Tuesday, March 17, 2020

ಖ್ಯಾತ ಗಾಯಕ ಅನುಪ್ ಜಲೋಟಾಗೆ ಮುಂಬೈಯಲ್ಲಿ ಏಕಾಂಗಿ ವಾಸ

ಖ್ಯಾತ ಗಾಯಕ ಅನುಪ್ ಜಲೋಟಾಗೆ ಮುಂಬೈಯಲ್ಲಿ ಏಕಾಂಗಿ ವಾಸ
ಮುಂಬೈ: ಲಂಡನ್ನಿನಿಂದ ಹಿಂದಿರುಗಿದ ಬಳಿಕ ಖ್ಯಾತ ಭಜನ್ ಗಾಯಕ ಅನುಪ್ ಜಲೋಟಾ ಅವರು 2020 ಮಾರ್ಚ್ 17ರ ಮಂಗಳವಾರ  ಬೆಳಗ್ಗೆಯಿಂದ ಮುಂಬೈಯ ಅಂಧೇರಿ ಹೊರವಲಯದಲ್ಲಿನ ಹೋಟೆಲ್ ಒಂದರಲ್ಲಿಏಕಾಂಗಿ ವಾಸದಲ್ಲಿ ಇದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವ ಸಲುವಾಗಿ ತಾವು ಏಕಾಂಗಿ ವಾಸದಲ್ಲಿ ಇರುವುದಾಗಿ ಸ್ವತಃ ಅನುಪ್ ಜಲೋಟಾ ಅವರು ಫೇಸ್ ಬುಕ್ ಪೋಸ್ಟಿನಲ್ಲಿ ಪ್ರಕಟಿಸಿದರು.

ಯುರೋಪಿಗೆ ಗಾಯನ ಕಚೇರಿ ಸಲುವಾಗಿ ತೆರಳಿದ್ದ ಜಲೋಟಾ ಅವರು ಮಂಗಳವಾರ ನಸುಕಿನಲ್ಲಿ ಮುಂಬೈಗೆ ವಾಪಸಾಗಿದ್ದರು.

ಅಂಧೇರಿ ಹೋಟೆಲ್ನಿಂದಲೇ ತಮ್ಮ ಚಿತ್ರವನ್ನು ಫೇಸ್ ಬುಕ್ನಲಿ ಹಂಚಿಕೊಂಡ ಅನುಪ್, ’ನಾನು ಬಿಎಂಸಿಯು ೬೦+ ಪ್ರಯಾಣಿಕರಿಗೆ ಒದಗಿಸಿದ ವೈದ್ಯಕೀಯ ಸವಲತ್ತು ಘಟಕದಲ್ಲಿ ಇದ್ದೇನೆ. ಲಂಡನ್ನಿನಿಂದ ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ನನ್ನನ್ನು ಹೋಟೆಲ್ ಮಿರಾಜ್ಗೆ ಕರೆದೊಯ್ಯಲಾಯಿತು. ವೈದ್ಯರ ತಂಡವೊಂದು ನನ್ನನ್ನು ನೋಡಿಕೊಳ್ಳುತ್ತಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕೋವಿಡ್೧೯ ಭಾರತದಲ್ಲಿ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸಹಕರಿಸುವಂತೆ ಮತ್ತು ನೆರವು ನೀಡುವಂತೆ ನಾನು ಮನವಿ ಮಾಡುತ್ತೇನೆಎಂದು ಜಲೋಟಾ ಫೇಸ್ ಬುಕ್ ಪೋಸ್ಟಿನಲ್ಲಿ ಬರೆದರು.

ಅನುಪ್ ಜಲೋಟಾ ಅವರು ಎರಡು ದಿನಗಳ ಅವಧಿಗೆ ಏಕಾಂಗಿ ವಾಸದಲ್ಲಿ ಇರುತ್ತಾರೆ. ಆದರೆ ಅವರು ಇನ್ನೂ ಕೊರೋನಾವೈರಸ್ ಪರೀಕ್ಷೆಗೆ ಒಳಗಾಗಿಲ್ಲ ಎಂದು ಗಾಯಕನ ವಕ್ತಾರ ತಿಳಿಸಿದರು.

ಅನುಪ್ಜಿ ಅವರು ಕೊರೋನಾವೈರಸ್ ಪರೀಕ್ಷೆಗೆ ಹೋಗಿಲ್ಲ. ಅವರು ಆರೋಗ್ಯವಾಗಿದ್ದಾರೆ. ಇಂಗ್ಲೆಂಡ್ ಮತ್ತು ಜರ್ಮನಿ ಸೇರಿದಂತೆ ಯುರೋಪ್ ಪ್ರವಾಸದಿಂದ ಈಗಷ್ಟೇ ವಾಪಸಾಗಿರುವ ಕಾರಣ ವಿಧಿ ವಿಧಾನಗಳ ಪಾಲನೆ ಸಲುವಾಗಿ ಅವರು ಎರಡು ದಿನಗಳ ಕಾಲ ಏಕಾಂಗಿ ವಾರ್ಡಿನಲ್ಲಿ ಇರಲಿದ್ದಾರೆಎಂದು ಹೇಳಿಕೆ ತಿಳಿಸಿತು.
ಮಾರ್ಚ್ ೩೧ರವರೆಗೆ ಭಾರತದ ವಿವಿಧ ಭಾಗಗಳಲ್ಲಿ ಜಿಮ್ಗಳು, ಶಾಲೆಗಳು, ಕಾಲೇಜುಗಳನ್ನು ಮುಚ್ಚುವಂತೆ ಸಲಹೆ ಮಾಡಲಾಗಿದೆ ಮತ್ತು ಅನಗತ್ಯವಾಗಿ ಹೊರಗೆ ಹೋಗುವುದನ್ನು ನಿವಾರಿಸುವಂತೆ ಸೂಚಿಸಲಾಗಿದೆ.

ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಮತ್ತು ಪರಿಣೀತಿ ಚೋಪ್ರಾ ಅವರ ಸಂದೀಪ್ ಔಟ್ ಪಿಂಕಿ ಫರಾರ್ನಂತಹ ಚಲನಚಿತ್ರಗಳ ಬಿಡುಗಡೆ ಅನಿರ್ದಿಷ್ಟ ಕಾಲ ಮುಂದಕ್ಕೆ ಹೋಗಿದೆ.

ಬಹುತೇಕ ಚಲನಚಿತ್ರಗಳು ಮತ್ತು ಟಿವಿ ಶೋಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅವರಬ್ರಹ್ಮಾಸ್ತ್ರ ಮುಂಬೈ ಚಿತ್ರೀಕರಣವನ್ನು ರದ್ದು ಪಡಿಸಲಾಗಿದೆ. ಶಾಹಿದ್ ಕಪೂರ್ ಅವರ ಜೆರ್ಸಿ,  ಮತ್ತು ಕಾರ್ತಿಕ ಆಯನ್ ಮತ್ತು ಕಿಯರಾ ಅಡ್ವಾಣಿ ನಟಿಸಿರುವ ಭೂಲ್ ಭುಲಾಯಿಯಾ ಚಿತ್ರೀಕರಣ ಕೂಡಾ ಮುಂದೂಡಿಕೆಯಾಗಿದೆ. ಕೊರೋನಾವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವಂತೆ ರಾಜ್ಯ ಸರ್ಕಾರಗಳು ಕಚೇರಿಗಳಿಗೆ ಸಲಹೆ ಮಾಡಿವೆ.

ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ಅಂಗ್ರೀಜಿ ಮೀಡಿಯಂ ಸಾಂಕ್ರಾಮಿಕ ಪಿಡುಗಿನ ಪರಿಣಾಮವಾಗಿ ಭಾರೀ ಪೆಟ್ಟು ತಿಂದಿದ್ದು,  ಬಾಕ್ಸ್ ಆಫೀಸಿನಲ್ಲಿ ಸೋತಿದೆ. ಇರ್ಫಾನ್, ಕರೀನಾ ಕಪೂರ್ ಖಾನ್ ಮತ್ತು ಡಿಂಪಲ್ ಕಪಾಡಿಯಾ ಮತ್ತಿರರು ನಟಿಸಿದರುವ ಚಿತ್ರವು ಎರಡು ದಿನಗಳಲ್ಲಿ ಅಂದಾಜು .೭೮ ಕೋಟಿ ರೂ.ಗಳನ್ನು ಮಾತ್ರ ಗಳಿಸಿದೆ.  ಟೈಗರ್ ಶ್ರಾಫಿ ಅವರ ಬಾಘೀ ಕೂಡಾ ಬಾಕ್ಸ್ ಆಫೀಸಿನಲ್ಲಿ ಹೊಡೆತ ಅನುಭವಿಸಿದ್ದು ಇನ್ನೂ ೧೦೦ ಕೋಟಿ ರೂಪಾಯಿ ಗಳಿಕೆಯ ಮಾನದಂಡವನ್ನು ದಾಟಿಲ್ಲ.   
ಮಾಲ್ಗಳು ಕೆಲಸ ಮಾಡುತ್ತಿಲ್ಲ, ಅಂಗಡಿಗಳು ಕೆಲಸ ಮಾಡುತ್ತಿಲ್ಲ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಸಿನಿಮಾಕ್ಕೆ ಹೋಗುವ ಬಗೆ ಕಡೆಯ ಆದ್ಯತೆಯನ್ನು ನೀಡುತ್ತಾರೆ. ಇಂತಹ ಸ್ಥಿತಿಯಲ್ಲಿ ಚಿತ್ರವು  ಮೊದಲ ದಿನ ೧೭.೫೦ ರಿಂದ ೧೮ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ನಿಜಕ್ಕೂ ಅಮೋಘ.  ನಾವು ೭ರಿಂದ ಕೋಟಿ ರೂಪಾಯಿ ಗಳಿಸಿದ್ದರೂ ಅದನ್ನು ಉತ್ತಮ ಎಂಬುದಾಗಿ ಪರಿಗಣಿಸುತ್ತಿದ್ದೆವು ಎಂದು ಚಿತ್ರ ನಿರ್ಮಾಪಕ ಅಹ್ಮದ್ ಖಾನ್ ಹೇಳಿಕೆಯೊಂದರಲ್ಲಿ ತಿಳಿಸಿದರು. 

No comments:

Advertisement