My Blog List

Thursday, April 9, 2020

ಕೋವಿಡ್ ನಿಂದ ಭಾರತದ ಬೆಳವಣಿಗೆಯ ದೃಷ್ಟಿಕೋನವೇ ಬದಲು: ಆರ್‌ಬಿಐ

ಕೋವಿಡ್ ನಿಂದ ಭಾರತದ ಬೆಳವಣಿಗೆಯ ದೃಷ್ಟಿಕೋನವೇ ಬದಲು: ಆರ್ಬಿಐ
ನವದೆಹಲಿ: ಜಾಗತಿಕವಾಗಿ ವ್ಯಾಪಿಸಿರುವ ಮಾರಕ ಕೊರೋನಾವೈರಸ್ (ಕೋವಿಡ್-೧೯) ಸೋಂಕು ಭಾರತದ ಬೆಳವಣಿಗೆಯ ದೃಷ್ಟಿಕೋನವನ್ನುತೀವ್ರವಾಗಿ ಬದಲಿಸಿದೆ ಎಂದು  2020 ಏಪ್ರಿಲ್ 09ರ ಗುರುವಾರ ಆರ್ಬಿಐ ವರದಿ ಹೇಳಿತು.

ಕೊರೋನವೈರಸ್ ಸೋಂಕು ಭಾರತದ ಆರ್ಥಿಕ ಚೇತರಿಕೆಯ ದೃಷ್ಟಿಕೋನವನ್ನು ಏಕಾಏಕಿಯಾಗಿ ತೀವ್ರ ಸ್ವರೂಪದಲ್ಲಿ ಬದಲಾಯಿಸಿದೆ ಎಂದು ಕೇಂದ್ರೀಯ ಬ್ಯಾಂಕ್ ತನ್ನ ಹಣಕಾಸು ನೀತಿ ವರದಿಯಲ್ಲಿ ತಿಳಿಸಿದೆ, ದಕ್ಷಿಣ ಏಷ್ಯಾದ ಬೆಳವಣಿಗೆ ಯಂತ್ರದ ಮೇಲೆ ಸಾಂಕ್ರಾಮಿಕ ರೋಗದ ಗಾಢವಾದ ಪರಿಣಾಮ ಎದ್ದು ಕಾಣುತ್ತಿದೆ ಎಂದು ವರದಿ ಹೇಳಿತು.

ಕೋವಿಡ್ -೧೯ ಸಂಭವಿಸುವುದಕ್ಕೆ ಮುನ್ನ ೨೦೨೦-೨೧ರ ಬೆಳವಣಿಗೆಯ ದೃಷ್ಟಿಕೋನ ಮೇಲ್ಮುಖವಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಹೇಳಿತು.

ಕೋವಿಡ್ -೧೯ ಸಾಂಕ್ರಾಮಿಕವು ದೃಷ್ಟಿಕೋನವನ್ನು ತೀವ್ರವಾಗಿ ಬದಲಾಯಿಸಿದೆ. ಕೋವಿಡ್ ನಂತರದ ಮುನ್ನೆಣಿಕೆಗಳು ಸೂಚಿಸುವಂತೆ ಜಾಗತಿಕ ಆರ್ಥಿಕತೆಯು ೨೦೨೦ ರಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಕುಸಿಯುವ ನಿರೀಕ್ಷೆಯಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿತು.

ಭಾರತದ ಆರ್ಥಿಕತೆಯ ವೇಗ ೨೦೧೯ ಕೊನೆಯ ಮೂರು ತಿಂಗಳಲ್ಲಿ ಕಳೆದ ಆರು ವರ್ಷಗಳಿಗಿಂತಲೂ ಕಡಿಮೆಯಾಗಿತ್ತು ಮತ್ತು ಪೂರ್ಣ ವರ್ಷದಲ್ಲಿ ಶೇಕಡಾ ೫ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ, ಇದು ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ ಎಂದು ವರದಿ ಹೇಳಿತು.

ಅಂತಾರಾಷ್ಟ್ರೀಯ ಕಚ್ಚಾ ತೈಲಬೆಲೆಯಲ್ಲಿನ ದೀರ್ಘಕಾಲದ ಕುಸಿತದ ಪರಿಣಾಮವಾಗಿ ವ್ಯಾಪಾರದ ದೃಷ್ಟಿಯಿಂದ ಕಂಡುಬರುವ ಯಾವುದೇ ಪ್ರಯೋಜನವು ಆರ್ಥಿಕತೆಗೆ ಸಿಕ್ಕಿಲ್ಲ. ಇದಕ್ಕೆ ಕೊರೋನಾವೈರಸ್ ಹರಡುವಿಕೆ ತಡೆಯಲು ಘೋಷಿಸಿರುವ ದಿಗ್ಬಂಧನದಿಂದಾಗಿ ಉಂಟಾಗಿರುವ ಬಾಹ್ಯ ಬೇಡಿಕೆಯ ನಷ್ಟ ಕಾರಣ. ಹೀಗಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲಬೆಲೆಯ ಕುಸಿತದ ವ್ಯಾಪಾರೀ ಲಾಭವು ಆರ್ಥಿಕ ಕುಸಿತವನ್ನು ಸರಿದೂಗಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿತು.

ಕಳೆದ ತಿಂಗಳು ತನ್ನ ನೀತಿ ಹೇಳಿಕೆಯಲ್ಲಿ ತಿಳಿಸಿದಂತೆ, ಪರಿಸ್ಥಿತಿಗಳು ಹೆಚ್ಚು ಅನಿಶ್ಚಿತವಾಗಿ ಉಳಿದಿವೆ ಎಂಬುದನ್ನು ಪುನರುಚ್ಚರಿಸಿದ ರಿಸರ್ವ್ ಬ್ಯಾಂಕ್, ಜಿಡಿಪಿ ಬೆಳವಣಿಗೆಯ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ತನ್ನನ್ನು ತಾನು ಸ್ವತಃ ನಿಯಂತ್ರಿಸಿಕೊಂಡಿತು.

ಪ್ರಸ್ತುತ ಪರಿಸ್ಥಿತಿ "ಹೆಚ್ಚು ಅನಿಶ್ಚಿತ" ಎಂದು ವಿವರಿಸಿದ ಕೇಂದ್ರೀಯ ಬ್ಯಾಂಕ್, " ಪರಿಸ್ಥಿತಿ ಎಷ್ಟು ಕಾಲ ಎಂಬುದನ್ನು ಕೋವಿಡ್ -೧೯ ತೀವ್ರತೆ, ಹರಡುವಿಕೆ ನಿರ್ಣಯಿಸುತ್ತ್ತದೆ ಎಂದು ಹೇಳಿತು.
2020 ಏಪ್ರಿಲ್ 09ರ ಗುರುವಾರ  ಬೆಳಗ್ಗಿನ ವೇಳೆಗೆ ಭಾರತದಲ್ಲಿ ,೦೦೦ ಕ್ಕೂ ಹೆಚ್ಚು ಸಕ್ರಿಯ ಕೊರೋನವೈರಸ್ ಪ್ರಕರಣಗಳು ಮತ್ತು ೧೬೬ ಸಾವುಗಳು ವರದಿಯಾಗಿದ್ದವು.

ಕಳೆದ ತಿಂಗಳ ಕೊನೆಯಲ್ಲಿ ಆರ್ಬಿಐ ತನ್ನ ಪ್ರಮುಖ ಸಾಲ ದರವನ್ನು ನಿರೀಕ್ಷೆಗಿಂತ ೭೫ ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿತ್ತು ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ರೂಪಾಯಿ ಮತ್ತು ಡಾಲರ್  ಅಸ್ಥಿರತೆ ನಿವಾರಣೆಗಾಗಿ ಹಲವಾರು ಕ್ರಮಗಳನ್ನು ಘೋಷಿಸಿತ್ತು.

No comments:

Advertisement