Tuesday, March 17, 2020

ಸಿಎಎ: ಸುಪ್ರೀಂಕೋರ್ಟಿಗೆ ಕೇಂದ್ರದ ಸುದೀರ್ಘ ಉತ್ತರ

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಇಲ್ಲ
ಸುಪ್ರೀಂಕೋರ್ಟಿಗೆ ಕೇಂದ್ರದ  ಸುದೀರ್ಘ  ಉತ್ತರ
ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎಯನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನೂ 2020 ಮಾರ್ಚ್ 17ರ ಮಂಗಳವಾರ  ವಿರೋಧಿಸಿದ ಕೇಂದ್ರ ಸರ್ಕಾರವು, ಪ್ರಮಾಣಪತ್ರದ (ಅಫಿದವಿತ್) ಮೂಲಕ ಟೀಕೆಗಳಿಗೆ ಅಂಶ-ಅಂಶ ಉತ್ತರವನ್ನು ಸಲ್ಲಿಸಿತು.

೧೨೯  ಪುಟಗಳ ತನ್ನ ಪ್ರಾಥಮಿಕ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರವುಸಿಎಎ ಯಾವುದೇ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ, ಆದ್ದರಿಂದ ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲಎಂದು ಪ್ರತಿಪಾದಿಸಿತು.

ಸಿಎಎ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಪ್ರತಿಪಾದಿಸಿದಂತೆ, ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಅಕ್ರಮ ವಲಸಿಗ ಎಂಬುದಾಗಿ ವರ್ಗೀಕರಿಸಿದ ಯಾವುದೇ ವ್ಯಕ್ತಿಯನ್ನೂ ಉಚ್ಚಾಟಿಸುವುದಿಲ್ಲ ಅಥವಾ ಗಡೀಪಾರು ಮಾಡುವುದಿಲ್ಲ ಎಂದೂ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ತಿಳಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆಯು ಕಾರ್ಯಾಂಗಕ್ಕೆ ಯಾವುದೇ ನಿರಂಕುಶ ಮತ್ತು ಮಾರ್ಗದರ್ಶಿ ಸೂತ್ರ ರಹಿತವಾದ ಅಧಿಕಾರಗಳನ್ನು ನೀಡುವುದಿಲ್ಲ. ಅದು ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಗಳಿಂದ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಕಾನೂನಿಗೆ ಅನುಗುಣವಾಗಿ ಪೌರತ್ವವನ್ನು ನೀಡುತ್ತದೆ ಅಷ್ಟೆಎಂದು ಕೂಡಾ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಹೇಳಿತು.

ತಿದ್ದುಪಡಿ ಮಾಡಲಾದ ಕಾಯ್ದೆಯು ೨೦೧೪ರ ಡಿಸೆಂಬರ್ ೩೧ ಅಥವಾ ಅದಕ್ಕೂ ಮುನ್ನ ಭಾರತಕ್ಕೆ ಮೂರು ನೆರೆಯ ರಾಷ್ಟ್ರಗಳಿಂದ ಬರುವ ಮುಸ್ಲಿಮೇತರ  ವಲಸಿಗರಿಗೆ ಪೌರತ್ವ ನೀಡಲು ಕೋರಿದೆ.
ನಿರ್ದಿಷ್ಟವಾದ ನೆರೆಯ ರಾಷ್ಟ್ರಗಳಿಗೆ ವ್ಯತಿರಿಕ್ತವಾಗಿಭಾರತವು ಸಂವಿಧಾನಬದ್ಧವಾದ ಜಾತ್ಯತೀತ ರಾಷ್ಟ್ರವಾಗಿದೆ ಮತ್ತು ವರ್ಗೀಕೃತ ಸಮುದಾಯಗಳ ದೊಡ್ಡ ಸಂಖ್ಯೆಯ ಜನರು ಈಗಾಗಲೇ ಭಾರತದಲ್ಲಿ ಇಲ್ಲಿನ ಪ್ರಜೆಗಳಂತೆಯೇ ವಾಸವಾಗಿದ್ದಾg’ ಎಂದೂ ಕೇಂದ್ರ ಸರ್ಕಾರ ಹೇಳಿತು.

ಒಟ್ಟಾರೆ ಅಂಶಗಳು, "ಸೂಚಿತ  ಸಮುದಾಯಗಳಿಗೆ ಆಶ್ರಯ ಪಡೆಯುವ ಏಕೈಕ ತರ್ಕಬದ್ಧ ಮತ್ತು ತಾರ್ಕಿಕವಾಗಿ ಕಾರ್ಯಸಾಧ್ಯವಾದ ಸ್ಥಳವನ್ನು ಭಾರತ ಪ್ರತಿನಿಧಿಸುತ್ತದೆ ಎಂಬುದನ್ನು ಕಾಯ್ದೆ ಸ್ಪಷ್ಟಪಡಿಸುತ್ತದೆ" ಎಂದು ಕೇಂದ್ರ ತಿಳಿಸಿತು.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕೂಡಾ ಯಾವುದೇ ಸಾರ್ವಭೌಮ ರಾಷ್ಟ್ರಕ್ಕೆತನ್ನ ಪೌರರು ಮತ್ತು ಪೌರೇತರರನ್ನು ಗುರುತಿಸಲು ಅಗತ್ಯವಾದ ಕಸರತ್ತುಎಂದೂ ಕೇಂದ್ರ ಸುಪ್ರೀಂಕೋರ್ಟಿಗೆ ತಿಳಿಸಿದೆ. ಎನ್ಆರ್ಸಿಗೆ ಸಂಬಂಧಿಸಿದ ವಿಧಿಗಳು ೨೦೦೪ರಿಂದಲೇ ೧೯೫೫ರ ಕಾಯ್ದೆಯ ಭಾಗವೇ ಆಗಿವೆ ಎಂದೂ ಕೇಂದ್ರ ಪ್ರತಿಪಾದಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಉತ್ತರವಾಗಿ ಪ್ರಮಾಣಪತ್ರವನ್ನು (ಅಪಿದವಿತ್) ಸಲ್ಲಿಸಲಾಯಿತು.

ಸುಪ್ರೀಂಕೋರ್ಟ್ ಕಳೆದ ವರ್ಷ ಡಿಸೆಂಬರ್ ೧೮ರಂದು ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಾಮರ್ಶಿಸಲು ನಿರ್ಧರಿಸಿತ್ತು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ತಡೆ ನೀಡಲು ನಿರಾಕರಿಸಿತ್ತು.

No comments:

Advertisement