My Blog List

Thursday, January 2, 2020

೨೦೨೦: ಚಂದ್ರಯಾನ- ೩, ಗಗನಯಾನ ವರ್ಷ: ಇಸ್ರೋ ಮುಖ್ಯಸ್ಥ ಕೆ ಶಿವನ್ ಘೋಷಣೆ

೨೦೨೦: ಚಂದ್ರಯಾನ- , ಗಗನಯಾನ ವರ್ಷ: ಇಸ್ರೋ ಮುಖ್ಯಸ್ಥ ಕೆ ಶಿವನ್ ಘೋಷಣೆ
ಬಾಹ್ಯಾಕಾಶ ಯಾನ ತರಬೇತಿಗೆ ವಾಯುಪಡೆ ಸಿಬ್ಬಂದಿ ಆಯ್ಕೆ
ಬೆಂಗಳೂರು:  ೨೦೨೦ನೇ ಇಸವಿಯು ಭಾರತದ ಗಗನಯಾನ ಮತ್ತು ಚಂದ್ರಯಾನ-೩ರ ವರ್ಷ ಎಂಬುದಾಗಿ 2020 ಜನವರಿ 01ರ ಬುಧವಾರ ಇಲ್ಲಿ ಘೋಷಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಅವರು ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಯ ತರಬೇತಿ ಪಡೆಯಲು ಭಾರತೀಯ ವಾಯುಪಡೆಯ ನಾಲ್ವರು ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

ಇಸ್ರೋ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವನ್ ಅವರು ನಾಲ್ವರು ಗಗನಯಾನಿಗಳು ಜನವರಿ ೩ನೇ ವಾರದಿಂದ ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಹೇಳಿದರು. ಆದರೆ ಅವರ ಹೆಸರುಗಳನ್ನು ಇಸ್ರೋ ಅಧ್ಯಕ್ಷರು ಬಹಿರಂಗ ಪಡಿಸಲಿಲ್ಲ.

ಗಗನಯಾನಕ್ಕೆ ಮುನ್ನ ಪ್ರೊಪಲ್ಷನ್ ಮಾಡ್ಯೂಲ್ಗಳ ಮಾನವ ರೇಟಿಂಗ್ ಮತ್ತು ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಪರೀಕ್ಷಿಸಲಾಗುವುದುಎಂದು ಶಿವನ್ ಹೇಳಿದರು.

ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೇ ಚಂದ್ರಯಾನ- ಸಾಗಲಿದೆ. ಇದಕ್ಕಾಗಿ ಅಂದಾಜು ೬೦೦ ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಶಿವನ್ ಅಧಿಕೃತವಾಗಿ ಪ್ರಕಟಿಸಿದರು.

ಚಂದ್ರಯಾನ
- ಯೋಜನೆಯಲ್ಲಿ ಲ್ಯಾಂಡರ್ ಮತ್ತು ರೋವರ್ನ್ನು ಮಾತ್ರ ಹೊಸದಾಗಿ ಬಳಸಲಾಗುವುದು. ಚಾಂದ್ರಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ - ಆರ್ಬಿಟರ್ ನ್ನೇ ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಲಭಿಸಿದ್ದು, ಸಿದ್ಧತೆ ಆರಂಭಿಸಲಾಗಿದೆ ಎಂದು ಶಿವನ್ ಹೇಳಿದರು.

ಚಂದ್ರಯಾನ - ಚಂದ್ರನ ಅಂಗಳದಲ್ಲಿ ಇಳಿಯುವ ಭಾರತದ ಚೊಚ್ಚಲ ಯತ್ನವಾಗಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರನ್ನು ಇಳಿಸಲು ಇಸ್ರೋ ಯೋಜಿಸಿತ್ತು.

ಆದರೆ ಕೊನೆ ಗಳಿಗೆಯಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಅಪ್ಪಳಿಸಿತ್ತು. ಇಡೀ ದೇಶವೇ ಯೋಜನೆಯ ಯಶಸ್ವಿಯಾಗುತ್ತಿದೆ ಎಂಬ ಸಂಭ್ರಮದಲ್ಲಿ ಇದ್ದಾಗ, ಸಂಭವಿಸಿದ ದುರಂತದಿಂದ ಬಾಹ್ಯಾಕಾಶ ಸಂಸ್ಥೆಗೆ ದಿಗ್ಭ್ರಮೆಯಾಗಿತ್ತು. ಆದರೆ ಯೋಜನೆಯಲ್ಲಿ ಒಯ್ಯಲಾಗಿದ್ದ ಚಂದ್ರಯಾನ ಆರ್ಬಿಟರ್ ಇನ್ನೂ ಕಕ್ಷೆಯಲ್ಲಿ ಯಶಸ್ವಿಯಾಗಿ ಸುತ್ತುತ್ತಾ ಕಾರ್ ನಿರ್ವಹಿಸುತ್ತಿದೆ ಎಂಬುದು ವಿಜ್ಞಾನಿಗಳಿಗೆ ಸಾಂತ್ವನ ನೀಡಿದ ಅಂಶವಾಗಿತ್ತು.

ಚಂದ್ರನ ನೆಲದಲ್ಲಿ ಇಳಿಯಲಾಗದೇ ಇದ್ದರೂ, ಚಂದ್ರಯಾನ-೨ರಲ್ಲಿ ನಾವು ಉತ್ತಮ ಪ್ರಗತಿ ಸಾಧಿಸಿದ್ದೇವೆ. ಚಾಂದ್ರ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಇನ್ನೂ ವರ್ಷಗಳ ಕಾಲ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆಎಂದು ಶಿವನ್ ನುಡಿದರು.

ಎರಡನೇ ಬಾಹ್ಯಾಕಾಶ ಬಂದರು ಸ್ಥಾಪನೆಗೆ ಇಸ್ರೋ ಕಾರ್ಯಮಗ್ನವಾಗಿದ್ದು, ಅದಕ್ಕಾಗಿ ತಮಿಳುನಾಡಿನ ತೂತುಕುಡಿಯಲ್ಲಿ ೨೫೦೦ ಎಕರೆ ಜಾಗವನ್ನು ಗುರುತಿಸಿದೆ ಎಂದೂ ಇಸ್ರೋ ಹೇಳಿತು.

೨೦೧೯ ಇಸ್ರೋ ಪಾಲಿಗೆ ಮಹತ್ವದ ವರ್ಷವಾಗಿದ್ದು, ಅದು ಬಾಹ್ಯಾಕಾಶಕ್ಕೆ ಒಯ್ದ ವಿದೇಶೀ ಉಪಗ್ರಹಗಳ ಸಂಖ್ಯೆ ೩೧೯ಕ್ಕೆ ಏರಿದೆ. ಚಂದ್ರನ ಅಂಗಳದಲ್ಲಿ ಇಳಿಯುವ ಚಂದ್ರಯಾನ - ಯೋಜನೆಗೆ ಸಿದ್ಧತೆ, ಮಾನವ ಸಹಿತ ಬಾಹ್ಯಾಕಾಶ ಯಾನ ಕೇಂದ್ರದ ಸ್ಥಾಪನೆ, ಯುವ ವಿಜ್ಞಾನಿ ಕಾರ್ಯಕ್ರಮಗಳ ಆರಂಭ, ರಾಷ್ಟ್ರದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನ ತರಬೇತಿಗಾಗಿ ಭಾರತೀಯ ಗಗನಯಾನಿಗಳ ಆಯ್ಕೆಗೆ ಭಾರತೀಯ ವಾಯುಪಡೆ (ಐಎಎಫ್ ) ಜೊತೆಗೆ ಒಪ್ಪಂದಕ್ಕೆ ಸಹಿ ಕೂಡಾ ಇದೇ ವರ್ಷದಲ್ಲಿ ಸಾಧ್ಯವಾಗಿದೆ. ಆದಾಗ್ಯೂ  ೨೦೧೯ರ ಸಾಲಿನ ಏಕೈಕ ಹಿನ್ನಡೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿ ಪತನಗೊಂಡದ್ದು.

No comments:

Advertisement