My Blog List

Tuesday, October 20, 2020

ಆಶಾಕಿರಣ: ೫೦,೦೦೦ಕ್ಕಿಂತ ಕೆಳಗಿಳಿದ ದೈನಂದಿನ ಸೋಂಕು

 ಆಶಾಕಿರಣ: ೫೦,೦೦೦ಕ್ಕಿಂತ ಕೆಳಗಿಳಿದ ದೈನಂದಿನ ಸೋಂಕು

ನವದೆಹಲಿ: ಸುಮಾರು ನಾಲ್ಕು ತಿಂಗಳಲ್ಲಿ  ಇದೇ ಮೊದಲ ಬಾರಿಗೆ ಭಾರತದಲ್ಲಿ ದೈನಂದಿನ ಕೊರೊನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೫೦,೦೦೦ಕ್ಕಿಂತ ಕೆಳಕ್ಕೆ ಇಳಿದಿರುವುದನ್ನು ಆರೋಗ್ಯ ಸಚಿವಾಲಯದ ಮಾಹಿತಿಯು 2020 ಅಕ್ಟೋಬರ್ 20 ಮಂಗಳವಾರ ತೋರಿಸಿದೆ. ಸೆಪ್ಟೆಂಬರಿನಲ್ಲಿ ಹೊಸ ಪ್ರಕರಣಗಳು ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗುತ್ತಿವೆ. ಇದರೊಂದಿಗೆ ಭಾರತದಲ್ಲಿ ಕೊರೋನಾವೈರಸ್ ನಿವಾರಣೆಯ ನಿಟ್ಟಿನಲ್ಲಿ ಹೊಸ ಆಶಾಕಿರಣ ಗೋಚರಿಸಿತು.

ಕಳೆದ ೨೪ ಗಂಟೆಗಳಲ್ಲಿ ದೇಶವು ೪೬,೭೯೦ ಹೊಸ ಸೋಂಕುಗಳನ್ನು ದಾಖಲಿಸಿದೆ. ಇದರೊಂದಿಗೆ ಕೊರೋನಾವೈರಸ್ ಒಟ್ಟು ಪ್ರಕರಣಗಳ ಸಂಖ್ಯೆ ಸುಮಾರು . ಮಿಲಿಯನ್ಗೆ (೭೬ ಲಕ್ಷ) ತಲುಪಿದೆ. ಅಮೆರಿಕದ ಬಳಿಕ ವಿಶ್ವದಲ್ಲಿ ಇದು ಎರಡನೇ ಗರಿಷ್ಠ ಸಂಖ್ಯೆಯಾಗಿದೆ. ಭಾರತವು ಹೊಸದಾಗಿ ೫೮೭ ಸಾವುಗಳನ್ನು ವರದಿ ಮಾಡಿದ್ದು ಒಟ್ಟು ಸಾವಿನ ಸಂಖ್ಯೆ ,೧೫,೧೯೭ ಕ್ಕೆ ತಲುಪಿತು.

ದೇಶಾದ್ಯಂತ ಪ್ರತಿದಿನ ವರದಿಯಾದ ಹೊಸ ಸಾವುನೋವುಗಳ ಸಂಖ್ಯೆ ಸತತ ಎರಡನೇ ದಿನ ೬೦೦ ಕ್ಕಿಂತ ಕಡಿಮೆಯಾಗಿದೆ.ಕೊರೋನವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು ಸತತ ನಾಲ್ಕನೇ ದಿನ ಲಕ್ಷಕ್ಕಿಂತ ಕಡಿಮೆಯಾಗಿವೆ. ದೇಶದಲ್ಲಿ ,೪೮,೫೩೮, ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ .೮೫ ರಷ್ಟಿದೆ ಎಂದು ಮಾಹಿತಿ ತಿಳಿಸಿತು.

ಒಟ್ಟು ೬೭,೩೩,೩೨೮ ಜನರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ, ಇದು ರಾಷ್ಟ್ರೀಯ ಚೇತರಿಕೆ ಪ್ರಮಾಣವನ್ನು ಶೇಕಡಾ ೮೮.೬೩ ಕ್ಕೆ ಏರಿಸಿದೆ ಮತ್ತು ಕೋವಿಡ್ -೧೯ ಪ್ರಕರಣಗಳಲ್ಲಿನ ಸಾವಿನ ಪ್ರಮಾಣವು ಶೇಕಡಾ .೫೨ ರಷ್ಟಿದೆ.

ಭಾರತದ ಕೊರೋನಾ ಪ್ರಕರಣಗಳ ಸಂಖ್ಯೆ ಆಗಸ್ಟ್ ರಂದು ೨೦ ಲಕ್ಷ, ಆಗಸ್ಟ್ ೨೩ ರಂದು ೩೦ ಲಕ್ಷ ಮತ್ತು ಸೆಪ್ಟೆಂಬರ್ ರಂದು ೪೦ ಲಕ್ಷ ದಾಟಿದೆ. ಇದು ಸೆಪ್ಟೆಂಬರ್ ೧೬ ರಂದು ೫೦ ಲಕ್ಷ, ಸೆಪ್ಟೆಂಬರ್ ೨೮ ರಂದು ೬೦ ಲಕ್ಷ ಮತ್ತು ಅಕ್ಟೋಬರ್ ೧೧ ರಂದು ೭೦ ಲಕ್ಷ ದಾಟಿದೆ.

ಐಸಿಎಂಆರ್ ಪ್ರಕಾರ, ಅಕ್ಟೋಬರ್ ೧೯ ರವರೆಗೆ ಒಟ್ಟು ,೬೧,೧೬,೭೭೧ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸೋಮವಾರ ೧೦,೩೨,೭೯೫ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಹಬ್ಬದ ಋತುವಿನಲ್ಲಿ ಮತ್ತು ಮುಂಬರುವ ಚಳಿಗಾಲದಲ್ಲಿ ಕೋವಿಡ್ -೧೯ ಮುನ್ನೆಚ್ಚರಿಕೆಗಳನ್ನು ಸರಿಯಾಗಿ ಅನುಸರಿಸದಿದ್ದಲ್ಲಿ ಒಂದು ತಿಂಗಳೊಳಗೆ ೨೬ ಲಕ್ಷ ಪ್ರಕರಣಗಳಷ್ಟು ಪ್ರಮಾಣದ ಆಘಾತಕಾರಿ ಹೆಚ್ಚಳದ ಸಾಧ್ಯತೆ ಇದೆ ಎಂದು ಕೊರೋನವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಸರ್ಕಾರ ನೇಮಿಸಿದ ತಜ್ಞರ ಸಮಿತಿ ಎಚ್ಚರಿಸಿದೆ.

ಕೋವಿಡ್ -೧೯ ಅನ್ನು ನಕ್ಷೆ ಮಾಡಲು ಗಣಿತದ ಮಾದರಿಯನ್ನು ಆಧರಿಸಿಭಾರತದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗದ ಪ್ರಗತಿ: ಮುನ್ನರಿವು ಮತ್ತು ಲಾಕ್ಡೌನ್ ಪರಿಣಾಮಗಳುಕುರಿತು ಅಧ್ಯಯನ ನಡೆಸಿದ ನಂತರ ನೀತಿ ಆಯೋಗ ಸದಸ್ಯ ವಿಕೆ ಪಾಲ್ ನೇತೃತ್ವದ ೧೦ ಸದಸ್ಯರ ಸಮಿತಿಯು ಅಂಕಿ ಅಂಶವನ್ನು ನೀಡಿತು.

ಜಿಲ್ಲಾ ಮಟ್ಟದ ಮತ್ತು ಉನ್ನತ ಮಟ್ಟದ ಲಾಕ್ಡೌನ್ಗಳು ಈಗ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ವರದಿ ಹೇಳಿದೆ. ಕೋವಿಡ್ -೧೯ ಶಿಷ್ಟಾಚಾರ, ಸಾಮಾಜಿಕ ಅಂತರ ಪಾಲಿಸಿದರೆ ಮುಂದಿನ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರಬಹುದು ಎಂದೂ ವರದಿ ಹೇಳಿದೆ.

ಹಬ್ಬದ ಋತುಮಾನ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಕೊರೋನಾವೈರಸ್ ನಡವಳಿಕೆಯನ್ನು ಒತ್ತಿಹೇಳಿದ ಅವರು, ’ಚಳಿಗಾಲದ ಕಾರಣ, ಉತ್ತರ ಭಾರತದಲ್ಲಿ ಮಾಲಿನ್ಯದ ಹೆಚ್ಚಳವಾಗುವುದರಿಂದ ಮತ್ತು ಹಬ್ಬದ ಋತುವಿನಲ್ಲಿ, ನಾವು ಬಹಳ ಜಾಗರೂಕರಾಗಿರಬೇಕು ... ಮುಂಬರುವ ತಿಂಗಳುಗಳು ಒಂದು ಸವಾಲು. ಎಚ್ಚರಿಕೆ ವಹಿಸದಿದ್ದರೆ ನಾವು ಗಳಿಸಿದ ಲಾಭಗಳನ್ನು ಕಳೆದುಕೊಳ್ಳಬಹುದುಎಂದು ಅವರು ಹೇಳಿದರು.

ಪರಿಸ್ಥಿತಿಯನ್ನು ಉಲ್ಬಣಗೊಳ್ಳದಂತೆ ತಡೆಯುವುದು ನಮ್ಮ ಕೈಯಲ್ಲಿದೆ, ಭಾರತವು ಮತ್ತೊಂದು ಸೋಂಕಿನ ಮತ್ತೊಂದು ಅಲೆಯನ್ನು ಹೊಂದಿದೆಯೋ ಇಲ್ಲವೋ ಎಂಬುದು ನಮ್ಮ ಕೈಯಲ್ಲಿz’ ಎಂದು ನೀತಿ ಆಯೋಗದ ಸದಸ್ಯ ಹೇಳಿದರು.

ಭಾರತವು ಅತಿ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ, ಭಾರತವು ಲಾಕ್ ಡೌನ್ನ್ನು ಅಳವಡಿಸಿಕೊಂಡ ಮೊದಲ ದೇಶಗಳಲ್ಲಿ ಒಂದಾಗಿರುವುದು ಇದಕ್ಕೆ ಕಾರಣ. ಸುಸಜ್ಜಿತ ಲಸಿಕೆ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲು ದೇಶವು ಈಗಾಗಲೇ ಕೆಲಸ ಮಾಡುತ್ತಿದೆ ಎಂದೂ ಅವರು ಹೇಳಿದರು.

No comments:

Advertisement