My Blog List

Friday, February 14, 2020

ನಿರ್ಭಯಾ ಪ್ರಕರಣ: ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂ

ನಿರ್ಭಯಾ ಪ್ರಕರಣ: ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂ
ವಿಚಾರಣಾ ನ್ಯಾಯಾಲಯದಲ್ಲೂ ಪ್ರಕರಣ ಮುಂದಕ್ಕೆ
ನವದೆಹಲಿ:  ೨೦೧೨ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್  2020 ಫೆಬ್ರುವರಿ 14ರ ಶುಕ್ರವಾರಕ್ಕೆ ಮುಂದೂಡಿ, ವೇಳೆಗೆ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶನ ನೀಡಿತು.

ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರನ್ನು ಒಳಗೊಂಡ ಪೀಠವು ಶಿಕ್ಷಿತ ಅಪರಾಧಿ ಪವನ್ ಕುಮಾರ್ ಗುಪ್ತನನ್ನು ಪ್ರತಿನಿಧಿಸಲು ಹಿರಿಯ ವಕೀಲರಾದ ಅಂಜನಾ ಪ್ರಕಾಶ್ ಅವರನ್ನು ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರೀ) ಆಗಿ 2020 ಫೆಬ್ರುವರಿ 13ರ ಗುರುವಾರ ನೇಮಕ ಮಾಡಿತು.

ಶಿಕ್ಷಿತ ಅಪರಾಧಿಯನ್ನು ಪ್ರತಿನಿಧಿಸುವ ಸಲುವಾಗಿ ವಕೀಲರನ್ನು ಆಯ್ಕೆ ಮಾಡಲು ವಕೀಲರ ಪಟ್ಟಿಯೊಂದನ್ನು  ಪವನ್ ಗುಪ್ತ ತಂದೆಗೆ ನೀಡುವಂತೆ ಜಿಲಾ ಕಾನೂನು ಸೇವೆ ಪ್ರಾಧಿಕಾರಕ್ಕೆ ವಿಚಾರಣಾ ನ್ಯಾಯಾಲಯವು ಬುಧವಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ತಾನು ಪ್ರಕರಣದ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ ಗಂಟೆಗೆ ಮುಂದೂಡುವುದಾಗಿ ಸುಪ್ರೀಂಕೋರ್ಟ್ ಪೀಠ ತಿಳಿಸಿತು.

ಕೊನೆಯ ಕಾನೂನುಬದ್ಧ ಪರಿಹಾರವಾದ ಕ್ಯೂರೇಟಿವ್ ಅರ್ಜಿಯನ್ನು ಇನ್ನೂ ಸಲ್ಲಿಸದೇ ಇರುವ ಏಕೈಕ ಅಪರಾಧಿ ಪವನ್ ಗುಪ್ತ ಆಗಿದ್ದು, ಕ್ಯುರೇಟಿವ್ ಅರ್ಜಿ ಇತ್ಯರ್ಥದ ಬಳಿಕ ಆತನಿಗೆ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅವಕಾಶವೂ ಇದೆ.

ವಿಚಾರಣಾ ನ್ಯಾಯಾಲಯದಲ್ಲಿ: ಮಧ್ಯೆ ದೆಹಲಿಯ ವಿಚಾರಣಾ ನ್ಯಾಯಾಲಯವು ೨೦೧೨ರ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಪಾಲಕರು ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ ಗಂಟೆಗೆ ಮುಂದೂಡಿತು.

ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಗುರುವಾರ ತಮ್ಮ ನಿರ್ಧಾರಕ್ಕೆ ಸಂವಿಧಾನದ ೨೧ನೇ ವಿಧಿಯ ಅಡಿಯಲ್ಲಿ ಮರಣದಂಡನಗೆ ಗುರಿಯಾದ ಶಿಕ್ಷಿತ ಅಪರಾಧಿಗೆ ಇರುವ ಹಕ್ಕುಗಳನ್ನು ಉಲ್ಲೇಖಿಸಿದರು.

ಶಿಕ್ಷಿತ ಅಪರಾಧಿಗೆ ತನ್ನ ಉಸಿರಿನ ಕೊನೆಯವರೆಗೂ ಪ್ರಾಣ ರಕ್ಷಿಸಿಕೊಳ್ಳುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನದ ೨೧ನೇ ವಿಧಿ ನೀಡಿದೆ ಎಂಬುದು ನನ್ನ ದೃಢ ಅಭಿಪ್ರಾಯ. ಶಿಕ್ಷಿತ ಅಪರಾಧಿಯ ಮೂಲಭೂತ ಹಕ್ಕುಗಳನ್ನು ನ್ಯಾಯಾಲಯವು ನಿರ್ಲಕ್ಷಿಸಲು ಬರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ದೆಹಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಕಾನೂನು ನೆರವಿನ ರೂಪದಲ್ಲಿ ಒದಗಿಸಿದ ವಕೀಲನನ್ನು ಅಂಗೀಕರಿಸಲು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ನಿರಾಕರಿಸಿದ ಬಳಿಕ ನ್ಯಾಯಾಧೀಶರು ಸ್ವತಃ ವಕೀಲರೊಬ್ಬರನ್ನು ಅಪರಾಧಿಯನ್ನು ಪ್ರತಿನಿಧಿಸಲು ನೇಮಕ ಮಾಡಿದರು.

No comments:

Advertisement