My Blog List

Tuesday, July 21, 2020

ದೇಶದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇಕಡಾ ೨.೪೩ಕ್ಕೆ ಇಳಿಕೆ

ದೇಶದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇಕಡಾ .೪೩ಕ್ಕೆ ಇಳಿಕೆ

ಮತ್ತು ೨ನೇ ಹಂತದ ಪ್ರಯೋಗದಲ್ಲಿ ಎರಡು ಲಸಿಕೆಗಳು

ನವದೆಹಲಿ: ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇಕಡಾ .೪೩ಕ್ಕೆ ಇಳಿದಿದ್ದು, ಎರಡು ಲಸಿಕೆಗಳು ಒಂದು ಮತ್ತು ಎರಡನೇ ಹಂತದ ಪ್ರಯೋಗದಲ್ಲಿವೆ. ೧೧. ಲಕ್ಷಕ್ಕೂ ಹೆಚ್ಚು ಕೋವಿಡ್ -೧೯ ಪ್ರಕರಣಗಳು 2020 ಜುಲೈ 21ರ ಮಂಗಳವಾರ ವರದಿಯಾಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩೭,೧೪೮ ಹೊಸ ಪ್ರಕರಣಗಳು ಮತ್ತು ೫೮೭ ಸಾವುಗಳು ದಾಖಲಾಗಿವೆ.

ದೇಶದಲ್ಲಿ ಒಟ್ಟಾರೆಯಾಗಿ, . ಲಕ್ಷ ಮಂದಿ ಚೇತರಿಸಿಕೊಂಡಿದ್ದು, ಕೋವಿಡ್ -೧೯ ಗೆ ಪ್ರಸ್ತುತ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಮಂಗಳವಾರ ಸತತ ಆರನೇ ದಿನ ೩೦,೦೦೦ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಜುಲೈ ೨೦ ರವರೆಗೆ ಒಟ್ಟು ,೪೩,೮೧,೩೦೩ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಮವಾರ ,೩೩,೩೯೫ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಏತನ್ಮಧ್ಯೆ, ಭಾರತದಲ್ಲಿ ಶೇ ೭೦ ರಷ್ಟು ಸಾವುಗಳು ಸಹ-ಕಾಯಿಲೆಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ದೃಢ ಪಡಿಸಿದೆ.

ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿವೆ.

ಏನಿದ್ದರೂ ಧನಾತ್ಮಕ ಸೋಂಕಿನ ಪ್ರಕರಣಗಳ ಪ್ರಮಾಣವನ್ನು ಶೇಕಡಾ ೫ಕ್ಕಿಂತ ಕಡಿಮೆ ಮಾಡುವುದು ಗುರಿ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಒಎಸ್ಡಿ ರಾಜೇಶ್ ಭೂಷಣ್, ’ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯಿಂದಾಗಿ ಭಾರತದ ಕೋವಿಡ್ -೧೯ ಪ್ರಕರಣಗಳ ಸಾವಿನ ಪ್ರಮಾಣ ಶೇಕಡಾ .೪೩ ಕ್ಕೆ ಇಳಿದಿದೆ. "ಪ್ರತಿ ದಶಲಕ್ಷ (ಮಿಲಿಯನ್) ಜನಸಂಖ್ಯೆಗೆ ಭಾರತದ ಸಾವು ೨೦. ರಷ್ಟಿದ್ದರೆ, ಜಾಗತಿಕ ಸರಾಸರಿ ೭೭ ಆಗಿದೆಎಂದು ಭೂಷಣ್ ಹೇಳಿದರು.

೧೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ದಶಲಕ್ಷ (ಮಿಲಿಯನ್) ಜನಸಂಖ್ಯೆಗೆ ದಿನಕ್ಕೆ ೧೪೦ ಕ್ಕೂ ಹೆಚ್ಚು ಕೋವಿಡ್ -೧೯ ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮೂವತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಭಾರತದ ಸರಾಸರಿಗಿಂತ ಕಡಿಮೆ ಧನಾತ್ಮಕ ಪ್ರಕರಣಗಳನ್ನು ಹೊಂದಿವೆ.

ಧನಾತ್ಮಕ ಪ್ರಕರಣಗಳ ಪ್ರಮಾಣವನ್ನು ಕಡಿಮೆ ಮಾಡಲು ತೀವ್ರ ಪರೀಕ್ಷೆ ಅಗತ್ಯ. ಧನಾತ್ಮಕ ಪ್ರಕರಣಗಳ ಮಟ್ಟವನ್ನು ಶೇಕಡಾ ಕ್ಕಿಂತ ಕಡಿಮೆ ಮಾಡಲು ಮಟ್ಟದ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ಲಸಿಕೆಗಳು:

ನಡುವೆ, ಭಾರತದಲ್ಲಿ ಎರಡು ಲಸಿಕೆಗಳು ಹಂತ ಮತ್ತು ಪ್ರಯೋಗಗಳಿಗೆ ಒಳಗಾಗುತ್ತಿವೆ ಮತ್ತು ಅಗತ್ಯವಿರುವವರಿಗೆ ಅವುಗಳನ್ನು ಹೇಗೆ ಲಭ್ಯವಾಗುವಂತೆ ಮಾಡಬೇಕೆಂದು ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ ಎಂದು ನೀತಿ ಆಯೋಗ ತಿಳಿಸಿದೆ.

"ಭಾರತದ ಜನರು ಮತ್ತು ಅಂತಾರಾಷ್ಟ್ರೀಯ ಸಮುದಾಯವು ಸಾಧ್ಯವಾದಷ್ಟು ಬೇಗ ಭಾರತೀಯ ಲಸಿಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಶತ ಪ್ರಯತ್ನ ಮಾಡುತ್ತಿದೆ. ಪ್ರಯೋಗಗಳನ್ನು ವೈಜ್ಞಾನಿಕವಾಗಿ ಮತ್ತು ನೈತಿಕವಾಗಿ ನಡೆಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಬಳಸಲಾಗುವುದು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದರು.

No comments:

Advertisement