ಕೊರೋನಾ: ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಭಾರತ
ನವದೆಹಲಿ: ೯೮೮೭ ಕೊರೋನಾ ಸೋಂಕು ಪ್ರಕರಣಗಳ ಏಕದಿನ ದಾಖಲೆಯೊಂದಿಗೆ ಭಾರತವು 2020 ಜೂನ್ 06ರಶನಿವಾರ ಇಟಲಿಯನ್ನು ಹಿಂದಿಕ್ಕಿ, ಕೋವಿಡ್-೧೯ ಸಾಂಕ್ರಾಮಿಕದಿಂದ ಅತಿಬಾಧೆಗೆ ಒಳಗಾದ ವಿಶ್ವದ ರಾಷ್ಟ್ರಗಳಲ್ಲಿ ೬ನೇ ಸ್ಥಾನಕ್ಕೆ ಏರಿತು.
ಭಾರತವು ಶನಿವಾರ ಒಂದೇದಿನ ದಾಖಲೆಯ ೯,೮೮೭ ಕೊರೊನಾವೈರಸ್ ಪ್ರಕರಣಗಳು ಮತ್ತು ೨೯೪ ಸಾವುಗಳನ್ನು ಕಂಡಿದ್ದು, ರಾಷ್ಟ್ರವ್ಯಾಪಿ ಸೋಂಕು ೨,೩೬,೬೫೭ ಕ್ಕೆ ಮತ್ತು ಸಾವಿನ ಸಂಖ್ಯೆ ೬,೬೪೨ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು. ಆದರೆ ಇದುವರೆಗೆ ೧,೧೪,೦೭೨ ಜನರು ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೪೮ರಷ್ಟಿದೆ. ಉಳಿದ ೧,೧೫,೯೪೨ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿ ಉಳಿದಿವೆ. ಭಾರತ ಸತತ ಮೂರನೇ ದಿನ ೯,೦೦೦ ಪ್ರಕರಣಗಳನ್ನು ದಾಖಲಿಸಿದೆ.
ಭಾರತದಲ್ಲಿ ಕೊರೋನಾ ಸೋಂಕು ಪ್ರಸರಣವನ್ನು ತಡೆಯಲು ಮಾರ್ಚ್ ೨೫ರಂದು ಮೊತ್ತ ಮೊದಲಿಗೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಲಾಯಿತು. ಬಳಿಕ ಅದನ್ನು ೨೧ ದಿನಗಳವರೆಗೆ ವಿಸ್ತರಿಸಲಾಯಿತು, ಎರಡನೇ ಹಂತದ ನಿರ್ಬಂಧಗಳು ಏಪ್ರಿಲ್ ೧೫ ರಿಂದ ಪ್ರಾರಂಭವಾಗಿ ಮೇ ೩ ರವರೆಗೆ ೧೯ ದಿನಗಳ ಕಾಲ ವಿಸ್ತರಿಸಲ್ಪಟ್ಟವು. ಲಾಕ್ಡೌನ್ನ ಮೂರನೇ ಹಂತವು ೧೪ ದಿನಗಳವರೆಗೆ ಜಾರಿಯಲ್ಲಿತ್ತು ಮತ್ತು ಮೇ ೧೭ ರಂದು ಕೊನೆಗೊಂಡಿತು. ನಾಲ್ಕನೇ ಹಂತವು ಮೇ ೩೧ ರಂದು ಕೊನೆಗೊಂಡಿತು. ಮಾರ್ಚ್ ೨೪ ರವರೆಗೆ ದೇಶವು ೫೧೨ ಕರೋನವೈರಸ್ ಸೋಂಕು ಪ್ರಕರಣಗಳನ್ನು ದಾಖಲಿಸಿತ್ತು.
ಭಾರತದ ಧಾರಕ ವಲಯಗಳಲ್ಲಿ (ಕಂಟೈನ್ಮೆಂಟ್ ಝೋನ್) ರಾಷ್ಟ್ರವ್ಯಾಪಿ ಲಾಕ್ಡೌನ್ ಜೂನ್ ೩೦ ರವರೆಗೆ ಮುಂದುರೆಯಲಿದೆ. ಆದರೆ ಜೂನ್ ೮ ರಿಂದ ಹಂತಹಂತವಾಗಿ ವ್ಯಾಪಕವಾದ ಸಡಿಲಿಕೆಗಳನ್ನು ಕೇಂದ್ರ ಗೃಹ ಸಚಿವಾಲಯವು ಕಳೆದ ವಾರ ಬಿಡುಗಡೆ ಮಾಡಿದ ಕೋವಿಡ್-೧೯ ಸಾಂಕ್ರಾಮಿಕ ರೋಗ ನಿಭಾವಣೆಯ ಹೊಸ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾಗಿದೆ.
ಭಯಕ್ಕೆ ವಿರುದ್ಧವಾಗಿ, ಕಳೆದ ಒಂದು ತಿಂಗಳಿನಿಂದ ದಿಗ್ಬಂಧನದಲ್ಲಿ ಕ್ರಮೇಣ ಸಡಿಲಿಕೆಯಾಗುತ್ತಿರುವುದರಿಂದ ದೇಶದಲ್ಲಿ ಕೊರೊನಾವೈರಸ್ ಸೋಂಕುಗಳು ದೊಡ್ಡ ಉಲ್ಬಣವನ್ನು ಉಂಟುಮಾಡಲಿಲ್ಲ. ಪ್ರಸರಣ ದರ, ಅಥವಾ ಈಗಾಗಲೇ ಸೋಂಕಿತ ವ್ಯಕ್ತಿಯಿಂದ ಸೋಂಕಿಗೆ ಒಳಗಾಗುವ ಜನರ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗುತ್ತಿದೆ. ಮತ್ತು ಆರಂಭದಲ್ಲಿಯೇ ಅದನ್ನು ಲೆಕ್ಕಹಾಕಲು ಪ್ರಾರಂಭಿಸಿದಾಗಿನಿಂದ ಇದು ಈಗ ಅತ್ಯಂತ ಕಡಿಮೆಯಾಗಿದೆ. ಮೇ ೧೫ ಮತ್ತು ಮೇ ೨೦ ರ ನಡುವೆ ಪ್ರತಿದಿನ ಸುಮಾರು ೪,೦೦೦ ದಿಂದ ೫,೦೦೦ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಮೂರು ದಿನಗಳಿಂದ ೯,೦೦೦ ರಿಂದ ೧೦,೦೦೦ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
ಆದರೆ ಈ ಸಮಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸೋಂಕು ಬೆಳವಣಿಗೆಯ ಪ್ರಮಾಣವು
ಶೇಕಡಾ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗಿದೆ.
ತಮಿಳುನಾಡು, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಶುಕ್ರವಾರ ದೈನಂದಿನ ಕೋವಿಡ್-೧೯ ಎಣಿಕೆಯಲ್ಲಿ ಅತಿದೊಡ್ಡ ಏರಿಕೆ ಕಂಡಿವೆ.
ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೩೯ ಸಾವುಗಳು ದಾಖಲಾಗಿದ್ದರೆ, ದೆಹಲಿಯು ಕಳೆದ ೨೪ ಗಂಟೆಗಳಲ್ಲಿ ೫೮ ಸಾವುನೋವುಗಳನ್ನು ಕಂಡಿದೆ.
ಹಿಂದಿನ ದಿನಕ್ಕಿಂತ ಮಹಾರಾಷ್ಟ್ರವು ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡಿದೆ. ಕೊರೋನವೈರಸ್ ಸೋಂಕಿನಿಂದ ೨,೪೩೬ ಜನರಿಗೆ ಪಾಸಿಟಿವ್ ವರದಿ ಬಂದಿದ್ದು, ರಾಜ್ಯದ ಕೋವಿಡ್ ಪ್ರಕರಣಗಳು ೮೦,೦೦೦ದ ಮೈಲಿಗಲ್ಲನ್ನು ದಾಟಿವೆ. ಸಾವಿನ ಸಂಖ್ಯೆ ೨,೮೪೯ ಕ್ಕೆ ಏರಿದೆ. ಮುಂಬೈಯಲ್ಲಿ ಮಾತ್ರ ಶುಕ್ರವಾರ ೫೪ ಸಾವುಗಳು ಸಂಭವಿಸಿವೆ, ಇದು ಇದುವರೆಗಿನ ಏಕೈಕ ಏಕದಿನ ಸಂಖ್ಯೆ.
ಕಳೆದ ೨೪ ಗಂಟೆಗಳಲ್ಲಿ ೫೦೦ ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ವರದಿ ಬರುವುದರೊಂದಿಗೆ ಗುಜರಾತ್ ಕೋವಿಡ್-೧೯ ಎಣಿಕೆಯಲ್ಲಿ ಅತಿದೊಡ್ಡ ಏರಿಕೆ ಕಂಡಿದೆ. ರಾಜ್ಯದಲ್ಲಿ ಒಟ್ಟು ಕೋವಿಡ್-೧೯ ರೋಗಿಗಳ ಸಂಖ್ಯೆ ೧೯,೦೯ಕ್ಕೆ ಏರಿದೆ.
ಕೊರೋನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ತಮಿಳುನಾಡು ಕೂಡ ತೀವ್ರ ಏರಿಕೆ ದಾಖಲಿಸಿದೆ. ಕಳೆದ ೨೪ ಗಂಟೆಗಳಲ್ಲಿ ೧,೪೩೮ ಹೊಸ ಪ್ರಕರಣಗಳೊಂದಿಗೆ, ರಾಜ್ಯದ ಕೊರೋನವೈರಸ್ ಸಂಖ್ಯೆ ೨೮,೬೯೪ ಕ್ಕೆ ಏರಿದೆ
ಕೇರಳವು ಒಂದೇ ದಿನದಲ್ಲಿ ೧೦೦ ಕ್ಕೂ ಹೆಚ್ಚು ಕೊರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಕನಿಷ್ಠ ೧೧೧ ಜನರಿಗೆ ಪಾಸಿಟಿವ್ ವರದಿ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧,೬೯೯ ಕ್ಕೆ ತಲುಪಿದೆ.
ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳವೂ ಕೊರೋನವೈರಸ್ ಎಣಿಕೆಯಲ್ಲಿ ಅತಿ ಹೆಚ್ಚು ಏರಿಕೆ ಕಂಡಿವೆ. ಉತ್ತರಪ್ರದೇಶದಲ್ಲಿ ೪೯೬ ಜನರಿಗೆ ಕೊರೊನಾವೈರಸ್ ಪಾಸಿಟಿವ್ ವರದಿ ಬಂದಿದ್ದು, ರಾಜ್ಯದ ಕೋವಿಡ್-೧೯ ಪ್ರಕರಣಗಳ ಸಂಖ್ಯೆಯನ್ನು ೯,೭೩೩ ಕ್ಕೆ ಏರಿಸಿದೆ.
ಪಶ್ಚಿಮ ಬಂಗಾಳವು ಕಳೆದ ೨೪ ಗಂಟೆಗಳಲ್ಲಿ ೪೨೭ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸಿದೆ. ಪಶ್ಚಿಮ ಬಂಗಾಳದಲ್ಲಿ ಕೋವಿಡ್ -೧೯ ಸೋಂಕಿನ ಸಂಖ್ಯೆ ೭,೩೦೩ ಕ್ಕೆ ಏರಿದೆ.
ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ರಾಜ್ಯವಾರು ಸ್ಥಿತಿ ಇಲ್ಲಿದೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - ೩೩
ಆಂಧ್ರಪ್ರದೇಶ - ೪,೩೦೨
ಅರುಣಾಚಲ ಪ್ರದೇಶ - ೪೫
ಅಸ್ಸಾಂ - ೨,೧೫೩
ಬಿಹಾರ - ೪,೫೯೬
ಚಂಡೀಗಢ - ೩೦೪
ಛತ್ತೀಸ್ ಗಢ - ೮೭೯
ದಾದರ್ ನಗರ ಹವೇಲಿ - ೧೪
ದೆಹಲಿ - ೨೬,೩೩೪
ಗೋವಾ - ೧೯೬
ಗುಜರಾತ್ - ೧೯,೦೯೪
ಹರಿಯಾಣ - ೩,೫೯೭
ಹಿಮಾಚಲ ಪ್ರದೇಶ - ೩೯೩
ಜಮ್ಮು ಮತ್ತು ಕಾಶ್ಮೀರ - ೩,೩೨೪
ಜಾರ್ಖಂಡ್ - ೮೮೧
ಕರ್ನಾಟಕ - ೪,೮೩೫
ಕೇರಳ - ೧,೬೯೯
ಲಡಾಖ್ - ೯೭
ಮಧ್ಯಪ್ರದೇಶ - ೮,೯೯೬
ಮಹಾರಾಷ್ಟ್ರ - ೮೦,೨೨೯
ಮಣಿಪುರ - ೧೩೨
ಮೇಘಾಲಯ - ೩೩
ಮಿಜೋರಾಂ - ೨೨
ನಾಗಾಲ್ಯಾಂಡ್ - ೯೪
ಒಡಿಶಾ - ೨,೬೦೮
ಪುದುಚೇರಿ - ೯೯
ಪಂಜಾಬ್ - ೨,೪೬೧
ರಾಜಸ್ಥಾನ - ೧೦,೦೮೪
ಸಿಕ್ಕಿಂ - ೩
ತಮಿಳುನಾಡು - ೨೮,೬೯೪
ತೆಲಂಗಾಣ - ೩,೨೯೦
ತ್ರಿಪುರ - ೬೯೨
ಉತ್ತರಾಖಂಡ - ೧,೨೧೫
ಉತ್ತರ ಪ್ರದೇಶ - ೯,೭೩೩
ಪಶ್ಚಿಮ ಬಂಗಾಳ - ೭,೩೦೩
ಎರಡು ತಿಂಗಳ ಸುದೀರ್ಘ ರಾಷ್ಟ್ರವ್ಯಾಪಿ ಕೋವಿಡ್ ಲಾಕ್ಡೌನ್ ನಂತರ ಮುಂದಿನ ವಾರದಿಂದ ಭಾರತವು ರಾಷ್ಟ್ರವನ್ನು "ಅನ್ಲಾಕ್" ಮಾಡಲು ಸಜ್ಜಾಗಿದೆ. ಶಾಪಿಂಗ್ ಮಾಲ್ಗಳು, ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಪೂಜಾ ಸ್ಥಳಗಳನ್ನು ಕ್ರಮೇಣ ತೆರೆಯಲು ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಜಾಗತಿಕ ಮಟ್ಟದಲ್ಲಿ, ೬೭,೦೦,೦೦೦ ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಸಾವಿನ ಸಂಖ್ಯೆ ೩,೯೪,೮೭೫ ಆಗಿದ್ದರೆ, ಈವರೆಗೆ ೨,೭೪೬,೧೯೨ ಜನರು ಚೇತರಿಸಿಕೊಂಡಿದ್ದಾರೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೬೮,೮೫,೬೯೪, ಸಾವು ೩,೯೯,೦೧೨
ಚೇತರಿಸಿಕೊಂಡವರು- ೩೩,೭೫,೭೨೬
ಅಮೆರಿಕ ಸೋಂಕಿತರು ೧೯,೬೭,೩೪೩, ಸಾವು ೧,೧೧,೪೧೨
ಸ್ಪೇನ್ ಸೋಂಕಿತರು ೨,೮೮,೦೫೮, ಸಾವು ೨೭,೧೩೪
ಇಟಲಿ ಸೋಂಕಿತರು ೨,೩೪,೫೩೧, ಸಾವು ೩೩,೭೭೪
ಜರ್ಮನಿ ಸೋಂಕಿತರು ೧,೮೫,೪೧೪, ಸಾವು ೮,೭೬೩
ಚೀನಾ ಸೋಂಕಿತರು ೮೩,೦೩೦, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೮೪,೮೬೮, ಸಾವು ೪೦,೪೬೫
ಭಾರತ ಸೋಂಕಿತರು ೨,೩೯,೬೪೪, ಸಾವು ೬,೬೭೨
ಅಮೆರಿಕದಲ್ಲಿ ೨೨, ಇರಾನಿನಲ್ಲಿ ೭೫, ಬೆಲ್ಜಿಯಂನಲ್ಲಿ ೧೪, ಇಂಡೋನೇಷ್ಯ ೩೧, ನೆದರ್ ಲ್ಯಾಂಡ್ಸ್ನಲ್ಲಿ ೬, ರಶ್ಯಾದಲ್ಲಿ ೧೯೭, ಪಾಕಿಸ್ತಾನದಲ್ಲಿ ೯೭, ಮೆಕ್ಸಿಕೋದಲ್ಲಿ ೬೨೫ ಒಟ್ಟಾರೆ ವಿಶ್ವಾದ್ಯಂತ ೧೫೬೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೧,೧೪,೦೭೩ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment