ವಾಟ್- ಸುದ್ದಿ

ಸ್ವಚ್ಛತೆಯ ಪರಿಶುದ್ಧ ಪಾಠ

ಕಾರ್ಯಕ್ರಮಗಳನ್ನು, ಉತ್ಸವಗಳನ್ನು ಸಂಘಟಿಸುವುದು ಆಚರಿಸುವುದು ಸಾಮಾನ್ಯ. ಆದರೆ ಅದು ಮುಗಿಯುತ್ತಿದ್ದಂತೆಯೇ  ಅದು ನಡೆದ ಜಾಗದ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಅಗತ್ಯದ ಕೆಲಸ.

ಈ ಬಾರಿಯ ಗುರುನಾನಕ್‌ ಜಯಂತಿ ಸಂದರ್ಭದಲ್ಲಿ ವೈರಲ್‌ ಆದ ಈ ವಿಡಿಯೋ ಎಲ್ಲರಿಗೂ ಸ್ವಚ್ಛತೆಯ ಪರಿಶುದ್ಧ ಪಾಠ.

ವಿಡಿಯೋ ನೋಡಿ – ಎಲ್ಲರೂ ಕಲಿಯಬೇಕಾದ್ದು ಇಲ್ಲಿದೆ:

                     👇👇👇

                                                                  &&&&&&&&
ಬಂದರೋ ಬಂದರು ಭಾವ ಬಂದರು…!

ಬೆಂಗಳೂರಿನ ಮಾನ್ಯತಾ ಲೇಔಟ್‌ ಹಿಂಭಾಗದ ರಾಚೇನಹಳ್ಳಿಯ ಭಾಗ್ಯಶ್ರೀ ರಾಯಲ್‌ ಲೇಔಟಿನಲ್ಲಿ ರಸ್ತೆ ಬದಿ ಕಸ ಎಸೆದಿದ್ದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ಸಿಬ್ಬಂದಿ ಮಾರ್ಷಲ್‌ ಜೊತೆಗೂಡಿ ʼಕಸ ಭಾವʼನನ್ನು ಕರೆದುಕೊಂಡು ಬಂದ ಪರಿ ಕೆಳಗಿನ ವಿಡಿಯೋದಲ್ಲಿ ಇದೆ.



 &&&&&&&&&

ಪಿಕ್‌ ಮೈ ಗಾರ್ಬೇಜ್..!‌

ʼನನ್ನ ಕಸ ಕೊಂಡೊಯ್ಯಿರಿʼ ಹೀಗಂತ ನೀವು ಯಾರಿಗಾದರೂ ಹೇಳಿದರೆ, ಕೇಳಿಸಿಕೊಂಡವರು ನಿಮ್ಮ ಕೆಪ್ಪರದಂಡೆಗೆ ಭಾರಿಸಲು ಮುಂದಾಗಬಹುದು. ಆದರೆ ತುಮಕೂರಿನಲ್ಲಿ ಹೀಗಾಗುವುದಿಲ್ಲ. ಕೇಳಿಸಿಕೊಂಡ ವ್ಯಕ್ತಿ ನೀವು ಹೇಳಿದ ಸಮಯಕ್ಕೆ ಬಂದು ನಿಮ್ಮಿಂದ ಕಸವನ್ನು ತೆಗೆದುಕೊಂಡು ಹೋಗುತ್ತಾರೆ.
ವಾಹ್‌ ಎಂತಹ ವ್ಯವಸ್ಥೆ, ಅಲ್ಲವೇ? ಇಂತಹುದೊಂದು ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಾರಿಗೆ ತಂದಿರುವ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆ ಬಿ.ವಿ. ಅಶ್ವಿಜಾ ನಿಜಕ್ಕೂ ಅಭಿನಂದನಾರ್ಹರು. ಈ ಯೋಜನೆ ಏಕೆ ಅಭಿನಂದನೀಯ, ಏನು ಅದರ ವಿಶೇಷತೆ ಎಂಬುದನ್ನು ತಿಳಿಯಲು ಕೆಳಗಿರುವ ಚಿತ್ರ ಕ್ಲಿಕ್‌ ಮಾಡಿ ನೋಡಿ.

ಬೆಂಗಳೂರು ಮಹಾನಗರ ಪಾಲಿಕೆ, ಕ್ಷಮಿಸಿ, ಈಗಿನ ಗ್ರೇಟರ್‌ ಬೆಂಗಳೂರು ಅಥಾರಿಟಿ ಅಥವಾ -ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯಸ್ಥರು ಬೆಂಗಳೂರಿನ ಕಂಡಲ್ಲಿ ಕಸ ಸಮಸ್ಯೆ ಪರಿಹಾರಕ್ಕೆ ಈ ಮಾರ್ಗ ಅನುಸರಿಸಿದರೆ ನಾಗರಿಕರು ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ಅಡ್ಡಾಡುವ ಪರಿಸ್ಥಿತಿ ತಪ್ಪಬಹುದು. ಜಿಬಿಎ ಮುಖ್ಯ ಕಮೀಷನರ್‌ ಎಂ. ಮಹೇಶ್ವರ ರಾವ್‌ ಅವರು ಇತ್ತ ಗಮನಿಸಿಬೇಕು ಎಂಬುದು ಕೋರಿಕೆ. 👇

ಹಾಗೆಯೇ ಅಶ್ವಿಜಾ ಅವರಿಗೆ ಇನ್ನೊಂದು ಮನವಿ. ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಎಂಬ ಸಂಸ್ಥೆ ಆಧುನಿಕ ತಂತ್ರಜ್ಞಾನ ಬಳಸಿ ಎಲ್ಲ ಪಡಿತರ (ರೇಷನ್‌) ಕಾರ್ಡುದಾರರಿಗೆ ಅವರ ಮನೆಗಳಿಗೇ ಪಡಿತರ ವಸ್ತು (ರೇಷನ್‌) ತಲುಪಿಸುವ ಆಪ್‌ ಒಂದನ್ನು ಅಭಿವೃದ್ಧಿ ಪಡಿಸಿದೆ. ಇದನ್ನು ತುಮಕೂರು ಜಿಲ್ಲೆಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ಚಿಂತಿಸಬಲ್ಲಿರಾ? 

  

                                                                   &&&&&&&&&

ಭಾರತ ಗಡಿಗಳನ್ನು ಮೀರಿದ್ದು: ಶುಭಾಂಶು ಶುಕ್ಲ

ಭಾರತದ ಬಾಹ್ಯಾಕಾಶ ಯಾನಿ ಶುಭಾಂಶು ಶುಕ್ಲ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ಜೂನ್‌ ೨೮ರ ಶುಕ್ರವಾರ ನೇರ ಮಾತುಕತೆ ನಡೆಸಿದರು. ಅವರು ಮಾತನಾಡಿದ್ದೇನು?  ಮಾತುಕತೆಯನ್ನು ಇಲ್ಲಿ ನೋಡಬಹುದು. ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

&&&&&&&&&&

ಹಗರಣ-ದೂರು-ತನಿಖೆ-ನಿಂದನೆ!

ದೆಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಸಂಬಂಧವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಪ್ರಧಾನಿ ನೀಡಿದ್ದ ಉತ್ತರದಲ್ಲಿನ ಈ ಭಾಗದ ವಿಡಿಯೋ ತುಣುಕು ಇದೀಗ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:

&&&&&&&&&&

ನೋಡಿ ಗೋಪೂಜೆಯ ಈ ಪರಿ..!

ದೀಪಾವಳಿಯ ಹೊತ್ತಿನಲ್ಲಿ ವಿಶ್ವಾದ್ಯಂತ ಗೋಪೂಜೆಯನ್ನು ಜನರು ಶ್ರದ್ಧಾ
ಭಕ್ತಿಯೊಂದಿಗೆ ಆಚರಿಸಿದ್ದಾರೆ.

ಆದರೆ ಇಲ್ಲೊಂದು ವಿಡಿಯೋ👇👇👇 ಇದೀಗ್‌ ವಾಟ್ಸಪ್‌ ಸಮೂಹಗಳಲ್ಲಿ ವೈರಲ್‌ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಖಾಕಿ ಉಡುಪಿನಲ್ಲಿರುವ ಪೊಲೀಸ್‌ ಕಾನ್‌ ಸ್ಟೇಬಲ್‌ ಒಬ್ಬರು ರಸ್ತೆಗಳಲ್ಲಿ ಇರುವ ಗೋವುಗಳ ಕೊರಳಿಗೆ ರಿಫ್ಲೆಕ್ಟರ್‌ ಹಾರಗಳನ್ನು ತೊಡಿಸಿ ಕೈ ಮುಗಿದು, ಆದರದಿಂದ ಅವುಗಳನ್ನು ಕಾಣುತ್ತಿದ್ದಾರೆ.

ರಾತ್ರಿ ಸಂಚರಿಸುವ ವಾಹನಗಳಿಗೆ ರಸ್ತೆ ಮಧ್ಯದಲ್ಲಿ ಗೋವು ಇರುವುದು ಗೊತ್ತಾಗಲಿ ಮತ್ತು ರಸ್ತೆ ಅಪಘಾತಗಳಿಂದ ಅವು ಪಾರಾಗಲಿ ಎಂಬ ಕಾರಣಕ್ಕಾಗಿ ರಸ್ತೆಯಲ್ಲಿ ಕಂಡು  ಬರುತ್ತಿದ್ದ ಗೋವುಗಳಿಗೆ ಈ ಹಾರ ತೊಡಿಸಿರುವಂತೆ ಕಾಣುತ್ತದೆ. ಈ ಪೊಲೀಸ್‌ ಕಾನ್‌ ಸ್ಟೇಬಲ್‌ ಈ ಕೆಲಸ ಮಾಡಿದ್ದೆಲ್ಲಿ ಎಂಬುದು ಗೊತ್ತಿಲ್ಲ. ಆದರೆ ಈ ಕೆಲಸ ಸರ್ವ ಪ್ರಶಂಸೆಗೆ ಪಾತ್ರವಾಗಿದೆ.


ವಾಟ್-ಸುದ್ದಿ = ವಾಟ್ಸಪ್‌ ಸುದ್ದಿ!

&&&&&&&&&&

ವಿಜಯದಶಮಿಯ ದಿನ ಹೆಣ್ಮಗು ಜನಿಸಿದಾಗ...!

ವಿಜಯ ದಶಮಿಯ ದಿನ ಹೆಣ್ಣು ಮಗುವೊಂದು ಜನಿಸಿತು. ಹೆರಿಗೆ ಮಾಡಿಸಿದ ವೈದ್ಯೆ ಆ ಮಗುವಿಗೆ ಮಾತೆ ಅಂಬೆಯ ವೇಷ ಧರಿಸಿ ಮಗುವಿನ ತಾಯಿ, ಕುಟುಂಬ ಸದಸ್ಯರಿಗೆ ಒಪ್ಪಿಸಿದರು. ಎಂತಹ ಅರ್ಥ ಪೂರ್ಣ ಸಂದರ್ಭವಿದು ನೋಡಿ. ಈವಿಡಿಯೋ 👇👇👇 ಇದೀಗ ವಾಟ್ಸಪ್ಪಿನಲ್ಲಿ ವೈರಲ್‌ ಆಗಿದೆ.

ವಾಟ್-ಸುದ್ದಿ = ವಾಟ್ಸಪ್‌ ಸುದ್ದಿ!


&&&&&&&&&&
ಬೆಂಗಳೂರು ಮುಂಗಾರು ಕಾಲದಲ್ಲಿ...

No comments:

Advertisement