ಗ್ರಾಹಕರ ಸುಖ-ದುಃಖ

My Blog List

Friday, May 22, 2020

ಮತ್ತೆ ರೆಪೋ ದರ ಇಳಿಸಿದ ರಿಸರ್ವ್ ಬ್ಯಾಂಕ್

ಮತ್ತೆ ರೆಪೋ ದರ  ಇಳಿಸಿದ ರಿಸರ್ವ್  ಬ್ಯಾಂಕ್
ನವದೆಹಲಿ: ಕೊರೊನಾ ದಿಗ್ಬಂಧನದಿಂದ (ಲಾಕ್ ಡೌನ್) ಕಂಗೆಟ್ಟಿರುವ ಮಾರುಕಟ್ಟೆಗೆ ಚೈತನ್ಯ ತುಂಬಲು  ಭಾರತೀಯ ರಿಸರ್ವ್ ಬ್ಯಾಂಕ್ 2020 ಮೇ 22ರ ಶುಕ್ರವಾರ  ರೆಪೋ ದರದಲ್ಲಿ ಭಾರೀ ಕಡಿತ ಘೋಷಿಸಿತು. ಶೇ. .೪ರಷ್ಟಿದ್ದ ರೆಪೋದರವನ್ನು ಶೇ.೪ಕ್ಕೆ ಇಳಿಕೆ ಮಾಡಿದ್ದು ರಿವರ್ಸ್ ರೆಪೋ ದರವನ್ನು ಕೂಡಾ ಶೇ..೩೫ಕ್ಕೆ ಇಳಿಕೆ ಮಾಡಿತು.

ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು  ರೆಪೋ ದರ ಕಡಿತ ಘೋಷಿಸಿದರು.

ಇದೇ ವೇಳೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಎಂಐ ಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿತು. ಜೂನ್ ೧ರಿಂದ ಆಗಸ್ಟ್ ೩೧ರವರೆಗೆ ಮೂರು ತಿಂಗಳ ಕಾಲ ಇಎಂಐ ಪಾವತಿಯನ್ನುಅವಧಿಯನ್ನು ವಿಸ್ತರಿಸಲಾಗಿದೆ. ಮೊದಲು ಮಾರ್ಚ್ ೧ರಿಂದ ಮೇ ೩೧ರವರೆಗೆ ಇಎಂಐ ಪಾವತಿ ಅವಧಿಯನ್ನು ಮುಂದೂಡಲಾಗಿತ್ತು. ಇದೀಗ ಆರ್ಬಿಐ ಮತ್ತೊಮ್ಮೆ ಇಎಂಐ ಪಾವತಿ ಅವಧಿಯನ್ನು ಮುಂದೂಡಿದೆ. ಇದರಿಂದ ಲಾಕ್ಡೌನ್ ಸಂಕಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಮಂದಿಗೆ ಅನುಕೂಲವಾದಂತಾಗಿದೆ.

ರೆಪೋ ದರ ಕಡಿತದ ಪರಿಣಾಮವಾಗಿ ಬಡ್ಡಿ ದರದಲ್ಲಿ ಭಾರೀ ಇಳಿಕೆಯಾಗಲಿದೆ. ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರದಲ್ಲೂ ಇಳಿಕೆಯಾಗಲಿದೆ. ಸಾಲ ಪಡೆಯಲು ಇದು ಸಕಾಲವಾಗಿದೆ.  ಆರ್ ಬಿಐ  ರೆಪೋ ದರ ಕಡಿತ ಘೋಷಿಸುತ್ತಿದ್ದಂತೆಯೇ ಷೇರು ಪೇಟೆ ಪುಟಿದೆದ್ದಿತು.

ಇಎಂಐ ಪಾವತಿ ಅವಧಿ ವಿಸ್ತರಣೆ: ವಿವಿಧ ಸಾಲಗಳ ಇಎಂಐ ಪಾವತಿ ಅವಧಿಯನ್ನು ಕೂಡಾ ಆರ್ ಬಿಐ ಜೂನ್ ೧ರಿಂದ ಆಗಸ್ಟ್ ೩೧ರವರೆಗೆ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ.
ಕಳೆದ ಮಾರ್ಚ್ ನಲ್ಲೂ ರೆಪೋ ದರ ಕಡಿತ
ಕಳೆದ ಮಾರ್ಚ್ ೨೭ರಂದು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ೭೫ ಮೂಲಾಂಶಗಳಷ್ಟು ಕಡಿತಗೊಳಿಸಿತ್ತು. ಇದರಿಂದ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಹೂಡಿಕೆ ಮೇಲಿನ ಬಡ್ಡದರವು ಕಡಿಮೆಯಾಗಿತ್ತು. ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡು ಬಂದರೂ ಸಹ ಎರಡನೇ ತ್ರೈಮಾಸಿಕದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.

 ಮುಖ್ಯಾಂಶಗಳು
ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:
)     ಜಾಗತಿಕ ಆರ್ಥಿಕತೆ ಮೇಲೆ ಕೊರೋನಾ ವೈರಸ್ ಭೀಕರ ಪರಿಣಾಮ ಬೀರಿದೆ. ಇದರಿಂದಾಗಿ ಏಪ್ರಿಲ್ ತಿಂಗಳಲ್ಲೇ ಆಹಾರ ಹಾಗೂ ಹಣದುಬ್ಬರ ಶೇ..೬ರಷ್ಟು ಏರಿಕೆಯಾಗಿದೆ.
)     ಬೇಳೆ ಕಾಳುಗಳ ಬೆಲೆ ಏರಿಕೆ ಆತಂಕ ಹುಟ್ಟಿಸುತ್ತಿದೆ. ಸದ್ಯ ದೇಶದಲ್ಲಿ ಉತ್ತಮ ಮುಂಗಾರು ಆರಂಭದ ಮುನ್ಸೂಚನೆ ಇದೆ. ದೇಶದ ಆಹಾರ ಭದ್ರತೆಗೆ ಇದು ಅನುಕೂಲಕಾರಿ.
)     ಕೊರೊನಾ ವೈರಸ್ ಹೊಡೆತಕ್ಕೆ ದೇಶದಲ್ಲಿ ಕೈಗಾರಿಕೆ ಉತ್ಪಾದನೆ ಶೇ.೧೭ರಷ್ಟು ಕುಸಿತ.
)     ದೇಶದ ಒಟ್ಟಾರೆ ಆಮದಿನಲ್ಲಿ ಶೇ..೮ರಷ್ಟು ಕುಸಿತ. ಕಳೆದ ೩೦ ವರ್ಷದಲ್ಲೇ ರಫ್ತು ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ.
)     ಆಹಾರ ಧಾನ್ಯ ಉತ್ಪಾದನೆ ಶೇ..೭ರಷ್ಟು ಹೆಚ್ಚಳ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
)     ದೇಶದ ಜಿಡಿಪಿ ಬೆಳವಣಿಗೆ ಶೂನ್ಯಕ್ಕಿಂತಲೂ ಇಳಿಕೆಯಾಗಿದೆ. ೨೦೨೧ರವರೆಗೂ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕೆಳಗಿಳಿಯಲಿದೆ.
)     ಲಾಕ್ಡೌನ್ ಕಾರಣದಿಂದ ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆ ಶೇ. ೧೯ರಷ್ಟು ಕುಸಿತ
   
ಆರ್ಥಿಕತೆ ಮೇಲೆತ್ತಲು ಮಹತ್ತರ ಹೆಜ್ಜೆಗಳು:
. ಮಾರುಕಟ್ಟೆ ಪುನಶ್ಚೇತನ
. ರಫ್ತು ಉತ್ತೇಜನ
. ಕೊರೊನಾದಿಂದ ಆರ್ಥಿಕ ಹೊರೆ ತಗ್ಗಿಸುವುದು
. ಸಾಲದ ಮೇಲಿನ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು ಅವಧಿ ವಿಸ್ತರಣೆ.

No comments:

Advertisement