Friday, January 10, 2020

ನಿರ್ಭಯ ಪ್ರಕರಣ: ಸುಪ್ರೀಂಕೋರ್ಟಿಗೆ ಅಪರಾಧಿ ವಿನಯ್ ಶರ್ಮ ಕ್ಯುರೇಟಿವ್ ಅರ್ಜಿ

ನಿರ್ಭಯ ಪ್ರಕರಣ: ಸುಪ್ರೀಂಕೋರ್ಟಿಗೆ ಅಪರಾಧಿ ವಿನಯ್ ಶರ್ಮ ಕ್ಯುರೇಟಿವ್ ಅರ್ಜಿ
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿಧಿಸಲಾಗಿರುವ ಗಲ್ಲು ಶಿಕ್ಷೆಯಿಂದ ಪಾರಾಗುವ ಕೊನೆಯ ಯತ್ನವಾಗಿ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮ  2020 ಜನವರಿ 09ರ ಗುರುವಾರ ಸುಪ್ರೀಂಕೋರ್ಟಿಗೆ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ.
ಕ್ಯುರೇಟಿವ್
ಅರ್ಜಿಯು ಶಿಕ್ಷಿತ ಅಪರಾಧಿಗೆ ಲಭ್ಯವಿರುವ ಕೊನೆಯ ಕಾನೂನುಬದ್ಧ ಪರಿಹಾರವಾಗಿದೆ.

ಪ್ರಕರರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಖೇಶ್ (೩೨), ಪವನ್ ಗುಪ್ತ (೨೫), ವಿನಯ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ೨೦೨೦ರ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಗುವುದು ಎಂದು ಪ್ರಕಟಿಸಿದ್ದ ದೆಹಲಿ ನ್ಯಾಯಾಲಯವು ಮರಣದಂಡನೆ ಜಾರಿಗಾಗಿಡೆತ್ ವಾರಂಟ್ಎಂಬುದಾಗಿಯೇ ಪರಿಗಣಿತವಾಗಿರುವಬ್ಲ್ಯಾಕ್ ವಾರಂಟ್ಜಾರಿ ಮಾಡಿತ್ತು.

ತನ್ನ
ಕ್ಯುರೇಟಿವ್ ಅರ್ಜಿಯಲ್ಲಿ ವಿನಯ್ ತನ್ನ ಚಿಕ್ಕ ವಯಸ್ಸನ್ನು ತಗ್ಗಿಸುವ ಯತ್ನ ಎಂಬುದಾಗಿ ತಪ್ಪಾಗಿ ಹೇಳಿ ತನ್ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು  ಎಂದು ಪ್ರತಿಪಾದಿಸಿದ್ದಾನೆ.

ಅರ್ಜಿದಾರರ ಸಾಮಾಜಿಕ-ಆರ್ಥಿಕ ಸನ್ನಿವೇಶಗಳು, ಅನಾರೋಗ್ಯ ಪೀಡಿತ ಪೋಷಕರು ಸೇರಿದಂತೆ ಕುಟುಂಬ ಅವಲಂಬಿತರ ಸಂಖ್ಯೆ, ಜೈಲಿನಲ್ಲಿ ಉತ್ತಮ ನಡವಳಿಕೆ ಮತ್ತು ಸುಧಾರಣೆಯ ಸಂಭವನೀಯತೆಯನ್ನು ಸಮರ್ಪಕವಾಗಿ ಪರಿಗಣಿಸಲಾಗಿಲ್ಲ, ಇದರಿಂದಾಗಿ ನ್ಯ್ಯಾಯದಾನದಲ್ಲಿ ಸಂಪೂರ್ಣ ಅನ್ಯಾಯವಾಗಿದೆಎಂದು ಮನವಿಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ
ತೀರ್ಪು ನೀಡುವಲ್ಲಿ ಮತ್ತು ತನ್ನ ಹಾಗೂ ಇತರರಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವಲ್ಲಿ "ಸಮಾಜದ ಸಾಮೂಹಿಕ ಆತ್ಮಸಾಕ್ಷಿ" ಮತ್ತು "ಸಾರ್ವಜನಿಕ ಅಭಿಪ್ರಾಯ" ದಂತಹ ಅಂಶಗಳನ್ನು ಅವಲಂಬಿಸಿದೆ ಎಂದು ಅರ್ಜಿ ವಾದಿಸಿದೆ.

ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪುಗಳು ಭಾರತದಲ್ಲಿ ಮರಣದಂಡನೆ ವಿಧಿಸುವ ಕಾನೂನನ್ನು ಗಮನಾರ್ಹವಾಗಿ ಬದಲಿಸಿರುವುದರಿಂದ ಮತ್ತು ಅನೇಕ ಶಿಕ್ಷಿತರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿರುವುದರಿಂದ ತನ್ನ ವಿರುದ್ಧದ ತೀರ್ಪು ಕಾನೂನು ಪ್ರಕಾರ ಕೆಟ್ಟದ್ದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

೨೦೧೭
ರಲ್ಲಿ ಸದರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಸುಮಾರು ೧೭ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ದಾಖಲಾಗಿದ್ದು, ತ್ರಿಸದಸ್ಯ ಪೀಠಗಳು ಪ್ರಕರಣಗಳಲ್ಲಿ ಮರಣದಂಡನೆಯನ್ನು ರದ್ದು ಪಡಿಸಿವೆ ಎಂದು ಅರ್ಜಿಯು ಪ್ರತಿಪಾದಿಸಿದೆ.

ನಿರ್ಭಯಾಎಂದು ಕರೆಯಲಾಗಿರುವ ೨೩ ವರ್ಷದ ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ೨೦೧೨ ಡಿಸೆಂಬರ್ ೧೬-೧೭ರ ನಡುವಣ ರಾತ್ರಿ ದಕ್ಷಿಣ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರವಾಗಿ ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿ ಬಳಿಕ ಬಸ್ಸಿನಿಂದ ಹೊರಕ್ಕೆ ರಸ್ತೆಗೆ ಎಸೆದಿದ್ದರು.

ಸಂತ್ರಸ್ತ
ವಿದ್ಯಾರ್ಥಿನಿ ಜೀವನ್ಮರಣ ಹೋರಾಟದ ಬಳಿಕ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಪ್ರಕರಣದ ಇತರ ಮೂವರು ಆರೋಪಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ೨೦೧೮ರ ಜುಲೈ ರಂದು ವಜಾಗೊಳಿಸಿತ್ತು. ಇತ್ತೀಚೆಗೆ ವಿನಯ್ ಶರ್ಮ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂಕೋರ್ಟ್ ಹಿಂದಿನ ತೀರ್ಪುಗಳ ನೆಲೆಯಲ್ಲೇ ತಿರಸ್ಕರಿಸಿತ್ತು.  ಅರ್ಜಿಗಳಲ್ಲಿ ೨೦೧೭ ತೀರ್ಪಿನ ಪುನರ್ಪರಿಶೀಲನೆಗೆ ಅವರು ಯಾವುದೇ ಆಧಾರಗಳನ್ನು ನೀಡಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಪ್ರಕರಣದ ಆರು ಆರೋಪಿಗಳ ಪೈಕಿ ಒಬ್ಬನಾದ ರಾಮ್ ಸಿಂಗ್ ವಿಚಾರಣಾ ಅವಧಿಯಲ್ಲೇ ದೆಹಲಿಯ ತಿಹಾರ್ ಸೆರೆಮನೆಯಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಆರೋಪಿಗಳ ಪೈಕಿ ಬಾಲಾಪರಾಧಿ ಎಂಬುದಾಗಿ ಪರಿಗಣಿತನಾಗಿದ್ದ ಇನ್ನೊಬ್ಬ ಆರೋಪಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿ ನೀಡಿದ್ದ ಶಿಕ್ಷೆಗೊಳಗಾಗಿ ಮೂರು ವರ್ಷಗಳ ಸೆರೆವಾಸದ ಬಳಿಕ ಸುಧಾರಣಾ ಗೃಹದಿಂದ ಬಿಡುಗಡೆ ಮಾಡಲಾಗಿತ್ತು.

ವಿಚಾರಣಾ
ನ್ಯಾಯಾಲಯವು ನಾಲ್ಕೂ ಮಂದಿ ತಪ್ಪಿತಸ್ಥರಿಗೆ ನೀಡಿದ್ದ ೨೦೧೭ರ ಮರಣದಂಡನೆಯನ್ನು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದವು.

No comments:

Advertisement