My Blog List

Wednesday, July 22, 2020

ಮನೆ ಮಂದಿಯಿಂದಲೇ ಕೊರೋನಾ ಬರುವುದೇ?

ಮನೆ ಮಂದಿಯಿಂದಲೇ ಕೊರೋನಾ ಬರುವುದೇ?

ಸಿಯೋಲ್: ಹೊರಗಿನ ಸಂಪರ್ಕಕ್ಕಿಂತಲೂ ಹೆಚ್ಚಾಗಿ ಮನೆ ಮಂದಿಯ ಜೊತೆಗಿನ ಸಂಪರ್ಕದಿಂದಲೇ ಹೊಸದಾಗಿ ಕೊರೋನಾವೈರಸ್ ಸೋಂಕು ತಗುಲುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ದಕ್ಷಿಣ ಕೊರಿಯಾದ ಸಾಂಕ್ರಾಮಿಕ ತಜ್ಞರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.

ಜುಲೈ ೧೬ ರಂದು ಅಮೆರಿಕದ ರೋಗ ನಿಯಂತ್ರಣ ಮತ್ತು ಮುಂಜಾಗ್ರತೆ ತಡೆ ಕೇಂದ್ರವು (ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್-ಸಿಡಿಸಿ) ಪ್ರಕಟಿಸಿರುವ ಅಧ್ಯಯನವು ಕೊರೋನವೈರಸ್ ಸೋಂಕಿದ  ,೭೦೬ಸೂಚ್ಯಂಕ ರೋಗಿಗಳು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ೫೯,೦೦೦ ಕ್ಕೂ ಹೆಚ್ಚು ಜನರನ್ನು ವಿವರವಾಗಿ ಪರಿಶೀಲಿಸಿ ನಿರ್ಣಯಕ್ಕೆ ಬಂದಿದೆ.

ಸೋಂಕಿತ ೧೦೦ ಜನರಲ್ಲಿ ಕೇವಲ ಇಬ್ಬರು ಮನೆಯ ಹೊರತಾದ ಸಂಪರ್ಕಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ಆದರೆ ೧೦ ಮಂದಿಯಲ್ಲಿ ಒಬ್ಬರು ತಮ್ಮ ಕುಟುಂಬಗಳಿಂದ ಸೋಂಕಿಗೆ ಒಳಗಾಗಿದ್ದಾರೆ.

ವಯಸ್ಸಿನ ಪ್ರಕಾರ, ಮೊದಲ ಸೋಂಕಿತ ವ್ಯಕ್ತಿ ಹದಿಹರೆಯದವನಾಗಿದ್ದರೆ ಅಥವಾ ೬೦ರಿಂದ ೭೦ ವರ್ಷ ವಯಸ್ಸಿನವರಾಗಿದ್ದರೆ ಮನೆಯೊಳಗಿನ ಸೋಂಕಿನ ಪ್ರಮಾಣವು ಹೆಚ್ಚಾಗಿದ್ದುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

" ವಯೋಮಾನದವರು ಕುಟುಂಬ ಸದಸ್ಯರೊಂದಿಗೆ ಹೆಚ್ಚು ನಿಕಟ ಸಂಪರ್ಕದಲ್ಲಿರುವುದರಿಂದ ಮತ್ತು ಗುಂಪಿಗೆ ಮನೆಯ ಸದಸ್ಯರಿಂದ ಹೆಚ್ಚಿನ ರಕ್ಷಣೆ ಅಥವಾ ಬೆಂಬಲ ಬೇಕಾಗುವುದರಿಂದ ಇತರರ ಜೊತೆ ಅವರ ಸಾಮೀಪ್ಯ ಹೆಚ್ಚುವುದೇ ಸೋಂಕು ಹರಡಲು ಕಾರಣ ಎಂದು ಕೊರಿಯಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಕೆಸಿಡಿಸಿ) ನಿರ್ದೇಶಕ ಜಿಯಾಂಗ್ ಯುನ್-ಕಿಯೊಂಗ್ ಹೇಳಿದರು. ಕಿಯೊಂಗ್ ಅವರು ಅಧ್ಯಯನದ ಲೇಖಕರಲ್ಲಿ ಒಬ್ಬರಾಗಿದ್ದಾರೆ.

ಒಂಬತ್ತು ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಸೂಚ್ಯಂಕದ ರೋಗಿಗಳಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನದ ಸಹ ನೇತೃತ್ವ ವಹಿಸಿದ್ದ ಹ್ಯಾಲಿಮ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ಸಹಾಯಕ ಪ್ರಾಧ್ಯಾಪಕ ಡಾ. ಚೋ ಯಂಗ್-ಜೂನ್ ಹೇಳಿದರು,

ಅಧ್ಯಯನಕ್ಕೆ ಒಳಪಡಿಸಲಾದ ೨೦ರಿಂದ ೨೯ ವಯಸ್ಸಿನ ,೬೯೫ ಸಂಖ್ಯೆಗೆ ಹೋಲಿಸಿದರೆ, ಅಧ್ಯಯನಕ್ಕೆ ಒಳಪಡಿಸಲಾದ ಒಂಬತ್ತಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಕಡಿಮೆ. ವಯಸ್ಸಿನ ಕೇವಲ ೨೯ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು ಎಂದು ಅವರು ಹೇಳಿದರು.

ಕೋವಿಡ್ -೧೯ ಹೊಂದಿರುವ ಮಕ್ಕಳು ವಯಸ್ಕರಿಗೆ ಹೋಲಿಸಿದರೆ ರೋಗಲಕ್ಷಣ ಇಲ್ಲದವರಾಗಿದ್ದರು, ಹೀಗಾಗಿ ಗುಂಪಿನೊಳಗಿನ ಸೂಚ್ಯಂಕ ಪ್ರಕರಣಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು.

"ಕೋವಿಡ್ -೧೯ ಸೋಂಕುವುದಕ್ಕೆ ಸಂಬಂಧಿಸಿದಂತೆ ವಯಸ್ಸಿನ ವ್ಯತ್ಯಾಸವು ಯಾವುದೇ ಮಹತ್ವವನ್ನು ಹೊಂದಿಲ್ಲ. ಮಕ್ಕಳು ವೈರಸ್ ಹರಡುವ ಸಾಧ್ಯತೆ ಕಡಿಮೆ, ಆದರೆ ಸಿದ್ಧಾಂತವನ್ನು ದೃಡೀಕರಿಸಿಲು ನಮ್ಮ ಅಂಕಿಸಂಖ್ಯೆ ಸಾಕಾಗುವುದಿಲ ಎಂದು ಚೋ ಹೇಳಿದರು.

ಜನವರಿ ೨೦ ಮತ್ತು ಮಾರ್ಚ್ ೨೭ರ ನಡುವೆ, ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿದ್ದಾಗ ಮತ್ತು ಕೊರಿಯಾದಲ್ಲಿ ದೈನಂದಿನ ಸೋಂಕುಗಳು ಉತ್ತುಂಗಕ್ಕೆ ಏರುತ್ತಿದ್ದಾಗ ಅಧ್ಯಯನ ನಡೆಸಿ ಅಂಕಿಸಂಖ್ಯೆ ಸಂಗ್ರಹಿಸಲಾಗಿತ್ತು.

ಕೆಸಿಡಿಸಿಯು ಸೋಮವಾರದ ವೇಳೆಗೆ ೪೫ ಹೊಸ ಸೋಂಕುಗಳನ್ನು ವರದಿ ಮಾಡಿz. ಕೊರಿಯಾ ದೇಶದ ಒಟ್ಟು ಪ್ರಕರಣಗಳು ೨೯೬ ಸಾವುಗಳೊಂದಿಗೆ ೧೩,೮೧೬ ಕ್ಕೆ ತಲುಪಿವೆ.

No comments:

Advertisement