My Blog List

Thursday, November 14, 2019

ಶಬರಿಮಲೈ ದೇಗುಲ ಮಹಿಳಾ ಪ್ರವೇಶ: ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ

ಶಬರಿಮಲೈ ದೇಗುಲ ಮಹಿಳಾ ಪ್ರವೇಶ:  ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ
ನವದೆಹಲಿ: ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ೨೦೧೮ರ ಸೆಪ್ಟೆಂಬರ್ ೨೮ರಂದು ನೀಡಲಾಗಿದ್ದ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಸುಮಾರು ೬೦ಕ್ಕೂ ಹೆಚ್ಚಿನ ಅರ್ಜಿಗಳ ವಿಚಾರಣೆಯನ್ನು  ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು 2019 ನವೆಂಬರ್ 14ರ ಗುರುವಾರ ವಿಸೃತ ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ  ವರ್ಗಾವಣೆ ಮಾಡಿತು.

ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ  ರೋಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್, .ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣವನ್ನು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತು.

ಸಪ್ತ ಸದಸ್ಯ ಪೀಠವು ಮಸೀದಿಗಳಿಗೆ ಮಹಿಳಾ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪದ್ಧತಿ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳನ್ನೂ ಪುನರ್ ಪರಿಶೀಲನೆ ಮಾಡಲಿದೆ.

ದೇವಾಲಯ ಪ್ರವೇಶಕ್ಕೆ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಇದು ಕೇವಲ ಹಿಂದೂ ಮಹಿಳೆಯರ ದೇವಾಲಯ ಪ್ರವೇಶ ವಿಚಾರವಷ್ಟೇ ಅಲ್ಲ. ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ಹೀಗಾಗಿ, ಬಗ್ಗೆ ವಿಸ್ತೃತವಾದ ಮತ್ತು ಚರ್ಚೆಯಾಗಬೇಕಾಗಿದೆ. ಆದ್ದರಂದ ಏಳು ನ್ಯಾಯಮೂರ್ತಿಗಳ ವಿಸ್ತೃತ ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿದೆಎಂದು ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿತು.

ವಿಸ್ತೃತ ವಿಚಾರಣೆಗೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಾರಿಮನ್ ವಿರೋಧ ವ್ಯಕ್ತಪಡಿಸಿದರು

ವಿಸ್ತೃತ ಪೀಠಕ್ಕೆ ಒಪ್ಪಿಸಲು ಪಂಚ ಸದಸ್ಯ ಪೀಠವು ಸರ್ವಾನುಮತಿಯ ಒಪ್ಪಿಗೆ ನೀಡಿದರೂ, ೨೦೧೮ರ ಸುಪ್ರೀಂಕೋರ್ಟ್ ನಿರ್ಣಯದ ಪುನರ್ ಪರಿಶೀಲನೆ ಕೋರಿದ ಅರ್ಜಿಗಳನ್ನು ಸಪ್ತ ಸದಸ್ಯ ಪೀಠಕ್ಕೆ ಒಪ್ಪಿಸುವ ಬಗ್ಗೆ ಪೀಠವು : ಬಹುಮತದ ಭಿನ್ನ ಅಭಿಪ್ರಾಯಗಳ ತೀರ್ಪು ನೀಡಿತು.

ಬಹುಮತದ ತೀರ್ಪಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಹಾಗೂ ಇಂದು ಮಲ್ಹೋತ್ರ ಅವರು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ತನ್ನ ನಿರ್ಣಯ ಪುನರ್ ವಿಮರ್ಶೆ ಕೋರಿದ ಮನವಿಗಳನ್ನು ಬಾಕಿ ಇರಿಸಲು ನಿರ್ಧರಿಸಿತು ಮತ್ತು ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರ್ಬಂಧವು ಶಬರಿಮಲೈಗೆ ಮಾತ್ರವೇ ಸೀಮಿತವಲ್ಲ, ಇತರ ಧರ್ಮಗಳಲ್ಲೂ ಇಂತಹ ಆಚರಣೆಗಳು ಇವೆ ಎಂದು ಹೇಳಿತು.

ಆದಾಗ್ಯೂ, ಬಹುಮತದ ತೀರ್ಪು ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ೨೮ರ ತೀರ್ಪಿಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ನೀಡಲಿಲ್ಲ ಮತ್ತು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ತನ್ನ ಹಿಂದಿನ ತೀರ್ಪಿಗೆ ತಡೆಯಾಜ್ಞೆಯನ್ನು ನೀಡಲಿಲ್ಲ.

ನವೆಂಬರ್ ೧೭ರಂದು ಪೂಜೆಗಾಗಿ ತೆರೆಯಲ್ಪಡುವ ದೇವಾಲಯದ ಒಳಕ್ಕೆ ಮಹಿಳೆಯರು ಪ್ರವೇಶಿಸಬಹುದೇ ಎಂಬ ಬಗ್ಗೆ ತೀರ್ಪು ಯಾವುದೇ ಸ್ಪಷ್ಟತೆಯನ್ನೂ ನೀಡಿಲ್ಲ.

ಶಬರಿಮಲೈಗೆ  ಸಂಬಂಧಿಸಿದಂತೆ ಸೆಪ್ಟೆಂಬರ್ ೨೦೧೮ರಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಅಥವಾ ಮಾರ್ಪಾಡು ಸೂಚಿಸದೆಯೇ, ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಂಘರ್ಷದ ವಿಚಾರ ಇರುವುದರಿಂದ ಇನ್ನಷ್ಟು ಚರ್ಚೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು  ಪೀಠವು ಪ್ರಕರಣವನ್ನು ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿರುವುದರಿಂದ, ವಿಸ್ತೃತ ನ್ಯಾಯಪೀಠದ ವಿಚಾರಣೆ ಮುಗಿದು, ತೀರ್ಪು ಹೊರಬೀಳುವವರೆಗೆ ಹಿಂದಿನ ತೀರ್ಪುಊರ್ಜಿತದಲ್ಲಿರುತ್ತದೆ, ಹೀಗಾಗಿ ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶ ಅಬಾಧಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಬಹುಮತದ ತೀರ್ಪಿನ ಕೆಲವು ಭಾಗಗಳನ್ನು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು, ’ಧರ್ಮ ಮತ್ತು ನಂಬಿಕೆಯ ಮೇಲಿನ ಚರ್ಚೆಯನ್ನು ಪುನರುಜ್ಜೀನಗೊಳಿಸಲು ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆಎಂದು ಹೇಳಿದರು. ಶಬರಿಮಲೈಯಂತಹ ಧಾರ್ಮಿಕ ಸ್ಥಳಗಳು, ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶ ಮತ್ತು ಮಹಿಳಾ ಜನನಾಂಗ ಛೇದನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಾಮಾನ್ಯ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂದು ಅವರು ನುಡಿದರು.

ನ್ಯಾಯಮೂರ್ತಿಗಳಾದ ಆರ್.ಎಫ್ ನಾರಿಮನ್ ಮತ್ತು ಡಿ.ವೈ. ಚಂದ್ರಚೂಡ್ ಅವರ ಅಲ್ಪಮತದ ತೀರ್ಪು ಪುನರ್ ಪರಿಶೀಲನೆ ಕೋರಿದ ಎಲ್ಲ ಮನವಿಗಳನ್ನೂ ವಜಾಗೊಳಿಸಿ ಸೆಪ್ಟೆಂಬರ್ ೨೮ರ ನಿರ್ಧಾರಕ್ಕೆ ಬದ್ಧವಾಗುವಂತೆ ನಿರ್ದೇಶನ ನೀಡಿತು.

ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾದ ೨೦೧೮ ಸೆಪ್ಟೆಂಬರ್ ೨೮ರ ಸುಪ್ರೀಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾದ ೫೬ ಮರುಪರಿಶೀಲನಾ ಅರ್ಜಿಗಳುನಾಲ್ಕು ಹೊಸ ರಿಟ್ ಅರ್ಜಿಗಳು ಮತ್ತು ವರ್ಗಾವಣೆ ಅರ್ಜಿಗಳು ಸೇರಿದಂತೆ ಒಟ್ಟು ೬೫ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಂವಿಧಾನ ಪೀಠದಿಂದ ಭಿನ್ನಮತದ ತೀರ್ಪು ಬಂದಿತು.

ಪಂಚ ಸದಸ್ಯ ಸಂವಿಧಾನ ಪೀಠವು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸಿ, ನಾಯರ್ ಸೇವಾ ಸಮಾಜ, ದೇಗುಲದ ತಂತ್ರಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಕಕ್ಷಿದಾರರ ಅಹವಾಲು ಆಲಿಸಿದ ಬಳಿಕ ಪಂಚ ಸದಸ್ಯ ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಶಬರಿಮಲೈ ದೇವಾಲಯದ ಆಡಳಿತವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯು ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಯ ಬಳಿಕ ತಿಪ್ಪರಲಾಗ ಹೊಡೆದು ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಬೆಂಬಲಿಸಿತ್ತು. ಚಾರಿತ್ರಿಕ ತೀರ್ಪಿನ ಮರುಪರಿಶೀಲನೆ ಕೋರಿದ ಅರ್ಜಿಗಳನ್ನು ವಿರೋಧಿಸುವಲ್ಲಿ ಕೇರಳ ಸರ್ಕಾರದ ಜೊತೆಗೆ ತಿರುವಾಂಕೂರು ದೇವಸ್ವಂ ಮಂಡಳಿ ಸೇರಿಕೊಂಡಿತ್ತು.

ಮಂಡಳಿಯು ಬಳಿಕ ತನ್ನ ಇತ್ತೀಚಿನ ನಿಲುವಿಗೆ ಯಾವುದೇ ರಾಜಕೀಯ ಒತ್ತಡ ಕಾರಣವಲ್ಲ ಎಂದು ದೃಢ ಪಡಿಸಿತ್ತು. ಕೆಲವು ಬಲಪಂಥಿಯ ಕಾರ್ಯಕರ್ತರು ರಾಜ್ಯದ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸರ್ಕಾರದ ಒತ್ತಡಕ್ಕೆ ಮಣಿದು ದೇವಸ್ವಂ ಮಂಡಳಿಯು ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ ಎಂದು ಆಪಾದಿಸಿದ್ದರು.

ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ದ್ವಂದ್ವ ನಿಲುಗಳನ್ನು ತೆಗೆದುಕೊಂಡ ಕೇರಳ ಸರ್ಕಾರವು ತೀರ್ಪನ್ನು ಬೆಂಬಲಿಸಿ, ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸುವಂತೆ ಕೋರಿತ್ತು.

ವರ್ಷದಿಂದ ೫೦ ವರ್ಷ ವಯಸ್ಸಿನವರೆಗಿನ ಮಹಿಳೆಯರು ಅಯ್ಯಪ್ಪದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು ೨೦೧೮ರ ಸೆಪ್ಟೆಂಬರ್ ೨೮ರಂದು ರದ್ದುಪಡಿಸಿ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, .ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ  ಅವರ ನ್ಯಾಯಪೀಠ : ಬಹುಮತದ ತೀರ್ಪು ನೀಡಿತ್ತು

ತನ್ಮೂಲಕ ಕೇರಳದ ಪ್ರತಿಷ್ಠಿತ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ೧೦ರಿಂದ ೫೦ ವರ್ಷಗಳ ನಡುವಣ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿತ್ತು. ಶತಮಾನಗಳಿಂದ ಅನುಸರಿಸುತ್ತಾ ಬರಲಾಗಿದ್ದ ಹಿಂದು ಧಾರ್ಮಿಕ ಪದ್ಧತಿಯು ಅಕ್ರಮ ಹಾಗೂ ಸಂವಿಧಾನಬಾಹಿರ ಎಂದು ಕೋರ್ಟ್ ಹೇಳಿತ್ತು.

ಇತಿಹಾಸ ನಿರ್ಮಿಸಿದ ಇಬ್ಬರು ಮಹಿಳೆಯರು: ಸುಪ್ರೀಂಕೋರ್ಟ್ತೀರ್ಪಿನ ಬಳಿಕ ವರ್ಷ (೨೦೧೯) ಜನವರಿ ೦೨ರಂದು ಬಿಂದು ಅಮ್ಮಿನಿ ಮತ್ತು ಆಕೆಯ ಸ್ನೇಹಿತೆ ಕನಕದುರ್ಗ ಶಬರಿಮಲೆಯ ತಳಶಿಬಿರದಿಂದ ಶಬರಿಮಲೈ ಮೆಟ್ಟಿಲುಗಳನ್ನು ಏರಿ ಇತಿಹಾಸ ನಿರ್ಮಿಸಿದ್ದರು.

No comments:

Advertisement