Showing posts with label Kannada Literature. Show all posts
Showing posts with label Kannada Literature. Show all posts

Sunday, October 18, 2020

ಬಾಳಾಸಾಹೇಬ ಲೋಕಾಪುರಗೆ ‘ಚಾವುಂಡರಾಯ ಪ್ರಶಸ್ತಿ’

 ಬಾಳಾಸಾಹೇಬ ಲೋಕಾಪುರಗೆ ‘ಚಾವುಂಡರಾಯ ಪ್ರಶಸ್ತಿ’

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಚಾವುಂಡರಾಯ ದತ್ತಿ ಪ್ರಶಸ್ತಿ’ಗೆ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಶನಿವಾರ ಈ ಆಯ್ಕೆ ಮಾಡಲಾಯಿತು.

ಜೈನ ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕರಿಗೆ ನೀಡಲಾಗುತ್ತಿರುವ ಈ ಪ್ರಶಸ್ತಿಯು  ೩೦ ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ. ಆಯ್ಕೆ ಸಮಿತಿಯ ಸಭೆಯಲ್ಲಿ ಲೇಖಕಿ ಡಾ. ಪದ್ಮಿನಿ ನಾಗರಾಜ್, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಹತಗುಂದಿ ಹಾಗೂ ವ.ಚ. ಚನ್ನೇಗೌಡ ಇದ್ದರು ಎಂದು ಪ್ರಕಟಣೆ ತಿಳಿಸಿತು.

Sunday, January 12, 2020

ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದ ಮೂರ್ತಿ ಇನ್ನಿಲ್ಲ

 ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದ ಮೂರ್ತಿ ಇನ್ನಿಲ್ಲ
ಬೆಂಗಳೂರು: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಎಂ.ಚಿದಾನಂದಮೂರ್ತಿ ಅವರು 2020 ಜನವರಿ 11ರ  ಶನಿವಾರ ಮುಂಜಾನೆ :೪೫ ಸಮಯದಲ್ಲಿ ವಿಧಿವಶರಾದರು. ಚಿ.ಮೂ. ಎಂಬುದಾಗಿಯೇ ಅವರು ಜನಪ್ರಿಯರಾಗಿದ್ದರು.
ಇಂದು ಬೆಳಗ್ಗೆ ಗಂಟೆಯ ನಂತರ ವಿಜಯನಗರದ ಆರ್ ಪಿಸಿ ಲೇಔಟಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಚಿದಾನಂದಮೂರ್ತಿ ೧೯೩೧ ಮೇ ೧೦ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಹಿರೆಕೊಗಳೂರಿ ನಲ್ಲಿ ಜನಿಸಿದ್ದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈದಿನ  ಕೊನೆಯುಸಿರೆಳೆದರು.
ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದಮೂರ್ತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು.

 ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆಪ್ರಾಧ್ಯಾಪಕರಾಗಿಯೂ ಚಿಮೂ  ಸೇವೆ ಸಲ್ಲಿಸಿದ್ದರು.

Saturday, December 21, 2019

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿ ರಾವ್ ನಿಧನ

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿ ರಾವ್ ನಿಧನ
ಬೆಂಗಳೂರು:  ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು 2019 ಡಿಸೆಂಬರ್ 20ರ ಶುಕ್ರವಾರ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು.

ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ್ದ ವಾಮನರೂಪಿ ತ್ರಿವಿಕ್ರಮ ಸಾಹಿತಿ ಎಲ್.ಎಸ್.ಶೇಷಗಿರಿ ರಾವ್ ಎಲ್ಲೆಸೆಸ್ ಎಂದೇ ಖ್ಯಾತರಾಗಿದ್ದರು.

ತಂದೆ ಲಕ್ಷ್ಮೇಶ್ವರ ಸ್ವಾಮಿರಾವ್- ತಾಯಿ ಕಮಲಾಬಾಯಿ. ೧೯೨೫ರ ಫೆಬ್ರುವರಿ ೧೬ರಂದು ಜನಿಸಿದ ಎಲ್ಲೆಸೆಸ್ ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ನಾಗಪುರ ವಿ.ವಿಯ ಇಂಗ್ಲಿಷ್ ಎಂ.ಎ. ಪದವೀಧರರಾಗಿದ್ದರು.

ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಬೆಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ ಎಲ್ಲೆಸ್ಸೆಸ್ ೧೯೪೭-೫೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಸೇರಿದಂತೆ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು..

೨೦೦೭ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿಎಂಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.

ಕೃತಿಗಳು: ಇಂಗ್ಲಿಷ್ ಸಾಹಿತ್ಯದ ಮೇರು ಕೃತಿಗಳನ್ನು ತಿಳಿಕನ್ನಡಕ್ಕೆ ಅನುವಾದಿಸಿದ್ದು ಶೇಷಗಿರಿರಾವ್ ಅವರ ಹೆಗ್ಗಳಿಕೆ. ಆಲಿವರ್ ಗೋಲ್ಡ್ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಇತ್ಯಾದಿ ಕೃತಿಗಳು ಅವರ ಹೆಸರನ್ನು ಸಾಹಿತ್ಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆಲೆಗೊಳಿಸಿದವು.ಸಾಮಾನ್ಯ ಮನುಷ್ಯ (ಕಾದಂಬರಿ), ಇದು ಜೀವನ, ಜಗದ ಜಾತ್ರೆಯಲ್ಲಿ, ಮುಟ್ಟಿದ ಗುರಿ ಮತ್ತು ಇತರ ಕಥೆಗಳು, ಮುಯ್ಯಿ ಎಂಬ ಕಥಾಸಂಕಲನಗಳನ್ನು ರಚಿಸಿದ್ದರು.. ಹಂಪಿ ವಿಶ್ವವಿದ್ಯಾಲಯಕ್ಕೆ ಇಂಗ್ಲಿಷ್-ಕನ್ನಡ, ಕನ್ನಡ- ಕನ್ನಡ ನಿಘಂಟನ್ನು ರಚಿಸಿಕೊಟ್ಟಿದ್ದರು.

ಎಲ್.ಎಸ್.ಶೇಷಗಿರಿರಾವ್ ಅವರ ‘ಮುಯ್ಯಿ ಕಥೆ ಆಧರಿಸಿದ ಚಲನಚಿತ್ರ ೧೯೭೮ರಲ್ಲಿ ತೆರೆ ಕಂಡಿತ್ತು. ನಟ ಲೋಕೇಶ್ ನಾಯಕರಾಗಿ ಅಭಿನಯಿಸಿದ್ದರು.

Monday, May 30, 2016

Javare Gowda passes away

Javare Gowda passes away
Mysore: Noted Kannada writer D. Javare Gowda, who is popularly known as “De Ja Gow,” passed away at hospital in Mysuru on Monday, 30th May 2016 evening.

De Ja Gow, (98), was admitted to Sri Jayadeva Institute of Cardiovascular Sciences and Research here on Saturday, 28th May 2016th night, after he suffered a “heart failure”. He was treated in the Intensive Care Unit (ICU) of the hospital.

However, his condition worsened on Monday and he passed away around 7 p.m., Sadanand S.K., hospital’s in-charge told The Hindu.
“De Ja Gow,” who has written more than 135 books was the recipient of several prestigious awards including Padmashree, Karnataka Ratna, Pampa and Nadoja awards. He served as Vice Chanceller of Mysore University.  

Advertisement