My Blog List

Tuesday, December 24, 2019

ಉತ್ತರಪ್ರದೇಶ: ’ಪೌರತ್ವ’ ದಂಗೆ ಆರೋಪಿಗಳ 67 ಅಂಗಡಿಗಳಿಗೆ ಬೀಗಮುದ್ರೆ

ಉತ್ತರಪ್ರದೇಶ: ’ಪೌರತ್ವದಂಗೆ ಆರೋಪಿಗಳ 67 ಅಂಗಡಿಗಳಿಗೆ ಬೀಗಮುದ್ರೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ಅನುಷ್ಠಾನ
ಮುಜಾಫ್ಫರನಗರ: ನೂತನ ಪೌರತ್ವ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ ಹಿಂಸೆಯಲ್ಲಿ ತೊಡಗಿದವರಿಂದ ಆಸ್ತಿಪಾಸ್ತಿ ನಷ್ಟವನ್ನು ವಸೂಲು ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ್ದ ಭರವಸೆ ಕಾರ್ಯಗತಗೊಂಡಿದ್ದು, ರಾಜ್ಯ ಸರ್ಕಾರವು ಹಿಂಸಾತ್ಮಕ ಚಳವಳಿಯಲ್ಲಿ ಶಾಮೀಲಾದವರನ್ನು ಗುರುತಿಸಲು ಆರಂಭಿಸುತ್ತಿದ್ದಂತೆಯೇ ಮುಜಾಫ್ಫರನಗರದಲ್ಲಿ ೬೭ಕ್ಕೂ ಹೆಚ್ಚು ಅಂಗಡಿಗಳಿಗೆ  2019 ಡಿಸೆಂಬರ್ 23ರ ಸೋಮವಾರ ಬೀಗಮುದ್ರೆ ಜಡಿಯಲಾಯಿತು.

ಬೀಗಮುದ್ರೆ ಹಾಕಲಾಗಿರುವ ಅಂಗಡಿಗಳು ಹಿಂಸಾತ್ಮಕ ಪ್ರತಿಭಟನಕಾರರಿಗೆ ಸೇರಿದವುಗಳು ಎಂದು ಹೇಳಲಾಗಿದ್ದು, ತನಿಖೆಯ ವೇಳೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಶಾಮೀಲಾದದ್ದು ದೃಢಪಟ್ಟರೆ ಅವರ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸರ್ಕಾರೀ ವಕ್ತಾರರು ತಿಳಿಸಿದರು.

‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ ಮತ್ತು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಗಿದೆ. ನಾವು ವಿಚಾರದಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುತ್ತೇವೆ. ಸಾರ್ವಜನಿಕ ಸೊತ್ತುಗಳ ಹಾನಿಯಲ್ಲಿ ತೊಡಗಿದವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕುವ ಮೂಲಕ ನಷ್ಟವನ್ನು ತುಂಬಿಸಿಕೊಳ್ಳಲಾಗುವುದುಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಕಾರ್ಯಾಚರಣೆ ಕೈಗೊಂಡಿತು.
ಹಿಂಸಾತ್ಮಕ ಘಟನಾವಳಿಗಳ ಸಿಸಿಟಿವಿ ಮತ್ತು ವಿಡಿಯೋ ದಾಖಲೆಗಳನ್ನು ಆಧರಿಸಿ ಬಹುತೇಕ ತಪ್ಪಿತಸ್ಥರನ್ನು ಗುರುತಿಸಲಾಗಿದೆ ಎಂದು ಅವರು ನುಡಿದರು.

ಮುಜಾಫ್ಫರನಗರದಲ್ಲಿ ಅಂಗಡಿಗಳ ಮಾಲೀಕರನ್ನು ಆಡಳಿತವು ತಪ್ಪಿತಸ್ಥರು ಎಂಬುದಾಗಿ ಗುರುತಿಸಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ’ ಅಂಗಡಿಗಳ ಹೊರಭಾಗಗಳಲ್ಲಿ ಗುಂಪುಗಳಿದ್ದವು. ಹಿಂಸೆಗೆ ಕಾರಣರಾದವರು ಯಾರು ಎಂಬುದಾಗಿ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆಎಂದು ಮಜಾಫ್ಫರನಗರದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ಎಸ್ಪಿ) ಹೇಳಿದರು.

ರಾಜ್ಯದ ೧೨ ಇತರ ಜಿಲ್ಲೆಗಳ ಜೊತೆಗೆ ಮುಜಾಫ್ಫರನಗರದಲ್ಲಿ ಕೂಡಾ ಶುಕ್ರವಾರ ಹಿಂಸಾಕೃತ್ಯಗಳು ಸಂಭವಿಸಿದ್ದವು. ಸುಮಾರು ೧೦ ಮೋಟಾರು ಬೈಕುಗಳು ಮತ್ತು ಹಲವಾರು ಕಾರುಗಳಿಗೆ ಕಿಚ್ಚಿಡಲಾಗಿತ್ತು. ಅನೇಕ ಸರ್ಕಾರಿ ಆಸ್ತಿಪಾಸ್ತಿಗಳೂ ಧ್ವಂಸಗೊಂಡಿದ್ದವು. ೧೨ ಮಂದಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ೩೦ ಮಂದಿ ಗಾಯಗೊಂಡಿದ್ದರು.

ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಪ್ರತಿಬಂಧಕಾಜ್ಞೆಗಳು ಜಾರಿಯಲ್ಲಿದ್ದು, ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ. ಈವರೆಗೆ ೮೭೯ ಮಂದಿಯನ್ನು ಬಂಧಿಸಲಾಗಿದ್ದು ಪೊಲೀಸರು ೧೩೧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಲಕ್ನೋ ಮತ್ತು ಸಂಭಲ್ನಲ್ಲಿ ಆಸ್ತಿ ಬೀಗಮುದ್ರೆ ಪ್ರಕ್ರಿಯೆ ಇನ್ನೂ ಆರಂಭವಾಗಬೇಕಾಗಿದ್ದು ಜಿಲ್ಲಾ ಮ್ಯಾಜಿಸ್ಟ್ರೇಟರ ಮೂಲಕ ೩೦ ದಿನಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕು ಸದಸ್ಯರ ಸಮಿತಿಯೊಂದರನ್ನು ರಚಿಸಲಾಗಿದೆ.

ದೆಹಲಿಯಲ್ಲಿ ೪೬ ವಿದ್ಯಾರ್ಥಿಗಳ ಬಂಧನ: ಮಧ್ಯೆ, ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಕಾಲದಲ್ಲಿ ನಡೆಸಲಾದ ಪೊಲೀಸ್ ಕಾರ್ಯಾಚರಣೆಯನ್ನು ಪ್ರತಿಭಟಿಸಿ ನವದೆಹಲಿಯ ಉತ್ತರಪ್ರದೇಶ ಭವನದ ಎದುರು ಸೋಮವಾರ ಪ್ರತಿಭಟನಾ ಪ್ರದರ್ಶನ ನಡೆಸಿದ ಸುಮಾರು ೪೬ ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನಕಾರರು ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಬಂಧಿತರಲ್ಲಿ ೨೭ ಮಂದಿ ಮಹಿಳೆಯರು ಸೇರಿದ್ದಾರೆ.

ಸ್ಥಳಕ್ಕೆ ತಲುಪುತ್ತಿದ್ದಂತೆಯೇ ವಿದ್ಯಾರ್ಥಿಗಳನ್ನು ಬಂಧಿಸಿ ಮಂದಿರಮಾರ್ಗ್ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಹೇಳಲಾಯಿತು.

ಮೊದಲಿಗೆ ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಮಾಜಿ ಜೆಎನ್ಯು ವಿದ್ಯಾರ್ಥಿಗಳ ಯೂನಿಯನ್ ಅಧ್ಯಕ್ಷ ಎನ್. ಸಾಯಿ ಬಾಲಾಜಿ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ (ಎಐಎಸ್ ) ದೆಹಲಿ ಘಟಕದ ಅಧ್ಯಕ್ಷೆ ಕವಲ್ ಪ್ರೀತ್ ಕೌರ್ ಅವರನ್ನು ಬಂಧಿಸಲಾಯಿತು.

ಉತ್ತರ ಪ್ರದೇಶ ಭವನಕ್ಕೆ ಇನ್ನೂ ಕೆಲವು ಮೀಟರುಗಳಷ್ಟು ದೂರದಲ್ಲಿ ಇರುವಾಗಲೇ ತಮ್ಮನ್ನು ಬಂಧಿಸಲಾಯಿತು ಎಂದು ಎಐಎಸ್ ಸುಚೇತಾ ಡೇ ಹೇಳಿದರು. ಬಂಧನ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಕೌರ್ ಪ್ರತಿಪಾದಿಸಿದರು.

ಹಿರಿಯ ಎಐಎಸ್ ಸದಸ್ಯರ ಬಂಧನದ ಬಳಿಕ ಸ್ಥಳಕ್ಕೆ ತಲುಪಿದ ಕೆಲವು ವಿದ್ಯಾರ್ಥಿಗಳನ್ನೂ ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ವ್ಯಾನಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಪ್ರತಿಭಟನಕಾರರುದಿಲ್ಲಿ ಪೊಲೀಸ್ ಮುರ್ದಾಬಾದ್ಘೋಷಣೆಗಳನ್ನು ಕೂಗಿದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಪುರುಷ ವಿದ್ಯಾರ್ಥಿಗಳನ್ನು ಮಂದಿರ ಮಾರ್ಗ್ ಪೊಲೀಸ್ ಠಾಣೆಗೆ ಒಯ್ಯಲಾಯಿತು ಮತ್ತು ಮಹಿಳಾ ವಿದ್ಯಾಥಿಗಳನ್ನು ಅವರ ವಿಶ್ವ ವಿದ್ಯಾಲಯಗಳ ಬಳಿ ಬಿಟ್ಟು ಬಿಡಲಾಯಿತು.

ನವದೆಹಲಿ ಪೊಲೀಸ್ ಜಿಲ್ಲೆಯಲ್ಲಿ ಸೆಕ್ಷನ್ ೧೪೪ ಜಾರಿಯಲ್ಲಿದ್ದು, ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದು ಸ್ಥಳದಲ್ಲಿ ಸೇರುವಂತಿಲ್ಲ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ನುಡಿದರು.

ತಾನು ಪ್ರತಿಭಟನಕಾರರ ಜೊತೆ ಇಲ್ಲದೇ ಇದ್ದರೂ ತನ್ನನ್ನು ಪೊಲೀಸರು ಬಂಧಿಸಿದರು ಎಂದು ಪಲ್ಲವಿ ರೆಬ್ಬಪ್ರಗಾಡ ಎಂಬ ಮಹಿಳೆ ಆಪಾದಿಸಿದರು.

ನನ್ನನ್ನು ಪೊಲೀಸರು ಬಂಧಿಸಿದರು. ಅವರು ನನ್ನನ್ನು ಬಸ್ಸಿಗೆ ದಬ್ಬಿದರು ಮತ್ತು ನನ್ನನ್ನು ಮಂದಿರಮಾರ್ಗ್ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಇಟ್ಟರು. ನನಗೂ ಪ್ರತಿಭಟನೆಗೂ ಯಾವುದೇ ಸಂಬಂಧವೂ ಇರಲಿಲ್ಲ. ಕಚೇರಿ ಕೆಲಸದ ಮೇಲೆ ಅಲ್ಲಿಗೆ ಹೋಗಿದ್ದೆ. ಆಘಾತಕ್ಕೆ ಒಳಗಾದೆಎಂದು ಆಕೆ ಟ್ವೀಟ್ ಮಾಡಿದರು.

No comments:

Advertisement