Showing posts with label ರಾಷ್ಟ್ರೀಯ. Show all posts
Showing posts with label ರಾಷ್ಟ್ರೀಯ. Show all posts

Saturday, December 27, 2025

ವಿಬಿ-ಜಿ ರಾಮ್‌ ಜಿ: ಗಾಂಧೀಜಿ ಆಶಯಕ್ಕೆ ಧಕ್ಕೆಯೇ?

 ವಿಬಿ-ಜಿ ರಾಮ್‌ ಜಿ: ಗಾಂಧೀಜಿ ಆಶಯಕ್ಕೆ ಧಕ್ಕೆಯೇ?

ಭಾರತೀಯ ಸಂಸತ್ತು ೨೦೨೫ರ ಡಿಸೆಂಬರ್‌ ೧೮ರಂದು ನೂತನ ʼವಿಬಿ-ಜಿ ರಾಮ್‌ ಜಿʼ ಅಂದರೆ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ವಿಕಸಿತ ಭಾರತ್ ಗ್ಯಾರಂಟಿ ಉದ್ಯೋಗ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) ಕಾಯ್ದೆ ೨೦೨೫ ಇದನ್ನು ಹಿಂದಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಸ್ಥಾನಕ್ಕೆ ತರಲು ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದೆ.

ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ಅದು ಕಾಯ್ದೆಯಾಗಿ ದೇಶದಲ್ಲಿ ಜಾರಿಗೆ ಬಂದಿದೆ. ವಿರೋಧ ಪಕ್ಷಗಳು ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿ ಇದು ಮಹಾತ್ಮ ಗಾಂಧಿಯವರನ್ನು ಮತ್ತೊಮ್ಮೆ ಕೊಂದಿದೆ ಎಂದು ಕಟುವಾಗಿ ಟೀಕಿಸಿವೆ.

ಹಾಗಿದ್ದರೆ ವಾಸ್ತವಾಂಶ ಏನು? ಈ ಎರಡೂ ಕಾಯ್ದೆ ಅಥವಾ ಯೋಜನೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಬಹುದೇ? ನಿಜವಾಗಿಯೂ ʼವಿಬಿ-ಜಿ ರಾಮ್‌ ಜಿʼ ಕಾಯ್ದೆಯು ಮಹಾತ್ಮ ಗಾಂಧಿ ಆಶಯಗಳಿಗೆ ವಿರುದ್ಧವಾಗಿದೆಯೇ ಅಥವಾ ಮನರೇಗಾ ಇಟ್ಟಿದ್ದ ಹೆಜ್ಜೆಯನ್ನು ಇನ್ನೂ ಎತ್ತರದ ಸ್ತರಕ್ಕೆ ಒಯ್ಯುತ್ತಿದೆಯೇ? ಹೊಸ ಕಾಯ್ದೆಯ ವಿಧಿಗಳನ್ನು ಗಮನಿಸಿ, ವಿಶ್ಲೇಷಿಸಿ ನೋಡೋಣ ಬನ್ನಿ. (ಮುಂದಕ್ಕೆ ಓದಿ) ಅಥವಾ ಮೇಲಿನ SPARDHA ಪುಟ ನೋಡಿರಿ.

Monday, October 27, 2025

ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

 ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

ಒಂದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, 2019ರ ಅಯೋಧ್ಯೆ ತೀರ್ಪನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದ ವಕೀಲ ಮೆಹಮೂದ್ ಪ್ರಾಚಾ ಅವರಿಗೆ ದೆಹಲಿ ನ್ಯಾಯಾಲಯವು ಬರೋಬ್ಬರಿ 6 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಅರ್ಜಿಯನ್ನು 'ಫಲಹೀನ ಮತ್ತು ಐಷಾರಾಮಿ ವ್ಯಾಜ್ಯ' (frivolous and luxurious litigation) ಎಂದು ಕರೆದ ಪಟಿಯಾಲಾ ಹೌಸ್ ಕೋರ್ಟಿನ ಜಿಲ್ಲಾ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು, ಕೆಳ ನ್ಯಾಯಾಲಯವು ಪ್ರಾಚಾ ಅವರಿಗೆವಿಧಿಸಿದ್ದ 1 ಲಕ್ಷ ರೂಪಾಯಿ ದಂಡವನ್ನು ಎತ್ತಿಹಿಡಿದು, ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ದಂಡ ವಿಧಿಸಿದ್ದು ಏಕೆ?

ಆರು ಲಕ್ಷ ರೂಪಾಯಿ ದಂಡವನ್ನು 30 ದಿನಗಳೊಳಗೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ಜಮಾ ಮಾಡಬೇಕು ಎಂದು ಆದೇಶಿಸಿರುವ ನ್ಯಾಯಾಧೀಶರು, "ಕಿರಿಯ ನ್ಯಾಯಾಲಯವು ವಿಧಿಸಿದ್ದ ದಂಡವು ನಿರೋಧಕ ಪರಿಣಾಮವನ್ನು (deterrent effect) ಸಾಧಿಸುವ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಸ್ಪಷ್ಟವಾಗಿ ವಿಫಲವಾಗಿದೆ. ಆದ್ದರಿಂದ, ಫಲಹೀನ ಮತ್ತು ಐಷಾರಾಮಿ ವ್ಯಾಜ್ಯದ ಪಿಡುಗನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ದಂಡದ ಮೊತ್ತವನ್ನು ಸೂಕ್ತವಾಗಿ ಹೆಚ್ಚಿಸಬೇಕೆಂಬುದನ್ನು ನಾನು ಪರಿಗಣಿಸಿದ್ದೇನೆ," ಎಂದು ಹೇಳಿದ್ದಾರೆ.

ಪ್ರಾಚಾ ಅವರ ವಾದವೇನು?

ಪ್ರಾಚಾ ಅವರು ಅಯೋಧ್ಯೆ ತೀರ್ಪನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲು ಮತ್ತು ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಸಿವಿಲ್ ಮೇಲ್ಮನವಿಗಳನ್ನು ಹೊಸದಾಗಿ ವಿಚಾರಣೆ ಮಾಡಲು ಕೋರಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ಏಪ್ರಿಲಿನಲ್ಲಿ ವಿಚಾರಣಾ ನ್ಯಾಯಾಲಯವು 1 ಲಕ್ಷ  ರೂಪಾಯಿ ದಂಡದೊಂದಿಗೆ ವಜಾಗೊಳಿಸಿತ್ತು.

ಪ್ರಾಚಾ ಅವರು ತೀರ್ಪಿನ ಅರ್ಹತೆಯನ್ನು (merits) ಪ್ರಶ್ನಿಸದೆ, ನ್ಯಾಯಾಧೀಶರಾದ ಚಂದ್ರಚೂಡ್ ಅವರು ತೀರ್ಪು ಬರೆದವರಲ್ಲಿ ಲ್ಲಿ ಒಬ್ಬರಾಗಿದ್ದು, ಅವರೇ ತಮ್ಮ ಭಾಷಣವೊಂದರಲ್ಲಿ "ತಮ್ಮ ಮುಂದೆ ವಾದ ಮಂಡಿಸಿದ ಕಕ್ಷಿದಾರರೇ (litigant) ತಮಗೆ ಮಾರ್ಗ ತೋರಿಸಿದರು" ಎಂದು ಒಪ್ಪಿಕೊಂಡಿರುವುದರಿಂದ ತೀರ್ಪು ವಂಚನೆಯ ಆಧಾರದ (on the ground of fraud) ಮೇಲೆ ದೋಷಪೂರಿತವಾಗಿದೆ ಎಂದು ವಾದಿಸಿದ್ದರು.

ಮಾಜಿ ಸಿಜೆಐ ಚಂದ್ರಚೂಡ್ ಅವರು ಅಯೋಧ್ಯೆ ಪ್ರಕರಣವನ್ನು ಪರಿಹರಿಸಲು ತಾವು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದ ಉಲ್ಲೇಖವೇ ಈ ವಾದಕ್ಕೆ ಕಾರಣವಾಗಿತ್ತು. ಇಂತಹ ಪರಿಸ್ಥಿತಿಯು **'ಕಾನೂನುಬಾಹಿರ ಹಸ್ತಕ್ಷೇಪ'**ಕ್ಕೆ ಸಮನಾಗಿದೆ. ಆದ್ದರಿಂದ ತೀರ್ಪು ವಂಚನೆಯ ಆಧಾರದ ಮೇಲೆ ದೋಷಪೂರಿತವಾಗಿದೆ ಎಂದು ಪ್ರಾಚಾ ಪ್ರತಿಪಾದಿಸಿದ್ದರು.

ಕೋರ್ಟ್‌ನ ತೀಕ್ಷ್ಣ ಪ್ರತಿಕ್ರಿಯೆ

ಪ್ರಾಚಾ ಅವರ ಮನವಿಯನ್ನು ವಜಾಗೊಳಿಸಿದ ನ್ಯಾಯಾಧೀಶ ರಾಣಾ ಅವರು, ಜಸ್ಟಿಸ್ ಚಂದ್ರಚೂಡ್ ಅವರ ಭಾಷಣವನ್ನು ಉಲ್ಲೇಖಿಸಿ, ʼಅವರು ಸರ್ವೋಚ್ಚ ಶಕ್ತಿಯಲ್ಲಿ (Supreme Being) ಮಾರ್ಗ ತೋರಿಸುವಂತೆ ಪ್ರಾರ್ಥಿಸಿದ್ದರು. ಆದರೆ ಅಯೋಧ್ಯೆ ಪ್ರಕರಣದಲ್ಲಿ ಅವರ ಮುಂದೆ ವಾದ ಮಂಡಿಸಿದ ಕಕ್ಷಿದಾರರು ಆ ಸರ್ವೋಚ್ಚ ಶಕ್ತಿಯಿಂದ ಭಿನ್ನವಾದ 'ಕಾನೂನು ವ್ಯಕ್ತಿತ್ವ' (Juristic Personality) ಹೊಂದಿದ್ದಾರೆʼ ಎಂದು ಹೇಳಿದರು.

"ಮೇಲ್ಮನವಿದಾರರು 'ಸರ್ವೋಚ್ಚ ದೇವರು' ಮತ್ತು ನ್ಯಾಯಾಲಯದ ಮುಂದೆ ವ್ಯಾಜ್ಯ ಹೂಡಿದ 'ಕಾನೂನು ವ್ಯಕ್ತಿತ್ವದ' ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಬಹುಶಃ ಕಾನೂನು ಮತ್ತು ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿಂದಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಮೇಲ್ಮನವಿದಾರರು ಅಯೋಧ್ಯೆ ಪ್ರಕರಣದ ತೀರ್ಪನ್ನು ಓದುವ ಗೋಜಿಗೆ ಹೋಗಿಲ್ಲವೆಂದು ತೋರುತ್ತಿದೆ, ಇಲ್ಲದಿದ್ದರೆ ಇಂತಹ ಗೊಂದಲ ಅವರಿಗೆ ಉಂಟಾಗುತ್ತಿರಲಿಲ್ಲ," ಎಂದು ನ್ಯಾಯಾಲಯವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

"ಸರ್ವಶಕ್ತನಿಂದ ಮಾರ್ಗದರ್ಶನ ಪಡೆಯುವುದನ್ನು ಕಾನೂನಿನಲ್ಲಿ ಅಥವಾ ಯಾವುದೇ ಧರ್ಮದಲ್ಲಿ ಅನ್ಯಾಯದ ಲಾಭ ಪಡೆಯಲು ಮಾಡಿದ ವಂಚಕ ಕೃತ್ಯ ಎಂದು ನಿಂದಿಸಲಾಗದು. ಆದ್ದರಿಂದ, ಮೇಲ್ಮನವಿದಾರರ ಹೇಳಿಕೆಗಳನ್ನು ನಂಬಿದರೂ ಸಹ, ಮನವಿಯು ಯಾವುದೇ ಕಾನೂನುಬದ್ಧ ಕಾರಣವನ್ನು (cause of action) ಹೊಂದಿದೆ ಎಂದು ವಾದಿಸಲು ಅವಕಾಶವಿಲ್ಲ. ಹೀಗಾಗಿ, ಅವರ ಮೊಕದ್ದಮೆಯನ್ನು ವಜಾಗೊಳಿಸಿದ ಕೆಳ ನ್ಯಾಯಾಲಯದ ವಿಧಾನದಲ್ಲಿ ಯಾವುದೇ ದೋಷವಿಲ್ಲ" ಎಂದು ನ್ಯಾಯಾಲಯ ಹೇಳಿತು.

"ಪರಿಹಾರವಾಗಲಿಲ್ಲ, ಸಮಸ್ಯೆಯಾದರು"

ಪ್ರಾಚಾ ಅವರು ಮಾಜಿ ಸಿಜೆಐ ಚಂದ್ರಚೂಡ್ ಅವರನ್ನು ವೈಯಕ್ತಿಕವಾಗಿ ವಿಚಾರಣೆಗೆ ಕರೆಯಬೇಕು ಮತ್ತು ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಮಾಜಿ ಸಿಜೆಐ ಅವರನ್ನು ಕಕ್ಷಿದಾರರನ್ನಾಗಿ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಪ್ರಾಚಾ ಅವರು 'ದುರುದ್ದೇಶಪೂರಿತ ಉದ್ದೇಶದಿಂದ' (oblique intent) ಪ್ರೇರಿತರಾಗಿದ್ದಾರೆ ಎಂದು ಕೋರ್ಟ್ ಹೇಳಿತು.

"ಸಾರ್ವಜನಿಕ ಸೇವಕರು ನಿವೃತ್ತರಾದ ನಂತರ ಅವರನ್ನು ಗುರಿಯಾಗಿಸುವ ಒಂದು ನಕಾರಾತ್ಮಕ ಪ್ರವೃತ್ತಿ ಇತ್ತೀಚೆಗೆ ಕಂಡುಬರುತ್ತಿದೆ. ಮಾಜಿ ಸಾರ್ವಜನಿಕ ಸೇವಕರು ತಮ್ಮ ಕಚೇರಿಯಿಂದ ನಿರ್ಗಮಿಸಿದ ನಂತರ ದುರ್ಬಲರಾಗುತ್ತಾರೆ ಮತ್ತು ಎಲ್ಲಾ ರೀತಿಯ ದುರುದ್ದೇಶಪೂರಿತ ದಾಳಿಗೆ ಗುರಿಯಾಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಕೆಲವು ನಿರ್ಲಜ್ಜ ವ್ಯಾಜ್ಯದಾರರು ಪೋಷಿಸುತ್ತಾರೆ," ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

"ಸಂರಕ್ಷಕನೇ ಪರಭಕ್ಷಕನಾದಾಗ (predator) ಪರಿಸ್ಥಿತಿ ತೀವ್ರ ತಳಮಳಕ್ಕೆ ಕಾರಣವಾಗುತ್ತದೆ. ಈ ಪ್ರಕರಣದಲ್ಲಿ, ಮೇಲ್ಮನವಿದಾರರು ಸಾಕಷ್ಟು ಹಿರಿಯ ವಕೀಲರಾಗಿದ್ದರೂ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಪರಿಹಾರದಲ್ಲಿ ಭಾಗಿಯಾಗುವ ಬದಲು, ಸಮಸ್ಯೆಯನ್ನು ಹೆಚ್ಚಿಸಲು ಆರಿಸಿಕೊಂಡಿದ್ದಾರೆ. ಮೇಲ್ಮನವಿದಾರರು ಸುಳ್ಳು ಮತ್ತು ಫಲಹೀನ ಮೊಕದ್ದಮೆಯನ್ನು ಹೂಡಿದ್ದಲ್ಲದೆ, ಸಂಪೂರ್ಣವಾಗಿ ಐಷಾರಾಮಿ ಮತ್ತು ಫಲಹೀನವಾದ ಮೇಲ್ಮನವಿಯನ್ನು ಸಹ ಸಲ್ಲಿಸಿದ್ದಾರೆ," ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಹಿತಿ ಮೂಲ: (ಲೈವ್‌ ಲಾ ವರದಿ)

Wednesday, April 23, 2025

ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌

 ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌

ರ್ನಾಟಕದ ಹಾಸನ ಜಿಲ್ಲೆಯ ಸಕ್ಲೇಶಪುರ ಸುಂದರವಾದ ನಿಸರ್ಗದ ಮಡಿಲ ತಾಣ. ಇದು ಕಾಫಿ ತೋಟಗಳು, ಬೆಟ್ಟ ಗುಡ್ಡಗಳನ್ನು ಒಳಗೊಂಡಿರುವ ಸುಂದರವಾದ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಪ್ರದೇಶ. ಇಲ್ಲಿನ ಕಾಡೊಳಗೆ ಇರುವ ಪುಟ್ಟ ಗ್ರಾಮ ಬಿರಹಳ್ಳಿ. ಈ ಪುಟ್ಟ ಹಳ್ಳಿಯು ಭರವಸೆ ಮತ್ತು ದೃಢ ಸಂಕಲ್ಪದ ಬೆಳಕಾಗಿ ಸೂರ್ಯನಂತೆ ಕಂಗೊಳಿಸುತ್ತಿದೆ.

ದಟ್ಟ ಹಸಿರಿನ ಮಧ್ಯೆ ಇರುವ ಈ ಗ್ರಾಮ ಅಂಗಾರಾಮ್ಲ ಮುಕ್ತ ಪರಿಸರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಗ್ರಾಮ ಪಂಚಾಯಿತಿ ಕಚೇರಿ ಛಾವಣಿ ಮೇಲೆ ಸೌರ ಫಲಕಗಳಿವೆ.ಇವು ಇಡೀ ಕಚೇರಿಗೆ ವಿದ್ಯುತ್‌ ಉತ್ಪಾದಿಸುತ್ತಿವೆ. ಅಲ್ಲದೆ ಸುತ್ತ ಮುತ್ತಲಿನ ಪ್ರದೇಶಕ್ಕೂ ʼಶೂನ್ಯ ಮಾಲಿನ್ಯ ಕಾರ್ಬನ್‌ ಚಿನ್ನʼವನ್ನು ಒದಗಿಸಿಕೊಡುತ್ತಿವೆ. ತೋಟದ ಬೇಲಿ, ಸಿಸಿಟಿವಿ ಕ್ಯಾಮರಾ, ಅಂಚೆ ಕಚೇರಿಗಳು ಕೂಡಾ ಈ ಸೌರ ವಿದ್ಯುತ್ತಿನಿಂದಲೇ ನಡೆಯುತ್ತಿವೆ. ರಸ್ತೆಗಳಲ್ಲಿ ಬೀದಿ ದೀಪಗಳಿಗಾಗಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಸೌರಶಕ್ತಿಯ ೨೧ ಹೈ ಮಾಸ್ಕ್‌ ಬೀದಿ ದೀಪಗಳು ಮತ್ತು ೧೯೦ ಮಿನಿ ಸೋಲಾರ್‌ ದೀಪಗಳನ್ನು ಅಳವಡಿಸುವ ಮೂಲಕ ಬೀದಿ ದೀಪಗಳ ವಿದ್ಯುತ್‌ ವೆಚ್ಚವನ್ನು ನಿಯಂತ್ರಿಸಲಾಗಿದೆ.

ಗ್ರಾಮದ ಹಲವಾರು ಮನೆಗಳು ಸೌರ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸಿವೆ. ತೋಟಗಳಲ್ಲಿ ಕೂಡಾ ಸೌರ ಫಲಕಗಳು ತುಂತುರು ನೀರಾವರಿಗೆ ಮೋಟಾರು ಚಲಾಯಿಸಲು ಬೇಕಾದ  ವಿದ್ಯುತ್ತು ಉತ್ಪಾದಿಸುತ್ತಿವೆ.

ಕಳೆದ ೫ ವರ್ಷಗಳಿಂದ ಪಂಪ್‌ ಓಡಿಸಲು ಸೌರ ವಿದ್ಯುತ್‌ ಬಳಸುತ್ತಿದ್ದೇವೆ. ಇದು ಅತ್ಯಂತ ಉಪಯುಕ್ತ. ಲೈಟಿಂಗ್‌, ಫ್ರಿಡ್ಜ್‌, ೫ ಎಚ್‌ ಪಿಯ ನೀರೆತ್ತುವ ಮೋಟಾರು ಪಂಪ್‌ ಚಾಲನೆಗೂ ಅನುಕೂಲವಾಗಿದೆ ಎನ್ನುತ್ತಾರೆ ಎನ್ನುತ್ತಾರೆ ಬಿರಡಹಳ್ಳಿಯ ನಿವಾಸಿ ಡಬ್ಲ್ಯೂ. ಕುಲಾಸೋ.

ಗ್ರಾಮದ ದುರ್ಬಲ ವರ್ಗಗಳಿಗೆ ಪಂಚಾಯಿತಿ ಸೌರ ದೀಪಗಳನ್ನು ಒದಗಿಸಿದೆ. ಗ್ರಾಮದ ಇಡೀ ಸಮುದಾಯ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿವೆ. ಹಲವು ಮನೆಗಳು ಸೌರ ದೀಪದ ವ್ಯವಸ್ಥೆ, ನೀರು ಕಾಯಿಸಲು ಸೌರ ಆಧಾರಿತ ವ್ಯವಸ್ಥೆ ಮಾಡಿಕೊಂಡಿವೆ.

ಹಲವು ಮನೆಗಳು ಎಲ್‌ ಪಿಜಿ ಜೊತೆಗೆ ಜೈವಿಕ ಅನಿಲ ಉತ್ಪಾದನೆಯ ವ್ಯವಸ್ಥೆ ಮಾಡಿಕೊಂಡು ಮಾಲಿನ್ಯವನ್ನು ನಿಯಂತ್ರಿಸುತ್ತಿವೆ. ಗ್ರಾಮ ಸಭೆ ಮತ್ತು ಇತರ ಸಭೆಗಳಲ್ಲಿ ಜನರಿಗೆ ಎಲೆಕ್ಟ್ರಿಕ್‌ ಕಾರು ಮತ್ತು ಬೈಕು ಇತ್ಯಾದಿಗಳ  ಬಳಕೆ ಬಗ್ಗೆ,  ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇದದ ಬಗ್ಗೆ ಮಾಹಿತಿ ನೀಡಿ ಶಿಕ್ಷಣ ನೀಡುವ ಕೆಲಸಗಳನ್ನೂ ಪಂಚಾಯಿತಿ ಮಾಡುತ್ತಿದೆ.

ಗ್ರಾಮದ ತ್ಯಾಜ್ಯ ವಿಲೇವಾರಿಗೂ ಪಂಚಾಯಿತಿಯೂ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿಕೊಂಡಿದೆ.

ಸಭೆಗಳಲ್ಲಿ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕಾರ, ಮಕ್ಕಳಿಂದ ಸ್ವಚ್ಛತಾ ಹೀ ಸೇವಾ ಆಂದೋಲನ, ರಸ್ತೆ ಬದಿಗಳಲ್ಲಿ ಎಚ್ಚರಿಕೆಯ ಫಲಕ ಹಾಕುವ ಮೂಲಕವೂ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜಾಗೃತಿ ಮೂಡಿಸಲಾಗುತ್ತಿದೆ.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ವನಮಹೋತ್ಸವ ಆಚರಣೆ ಮೂಲಕ ಗಿಡಮರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿವಿಧ ತಳಿಗಳ ಒಂದು ಲಕ್ಷ ಸಸಿಗಳನ್ನು ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ನೆಡಲಾಗಿದೆ.ಇದರಿಂದಾಗಿ ಸುತ್ತ ಮುತ್ತ ಹಸಿರಿನ ಛಾಯೆ ಎದ್ದು ಕಾಣುತ್ತದೆ. ತುಂತುರು ಮತ್ತು ಹನಿ ನೀರಾವರಿಗೆ ಸೌರವಿದ್ಯುತ್‌ ನಿರಂತರ ಒದಗಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ತುಂಬಲಾಗಿದೆ.

ಘನ ತ್ಯಾಜ್ಯ ಘಟಕವನ್ನು ಪಂಚಾಯಿತಿ ವತಿಯಿಂದಲೇ ನಿರ್ಮಿಸಿ ಅದಕ್ಕೆ ಸ್ವಚ್ಛ ಸಂಕೀರ್ಣ ಎಂಬ ಹೆಸರು ಇಡಲಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಹಸಿ ಕಸ, ಒಣ ಕಸಗಳನ್ನು ವಿಂಗಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಇದೆ.

ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮನೆಗಳಿಗೆ ಶೌಚಾಲಯ, ಹಿತ್ತಲ ಕೈ ತೋಟಗಳನ್ನು ಮಾಡಲು ಹೇಳಿಕೊಡಲಾಗಿದೆ. ಪರಿಸರ ಸಂರಕ್ಷಣೆಯ ಇಂತಹ ಹತ್ತಾರು ಕಾರ್ಯಕ್ರಮಗಳಿಗಾಗಿ ಜಿಲ್ಲೆ ಮತ್ತು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳೂ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಮುಡಿಗೇರಿವೆ.

ಪರಿಸರವನ್ನು ಹಸಿರಾಗಿಸಿ ಭೂಮಿಯ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿರುವ ಈ ಪಂಚಾಯಿತಿಯ ಈ ಸಾಧನೆಗೆ ಈಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಯೂ ಲಭಿಸಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

ಇವುಗಳನ್ನೂ ಓದಿರಿ: 

ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ
ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970.
ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:


Click the Image to view Digital Books

Monday, April 21, 2025

ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ

 ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ

ಬೆಂಗಳೂರು: ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುವ ೨೦೨೫ರ ಸಾಲಿನ ರಾಷ್ಟ್ರೀಯ ಪಂಚಾಯಿತಿ ವಿಶೇಷ ಪ್ರಶಸ್ತಿಯ ಕಿರೀಟ ಕರ್ನಾಟಕದ ಹಾಸನ ಜಿಲ್ಲೆ ಸಕಲೇಶಪುರ ಬ್ಲಾಕಿನ ಬಿರಡಹಳ್ಳಿ ಗ್ರಾಮದ ಮುಡಿಗೆ ಏರಿದೆ.

ಕೇಂದ್ರ ಸರ್ಕಾರವು ವಿಶ್ವಸಂಸ್ಥೆಯು ನಿಗದಿ ಪಡಿಸಿರುವ ೧೭ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದ್ದು ಅದರಲ್ಲಿ ಹವಾಮಾನ/ ಪರಿಸರ ರಕ್ಷಣೆ ವಿಚಾರದಲ್ಲಿ ಮಾಡಿರುವ ಸಾಧನೆಗಾಗಿ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವಿಶೇಷ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

ಇಡೀ ಗ್ರಾಮದ ಕಚೇರಿ, ಮನೆ, ರಸ್ತೆಗಳಲ್ಲಿ ಸೌರ ದೀಪಗಳ ಅಳವಡಿಕೆ, ತೋಟಗಳಲ್ಲಿ ಮೋಟಾರುಗಳ ಚಾಲನೆಗೆ ಸೌರಶಕ್ತಿಯ ಬಳಕೆ, ಮನೆಗಳಲ್ಲಿ ಪರ್ಯಾಯ ಇಂಧನಕ್ಕಾಗಿ ಜೈವಿಕ ಅನಿಲದ ಬಳಕೆಯಂತಹ ಕ್ರಮಗಳ ಅನುಷ್ಠಾನಕ್ಕಾಗಿ ಬಿರಡಹಳ್ಳಿ ಗ್ರಾಮಕ್ಕೆ ಕೇಂದ್ರದ ಈ ಪುರಸ್ಕಾರ ಲಭ್ಯವಾಗಿದೆ.  

ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ ಪಂಚಾಯತ್, ಆರೋಗ್ಯಪೂರ್ಣ ಪಂಚಾಯತ್, ಮಕ್ಕಳ ಸ್ನೇಹಿ ಪಂಚಾಯತ್, ಜಲ ಸಮೃದ್ಧ ಪಂಚಾಯತ್, ಸ್ವಚ್ಛ ಮತ್ತು ಹಸಿರು ಪಂಚಾಯತ್, ಪಂಚಾಯಿತಿಯಲ್ಲಿ ಸ್ವಾವಲಂಬಿ ಮೂಲಸೌಕರ್ಯ, ಸಾಮಾಜಿಕವಾಗಿ ನ್ಯಾಯಯುತ ಮತ್ತು ಸಾಮಾಜಿಕವಾಗಿ ಸುರಕ್ಷಿತ ಪಂಚಾಯತ್, ಉತ್ತಮ ಆಡಳಿತವುಳ್ಳ ಪಂಚಾಯತ್ ಹಾಗೂ ಮಹಿಳಾ ಸ್ನೇಹಿ ಪಂಚಾಯತ್- ಈ ೯ ವಿಷಯಗಳಲ್ಲಿ ಯಾವುದಾದರೂ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ಪಂಚಾಯಿತಿಗಳಿಗೆ ೭ ವಿಶೇಷ ವರ್ಗದ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಮೇಲೆ ಹೇಳಿದ ೯ ವಿಷಯಗಳಲ್ಲಿ ಉನ್ನತ ಸಾಧನೆ ಮಾಡಿದ ೩ ಗ್ರಾಮ ಪಂಚಾಯಿಗಳಿಗೆ ದೀ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ.

ಲ್ಲ ವಿಷಯಗಳ ಅಡಿಯಲ್ಲಿ ಅತ್ಯಧಿಕ ಸರಾಸರಿ ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ ಮೂರು 3 ಗ್ರಾಮ ಪಂಚಾಯತಿಗಳು, ಬ್ಲಾಕ್‌ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ,

ಸ್ವತಃ ಆದಾಯದ ಮೂಲವನ್ನು (OSR) ಸಜ್ಜುಗೊಳಿಸಲು ಮತ್ತು ವೃದ್ಧಿಸಲು ಮಾಡಿದ ಪ್ರಯತ್ನಗಳಿಗಾಗಿ 3 ಗ್ರಾಮ ಪಂಚಾಯತಿಗಳಿಗೆ ಆತ್ಮ ನಿರ್ಭರ್ ಪಂಚಾಯತ್ ವಿಶೇಷ ಪ್ರಶಸ್ತಿ,

ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆ ಮತ್ತು ನವೀಕರಿಸಬಹುದಾದ ಇಂಧನ ಮೂಲದ ಬಳಕೆಯನ್ನು ಸಾಧಿಸಿದ 3 ಗ್ರಾಮ ಪಂಚಾಯತಿಗಳಿಗೆ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣಾ ವಿಶೇಷ ಪ್ರಶಸ್ತಿ,

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಗ್ರಾಮ ಪಂಚಾಯತಿಗಳಿಗೆ ಸಾಂಸ್ಥಿಕ ಬೆಂಬಲವನ್ನು ನೀಡಿದ 3 ಸಂಸ್ಥೆಗಳಿಗೆ ಪಂಚಾಯತ್ ಕ್ಷಮತಾ ನಿರ್ಮಾಣ್ ಸರ್ವೋತ್ತಮ್ ಸಂಸ್ಥಾನ ಪುರಸ್ಕಾರ,

ನಂತರದ ವರ್ಷಗಳಲ್ಲಿ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಿಗೆ ಅರ್ಹತೆ ಪಡೆದ ಮತ್ತು ಶಾರ್ಟ್‌ಲಿಸ್ಟ್ ಮಾಡಲಾದ ಒಂದು ಗ್ರಾಮ ಪಂಚಾಯತಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ,

ಹಾಗೂ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿಗಳಿಂದ ಶೇಕಡಾ ೯೦ಕ್ಕಿಂತ ಉತ್ತಮ ಪಾಲ್ಗೊಳ್ಳುವಿಕೆಗಾಗಿ ಒಂದು ಪಂಚಾಯಿತಿಗೆ  ಅತ್ಯುತ್ತಮ ಪಾಲ್ಗೊಳ್ಳುವಿಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ ಈ ಪ್ರಶಸ್ತಿಗಳಲ್ಲಿ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣೆಗಾಗಿ ನೀಡುವ ಇನ್ನೆರಡು ಪ್ರಶಸ್ತಿಗಳನ್ನು ಮಹಾರಾಷ್ಟ್ರದ ಡವ್ವಾ ಎಸ್‌ ಗ್ರಾಮ ಪಂಚಾಯಿತಿ ಮತ್ತು ಬಿಹಾರಿನ ಮೋತಿಪುರ ಗ್ರಾಮ ಪಂಚಾಯಿತಿ ಹಂಚಿಕೊಂಡಿವೆ.

ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ತೆಲಂಗಾಣದ ಮಾಲ್‌ ಗ್ರಾಮ ಪಂಚಾಯಿತಿ, ಒಡಿಶಾದ ಹತ್ಬದ್ರಾ ಗ್ರಾಮ ಪಂಚಾಯಿತಿ, ಆಂದ್ರ ಪ್ರದೇಶದ ಗೊಲ್ಲಪುಡಿ ಗ್ರಾಮ ಪಂಚಾಯಿತಿ ಪಡೆದುಕೊಂಡಿವೆ.

ಪಂಚಾಯತ್‌ ಕ್ಷಮತಾ ನಿರ್ಮಾಣ ಸರ್ವೋತ್ತಮ ಸಂಸ್ಥಾನ ಪುರಸ್ಕಾರಕ್ಕೆ  ಕೇರಳದ ಸ್ಥಳೀಯ ಆಡಳಿತ ಸಂಸ್ಥೆ, ಒಡಿಶಾದ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮತ್ತು ಅಸ್ಸಾಮಿನ ರಾಜ್ಯ ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಪಾತ್ರವಾಗಿದೆ.

ಅಭಿನಂದನೆ

ಆತ್ಮ ನಿರ್ಭರ ಗ್ರಾಮ ಪಂಚಾಯಿತಿಗಳ ಸಲುವಾಗಿ ಶ್ರಮಿಸುತ್ತಿರುವ ಹಾಗೂ ಇದಕ್ಕಾಗಿಯೇ ಪುಸ್ತಕಗಳನ್ನು ಬರೆದಿರುವ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಡಾ. ಶಂಕರ ಕೆ ಪ್ರಸಾದ್‌ ಹಾಗೂ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಶ್ರಮಿಸುತ್ತಿರುವ ರೆಸ್‌ ಗೌ (ಫೌಂಡೇಶನ್‌ ಫಾರ್‌ ರೆಸ್ಪಾನ್ಸಿವ್‌ ಗವರ್ನೆನ್ಸ್‌) ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್‌ ಅವರು ಬಿರಡಹಳ್ಳಿ ಗ್ರಾಮ ಪಂಚಾಯಿತಿಯನ್ನು ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಇವುಗಳನ್ನೂ ಓದಿರಿ: 

ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ
ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970.
ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:


Click the Image to view Digital Books

Wednesday, November 27, 2024

ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ

 ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ

US ಆರೋಪಗಳ ಬಗ್ಗೆ ಅದಾನಿ ಸಮೂಹ ಸ್ಪಷ್ಟನೆ

ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವನೀತ್ ಜೈನ್ ಅವರು ಲಂಚದ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ಅದಾನಿ ಗ್ರೂಪ್ ಇಂದು  (೨೦೨೪ ನವೆಂಬರ್‌ ೨೭ ಬುಧವಾರ) ಹೇಳಿದೆ.

ಅದಾನಿ ಸಮೂಹದ ಅಡಿಯಲ್ಲಿರುವ ಅದಾನಿ ಗ್ರೀನ್ ಸಂಸ್ಥೆಯು ತನ್ನ ಇತ್ತೀಚಿನ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಈ ಕುರಿತು ವಿವರ ನೀಡಿದ್ದು, ಮಾಧ್ಯಮ ವರದಿಗಳನ್ನು "ತಪ್ಪು" ಎಂದು ಕರೆದಿದೆ.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳಲ್ಲಿ ರಂಧ್ರಗಳನ್ನು ಎಂದು ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಗುರುತಿಸಿದ್ದಾರೆ.

ಸಮೂಹದ ಸಂಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು US ನಲ್ಲಿ ಲಂಚ ಅಥವಾ ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಹೊಂದಿಲ್ಲ. ಯುಎಸ್ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಕುರಿತ ವರದಿಗಳು ತಪ್ಪಾಗಿವೆ ಎಂದು ರೋಹ್ಟಗಿ ಹೇಳಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

"ಮೊದಲಿಗೇ ಹೇಳಿಬಿಡುತ್ತೇನೆ. ಇದು ನನ್ನ ವೈಯಕ್ತಿಕ ಕಾನೂನು ದೃಷ್ಟಿಕೋನ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾನು ಅದಾನಿ ಸಮೂಹದ ವಕ್ತಾರನಲ್ಲ. ನಾನು ವಕೀಲ. ನಾನು ಹಲವಾರು ಪ್ರಕರಣಗಳಲ್ಲಿ ಅದಾನಿ ಸಮೂಹದ ಪರವಾಗಿ ಹಾಜರಾಗಿದ್ದೇನೆ. ದೋಷಾರೋಪಣೆಯನ್ನು ನಾನು ಪರಿಶೀಲಿಸಿದ್ದೇನೆ.

US ನ್ಯಾಯಾಲಯದ ದೋಷಾರೋಪಣೆಯಲ್ಲಿ ಮೊದಲ ಮತ್ತು ೫ನೇ ಆಪಾದನೆ ಇತರವುಗಳಿಗಿಂತ ಹೆಚ್ಚು ಮುಖ್ಯವಾದುದು ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ದೋಷಾರೋಪ ಪಟ್ಟಿಯು ಕೆಲವು ಅಧಿಕಾರಿಗಳು ಮತ್ತು ವಿದೇಶೀ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದೆ. ಅದರಲ್ಲಿ ಅದಾನಿ ಮತ್ತು ಸೋದರಳಿಯನ ಹೆಸರಿಲ್ಲ ಎಂದು ಹಿರಿಯ ವಕೀಲರು ಹೇಳಿದರು.

ಯುಎಸ್‌ ನ್ಯಾಯಾಂಗ ಇಲಾಖೆಯ ದೋಷಾರೋಪಣೆ ಪಟ್ಟಿಯು ಲಂಚಗಳ ಕುರಿತು ನಡೆಸಲಾದ ಚರ್ಚೆಗಳು ಅಥವಾ ಭರವಸೆಗಳ ಪ್ರತಿಪಾದನೆಗಳನ್ನು ಮಾತ್ರ ಆಧರಿಸಿದೆ. ಅದು ಭಾರತ ಸರ್ಕಾರದ ಅಧಿಕಾರಿಗಳು ಅದನಿ ಕಾರ್ಯ ನಿರ್ವಾಹಕರಿಂದ ಪಡೆದ ಲಂಚಕ್ಕೆ ಯಾವುದೇ ಸಾಕ್ಷ್ಯಾಧಾರವನ್ನೂ ನೀಡಿಲ್ಲ ಎಂದು ಸಮೂಹ ಹೇಳಿದೆ.

ದೋಷಾರೋಪ ಪಟ್ಟಿಯಲ್ಲಿ ಯಾರಿಗೆ ಲಂಚ ನೀಡಲಾಗಿದೆ ಎಂಬ ಯಾವುದೇ ವಿವರ ಕೂಡಾ ಇಲ್ಲ ಎಂದು ವಕೀಲ ರೋಹ್ಟಗಿ ನುಡಿದರು.

ವೀಕ್ಷಿಸಿ: https://youtu.be/wE_dvjPG1NE

ಕಾಂಗ್ರೆಸಿನಿಂದ ʼಅತಿರಂಜಿತʼ

ಈ ಮಧ್ಯೆ, ಹಿರಿಯ ವಕೀಲ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಹೇಶ ಜೇಠ್ಮಲಾನಿ ಅವರು ʼಅಮೆರಿಕದಲ್ಲಿ ಅದನಿ ಸಮೂಹದ ವಿರುದ್ಧ ಮಾಡಲಾಗಿರುವ ದೋಷಾರೋಪ ಪಟ್ಟಿಯ ವಿಷಯವನ್ನು ಸ್ಪಷ್ಟವಾದ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್‌ ʼಅತಿರಂಜಿತʼಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಸಂಸದೀಯ ತನಿಖೆಗಾಗಿ ಒತ್ತಾಯಿಸುವ ಮುನ್ನ ವಿರೋಧ ಪಕ್ಷವು ವಿಶ್ವಾಸಾರ್ಹ ಸಾಕ್ಷ್ಯವನ್ನುನೀಡಲೇಬೇಕು ಎಂದು ಅವರು ಹೇಳಿದ್ದಾರೆ.

ಭಾರತದ ಆರ್ಥಿಕ ಉನ್ನತಿಯನ್ನು ಅಸ್ಥಿರಗೊಳಿಸಲು ಅಮೆರಿಕದ ನ್ಯಾಯಾಲಯಗಳನ್ನು “ಆಳವಾದ ಪ್ರಜಾಪ್ರಭುತ್ವ ರಾಷ್ಟ್ರʼ    ಶಸ್ತ್ರವನ್ನಾಗಿ  ಬಳಸಿಕೊಳ್ಳುತ್ತಿದೆ ಎಂದೂ ಅವರ ಟೀಕಿಸಿದ್ದಾರೆ.

ಮಹೇಶ ಜೇಠ್ಮಲಾನಿ ಅವರು ಪಿಟಿಐಗೆ ನೀಡಿದ ಅಭಿಪ್ರಾಯ ಟ್ವಿಟ್ಟರಿನಲ್ಲಿ  (ಹಿಂದಿನ ಎಕ್ಸ್)‌ ಪ್ರಕಟವಾಗಿದೆ.

ಮಹೇಶ ಜೇಠ್ಮಲಾನಿ ಅಭಿಪ್ರಾಯ ಕೇಳಲು ಈ ಕೊಂಡಿಯನ್ನು ಕ್ಲಿಕ್‌ ಮಾಡಿ:

 https://twitter.com/i/status/1861660163272282118

Tuesday, September 29, 2020

೫೬ ವಿಧಾನಸಭೆ ಮತ್ತು ೧ ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ

 ೫೬ ವಿಧಾನಸಭೆ ಮತ್ತು ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ: ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ೧೦ ರಾಜ್ಯಗಳಲ್ಲಿನ ೫೪ ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಕ್ರಮವಾಗಿ ನವೆಂಬರ್ ಮತ್ತು ರಂದು ಉಪ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗ 2020 ಸೆಪ್ಟೆಂಬರ್ 29ರ ಮಂಗಳವಾರ ಪ್ರಕಟಿಸಿತು.

ನವೆಂಬರ್ ರಂದು ಬಿಹಾರದ ವಾಲ್ಮೀಕಿ ನಗರದ ಲೋಕಸಭಾ ಕ್ಷೇತ್ರ ಮತ್ತು ಮಣಿಪುರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿವೆ. ಅದೇ ದಿನ ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದೆ.

ಮತಗಳ ಎಣಿಕೆ ನವೆಂಬರ್ ೧೨ರಂದು ನಡೆಯಲಿದ್ದು, ಚುನಾವಣೆಯ ಫಲಿತಾಂಶಗಳನ್ನು ನವೆಂಬರ್ ೧೨ ರೊಳಗೆ ಪ್ರಕಟಿಸಲಾಗುವುದು.

ಅಕ್ಟೋಬರ್ ೨೮ ರಿಂದ ನವೆಂಬರ್ ರವರೆಗೆ ನಡೆಯಲಿರುವ ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣಾ ಆಯೋಗವು ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭಾ ಉಪಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಆದಾಗ್ಯೂ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣೆ ಮುಂದೂಡಲ್ಪಟ್ಟಿದೆ,   ರಾಜ್ಯಗಳಲ್ಲಿ ಸದನದ ಅವಧಿ ಮುಂದಿನ ವರ್ಷ ಮೇ ಅಥವಾ ಜೂನ್ನಲ್ಲಿ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿನ ಉಪಚುನಾವಣೆ ಮುಂದೂಡಿಕೆಯಾಗಿದೆ.

ಕೇರಳದಲ್ಲಿ ಕೇವಲ ಎರಡು ಖಾಲಿ ಸ್ಥಾನಗಳು ಖಾಲಿ ಇರುವುದರಿಂದ ಮತ್ತು ರಾಜ್ಯ ವಿಧಾನಸಭೆಗೆ ೨೦೨೧ರ ಜೂನ್ ತಿಂಗಳಿಗೆ ಮುನ್ನ ಚುನಾವಣೆ ನಡೆಯಲಿರುವುದಿರಿಂದ ಇಲ್ಲ್ಲಿ ಈಗ ಉಪಚುನಾವಣೆ ನಡೆಸುವುದರಲ್ಲಿ  ಅರ್ಥವಿಲ್ಲ ಎಂದು ಸುದ್ದಿ ಮೂಲಗಳು ಹಿಂದೆ ತಿಳಿಸಿದ್ದವು.

" ಸಾಂಕ್ರಾಮಿಕದ ಮಧ್ಯೆ ಮತ್ತು ಪ್ರವಾಹದಿಂದ ಉಂಟಾದ ವಿನಾದ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಉಪಚುನಾವಣೆ ನಡೆಸುವುದು ಅನಗತ್ಯ ಹಾಗೂ ದುಬಾರಿಯಾಗಿದೆ" ಎಂದು ಸುದ್ದಿ ಮೂಲಗಳು ಹೇಳಿದ್ದವು. ಹಿನ್ನೆಲೆಯಲಿ ಮತದಾನವನ್ನು ಮುಂದೂಡಲು ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು.

ಚುನಾವಣಾ ಆಯೋಗವು ಈಗ ಛತ್ತೀಸ್ ಗಢದ , ಗುಜರಾತಿನ , ಹರಿಯಾಣದ , ಜಾರ್ಖಂಡಿನ , ಕರ್ನಾಟಕದ , ಮಣಿಪುರದ , ನಾಗಾಲ್ಯಾಂಡಿನ , ಒಡಿಶಾದ , ಮಧ್ಯಪ್ರದೇಶದ ೨೮, ತೆಲಂಗಾಣದ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಿಸಿದೆ.

ಜ್ಯೋತಿರಾಡಿತ್ಯ ಸಿಂಧಿಯಾ ಅವರು ತಮ್ಮ ನಿಷ್ಠಾವಂತರೊಂದಿಗೆ ಬಿಜೆಪಿಗೆ ಸೇರಲು ಕಾಂಗ್ರೆಸ್ ತೊರೆದ ನಂತರ ಮಾರ್ಚ್ ತಿಂಗಳಲ್ಲಿ ಮಧ್ಯಪ್ರದೇಶದ ೨೮ ಕ್ಷೇತ್ರಗಳು ತೆರವಾಗಿದ್ದವು. ನಿಷ್ಠೆ ಬದಲಾವಣೆಯು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಯಿತು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಿವರಾಜ್ ಚೌಹಾಣ್ ಮರಳಿ ರಾಜ್ಯದ ಮುಖ್ಯಮಂತ್ರಿಯಾದರು.

೨೩೦ ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರದ ಉಳಿವಿಗೆ ಉಪಚುನಾವಣೆ ನಿರ್ಣಾಯಕವಾಗಿದೆ. ೨೮ ಸ್ಥಾನಗಳಲ್ಲಿ ಕನಿಷ್ಠ ಒಂಬತ್ತು ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕಾಗಿದೆ. ಪಕ್ಷವು ಪ್ರಸ್ತುತ ೧೦೭ ಸ್ಥಾನಗಳನ್ನು ಹೊಂದಿದೆ. ಮಾರ್ಚ್ ತಿಂಗಳಲ್ಲಿ ತನ್ನ ೨೧ ಶಾಸಕರು ರಾಜೀನಾಮೆ ನೀಡಿದಾಗ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪ್ರಸ್ತುತ ೨೦೨ ಸದಸ್ಯಬಲ ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ೮೮ ಸದಸ್ಯರನ್ನು ಹೊಂದಿದೆ.

ಫೆಬ್ರ್ರುವರಿಯಲ್ಲಿ ಜೆಡಿಯು ಲೋಕಸಭಾ ಸದಸ್ಯ ಹಾಗೂ ಸಚಿವ ಬೈದ್ಯನಾಥ್ ಪ್ರಸಾದ್ ಮಹತೋ ಅವರ ನಿಧನದ ನಂತರ ಖಾಲಿಯಾಗಿದ್ದ ವಾಲ್ಮೀಕಿ ನಗರ ಸಂಸದೀಯ ಕ್ಷೇತ್ರಕ್ಕೂ ಚುನಾವಣಾ ಆಯೋಗವು ಉಪಚುನಾವಣೆ ನಡೆಸಲಿದೆ.

ಶಿರಾ, ಆರ್.ಆರ್. ನಗರ ವಿಧಾನಸಭೆ ಕ್ಷೇತ್ರ

ನವದೆಹಲಿ: ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗವು  2020 ಸೆಪ್ಟೆಂಬರ್ 29ರ ಮಂಗಳವಾರ ಉಪಚುನಾವಣೆ ದಿನಾಂಕವನ್ನು ಘೋಷಿಸಿತು.

ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿದ್ದ ಶಿರಾ ಕ್ಷೇತ್ರ ಹಾಗೂ ಶಾಸಕ ಮುನಿರತ್ನ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆಯು ನವೆಂಬರ್ ೩ರಂದು ನಡೆಯುವುದು ಎಂದು ಕೇಂದ್ರ ಚುನಾವಣೆ ಆಯೋಗ ಘೋಷಿಸಿತು.

ನವೆಂಬರ್ ೩ಕ್ಕೆ ಉಭಯ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ನವೆಂಬರ್ ೧೦ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಅಕ್ಟೋಬರ್ ರಂದು ಅಧಿಸೂಚನೆ ಹೊರಡಿಸಲಿದ್ದು, ಅಕ್ಟೋಬರ್ ೧೬ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಅಕ್ಟೋಬರ್ ೧೭ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ.

Advertisement