Showing posts with label PFI. Show all posts
Showing posts with label PFI. Show all posts

Wednesday, September 28, 2022

ಭಾರತದಲ್ಲಿ ಪಿಎಫ್‌ಐ, ಅಂಗಸಂಸ್ಥೆಗಳಿಗೆ 5 ವರ್ಷ ನಿಷೇಧ

 ಭಾರತದಲ್ಲಿ ಪಿಎಫ್‌ಐ, ಅಂಗಸಂಸ್ಥೆಗಳಿಗೆ 5 ವರ್ಷ ನಿಷೇಧ

ನವದೆಹಲಿ:  ಪ್ರಮುಖ ಬೆಳವಣಿಗೆಯೊಂದರಲ್ಲಿ, ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು 2022 ಸೆಪ್ಟೆಂಬರ್‌ 28ರ ಬುಧವಾರ  ನಿಷೇಧಿಸಿತು. ಇದರ ಜೊತೆಗೇ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಎಲ್ಲ ಸಹವರ್ತಿಗಳು, ಅಂಗಸಂಸ್ಥೆಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲ ಸಂಘಟನೆಗಳನ್ನೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಕಾನೂನುಬಾಹಿರ ಸಂಘಟನೆಗಳು ಎಂದು ಸರ್ಕಾರ ಘೋಷಿಸಿತು.

ಅಧಿಕೃತ ಆದೇಶದ ಪ್ರಕಾರ ಐದು ವರ್ಷಗಳ ಅವಧಿಗೆ ನಿಷೇಧವನ್ನು ಹೇರಲಾಗಿದೆ.

"ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳು ಅಥವಾ ಇತರ ಸಂಬಂಧಿತ ಫ್ರಂಟ್‌ಗಳಾದ ರೆಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಸಂಸ್ಥೆ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಸಂಘಟನೆಗಳನ್ನು ಈ ಮೂಲಕ ಕಾನೂನುಬಾಹಿರ ಸಂಘಟನೆಗಳು ಎಂಬುದಾಗಿ ಘೋಷಿಸುತ್ತದೆಎಂದು ಗೃಹ ಸಚಿವಾಲಯದ ಆದೇಶ ಘೋಷಿಸಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂಬ ಆರೋಪದ ಮೇಲೆ ಎನ್‌ಐಎ ನೇತೃತ್ವದ ಬಹು-ಏಜೆನ್ಸಿ ಕಾರ್ಯಾಚರಣೆಯಲ್ಲಿ ಎರಡು ಸುತ್ತಿನ ದಾಳಿಗಳ ನಂತರ ನಿಷೇಧವು ಬಂದಿದೆ. ಮೊದಲ ಸುತ್ತಿನ ದಾಳಿಗಳು ಸೆಪ್ಟೆಂಬರ್ 22 ರಂದು ನಡೆದವು, ಅದರ ಅನುಸರಣೆಯು ಸೆಪ್ಟೆಂಬರ್ 27 ರಂದು ಮಂಗಳವಾರ ಹಲವಾರು ರಾಜ್ಯಗಳಲ್ಲಿ ನಡೆಯಿತು. ಈ ದಾಳಿಗಳಲ್ಲಿ ಪಿಎಫ್‌ಐಗೆ ಸೇರಿದ  ಕನಿಷ್ಠ 250 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Friday, February 7, 2020

ಶಾಹೀನ್‌ಬಾಗ್ ಪ್ರತಿಭಟನೆಗೆ ಪಿಎಫ್‌ಐ ಹಣ, ಕಾಂಗ್ರೆಸ್, ಆಪ್ ಜೊತೆ ನಿಕಟ ಸಂಪರ್ಕ

ಶಾಹೀನ್ಬಾಗ್ ಪ್ರತಿಭಟನೆಗೆ ಪಿಎಫ್ ಹಣ, ಕಾಂಗ್ರೆಸ್, ಆಪ್ ಜೊತೆ ನಿಕಟ ಸಂಪರ್ಕ
ದೆಹಲಿ ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯದ ಬಾಂಬ್
ನವದೆಹಲಿ: ದೆಹಲಿಯ ಶಾಹೀನ್ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್) ಹಣ ಒದಗಿಸುತ್ತಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಪಿಎಫ್ ಮುಖ್ಯಸ್ಥನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗ ಪಡಿಸುವ ಮೂಲಕ 2020 ಫೆಬ್ರುವರಿ 08ರ ಶನಿವಾರ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಉಳಿದಿರುವಾಗ ಜಾರಿ ನಿರ್ದೇಶನಾಲಯ 2020 ಫೆಬ್ರುವರಿ 06ರ ಗುರುವಾರಬಾಂಬ್ಹಾಕಿತು.
ಜಾರಿ ನಿರ್ದೇಶನಾಲಯವು ರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆಗಳಿಗೆ ಬಳಸಲಾಗುತ್ತಿದೆ ಎನ್ನಲಾಗಿರುವ ಹಣದ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಗೃಹ ವ್ಯವಹಾರಗಳ ಸಚಿವಾಲಯಕ್ಕೆ (ಎಂಎಚ್) ತನ್ನ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿತು.
ತನಿಖೆಗೆ ಸಂಬಂಧಿಸಿದ ದಾಖಲೆಗಳು ತಮಗೆ ಲಭಿಸಿರುವುದಾಗಿ ಪ್ರಕಟಿಸಿರುವ ಕೆಲವು ಮಾಧ್ಯಮಗಳು ಒಟ್ಟು ೧೨೦ ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕುಗಳಲ್ಲಿನ ಪಿಎಫ್ ಮತ್ತು ರೆಹಾಬ್ ಇಂಡಿಯಾ ಫೌಂಡೇಷನ್ಗೆ ಸಂಬಂಧಿಸಿದ ಬಾಂಕ್ ಖಾತೆಗಳಿಗೆ ಜಮಾ ಮಾಡಿರುವುದನ್ನು ಬಹಿರಂಗ ಪಡಿಸಿವೆ ಎಂದು ಹೇಳಿದವು.
೫೦೦೦ ರೂಪಾಯಿಯಿಂದ ೪೯,೦೦೦ ರೂಪಾಯಿಗಳವರೆಗಿನ ವಿವಿಧ ಮೊತ್ತಗಳಲ್ಲಿ ಹಣ ವರ್ಗಾವಣೆಯಾಗಿದ್ದು ಹಣ ಜಮಾ ಮಾಡಲು ನಗದು ಇಲ್ಲವೇ ಖಾತೆಗಳ ತತ್ ಕ್ಷಣ ಪಾವತಿ ಸೇವೆಗಳನ್ನು (ಇಮ್ಮೀಡಿಯೆಟ್ ಪೇಮೆಂಟ್ ಸರ್ವೀಸ್- ಐಎಂಪಿಎಸ್) ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿದವು.
ಒಟ್ಟು ನಿಧಿಯಲ್ಲಿ .೦೫ ಕೋಟಿ ರೂಪಾಯಿಗಳನ್ನು ಪಿಎಫ್ಐಗೆ ಸೇರಿದ ೧೫ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಮತ್ತು ಮೂರನೇ ಒಂದರಷ್ಟು ನಗದು ಹಣವನ್ನು ಅದರ ಶಾಹೀನ್ ಬಾಗ್ ಕೇಂದ್ರದಲ್ಲಿ (ಜಿ-೭೮, ಶಾಹೀನ್ ಬಾಗ್, ದೆಹಲಿ) ಇರಿಸಲಾಗಿದೆ ಎಂಬುದು ಕೂಡಾ ಜಾರಿ ನಿರ್ದೇಶನಾಲಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿದವು.
ದೇಶಾದ್ಯಂತ ಹಣ ಸಂಗ್ರಹಿಸುವ ಪಿಎಫ್ಐಯ ಕಾರ್ಯ ತಂತ್ರವನ್ನು ಕೂಡಾ ಬಯಲಿಗೆಳೆದಿರುವುದಾಗಿ ತನಿಖಾ ಸಂಸ್ಥೆ ಪ್ರತಿಪಾದಿಸಿತು.
ಪಿಎಫ್ ಕಾರ್ಯಕರ್ತರು ಮತ್ತು ಸದಸ್ಯರು ಭಾರತದಾದ್ಯಂತ ಜನರಿಂದ ಹಣ ಸಂಗ್ರಹಿಸುತ್ತಿದ್ದು ಅದನ್ನು ತನ್ನ ಪ್ರಾದೇಶಿಕ ನಿರ್ವಹಣೆಗಾರರಿಗೆ ಒಪ್ಪಿಸುತ್ತಾರೆ. ನಿರ್ವಹಣೆಗಾರರು ಬಳಿಕ ದೆಹಲಿಗೆ ಪ್ರಯಾಣಿಸಿ ದೆಹಲಿಯ ಶಾಹೀನ್ ಬಾಗ್ನಲ್ಲಿ ಇರುವ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಗದು ರೂಪದಲ್ಲೇ ಹಣವನ್ನು ಪಾವತಿ ಮಾಡುತ್ತಾರೆಎಂದು ವರದಿಗಳು ಹೇಳಿದವು.
ಪಿಎಫ್- ಆಪ್- ಕಾಂಗ್ರೆಸ್ ಲಿಂಕ್ ಬಹಿರಂಗ: ಪಿಎಫ್ಐಯ ದೆಹಲಿ ಘಟಕದ ಅಧ್ಯಕ್ಷ ಮೊಹಮ್ಮದ್ ಪರ್ವೇಜ್ ಅಹ್ಮದ್ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಉದಿತ್ ರಾಜ್ ಸೇರಿದತೆ ಹಲವಾರು ಮಂದಿ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ಹೊಂದಿರುವುದನ್ನೂ ಜಾರಿ ನಿರ್ದೇಶನಾಲಯದ ತನಿಖೆಯು ಬಯಲಿಗೆ ಎಳೆದಿದೆ. ಇದಲ್ಲದೆಭೀಮ್ ಆರ್ಮಿ ಟಾಪ್ ೧೦೦, ’ಯುನಿಫಿಕೇಷನ್ ಆಫ್ ಮುಸ್ಲಿಮ್ ಲೀಡರ್ಸ್ಇತ್ಯಾದಿಯಾಗಿ ಸುಮಾರು ನೂರಕ್ಕೂ ಹೆಚ್ಚು ವಿವಿಧ ವಾಟ್ಸಪ್ ಗುಂಪುಗಳಲ್ಲಿ ಕೂಡಾ ಅಹ್ಮದ್ ಸಕ್ರಿಯವಾಗಿರುವುದಾಗಿ ಜಾರಿ ನಿರ್ದೇಶನಾಲಯದ ವರದಿ ಹೇಳಿತು.
ಪರ್ವೇಜ್ ಅಹ್ಮದ ಜೊತೆಗೆ ಸಂಜಯ್ ಸಿಂಗ್ ನಡೆಸಿದ ವಾಟ್ಸಪ್ ಚಾಟ್ಗಳ ವಿವರಗಳನ್ನೂ ಜಾರಿ ನಿರ್ದೇಶನಾಲಯ ವಿವರವಾಗಿ ಸಂಗ್ರಹಿಸಿದೆ.

ಪರ್ವೇಜ್ ಅಹ್ಮದ್ ಜೊತೆಗೆ ಸಂಪರ್ಕದಲ್ಲಿರುವುದಾಗಿ ಮಾಡಲಾದ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಉದಿತ್ ರಾಜ್, ’ನಾನು ಹಲವಾರು ಪಕ್ಷಗಳು, ಮುಸ್ಲಿಮ್ ನಾಯಕರು ಮತ್ತು ದಲಿತ ಗುಂಪುಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಕ್ಕಾಗಿ ಒಗ್ಗಟ್ಟಾಗಲು ಕರೆ ಮಾಡುತ್ತಿದ್ದಾಗ ಅಹ್ಮದ್ ಅವರನ್ನು ಸಂಪರ್ಕಿಸಿರಬಹುದುಎಂದು ಹೇಳಿದರು.
ಪರ್ವೇಜ್ ಅಹ್ಮದ್ ಜೊತೆಗೆ ಅಥವಾ ಆತನ ಸಂಘಟನೆ ಜೊತೆಗೆ ಯಾವುದೇ ಹಣಕಾಸು ಬಾಂಧವ್ಯ ಇರುವ ಬಗೆಗಿನ ಆರೋಪವನ್ನು ಉದಿತ್ ರಾಜ್ ನಿರಾಕರಿಸಿದರು.
ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಚಳವಳಿ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಪಿಎಫ್ ಪ್ರಚೋದನೆ ನೀಡಿದ ಬಗ್ಗೆ ಮತ್ತು ಅದರ ರಾಷ್ಟ್ರವಿರೋಧಿ ಚಟುವಟಿಕೆಗಳ ಬಗ್ಗೆ ಜಾರಿ ನಿರ್ದೇಶನಾಲವು ಹದ್ದುಗಣ್ಣು ಇಟ್ಟು ಪರಿಶೀಲಿಸುತ್ತಿದ್ದು, ಸಂಘಟನೆಯ ಕೇಂದ್ರವು ದೆಹಲಿಯ ಶಾಹೀನ್ ಬಾಗ್ನಲ್ಲಿ ಇದೆ ಮತ್ತು ಅದರ ಚಟುವಟಿಕೆಗಳಿಗಾಗಿ ಕೇಂದ್ರ ಕಚೇರಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿ ಇಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತು.
ಪಿಎಫ್ ಮುಖಂಡ ಪರ್ವೇಜ್ ಅಹ್ಮದ್ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಮಾತ್ರವೇ ಅಲ್ಲ ಆಪ್ ನಾಯಕ ಸಂಜಯ್ ಸಿಂಗ್ ಜೊತೆಗೆಖಾಸಗಿ ಸಭೆಗಳು, ’ದೂರವಾಣಿ ಕರೆಗಳುಮತ್ತುವಾಟ್ಸಪ್ ಚಾಟ್ಗಳ ಮೂಲಕ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿತು.

Advertisement