡಿಸೆಂಬರ್ ವೇಳೆಗೆ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯು ದಾಖಲೆಯ $20 ಬಿಲಿಯನ್ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಇದಕ್ಕಾಗಿ ದೇಶವು ಕಠಿಣ ಆರ್ಥಿಕ ನೀತಿಗಳನ್ನು ಅನುಸರಿಸಬೇಕಿದೆ.

ಮುಂದಿನ ಗುರಿ: ಉದ್ಯೋಗ ಸೃಷ್ಟಿ

ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ನೇತೃತ್ವದ ತಂಡವು IMF ಮುಂದೆ ಪ್ರಬಲವಾದ ವಾದವನ್ನು ಮಂಡಿಸಿದೆ ಎಂದ ಷರೀಫ್, "ನಾವು ಈಗ ಸ್ಥಿರತೆಯನ್ನು ಸಾಧಿಸಿದ್ದೇವೆ. ಇನ್ನು ಮುಂದೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ಬಡತನ ನಿರ್ಮೂಲನೆ ಮಾಡುವುದೇ ನಮ್ಮ ಮುಂದಿರುವ ಮುಖ್ಯ ಗುರಿ," ಎಂದು ಉದ್ಯಮಿಗಳಿಗೆ ಭರವಸೆ ನೀಡಿದರು.

ಸಾರಾಂಶ: ಪಾಕಿಸ್ತಾನದ ಪ್ರಧಾನಿಯ ಈ ಹೇಳಿಕೆಯು ಆ ದೇಶದ ಆರ್ಥಿಕ ದಿವಾಳಿತನ ಎಷ್ಟು ಗಂಭೀರವಾಗಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಎಂತಹ ಮುಜುಗರವನ್ನು ಎದುರಿಸುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Wednesday, October 1, 2025

ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!

 ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!

2025 ಅಕ್ಟೋಬರ್ 1ರ ಬುಧವಾರ ಪಾಕಿಸ್ತಾನದ ಪಂಜಾಬಿ ಸೈನ್ಯವು ಕಾಶ್ಮೀರಿ ಪ್ರತಿಭಟನಾಕಾರರನ್ನು ತಡೆಯಲು ದಾದ್ಯಾಲ್‌ನ ಪಾಲಕ್ ಸೇತುವೆಯ ಮೇಲೆ ಮೂರು ದೊಡ್ಡ ಕಂಟೈನರ್‌ಗಳನ್ನು ಇಟ್ಟು ಮಾರ್ಗವನ್ನು ಬಂದ್ ಮಾಡಿತ್ತು.

ಆದರೆ, ಸ್ಥಳೀಯರು ಯಾವುದೇ ಸಾಧನಗಳಿಲ್ಲದೆ, ಬರಿಗೈಯಲ್ಲೇ ಆ ಬೃಹತ್ ಕಂಟೈನರ್‌ಗಳನ್ನು ಸೇತುವೆಯಿಂದ ಕೆಳಗೆ, ಮಂಗ್ಲಾ ಜಲಾಶಯಕ್ಕೆ ತಳ್ಳಿಬಿಟ್ಟಿದ್ದಾರೆ!

ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಗಳ ವಿರುದ್ಧ ಸಿಡಿದೆದ್ದ ಜನರ ಆಕ್ರೋಶದ ಮುಂದೆ ಕಂಟೈನರ್‌ಗಳ ಬ್ಲಾಕೇಡ್ ನಡೆಯಲಿಲ್ಲ.

ಈ ಘಟನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ  (Pak occupied Kashmir /PoK) ತೀವ್ರಗೊಳ್ಳುತ್ತಿರುವ ಅಶಾಂತಿಗೆ ಸಾಕ್ಷಿಯಾಗಿದೆ. ಘರ್ಷಣೆಗಳಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಆವಾಮಿ ಆಕ್ಷನ್ ಕಮಿಟಿ ಬಂದ್‌ಗೆ ಕರೆ ನೀಡಿದೆ.

ಉಗ್ರ ಆಕ್ರೋಶದಲ್ಲಿರುವ ಜನರನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಈ ಘಟನೆ ಸಾರಿ ಹೇಳುತ್ತಿದೆ! ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜನರ ಪ್ರತಿಭಟನೆಯ ಅಲೆ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿದೆ ಎಂದು ವರದಿಗಳು ಹೇಳುತ್ತಿವೆ

ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿರುವ ಈ ವಿಡಿಯೋ ಪೋಸ್ಟ್‌ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ  ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

Sunday, May 18, 2025

ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ

 ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ

ವದೆಹಲಿ: ಸೇನೆಯು ೨೦೨೫ ಮೇ ೧೮ರ ಭಾನುವಾರ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ..

ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಈ ಹೊಸ ವೀಡಿಯೊ ಬಿಡುಗಡೆ ಮಾಡಲಾಗಿದೆ.

"ಯೋಜಿಸಲಾಯಿತು, ತರಬೇತಿ ನೀಡಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು" ಎಂದು ಭಾರತೀಯ ಸೇನೆಪಶ್ಚಿಮ ಕಮಾಂಡ್, ಎಕ್ಸ್‌ ನಲ್ಲಿ ಪ್ರಕಟಿಸಿರುವ ವೀಡಿಯೊದಲ್ಲಿ ಹೇಳಿದೆ.

"ನ್ಯಾಯ ಸಲ್ಲಿಸಲಾಗಿದೆ" ಎಂದೂ ವಿಡಿಯೋ ಉದ್ಘೋಷಿಸಿದೆ.

ಸೇನೆಯ ಪಶ್ಚಿಮ ಕಮಾಂಡ್ ಹಂಚಿಕೊಂಡ ವೀಡಿಯೊದಲ್ಲಿ, ಭದ್ರತಾ ಸಿಬ್ಬಂದಿಯೊಬ್ಬರು ಆಪರೇಷನ್ ಸಿಂದೂ ಪಾಕಿಸ್ತಾನಕ್ಕೆ ಒಂದು ಪಾಠ, ಅದು ದಶಕಗಳಿಂದ ಕಲಿಯದ ಪಾಠ ಎಂದು ಹೇಳುವುದನ್ನು ಕೇಳಬಹುದು.

"ಇದೆಲ್ಲವೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾಯಿತು. ಇದು ಕೋಪವಲ್ಲ, ಲಾವಾ. ಮನಸ್ಸಿನಲ್ಲಿ ಒಂದೇ ಒಂದು ಆಲೋಚನೆ ಇತ್ತು - ಈ ಬಾರಿ, ಅವರ ಪೀಳಿಗೆಗಳು ನೆನಪಿಡುವಂತಹ ಪಾಠವನ್ನು ನಾವು ಕಲಿಸುತ್ತೇವೆ. ಅದು ಸೇಡಿನ ಕ್ರಿಯೆಯಾಗಿರಲಿಲ್ಲ, ಅದು ನ್ಯಾಯವಾಗಿತ್ತು. ಮೇ 9 ರ ರಾತ್ರಿ, ರಾತ್ರಿ 9 ಗಂಟೆ ಸುಮಾರಿಗೆ, ಕದನ ವಿರಾಮವನ್ನು ಉಲ್ಲಂಘಿಸಿದ ಎಲ್ಲ ಶತ್ರು ಠಾಣೆಗಳನ್ನು ಭಾರತೀಯ ಸೇನೆಯು ಮಣ್ಣುಮುಕ್ಕಿಸಿತು. ಆಪರೇಷನ್ ಸಿಂದೂ ಕೇವಲ ಒಂದು ಕ್ರಿಯೆಯಲ್ಲ; ಇದು ಪಾಕಿಸ್ತಾನಕ್ಕೆ ಒಂದು ಪಾಠ, ಅದು ದಶಕಗಳಿಂದ ಕಲಿಯದ ಪಾಠ." ಎಂದು ತಮ್ಮ ವೀಡಿಯೊದಲ್ಲಿ, ಸೇನಾ ಸಿಬ್ಬಂದಿ ಉದ್ಘೋಷಣೆ ಮಾಡಿದ್ದಾರೆ.

ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಏಪ್ರಿಲ್‌ ತಿಂಗಳ ೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಇದು ನಡೆಯಿತು. ಪಹಲ್ಗಾಮ್‌ ಹತ್ಯಾಕಾಂಡದಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದರು.

ಭಾರತದ ಕಾರ್ಯಾಚರಣೆಯ ನಂತರ, ಪಾಕಿಸ್ತಾನವು ನಿಯಂತ್ರಣ ರೇಖೆ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಶೆಲ್ ದಾಳಿಯ ಮೂಲಕ ಪ್ರತಿಕ್ರಿಯಿಸಿತು. ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿಯ ಪ್ರಯತ್ನಗಳು ಸಹ ನಡೆದವು. ನಂತರ ಭಾರತವು ಸಂಘಟಿತ ದಾಳಿ ನಡೆಸಿ ಪಾಕಿಸ್ತಾನದ 11 ವಾಯುನೆಲೆಗಳಲ್ಲಿರುವ ರಾಡಾರ್ ವ್ಯವಸ್ಥೆಗಳು, ಸಂವಹನ ಕೇಂದ್ರ, ಏರ್‌ ಫೀಲ್ಡ್ಳನ್ನು ಹೊಡೆದುರುಳಿಸಿತು. ಮೇ 10 ರಂದು ಉಭಯ ದೇಶಗಳು ಕದನವಿರಾಮಕ್ಕೆ ಒಪ್ಪಿಕೊಂಡವು.

ನಾಲ್ಕು ದಿನಗಳ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.

ಇವುಗಳನ್ನೂ ಓದಿರಿ: 
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್

ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ

"ಷರತ್ತುಬದ್ಧ" ಕದನ ವಿರಾಮ, ಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

Saturday, May 17, 2025

ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್

 ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್

ಚೆನಾಬ್‌ ನದಿ ನೀರು ಹರಿವು ಬಂದ್

ವದೆಹಲಿ: 2025ರ ಮೇ 10 ರಂದು ಭಾರತದ ಸಿಡಿತಲೆ (ಬ್ಯಾಲಿಸ್ಟಿಕ್) ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ತಾಣಗಳ ಮೇಲೆ ಅಪ್ಪಳಿಸಿವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್  ಕಡೆಗೂ ಒಪ್ಪಿಕೊಂಡಿದ್ದಾರೆ ಎಂದು ಜಿಯೋ ನ್ಯೂಸ್‌ ಮತ್ತು ಎಎನ್‌ ಐ ವರದಿ ಮಾಡಿವೆ.

ಪಾಕ್‌ ಪ್ರಧಾನಿಯ ಈ ಹೇಳಿಕೆಯು ಭಾರತದ ಸೇನಾ ಕಾರ್ಯಾಚರಣೆಯ ವಿಷಯದಲ್ಲಿ ಪಾಕಿಸ್ತಾನದ ಸಾಮಾನ್ಯ ನಿರಾಕರಣೆಯ ನಿಲುವಿಗೆ ವಿರುದ್ಧವಾದ ಅಪರೂಪದ ಒಪ್ಪಿಗೆಯಾಗಿದೆ.

ದಾಳಿಗಳ ಬಗ್ಗೆ ವರದಿ ಮಾಡಲು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಬೆಳಗಿನ ಜಾವ 2:30 ರ ಸುಮಾರಿಗೆ ತನಗೆ ಕರೆ ಮಾಡಿದ್ದರು ಎಂದು ಹೇಳಿದ ಷರೀಪ್‌, ಪಾಕಿಸ್ತಾನದ ವಾಯುಪಡೆಯು ಸ್ಥಳೀಯ ತಂತ್ರಜ್ಞಾನ ಮತ್ತು ಚೀನೀ ಜೆಟ್‌ಗಳನ್ನು ಬಳಸಿರುವುದನ್ನು ಉಲ್ಲೇಖಿಸಿದರು. ಆದರೆ ಭಾರತದ ಕ್ಷಿಪಣಿಗಳು ತಮ್ಮ ಗುರಿಗಳಿಗೆ ಅಪ್ಪಳಿಸಿದವು ಎಂದು ದೃಢಪಡಿಸಿದರು. ೨೦೨೫ ಮೇ ೧೬ರ ಶುಕ್ರವಾರ ಪಾಕಿಸ್ತಾನ ಸ್ಮಾರಕದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಷರೀಫ್, "ಮೇ 10 ರಂದು ಬೆಳಗಿನ ಜಾವ 2:30 ರ ಸುಮಾರಿಗೆ ಜನರಲ್ ಸೈಯದ್ ಅಸಿಮ್ ಮುನೀರ್ ನನಗೆ ಸುರಕ್ಷಿತ ಮಾರ್ಗದಲ್ಲಿ ಕರೆ ಮಾಡಿ ಭಾರತದ ಸಿಡಿತಲೆ (ಬ್ಯಾಲಿಸ್ಟಿಕ್) ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿವೆ ಎಂದು ತಿಳಿಸಿದರು. ನಮ್ಮ ವಾಯುಪಡೆಯು ನಮ್ಮ ದೇಶವನ್ನು ಉಳಿಸಲು ಸ್ವದೇಶಿ ತಂತ್ರಜ್ಞಾನವನ್ನು ಬಳಸಿತು ಮತ್ತು ಚೀನಾದ ಜೆಟ್‌ಗಳಲ್ಲಿ ಆಧುನಿಕ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನವನ್ನು ಸಹ ಬಳಸಿದರು" ಎಂದು ಶೆಹಬಾಜ್‌ ಅವರನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.

ಏತನ್ಮಧ್ಯೆ, ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಶೆಹಬಾಜ್‌ ಅವರನ್ನು ನಿದ್ದೆಯಿಂದ ಎಬ್ಬಿಸಿ ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರಮುಖ ಸ್ಥಳಗಳನ್ನು ಹಿಂದೂಸ್ಥಾನ ಹೊಡೆದುಹಾಕಿದೆ ಎಂಬ ಸುದ್ದಿ ನೀಡಿದ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ಹಿಂದೂಸ್ಥಾನ ಕ್ಷಿಪಣಿ ದಾಳಿ ನಡೆಸಿದೆ ಎಂಬ ಸುದ್ದಿಯೊಂದಿಗೆ ಅಸೀಮ್‌ ಮುನೀರ್‌ ಅವರು ತಮ್ಮನ್ನು ನಸುಕಿನ 2:30 ಕ್ಕೆ ಎಚ್ಚರಗೊಳಿಸಿದರು ಎಂದು ಶೆಹಬಾಜ್‌ ಒಪ್ಪಿಕೊಂಡಿದ್ದಾರೆ. ಅಂತಹ ಕರೆ ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯ ನಿಖರತೆ ಮತ್ತು ಧೈರ್ಯವನ್ನು ಬಹಿರಂಗಪಡಿಸಿದೆ ಎಂದು ಮಾಳವಿಯಾ ಅವರು ಟ್ವಿಟ್ಟರ್‌ ಸಂದೇಶದಲ್ಲಿ ಬರೆದಿದ್ದಾರೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತಿಯಾಗಿ ನಿರ್ಣಾಯಕ ಕಾರ್ಯಾಚರಣೆ ನಡೆಸಿದ ಭಾರತ ಮೇ 7 ರಂದು ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿ ನಿಖರ ದಾಳಿ ನಡೆಸಿದವು. ಇದರಿಂದಾಗಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.

ದಾಳಿಯ ನಂತರ, ಪಾಕಿಸ್ತಾನವು ನಿಯಂತ್ರಣ ರೇಖೆ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಗಡಿಯಾಚೆಗಿನ ಶೆಲ್ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿತು ಮತ್ತು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿಗೆ ಪ್ರಯತ್ನಿಸಿತು. ಇದಕ್ಕೆ ಉತ್ತರವಾಗಿ ಭಾರತವು ಸಂಘಟಿತ ನಿಖರ ದಾಳಿಯನ್ನು ಪ್ರಾರಂಭಿಸಿತು ಮತ್ತು ಪಾಕಿಸ್ತಾನದ 11 ವಾಯುನೆಲೆಗಳಲ್ಲಿ ರಾಡಾರ್ ಮೂಲಸೌಕರ್ಯ, ಸಂವಹನ ಕೇಂದ್ರಗಳು ಮತ್ತು ವಾಯುನೆಲೆಗಳನ್ನು ಹಾನಿಗೊಳಿಸಿತು. ಬಳಿಕ, ಮೇ 10 ರಂದು, ಭಾರತ ಮತ್ತು ಪಾಕಿಸ್ತಾನದ ಮೊರೆಯ ಮೇರೆಗೆ ಕದನ ವಿರಾಮದ ಘೋಷಣೆ ಮಾಡಲಾಗಿತ್ತು.‌

ಚೆನಾಬ್‌ ನದಿ ನೀರು ಬಂದ್
ಈ ಮಧ್ಯೆ, ಭಾರತವು ಚೆನಾಬ್‌ ನದಿಯ ಮೇಲಿನ
ರಂಬನ್‌ನ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆ ಅಣೆಕಟ್ಟಿನಿಂದ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಸ್ಥಗಿತಗೊಳಿಸಿದೆ.

ಎಎನ್‌ ಐ ಹಂಚಿಕೊಂಡಿರುವ ವಿಡಿಯೋದಲ್ಲಿ ಅಣೆಕಟ್ಟಿನ ಒಂದು ದ್ವಾರವನ್ನು ಹೊರತು ಪಡಿಸಿ ಉಳಿದೆಲ್ಲ ದ್ವಾರಗಳು ಬಂದ್‌ ಆಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ತಾಂತ್ರಿಕ ಕಾರಣದಿಂದ ಈ ಒಂದು ದ್ವಾರವನ್ನು ಇನ್ನೂ ತೆರೆದಿಡಲಾಗಿದೆ. ತಾಂತ್ರಿಕ ಸಮಸ್ಯೆ ಬಗೆ ಹರಿದೊಡನೆ ಅದನ್ನೂ ಬಂದ್‌ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಇವುಗಳನ್ನೂ ಓದಿರಿ: 

ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ

"ಷರತ್ತುಬದ್ಧ" ಕದನ ವಿರಾಮ, ಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

Sunday, March 16, 2025

೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

 ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

ವದೆಹಲಿ: ಲಷ್ಕರ್--ತೈಬಾ ಸಂಘಟನೆಗೆ ಸೇರಿದ ʼಮೋಸ್ಟ್ ವಾಂಟೆಡ್ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತಾಲ್ ಯಾನೆ ಫೈಸಲ್‌ ನದೀಮ್‌ ೨೦೨೫ ಮಾರ್ಚ್‌ ೧೫ರ ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಗಳ ಪ್ರಕಾರ, ಪಾಕಿಸ್ತಾನದ ಝೇಲಂನ ದಿನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯಿಂದ ಕತಾಲ್ ಹತ್ಯೆಗೀಡಾಗಿದ್ದಾನೆ

೨೬/೧೧ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದನ ಆಪ್ತ ಸಹಚರನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಕತಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಆಯೋಜಿಸಲಾಗಿತ್ತು.

ಜನವರಿ ೧, ೨೦೨೩ ರಂದು, ರಾಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತ್ತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇತರ ಹಲವರು ತೀವ್ರ ಗಾಯಗೊಂಡಿದ್ದರು.

ಹಫೀಜ್ ಸಯೀದ್ ಅಬು ಕತಾಲ್ ನನ್ನು ಲಷ್ಕರ್--ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ. ಹಫೀಜ್ ಸಯೀದ್ ಅಬು ಕತಾಲ್ ಗೆ ಆದೇಶ ನೀಡುತ್ತಿದ್ದ. ಅದರಂತೆ ಕತಾಲ್ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದ.

೨೦೨೩ ರ ರಾಜೌರಿ ದಾಳಿಯಲ್ಲಿ ಅಬು ಕತಾಲ್ ಪಾತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್‌ನನ್ನು ಹೆಸರಿಸಿತ್ತು.

ರಾಜೌರಿ ದಾಳಿಗೆ ಸಂಬಂಧಿಸಿದಂತೆ, ಎನ್‌ಐಎ ಐದು ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಿದೆ, ಅವರಲ್ಲಿ ಮೂವರು ನಿಷೇಧಿತ ಲಷ್ಕರ್- -ತೈಬಾಕ್ಕೆ ಸೇರಿದ ಪಾಕಿಸ್ತಾನೀಯರು.

ನಾಗರಿಕರನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದಿಂದ ಎಲ್‌ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ರವಾನೆಯನ್ನು ಈ ಮೂವರು ಸಂಘಟಿಸಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಬು ಕತಾಲ್ ಮೇಲೆ ಸೇನೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು.

ಕೆಳಗಿನವುಗಳನ್ನೂ ಓದಿರಿ:

ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

ಭಯೋತ್ಪಾದನೆಯ 'ಪೆಡಂಭೂತ': ವಾಸ್ತವದ ಮರೆವು ಮುಳುವಾಯಿತೇ?

Sunday, July 16, 2023

ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

 ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

ಬೆಂಗಳೂರು:  ಭಾರತವು ನಡೆಸಿರುವ ಚಂದ್ರಯಾನ-3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸಂಭ್ರಮದ ಭಾವನೆಯನ್ನು ಹುಟ್ಟುಹಾಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 2023 ಜುಲೈ 14ರ ಶುಕ್ರವಾರ ಈ ಚಾರಿತ್ರಿಕ ಘಟನೆ ಘಟಿಸಿದ್ದ್ದದು, ಸಹಸ್ರಾರು ಉತ್ಸಾಹಿ ಪ್ರೇಕ್ಷಕರು ಕನಸಿನ ಬಾಹ್ಯಾಕಾಶ ಯಾತ್ರೆಗೆ ಸಾಕ್ಷಿಯಾದರು.

ಮಧ್ಯೆ, ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಹಲವಾರು ಮಂದಿ ಆನ್‌ಲೈನ್ ಬಳಕೆದಾರರು ಈ ಘಟನೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಇದೇ ಸಮಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪಾಕಿಸ್ತಾನದಿಂದ ತಮ್ಮ ಟ್ವೀಟ್‌ ಪ್ರಕಟಿಸಿದರು. ಇದು ಭಾರತೀಯನ ಟ್ವೀಟ್‌ ಗಿಂತ ಮೇಲ್ಭಾಗದಲ್ಲಿ ಇತ್ತು.

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ? ಘೋರ್‌ ಸೇ ಸುನೋ… ಯೇ ಪೂರೀ ದುನಿಯಾ ಕೆ ಕಾಂಪನೇ ಕೀ ಆವಾಜ್‌ ಹೈʼ ಎಂಬುದಾಗಿ ಬರೆದಿದ್ದ ಈ ಟ್ವಿಟ್ಟರ್‌ ಸಂದೇಶ ಪಾಕಿಸ್ತಾನದ ತೋಳ್ಬಲವನ್ನು ಸಾರುವಂತಿತ್ತು. ಇದರ ಕೆಳಗಿದ್ದ ಭಾರತೀಯನ ಟ್ವೀಟಿನಲ್ಲಿ “ಇಂಡಿಯಾ ಇಂಡಿಯಾʼ ಬರಹದೊಂದಿಗೆ ಭಾರತದ ಚಂದ್ರಯಾನ -3 ಚಿತ್ರವಿತ್ತು.

ಪಾಕಿಸ್ತಾನ ಮತ್ತು ಭಾರತದ ʼಆದ್ಯತೆʼಗಳನ್ನು ಸಾರುವಂತೆ ಕಾಣುತ್ತಿದ್ದ ಈ ಟ್ವೀಟ್‌ ಸರಣಿಯ ಸ್ಕೀನ್‌ ಶಾಟ್‌ ತೆಗೆದುಕೊಂಡ ಇನ್ನೊಬ್ಬ ಪಾಕಿಸ್ತಾನಿ ಇದನ್ನು ತನ್ನ ಟ್ವಿಟ್ಟರ್‌ ಸಂದೇಶದಲ್ಲಿ ಪ್ರಕಟಿಸಿ ತನ್ನ ಪ್ರತಿಕ್ರಿಯೆಯಾಗಿ ʼನೋವಿನೊಂದಿಗೆ ನಗುತ್ತಿರುವ ʼಎಮೋಜಿʼಯನ್ನೂ ಹಾಕಿದರು. ಉಭಯ ದೇಶಗಳ ವ್ಯತಿರಿಕ್ತ ಆದ್ಯತೆಗಳನ್ನು ಇದು ಎತ್ತಿ ತೋರಿಸುತ್ತಿತ್ತು.

ಟ್ವಿಟರ್ ಬಳಕೆದಾರ ಅಲಿ ಶಾನ್ ಮೊಮಿನ್ ಹಂಚಿಕೊಂಡಿರುವ  ಸ್ಕ್ರೀನ್‌ಶಾಟ್, ಲಾಹೋರಿನಲ್ಲಿ 500 ಅಡಿ ಎತ್ತರದ ಧ್ವಜವನ್ನು ಹಾರಿಸುವ ಪಾಕಿಸ್ತಾನದ ಯೋಜನೆಯನ್ನು ಚರ್ಚಿಸುವ ಪಾಕಿಸ್ತಾನಿ ಬಳಕೆದಾರರ ಟ್ವೀಟನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆ. ಇದು ಈ ಪ್ರದೇಶದಲ್ಲಿ ಅತಿ ಎತ್ತರದ ಧ್ವಜ ಎನಿಸಿಕೊಳ್ಳಲು ಸಿದ್ಧವಾಗಿದೆ. 2023 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯಲಿರುವ ಈ ಧ್ವಜಾರೋಹಣ ಸಮಾರಂಭಕ್ಕೆ 400 ದಶಲಕ್ಷ ರೂಪಾಯಿ (400 ಮಿಲಿಯನ್ ರೂ) ನಿಗದಿಪಡಿಸಲಾಗಿದೆ. ಈ ಧ್ವಜಕ್ಕೆ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದ್ದು ಬಹುದೂರದವರೆಗೆ ಇದರ ಸದ್ದು ಕೇಳಲಿದೆಯಂತೆ.

ಇದಕ್ಕೆ ತದ್ವಿರುದ್ಧವಾಗಿ, ಈ ಟ್ವೀಟ್‌ನ ಕೆಳಗಿನ ಟ್ವೀಟ್‌  ಚಂದ್ರಯಾನ-3 ಸಾಧನೆಯೊಂದಿಗೆ ಭಾರತದ ವಿಜಯೋತ್ಸವ ಸಂದರ್ಭದ  ಭಾರತೀಯರ ಸಂಭ್ರಮವನ್ನು ಅಭಿವ್ಯಕ್ತಿಸಿದೆ..

ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಗಮನಾರ್ಹ ಸಾಧನೆಯನ್ನು ಆಚರಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ನೆರೆಯ ಪಾಕಿಸ್ತಾನಿಯನ ಟ್ವೀಟ್‌ ವಿಭಿನ್ನ ರಾಷ್ಟ್ರೀಯ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ., ಇದು ಎತ್ತರದ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತವನ್ನು ಮೀರಿಸಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ಕ್ರೀನ್‌ಶಾಟ್‌ನೊಂದಿಗೆ ಸರಳವಾದ 'ನೋವಿನ ಮೂಲಕ ನಗುತ್ತಿರುವ' ಎಮೋಜಿಯು ಎರಡು ದೇಶಗಳ ವಿಭಿನ್ನ 'ಆದ್ಯತೆಗಳನ್ನು' ಬಹಿರಂಗಪಡಿಸುವಾಗ ಪೋಸ್ಟ್‌ನ ಸಾರವನ್ನು ಸೆರೆಹಿಡಿಯುತ್ತದೆ.

Wednesday, August 24, 2022

ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,000 ರೂಪಾಯಿ

 ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕಾಸು
ಕರ್ನಲ್‌ ನಿಂದ ರೂ. 30,000 ರೂಪಾಯಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಸ್ಟ್ 21 ರಂದು ಭಾರತೀಯ ಸೇನೆ ಸೆರೆ ಹಿಡಿದ ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) 'ಫಿದಾಯೀನ್' (ಆತ್ಮಹತ್ಯಾ) ದಾಳಿಕೋರ, ಪಾಕ್‌ ಕರ್ನಲ್‌ ಸೂಚನೆ ಮೇರೆಗೆ ತಾನು ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಕೃತ್ಯಕ್ಕೆ ಇಳಿದುದಾಗಿ 2022 ಆಗಸ್ಟ್‌ 24ರ ಬುಧವಾರ ಒಪ್ಪಿಕೊಂಡಿದ್ದಾನೆ.

ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಯೋಜನೆ ಕಾರ್ಯಗತಗೊಳಿಸಲು ಪಾಕಿಸ್ತಾನಿ ಸೇನೆಯ ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ ಸುಮಾರು 30,000 ರೂ. ನೀಡಿರುವುದಾಗಿ ತಬಾರಕ್ ಹುಸೇನ್ ಎಂಬುದಾಗಿ ಗುರುತಿಸಲಾಗಿರುವ ದ ಭಯೋತ್ಪಾದಕ ಹೇಳಿದ್ದಾನೆ.

ಒಳನುಸುಳುವಿಕೆ ಪ್ರಯತ್ನದ ಸಮಯದಲ್ಲಿ ಗಾಯಗೊಂಡು ಕಾಶ್ಮೀರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಎಎನ್‌ ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ತಾನು ನಾಲ್ಕೈದು ಮಂದಿಯೊಂದಿಗೆ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸಿದ್ದಾಗಿ ಹೇಳಿದ್ದಾನೆ.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹುಸೇನ್, ಇತರ ಭಯೋತ್ಪಾದಕರ ಜೊತೆಗೆ ಸೂಕ್ತ ಸಮಯದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಭಾರತದ ಮುಂಚೂಣಿ ಗಡಿ ಠಾಣೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಎರಡು-ಮೂರು ಬಾರಿ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ.

ಹುಸೇನ್ ಭಯೋತ್ಪಾದಕರೊಂದಿಗೆ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿತು. “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದು, ಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂ. ನೀಡಿದ್ದರು” ಎಂದು ಭಯೋತ್ಪಾದಕ ಹೇಳಿದ.

ಇದಕ್ಕೆ ಮುನ್ನ, ಜಮ್ಮು ಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ನೌಶೇರಾ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲಕ ಶಾಂತಿ ಕದಡುವ ಪಾಕಿಸ್ತಾನದ "ಕೆಟ್ಟ ಪ್ರಯತ್ನ" ವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.

ಆಗಸ್ಟ್ 21 ಮತ್ತು 22 ರಂದು ಝಂಗಾರ್ ಮತ್ತು ಲ್ಯಾಮ್ ಪ್ರದೇಶಗಳಲ್ಲಿ ಒಳನುಸುಳುವಿಕೆ ಯತ್ನಗಳು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದವು ಮತ್ತು ಕುಖ್ಯಾತ ಭಯೋತ್ಪಾದಕ ಮಾರ್ಗದರ್ಶಿಯನ್ನು ಬಂಧಿಸಲಾಯಿತು, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಭಾರತದ ಕಡೆಗೆ ಒಂದು ಗುಂಪನ್ನು ನುಗ್ಗಿಸುವ ಕಾರ್ಯಾಚರಣೆಗೆ ಇಳಿದಿದ್ದರು. ಅವರಿಂದ ಸೇನಾ ಪೋಸ್ಟ್ ಮೇಲೆ ದಾಳಿ ನಡೆದಿದೆ ಎಂದು ಸೇನೆಯ 80 ಪದಾತಿ ದಳದ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ ತಿಳಿಸಿದ್ದರು.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಪ್ರಕಟಿಸಿದ ಫಿದಾಯೀನ್‌ ದಾಳಿಕೋರನ ತಪ್ಪೊಪ್ಪಿಗೆಯ ವಿಡಿಯೋ ಕೆಳಗಿದೆ:


Advertisement