Tuesday, December 24, 2019

ಜಾರ್ಖಂಡ್: ಜೆಎಂಎಂ-ಕಾಂಗ್ರೆಸ್- ಆರ್‌ಜೆಡಿ ಮೈತ್ರಿಕೂಟಕ್ಕೆ ಬಹುಮತ

ಜಾರ್ಖಂಡ್: ಜೆಎಂಎಂ-ಕಾಂಗ್ರೆಸ್- ಆರ್ಜೆಡಿ ಮೈತ್ರಿಕೂಟಕ್ಕೆ ಬಹುಮತ
ಬಿಜೆಪಿಗೆ ಮುಖಭಂಗ, ಸಿಎಂ ಸ್ಥಾನಕ್ಕೆ ಹೇಮಂತ ಸೊರೇನ್ ಸಜ್ಜು
ರಾಂಚಿ: ಬಹುಹಂತಗಳಲ್ಲಿ ನಡೆದ ನಿರ್ಣಾಯಕ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) 2019 ಡಿಸೆಂಬರ್ 23ರ ಸೋಮವಾರ ಪರಾಭವಗೊಂಡಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲು ಹೇಮಂತ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್- ಆರ್ಜೆಡಿ ಮೈತ್ರಿಕೂಟವು ಸಜ್ಜಾಯಿತು.

೮೧ ಸದಸ್ಯ ಬಲದ ವಿಧಾನಸಭೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 30 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದು, ಕಾಂಗ್ರೆಸ್  (16) ಮತ್ತು ಆರ್ಜೆಡಿ ಜೊತೆಗಿನ ಅದರ ಮೈತ್ರಿಕೂಟವು ಒಟ್ಟು ೪೭ ಸ್ಥಾನಗಳಲ್ಲಿ ವಿಜಯ/ಮುನ್ನಡೆ ಸಾಧಿಸುವುದರೊಂದಿಗೆ ಬಹುಮತಕ್ಕೆ ಬೇಕಾದ ೪೧ ಮ್ಯಾಜಿಕ್ ಸಂಖ್ಯೆಯನ್ನು ನಿರಾಯಾಸವಾಗಿ ದಾಟಿತು.
2014ರ
ಚುನಾವಣೆಯಲ್ಲಿ ೩೭ ಸ್ಥಾನಗಳನ್ನು ಗೆದ್ದು ಮಿತ್ರ ಪಕ್ಷದ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿದ್ದ ಬಿಜೆಪಿ, ಬಾರಿ ೨೫ ಸ್ಥಾನಗಳಲ್ಲಿ ಮಾತ್ರ ಗೆಲುವು/ ಮುನ್ನಡೆ ದಾಖಲಿಸಿದೆ. ಮುಖ್ಯಮಂತ್ರಿ ರಘುಬರದಾಸ್ ಸೋಲೊಪ್ಪಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು.

ಜಾರ್ಖಂಡ್ ಮುಕ್ತಿ ಮೋರ್ಚಾದ ಯುವ ನಾಯಕ ಹೇಮಂತ ಸೊರೇನ್ ಅವರು ಬರ್ಹೇಟ್ ಮತ್ತು ಡುಮ್ಕಾ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದಾರೆ. ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸುತ್ತಿದ್ದಂತೆಯೇ ತಮ್ಮ ಪ್ರಥಮ ಪ್ರತಿಕ್ರಿಯೆ ನೀಡಿದ ಹೇಮಂತ್ ಸೊರೇನ್ಜಾರ್ಖಂಡ್ ಜನತೆಗೆ ಧನ್ಯವಾದಅರ್ಪಿಸಿದರು. ’ಜಾಖಂಡ್ ಜನತೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಮತ್ತು ನಾನು ಅವರಿಗೆ ಕೃತಜ್ಞನಾಗಿದ್ದೇನೆಎಂದು ಅವರು ನುಡಿದರು.

ಅವರು
ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಮತ್ತು ಮೈತ್ರಿ ಪಾಲುದಾರ ನಾಯಕರಾದ ಲಾಲು ಪ್ರಸಾದ್ ಯಾದವ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೂ ಕೃತಜ್ಞತೆ ಸಲ್ಲಿಸಿದರು.

ಚುನಾವಣಾ ಸೋಲನ್ನು ಒಪ್ಪಿಕೊಂಡ ರಘುಬರದಾಸ್ ಅವರುಇದು ಬಿಜೆಪಿಯ ಪರಾಭವ ಅಲ್ಲ, ಇದು ನನ್ನ ಪರಾಭವಎಂದು ಹೇಳಿದರು. ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ಸೋಲು ಒಪ್ಪಿಕೊಳ್ಳುವ ವೇಳೆಯಲ್ಲಿ ತಮ್ಮ ಸ್ವಂತ ಜೆಮ್ಶೆಡ್ಪುರ (ಪೂರ್ವ) ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸರಯೂ ರಾಯ್ ಅವರಿಂದ ೧೦,೦೦೦ ಮತಗಳಷ್ಟು ಹಿಂದಿದ್ದರು. ಮತಗಳ ಎಣಿಕೆ ಪೂರ್ಣಗೊಂಡಾಗ ಭಾರೀ ಅಂತರದಲ್ಲಿ ಅವರು ಪರಾಜಿತರಾದರು. ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಬಳಿಗೆ ಹೋಗುವೆಎಂದು ರಘುಬರದಾಸ್  ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಪ್ರಧಾನಿಮೋದಿ, ಶಾ ಅಭಿನಂದನೆ: ಇದೇ ವೇಳೆಗೆ ಜಾರ್ಖಂಡ್ ಚುನಾವಣೆಯಲ್ಲಿ ಪಕ್ಷದ ಸೋಲನ್ನು ಒಪ್ಪಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರುಬಿಜೆಪಿಯು ಜಾರ್ಖಂಡ್ ಜನರ ಆದೇಶವನ್ನು ಗೌರವಿಸುತ್ತದೆಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರೂ ಟ್ವೀಟ್ ಮೂಲಕ ಜಾರ್ಖಂಡ್ ವಿಜಯಕ್ಕಾಗಿ ಹೇಮಂತ್ ಸೊರೇನ್ ಅವರನ್ನು ಅಭಿನಂದಿಸಿ, ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ ಶುಭ ಹಾರೈಸಿದರು.

ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಜಾರ್ಖಂಡ್ ಜನತೆಗೆ ಪ್ರತ್ಯೇಕ ಟ್ವೀಟ್ಗಳ ಮೂಲಕ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ ಮತ್ತು  ಅಮಿತ್ ಶಾ ಅವರು ಜಾರ್ಖಂಡ್ ಅಭಿವೃದ್ಧಿಗಾಗಿ ಮುಂದೆಯೂ ಪಕ್ಷ ಶ್ರಮಿಸುವುದು ಎಂದು ತಿಳಿಸಿದರು.

ಎರಡೂ ಕಡೆ ಗೆಲುವು: ಹೇಮಂತ್ ಸೊರೇನ್ ಅವರು ಬರ್ಹೇಟ್ ಕ್ಷೇತ್ರದಲ್ಲಿ ಬಿಜೆಪಿಯ ಸೈಮನ್ ಮಾಲ್ಟೋ ಮತ್ತು ಡುಮ್ಕಾ ಕ್ಷೇತ್ರದಲ್ಲಿ ಬಿಜೆಪಿಯ ಲೂಯಿಸ್ ಮರಾಂಡಿ ಅವರನ್ನು ಪರಾಭವಗೊಳಿಸಿದರು.
ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ನಾನು ಪ್ರತಿಯೊಬ್ಬರಿಗೂ ಅವರ ಆಶಯಗಳನ್ನು ಜಾತಿ, ಮತ, ಧಮ ಮತ್ತು ವೃತ್ತಿ ಭೇದವಿಲ್ಲದೆ ಈಡೇರಿಸಲಾಗುವುದು, ಅವರ ಆಶಯಗಳು ಭಗ್ನವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಬಯಸುತ್ತೇನೆಎಂದು  ಹೇಮಂತ್ ನುಡಿದರು.

‘ಮುಂದಿನ ಕ್ರಮದ ಬಗ್ಗೆ ನಾವು ಮೈತ್ರಿ ಪಾಲುದಾರರ ಜೊತೆಗೆ ಕುಳಿತು ಚರ್ಚಿಸುತ್ತೇವೆ. ನಾಳೆಯ ವೇಳೆಗೆ ಎಲ್ಲವೂ ಸ್ಪಷ್ಟವಾಗಬಹುದುಎಂದು ಸೊರೇನ್ ಹೇಳಿದರು.

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಸ್ವಾಗತಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರುಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶವು ಸ್ಪಷ್ಟವಾಗಿ ಜನರು ಬಿಜೆಪಿಯೇತರ ಪಕ್ಷಗಳ ಜೊತೆಗೆ ಇದ್ದಾರೆ ಎಂಬುದನ್ನು ತೋರಿಸಿಕೊಟ್ಟಿದೆ. ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಹಾರಾಷ್ಟ್ರದ ಬಳಿಕ, ಜನರು ಜಾರ್ಖಂಡ್ನಲ್ಲಿ ಕೂಡಾ ಬಿಜೆಪಿಯನ್ನ ಅಧಿಕಾರದಿಂದ ಹೊರಗೆ ಇಡಲು ನಿರ್ಧರಿಸಿದ್ದಾರೆಎಂದು ಹೇಳಿದರು.

೨೦೧೪ರ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟಗಳು ಪ್ರತ್ಯೇಕವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಮೂರೂ ಪಕ್ಷಗಳು ೨೦೧೩ರಿಂದ ೨೦೧೪ರಲ್ಲಿ ಚುನಾವಣೆ ನಡೆಯುವುದಕ್ಕೆ ಮುನ್ನ ಜೆಎಂಎಂ ನಾಯಕ ಹೇಮಂತ್ ಸೊರೇನ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿದ್ದವು. ಆದರೆ ಸ್ಥಾನ ಹೊಂದಾಣಿಕೆ ಸಾಧ್ಯವಾಗದೆ ಅವರು ೨೦೧೪ರ ಚುನಾವಣೆಯಲ್ಲಿ ಪ್ರತ್ಯೇಕ ಹಾದಿ ಹಿಡಿದಿದ್ದವು. ಜೆಎಂಎಂ ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿದಿತ್ತು.

ಇನ್ನೊಂದೆಡೆಯಲ್ಲಿ ಬಿಜೆಪಿ ೨೦೦೦ದಲ್ಲಿ ಜಾರ್ಖಂಡ್ ಸೃಷ್ಟಿಯಾದ ಬಳಿಕ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಯಾವಾಗಲೂ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ ಯು) ಜೊತೆಗೆ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸೆಣಸುತ್ತಿದ್ದರೂ, ಬಾರಿ (೨೦೧೯) ಬಿಜೆಪಿ ಮತ್ತು ಎಜೆಎಸ್ಯು ಸ್ಥಾನಹೊಂದಾಣಿಕೆಗೆ ಸಂಬಂಧಿಸಿದಂತೆ ತಮ್ಮ ಭಿನ್ನಮತ ಬಗೆಹರಿಸಿಕೊಳ್ಳಲು ವಿಫಲವಾಗಿದ್ದವು.

ಬಿಹಾರದಲ್ಲಿ ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿ(ಯು) ಮತ್ತು ಎಲ್ಜೆಪಿ ಕೂಡಾ ಜಾರ್ಖಂಡ್ನಲ್ಲಿ ಸ್ವಂತ ನೆಲೆಯಲ್ಲಿ ಸ್ಪರ್ಧಿಸಿದ್ದವು. ಆದರೆ ಅವುಗಳ ಅಭ್ಯರ್ಥಿಗಳು ಎಲ್ಲೂ ತಮ್ಮ ಮುನ್ನಡೆ ದಾಖಲಿಸಲಿಲ್ಲ. ಬಿಜೆಪಿಯು ೭೯ ಸ್ಥಾನಗಳಿಗೆ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿತ್ತು. ಎಜೆಎಸ್ ಯು ಪಕ್ಷಾಧ್ಯಕ್ಷ ಸುದೇಶ್ ಮಹತೊ ಸ್ಪರ್ಧಿಸಿದ್ದ ಕ್ಷೇತ್ರದಲ್ಲೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.

ಚುನಾವಣಾ ಹೊಂದಾಣಿಕೆಯ ಪ್ರಕಾರ ಜೆಎಂಎಂ ೪೩ ಸ್ಥಾನಗಳ ಸಿಂಹಪಾಲು ಪಡೆದಿತ್ತು. ಕಾಂಗ್ರೆಸ್ ೩೧ ಕ್ಷೇತ್ರಗಳಲ್ಲಿಯೂ, ಲಾಲು ಪ್ರಸಾದ್ ಯಾದವ್ ಅವರ ಆರ್ಜೆಡಿ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ) ಎಲ್ಲ ೮೧ ಸ್ಥಾನಗಳಿಗೂ ಸ್ಪರ್ಧಿಸಿತ್ತು.

ಪೌರತ್ವ
ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ ಅನುಷ್ಠಾನದ ಹಿನ್ನೆಲೆಯಲ್ಲಿ ಜಾರ್ಖಂಡ್ ಚುನಾವಣೆ ಅತ್ಯಂತ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಇದಕ್ಕೆ ಮುನ್ನ ಬಿಜೆಪಿಯು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಪರಾಭವ ಹೊಂದಿತ್ತು. ವರ್ಷ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯ ಗಳಿಸಿದ ಬಳಿಕ, ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ಮೈತ್ರಿಯೊಂದಿಗೆ ಬಹುಮತ ಪಡೆದಿದ್ದರೂ, ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಸೇನೆ ಜೊತೆಗೆ ಹೊಂದಾಣಿಕೆ ಸಾಧ್ಯವಾಗದೆ, ಮಹಾರಾಷ್ಟ್ರವೂ ಬಿಜೆಪಿಯ ಕೈ ತಪ್ಪಿತ್ತು.

ಜಾಖಂಡ್
ನಲ್ಲಿ ೮೧ ಸ್ಥಾನಗಳಿಗೆ ನವೆಂಬರ್ ೩೦ರಿಂದ ಡಿಸೆಂಬರ್ ೨೦ರವರೆಗೆ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯದ ೧೪ ಸ್ಥಾನಗಳ ಪೈಕಿ ೧೧ ಸ್ಥಾನಗಳನ್ನು ಗೆದ್ದಿತ್ತು.

ಅಪ್ಪನ
ಆಶೀರ್ವಾದ ಪಡೆದ ಹೇಮಂತ್: ಚುನಾವಣೆಯಲ್ಲಿ ತಮ್ಮ ಪಕ್ಷವು ಮುನ್ನಡೆ ಸಾಧಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ತಮ್ಮ ತಂದೆ ಶಿಬು ಸೊರೇನ್ ಅವರ ಬಳಿಗೆ ತೆರಳಿ ಆಶೀರ್ವಾದ ಕೋರಿದರು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಶಿಬು ಸೊರೇನ್ ಅವರು ಜಾರ್ಖಂಡ್ ರಾಜ್ಯ ರಚನೆ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿರೋಧ ಪಕ್ಷಗಳು ಸಂಭ್ರಮಿಸಲಾರಂಭಿಸಿದ್ದರೆ, ಮುಖ್ಯಮಂತ್ರಿ ರಘುಬರದಾಸ್ ಅವರುಸಂಭ್ರಮಿಸುವವರು ತಮಗೆ ಏನು ಅನ್ನಿಸುತ್ತದೆಯೋ ಅದನ್ನು ಮಾಡಬಹುದು. ಸಂಭ್ರಮಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲಎಂದು ಹೇಳಿದ್ದರು. ಆದರೆ ಬಿಜೆಪಿ ರಾಷ್ಟ್ರೀಯ ವಕ್ತಾರ ವಿಜಯ್ ಸೊಂಕರ್ ಶಾಸ್ತ್ರಿ ಅವರು ಜಾರ್ಖಂಡ್ ಫಲಿತಾಂಶ ಬಿಜೆಪಿಯ ನಿರೀಕ್ಷೆಯಂತೆ ಬರುತ್ತಿಲ್ಲ, ಬಿಜೆಪಿ ೬೫ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿತ್ತು ಎಂದು ಹೇಳಿದರು. ತಮ್ಮ ಪಕ್ಷವು ತನ್ನ ಅಭಿವೃದ್ಧಿ ಕಾರ್ಯಸೂಚಿ ಬಗ್ಗೆ ಜನರನ್ನು ಸಮಾಧಾನಪಡಿಸುವಲ್ಲಿ ವಿಫಲಗೊಂಡಂತೆ ಕಾಣುತ್ತಿದೆ ಎಂದು ಅವರು ನುಡಿದರು.

೨೦೧೪ರ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೩೭ ಸ್ಥಾನಗಳನ್ನು ಗೆದ್ದರೆ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ ಯು) ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಬಲ ಆರು ಸ್ಥಾನಗಳಿಗೆ ಕುಸಿದಿತ್ತು.

ಜಾಖಂಡ್ ವಿಧಾನಸಭೆ ಅಂತಿಮ ಬಲಾಬಲ (ಒಟ್ಟು ಸ್ಥಾನ ೮೧)

ಪಕ್ಷ/ ಮೈತ್ರಿಕೂಟ                  ೨೦೧೯                    ೨೦೧೪
ಬಿಜೆಪಿ                                  ೨೫                      ೩೭
ಜೆಎಂಎಂ+                           ೪೭                      ೨೫
 ಜೆವಿಎಂ(ಪಿ)                                                       
 ಇತರರು                                                           ೧೧ 

No comments:

Advertisement