My Blog List

Tuesday, September 29, 2020

1959ರ ಎಲ್‌ಎಸಿ ವ್ಯಾಖ್ಯಾನ ಎಂದಿಗೂ ಸ್ವೀಕರಿಸಿಲ್ಲ: ಭಾರತ

 1959ರ ಎಲ್ಎಸಿ ವ್ಯಾಖ್ಯಾನ  ಎಂದಿಗೂ ಸ್ವೀಕರಿಸಿಲ್ಲ: ಭಾರತ

ನವದೆಹಲಿ: ಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ ೧೯೫೯ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿ) ತಾನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಭಾರತ 2020 ಸೆಪ್ಟೆಂಬರ್ 29ರ ಮಂಗಳವಾರ ಖಡಕ್ಕಾಗಿ ಹೇಳಿದ್ದು, ಚೀನಾದೊಂದಿಗಿನ ವಿವಿಧ ಒಪ್ಪಂದಗಳು ಎರಡೂ ದೇಶಗಳನ್ನು ಗಡಿಯ ಜೋಡಣೆಯ ಸಾಮಾನ್ಯ ತಿಳುವಳಿಕೆಗೆ ಬದ್ಧವಾಗಿರಿಸಿವೆ ಎಂದು ತಿಳಿಸಿತು.

ಚೀನಾದ ಪ್ರಧಾನ ಮಂತ್ರಿ ಚೌ ಎನ್ ಲೈ ಅವರು ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ನವೆಂಬರ್ , ೧೯೫೯ ಪತ್ರದಲ್ಲಿ ಪ್ರಸ್ತಾಪಿಸಿದ ಎಲ್ಎಸಿಗೆ ಬದ್ಧವಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ ಪತ್ರಿಕಾ ವರದಿಯೊಂದಕ್ಕೆ ವಿದೇಶಾಂಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿಕ್ರಿಯೆಯನ್ನು ನೀಡಿತು.

೧೯೬೧ರಲ್ಲಿ ಚೀನಾದ ನಿಲುವನ್ನು ಮೊದಲ ಬಾರಿಗೆ ತಿರಸ್ಕರಿಸಿದಂದಿನಿಂದ ಕಳೆದ ೬೧ ವರ್ಷಗಳಿಂದ ಭಾರತವು ಚೀನೀಯರ ಕಲ್ಪನಾ ಗಡಿಯನ್ನು ತಿರಸ್ಕರಿಸುತ್ತಲೇ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತು.

ಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ ೧೯೫೯ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಭಾರತ ಎಂದಿಗೂ ಸ್ವೀಕರಿಸಿಲ್ಲ. ನಿಲುವು ಸ್ಥಿರವಾದುದಾಗಿದ್ದು ಚೀನಾವೂ ಸೇರಿದಂತೆ ಎಲ್ಲರಿಗೂ ಗೊತ್ತಿರುವಂತಹುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು.

ಹಲವಾರು ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ - ಎಲ್ಎಸಿಯ ಉದ್ದಕ್ಕೂ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಕುರಿತ ೧೯೯೩ ಒಪ್ಪಂದ, ಮಿಲಿಟರಿ ಕ್ಷೇತ್ರದಲ್ಲಿ ೧೯೯೬ ವಿಶ್ವಾಸಾರ್ಹತೆ ವರ್ಧಿಸುವ ಕ್ರಮಗಳ ಒಪ್ಪಂದ (ಸಿಬಿಎಂ), ಸಿಬಿಎಂಗಳ ಅನುಷ್ಠಾನದ ೨೦೦೫ ಶಿಷ್ಟಾಚಾರ ಮತ್ತು ೨೦೦೫ ಒಪ್ಪಂದಗಳ ಬಗ್ಗೆ ಶ್ರೀವಾಸ್ತವ ಗಮನಸೆಳೆದರು. ಭಾರತ-ಚೀನಾ ಗಡಿ ಪ್ರಶ್ನೆ ಇತ್ಯರ್ಥಕ್ಕೆ ರಾಜಕೀಯ ನಿಯತಾಂಕಗಳು ಮತ್ತು ಮಾರ್ಗದರ್ಶಿ ಸೂತ್ರಗಳು - ಭಾರತ ಮತ್ತು ಚೀನಾಗಳುಎಲ್ಎಸಿಯ ಜೋಡಣೆಯ ಸಾಮಾನ್ಯ ತಿಳುವಳಿಕೆಯನ್ನು ತಲುಪಲು ಎಲ್ಎಸಿಯ ಸ್ಪಷ್ಟೀಕರಣ ಮತ್ತು ದೃಢೀಕರಣಕ್ಕೆ ಬದ್ಧವಾಗಿವೆ ಎಂಬುದಾಗಿ ಸ್ಪಷ್ಟ ಪಡಿಸಿವೆ ಎಂದು ಅವರು ನುಡಿದರು.

"ಆದ್ದರಿಂದ, ಕೇವಲ ಒಂದು ಎಲ್ಎಸಿ ಮಾತ್ರ ಇದೆ ಎಂದು ಚೀನಾದ ಕಡೆಯಿಂದ ಒತ್ತಾಯಿಸುವುದು ಒಪ್ಪಂದಗಳಲ್ಲಿ ಚೀನಾ ಮಾಡಿದ ಗಂಭೀರ ಬದ್ಧತೆಗಳಿಗೆ ವಿರುದ್ಧವಾಗಿದೆ ಎಂದು ಶ್ರೀವಾಸ್ತವ ಹೇಳಿದರು.

ಸುಮಾರು ಎರಡು ದಶಕಗಳಿಂದ ಗಡಿಯನ್ನು ಸ್ಪಷ್ಟಪಡಿಸುವ ಮತ್ತು ದೃಢೀಕರಿಸುವ ಪ್ರಕ್ರಿಯೆಯಲ್ಲಿ ಪ್ರಗತಿಯ ಕೊರತೆಯಾಗಿರುವುದಕ್ಕೆ ವಿದೇಶಾಂಗ ವ್ಯವಹಾರಗಳ ಇಲಾಖೆಯು ಸಂಪೂರ್ಣವಾಗಿ ಚೀನಾವನ್ನು ದೂಷಿಸಿತು.

"ವಾಸ್ತವವಾಗಿ, ೨೦೦೩ ರವರೆಗೆ ಎಲ್ಎಸಿಯನ್ನು ಸ್ಪಷ್ಟಪಡಿಸಲು ಮತ್ತು ದೃಢೀಕರಿಸಲು ಉಭಯ ಕಡೆಯವರು ಕಸರತ್ತಿನಲ್ಲಿ ತೊಡಗಿದ್ದರು, ಆದರೆ ಚೀನಾದ ಕಡೆಯವರು ಅದನ್ನು ಮುಂದುವರೆಸಲು ಇಚ್ಛೆ ತೋರಿಸದ ಕಾರಣ ಪ್ರಕ್ರಿಯೆಯು ಮತ್ತಷ್ಟು ಮುಂದುವರೆಯಲು ಸಾಧ್ಯವಾಗಲಿಲ್ಲ ಎಂದು ಶ್ರೀವಾಸ್ತವ ನುಡಿದರು.

ಚೀನಾದ ಕಡೆಯವರು ಅಳವಡಿಸಿಕೊಂಡಿರುವ ನಿಲುವಿನಲ್ಲಿ ಸ್ಪಷ್ಟವಾದ ದ್ವಂದ್ವವನ್ನು ಭಾರತವು ಗುರುತಿಸಿದೆ. ೧೯೫೯ ಎಲ್ಎಸಿಗೆ ಬದ್ಧರಾಗಿರಲು ಒತ್ತಾಯಿಸುತ್ತಲೇ, ಒಪ್ಪಂದಗಳ ಆಧಾರದ ಮೇಲೆ ಸಮಸ್ಯೆಯನ್ನು ಬಗೆಹರಿಸಲು ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳಲ್ಲಿ ಪಾಲ್ಗೊಂಡಿರುವ ಚೀನಾದ ವರ್ತನೆ ಇದಕ್ಕೆ ಉದಾಹರಣೆ ಎಂದು ಅವರು ಹೇಳಿದರು.

"ಕಳೆದ ಕೆಲವು ತಿಂಗಳುಗಳಲ್ಲಿ, ಉಭಯ ದೇಶಗಳ ನಡುವೆ ಸಹಿ ಹಾಕಿದ ಒಪ್ಪಂದಗಳಿಗೆ ಅನುಗುಣವಾಗಿ ಗಡಿ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಪರಿಹರಿಸಬೇಕು ಎಂದು ಚೀನಾದ ಕಡೆಯವರು ಪದೇ ಪದೇ ದೃಢ ಪಡಿಸಿದ್ದಾರೆ. ಸೆಪ್ಟೆಂಬರ್ ೧೦ ರಂದು ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯ ಸಂದರ್ಭದ ಮಾತುಕತೆಯ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಅವರ ಚೀನಾದ ಅಧಿಕಾರಿ ವಾಂಗ್ ಯಿ ನಡುವೆ ಮಾಡಿಕೊಳ್ಳಲಾದ ಒಪ್ಪಂದದಲ್ಲೂ ಚೀನಾವು ಹಾಲಿ ಒಪ್ಪಂದಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಶ್ರೀವಾಸ್ತವ ಬೊಟ್ಟು ಮಾಡಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತವುಯಾವಾಗಲೂ ಎಲ್ಎಸಿಯನ್ನು ಗೌರವಿಸುತ್ತದೆ ಮತ್ತು ಪಾಲಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿ, ’ಚೀನಾವು ಪಶ್ಚಿಮ ವಲಯದ ವಿವಿಧ ಭಾಗಗಳಲ್ಲಿ ಎಲ್ಎಸಿಯನ್ನು ಉಲ್ಲಂಘಿಸುವ ಪ್ರಯತ್ನಗಳ ಮೂಲಕ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದೆ ಎಂದು ತಿಳಿಸಿದ್ದರು.

"ಆದ್ದರಿಂದ ಚೀನಾದ ಕಡೆಯವರು ಎಲ್ಲಾ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಪಾಲಿಸುತ್ತಾರೆ ಮತ್ತು ಎಲ್ಎಸಿಯಯ ಏಕಪಕ್ಷೀಯ ವ್ಯಾಖ್ಯಾದ ಮುಂದುವರಿಕೆಯನ್ನು ನಿಲ್ಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಶ್ರೀವಾಸ್ತವ ನುಡಿದರು.

ಮೇ ಆರಂಭದಿಂದಲೂ, ಭಾರತ ಮತ್ತು ಚೀನಾ ಎಲ್ಎಸಿಯ ಲಡಾಕ್ ವಲಯದಲ್ಲಿ ಘರ್ಷಣೆಯಲ್ಲಿ ತೊಡಗಿದ್ದು, ಇದು ದ್ವಿಪಕ್ಷೀಯ ಸಂಬಂಧಗಳನ್ನು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ. ಉಭಯ ಕಡೆಯವರು ಪ್ರದೇಶದಲ್ಲಿ ತಲಾ ೫೦,೦೦೦ ಕ್ಕೂ ಹೆಚ್ಚು ಸೈನಿಕರನ್ನು ಸಜ್ಜುಗೊಳಿಸಿದ್ದಾರೆ ಮತ್ತು ಈಗ ಕಠಿಣ ಚಳಿಗಾಲಕ್ಕಾಗಿ ಸಿದ್ಧತೆಗಳನ್ನು ನಡೆಸಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಜೂನ್ ೧೫ ರಂದು ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಚೀನಾದ ಕಡೆಯಲ್ಲೂ ಅನಿರ್ದಿಷ್ಟ ಸಾವುನೋವುಗಳಿಗೆ ಸಂಭವಿಸಿದ್ದವು. ಆಗಸ್ಟ್ ಅಂತ್ಯದ ನಂತರ ಎರಡೂ ಕಡೆಯ ಸೈನಿಕರು ಹಲವಾರು ಸಂದರ್ಭಗಳಲ್ಲಿ ಎಚ್ಚರಿಕೆಯ ಗುಂಡೇಟುಗಳನ್ನು  ಹಾರಿಸಿದ್ದಾರೆ, ೧೯೭೫ ರಿಂದ ಮೊದಲ ಬಾರಿಗೆ ಶಸ್ತ್ರಾಸ್ತ್ರಗಳನ್ನು ಎಲ್ಎಸಿ ಉದ್ದಕ್ಕೂ ಬಳಸಲಾಗಿದೆ.

ಗಡಿ ವ್ಯವಹಾರಗಳ ಕುರಿತು ಕೋರ್ ಕಮಾಂಡರ್ಗಳು ಮತ್ತು ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್ (ಡಬ್ಲ್ಯುಎಂಸಿಸಿ) ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದರೂ ಪ್ರಕ್ಷುಬ್ಧತೆ ಶಮನ ಪ್ರಕ್ರಿಯೆಯಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ, ಆದರೂ ಮಿಲಿಟರಿ ಕಮಾಂಡರ್ಗಳು ತಮ್ಮ ಕೊನೆಯ ಸಭೆಯಲ್ಲಿ ಉಭಯ ಕಡೆಯಲ್ಲೂ ಮುಂಚೂಣಿ ಭಾಗದಲ್ಲಿ ಸೇನೆಯನ್ನು ನಿಯೋಜಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಡಬ್ಲ್ಯುಎಂಸಿಸಿ ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಲು ಸಜ್ಜಾಗಿದೆ.

No comments:

Advertisement