My Blog List

Monday, August 24, 2020

ಚೀನಾಕ್ಕೆ ಭಾರತದ ಎದಿರೇಟು, ದ್ವೀಪಗಳಲ್ಲಿ ಮಿಲಿಟರಿ ಸವಲತ್ತು

 ಚೀನಾಕ್ಕೆ ಭಾರತದ ಎದಿರೇಟು, ದ್ವೀಪಗಳಲ್ಲಿ ಮಿಲಿಟರಿ ಸವಲತ್ತು

ನವದೆಹಲಿ
: ಚೀನಾದ ನೌಕಾಪಡೆಯು ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಇರಾನ್‌ನ ಬಂದರುಗಳ ಮೂಲಕ ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾಗಿರುವುದಕ್ಕೆ ಪ್ರತಿಯಾಗಿ, ಭಾರತವು ತನ್ನ ದ್ವೀಪ ಪ್ರದೇಶಗಳಲ್ಲಿ ತ್ವರಿತವಾಗಿ ಮೂಲಸೌಕರ್ಯ ನವೀಕರಣಕ್ಕೆ ಯೋಜಿಸುತ್ತಿದೆ, ತನ್ಮೂಲಕ ಸಮುದ್ರಯಾನಕ್ಕೆ ಯಾವುದೇ ಧಕ್ಕೆಯಾಗದಂತೆ ಮತ್ತು ಭಾರತೀಯ ಹಿತ್ತಲಿನಲ್ಲಿ ದಕ್ಷಿಣ ಚೀನಾ ಮರುಸೃಷ್ಟಿಯಾಗದಂತೆ ತಡೆಯಲು ಭಾರತ ಉದ್ದೇಶಿಸಿದೆ.

ಉನ್ನತ ಸೇನಾ ಅಧಿಕಾರಿಗಳ ಪ್ರಕಾರ, ಭಾರತವು ಉತ್ತರ ಅಂಡಮಾನಿನ ಐಎನ್‌ಎಸ್ ಕೊಹಸ್ಸಾ, ಶಿಬ್‌ಪುರ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್‌ಬೆಲ್ ಭಾಗವನ್ನು ಪೂರ್ಣ ಪ್ರಮಾಣದ ಯುದ್ಧ ನೆಲೆಗಳಾಗಿ ನವೀಕರಿಸಲಿದೆ. ಲಕ್ಷದ್ವೀಪದ ಅಗತ್ತಿಯಲ್ಲಿರುವ ವಾಯುನೆಲೆಯನ್ನು ಸೇನಾ ಕಾರ್ಯಾಚರಣೆಗಾಗಿ ನವೀಕರಿಸುವುದರಿಂದ ಬಂಗಾಳಕೊಲ್ಲಿಯಲ್ಲಿ ಮಲಕ್ಕಾ ಜಲಸಂದಿವರೆಗೆ ಮತ್ತು ಅರಬ್ಬೀ ಸಮುದ್ರದಲ್ಲಿ ಅಡೆನ್ ಕೊಲ್ಲಿಯವರೆಗಿನ ಭಾಗವನ್ನು ಭದ್ರ ಪಡಿಸಿಕೊಳ್ಳಲು ಭಾರತಕ್ಕೆ ಅನುಕೂಲವಾಗಲಿದೆ.

"ಎರಡು ದ್ವೀಪ ಪ್ರದೇಶಗಳು ಭಾರತಕ್ಕೆ ಹೊಸ ವಿಮಾನವಾಹಕ ನೌಕೆಗಳಂತೆ ಇರುತ್ತವೆ, ಇದು ಮುಖ್ಯ ಭೂಭಾಗದಿಂದ ದೂರದಲ್ಲಿರುವ ಪ್ರದೇಶದಲ್ಲಿ ನೌಕಾಪಡೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಎರಡೂ ದ್ವೀಪಗಳು ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಪಥಗಳಲ್ಲಿ ಇದ್ದು, ಮಾರ್ಗದ ಮೂಲಕ ವಿಶ್ವ ವ್ಯಾಪಾರದ ಅರ್ಧಕ್ಕಿಂತ ಹೆಚ್ಚಿನ ವ್ಯಾಪಾರ ನಡೆಯುತ್ತಿದೆ ಎಂದು  ತ್ರಿ ಸೇವಾ ಕಮಾಂಡರ್ 2020 ಆಗಸ್ಟ್ 24ರ ಸೋಮವಾರ ಹೇಳಿದರು.

ಲಕ್ಷದ್ವೀಪವು ಒಂಬತ್ತು ಡಿಗ್ರಿ ಚಾನೆಲ್‌ನಲ್ಲಿ ಇದೆ, ಏಕೆಂದರೆ ಇದು ಸಮಭಾಜಕದ ಉತ್ತರಕ್ಕೆ ಡಿಗ್ರಿ ಅಕ್ಷಾಂಶ ರೇಖೆಯಲ್ಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಗ್ನೇಯ ಏಷ್ಯಾ ಮತ್ತು ಉತ್ತರ ಏಷ್ಯಾದ ಕಡೆಗೆ ಆರು ಡಿಗ್ರಿ ಮತ್ತು ಹತ್ತು ಡಿಗ್ರಿ ಚಾನೆಲ್‌ಗಳಲ್ಲಿ ನೌಕಾಪಡೆಯು ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಡುತ್ತದೆ.

ಕಳೆದ ೭೦ ವರ್ಷಗಳಿಂದ ನೆನೆಗುದಿಯಲ್ಲಿದ್ದ ಥಾಯ್ ಕಾಲುವೆ ಅಕಾ ಕ್ರಾ ಕಾಲುವೆಯ ಕಾಮಗಾರಿ ಪ್ರಾರಂಭಿಸಲು ಚೀನಾವು ತುರ್ತು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಕ್ರಮದ ಬಗ್ಗೆ ಚಿಂತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕಾಕಿನಿಂದ ದಕ್ಷಿಣಕ್ಕೆ ೮೦೦ ಕಿ.ಮೀ ದೂರದಲ್ಲಿರುವ ಮಲಯ ಪರ್ಯಾಯ ದ್ವೀಪವನ್ನು ತುಂಡರಿಸಿ ಥಾಯ್ ಕಾಲುವೆಯನ್ನು ರಚಿಸುವ ಮೂಲಕ ಥೈಲ್ಯಾಂಡ್ ಕೊಲ್ಲಿಯನ್ನು ಅಂಡಮಾನ್ ಸಮುದ್ರದೊಂದಿಗೆ ಸಂಪರ್ಕಿಸಲು ಚೀನಾ ಉದ್ದೇಶಿಸಿದೆ.

ಇದು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರದ ನಡುವಿನ ಪ್ರಮುಖ ಹಡಗು ಮಾರ್ಗವಾದ ಮಲಕ್ಕಾ ಜಲಸಂಧಿಯನ್ನು ಉಸಿರುಗಟ್ಟಿಸಿ ಬೈಪಾಸ್ ಮಾಡಲು ಹಡಗುಗಳಿಗೆ ಅವಕಾಶ ನೀಡುತ್ತದೆ. ಮಲಕ್ಕಾ ಜಲಸಂಧಿಯು ವಿಶ್ವದ ಅತ್ಯಂತ ಜನನಿಬಿಡ ವ್ಯಾಪಾರ ಮಾರ್ಗವಾಗಿದೆ. ಹಿಂದೂ ಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಹಾದುಹೋಗುವ ಹಡಗುಗಳಿಗೆ, ಕನಿಷ್ಠ ,೨೦೦ ಕಿ.ಮೀ.ದೂರವನ್ನು ಇದು ಕಡಿಮೆ ಮಾಡುತ್ತದೆ.

ಕ್ರಾ ಕಾಲುವೆಗೆ ಸಂಬಂಧಿಸಿದಂತೆ ಭಾರತದ ಆಯಕಟ್ಟಿನ  ಸಮುದಾಯದಲ್ಲಿ ಏಕತೆ ಇಲ್ಲ. ಒಂದು ವರ್ಗವು ಚೀನಾವು ತನ್ನ ಬೆಲ್ಟ್ ಅಂಡರ್ ರೋಡ್ ಉಪಕ್ರಮದ ಅಡಿಯಲ್ಲಿ ಅಭಿವೃದ್ಧಿ ಪಡಿಸಲಿರುವ ಕಾಲುವೆಯು ಭಾರತದ ದೀರ್ಘಕಾಲೀನ ನೌಕಾಯಾನ ಭದ್ರತೆಗೆ ಹಾನಿ ಉಂಟು ಮಾಡುವುದು ಎಂದು ಅಭಿಪ್ರಾಯಪಟ್ಟಿದೆ. ಆದರೆ ಪ್ರಬಲವಾದ ಇನ್ನೊಂದು ವರ್ಗವು ಬ್ಯಾಂಕಾಕಿನ ಮೇಲೆ ಚೀನಾ ಬಲವಾದ ಆರ್ಥಿಕ ಒತ್ತಡ ಹಾಕುವುದರಿಂದ ಥಾಯ್  ಕಾಲುವೆ ನಿರ್ಮಾಣ ಅನಿವಾರ್ಯವಾಗಬಹುದು ಎಂದು ಹೇಳಿದೆ.

ಯೋಜನೆ ಬಗ್ಗೆ ಅಧ್ಯಯನಕ್ಕಾಗಿ ತಾತ್ಕಾಲಿಕ ಸಮಿತಿಯೊಂದನ್ನು ರಚಿಸಲು ಥಾಯ್ಲೆಂಡ್ ವರ್ಷ ನಿರ್ಧರಿಸಿದಾಗ, ಥಾಯ್ಲೆಂಡಿನ ಛಿದ್ರ ರಾಜಕೀಯ ವರ್ಗವು ಅದನ್ನು ಬೆಂಬಲಿಸಲು ಪ್ರಚಂಡ ಬೆಂಬಲ ನೀಡಿದ್ದು ಹಲವರ ಹುಬ್ಬೇರಿಸಿತ್ತು. ಚೀನಾ ವಿರೋಧಿ ಪಕ್ಷಗಳು ಎಂಬುದಾಗಿಯೇ ಬಿಂಬಿತವಾಗಿದ್ದ ಪಕ್ಷಗಳು ಕೂಡಾ ಕ್ರಾ ಕಾಲುವೆ ನಿರ್ಮಾಣವನ್ನು ಬೆಂಬಲಿಸಿದ್ದವು. ಆದಾಗ್ಯೂ ಥಾಯ್ ದೊರೆ ಕ್ರಾ ಕಾಲುವೆ ಯೋಜನೆಗೆ ಈಗಲೂ ವಿರುದ್ಧವಾಗಿದ್ದಾರೆ.

ತನ್ನದೇ ಆದ ಸವಾಲಗಳನ್ನು ಎದುರಿಸುತ್ತಿರುವ ಭಾರತವು ಸದರಿ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ನಂಬುತ್ತಾರೆ. ಕ್ರಾ ಕಾಲುವೆಯು ಮಲಾಕ್ಕಾ ಅಥವಾ ಕ್ರಾ ಕಾಲುವೆಗೆ ತೆರಳುವ ಹಡಗುಗಳಿಗೆ ಸಾಗಣೆ ಬಂದರುಗಳನ್ನು ನೀಡುತ್ತದೆ. ಈಗ ಹಡಗುಗಳು ಶ್ರೀಲಂಕಾದ ಬಂದರುಗಳಲ್ಲಿ ತಮ್ಮ ಸರದಿಗಾಗಿ ಕಾಯುತ್ತವೆ, ಇದು ಶ್ರೀಲಂಕಾಕ್ಕೆ ಅಗಾಧ ಪ್ರಮಾಣದ ವಿದೇಶಿ ವಿನಿಮಯವನ್ನು ಮತ್ತು ಹತೋಟಿಯನ್ನು ಒದಗಿಸಿದೆ.

ದ್ವೀಪ ಪ್ರಾಂತ್ಯಗಳಲ್ಲಿನ ಮೂಲಸೌಕರ್ಯ ನವೀಕರಣವು ಅವಳಿ ಉದ್ದೇಶಗಳನ್ನು ಪೂರೈಸುತ್ತದೆ ಎಂದು ವಾದಿಸಲಾಗಿದೆ: ಒಂದು, ಆರ್ಥಿಕ ಲಾಭಗಳನ್ನು ಹೆಚ್ಚಿಸಲು ಭಾರತವನ್ನು ಶಕ್ತಗೊಳಿಸುತ್ತದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸೇನಾ ಉಪಸ್ಥಿತಿಯನ್ನು ಹೆಚ್ಚಿಸುತ್ತದೆ.

ಮೂಲಸೌಕರ್ಯ ನವೀಕರಣದ ಬಗ್ಗೆ ನಿರಂತರ ಗಮನವು ಲಡಾಖ್‌ನಲ್ಲಿನ ಚೀನಾದ ಆಕ್ರಮಣಕಾರಿ ನಡೆಗಳ ಹಿನ್ನೆಲೆ ಮತ್ತು ಯಥಾಸ್ಥಿತಿ ಪುನಃಸ್ಥಾಪಿಸಲು ಅದು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲೂ ಮಹತ್ವ ಪಡೆದುಕೊಂಡಿದೆ.

ಚೀನಾದ ಆಕ್ರಮಣಕಾರಿ ನಡೆಯಿಂದಾಗಿ ಭಾರತವು ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ)  ತನ್ನ ಸೇನಾ ನಿಯೋಜನೆಯನ್ನು ಬಲಪಡಿಸಲು ಕ್ರಮ ಕೈಗೊಂಡಿದೆ.

ಚೀನಾದೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಪರ್ಷಿಯನ್ ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿಯವರೆಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿದೆ. ನೌಕಾಪಡೆಗೆ ಸೂಚನೆಗಳು ಸ್ಪಷ್ಟವಾಗಿವೆ: ಚೀನಾ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ದಾಳಿಯನ್ನು ಹೆಚ್ಚಿಸಿದರೆ ಮಿಲಿಟರಿ ಕ್ರಮಕ್ಕೆ ಸಿದ್ಧರಾಗಿರಬೇಕು ಎಂಬ ಸ್ಪಷ್ಟ ಸೂಚನೆಗಳನ್ನು ನೌಕಾಪಡೆಗೆ ನೀಡಲಾಗಿದೆ.

ದ್ವೀಪ ಪ್ರದೇಶಗಳಲ್ಲಿನ ವಾಯುನೆಲೆಗಳ ನವೀಕರಣವು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸದಂತೆ ಖಾತರಿ ನೀಡುವುದು ಎಂದೂ ಭಾರತೀಯ ಸೇನಾ ಅಧಿಕಾರಿಗಳು ಒತ್ತಿ ಹೇಳಿದರು.

No comments:

Advertisement