My Blog List

Wednesday, July 27, 2022

ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

 ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ (ಪ್ರಿವೆಂಷನ್‌ ಆಫ್‌ ಮನಿ ಲಾಂಡರಿಂಗ್‌ ಆಕ್ಟ್‌/ ಪಿಎಂಎಲ್‌ ಎ)  ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್ 2022 ಜುಲೈ 27ರ ಬುಧವಾರ ಎತ್ತಿ ಹಿಡಿಯಿತು.

ಕಾಂಗ್ರೆಸ್ ಸಂಸತ್‌ ಸದಸ್ಯ ಕಾರ್ತಿ ಚಿದಂಬರಂ ಅವರು ಸೇರಿದಂತೆ ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿರುವ ಹಲವಾರು ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿತು.

ಸಂವಿಧಾನವು 20 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಿರುವ ಸ್ವಾತಂತ್ರ್ಯದ ಹಕ್ಕು ಮತ್ತು ಸ್ವಯಂ-ಅಪರಾಧದ ವಿರುದ್ಧದ ಹಕ್ಕುಗಳನ್ನು ಖಾತರಿಯನ್ನು ಹಣ ವರ್ಗಾವಣೆ ತಡೆ ಕಾಯ್ದೆಯು ಉಲ್ಲಂಘಿಸಿತ್ತದೆ ಎಂದು ಕಾರ್ತಿ ಚಿದಂಬರಂ ಮತ್ತು ಇತರರ ಅರ್ಜಿಗಳು ಆಪಾದಿಸಿದ್ದವು.

ಯಾವುದೇ ಅಪರಾಧವನ್ನು ಹಣ ವರ್ಗಾವಣೆ ಅಪರಾಧವನ್ನಾಗಿ ಪರಿವರ್ತಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೀಡಲಾದ ಅನಿಯಂತ್ರಿತ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದರು.

No comments:

Advertisement