Tuesday, October 13, 2020

ಎಲ್‌ಎಸಿಯಲ್ಲಿ ೧ ಲಕ್ಷ ಸೈನಿಕರು: ಲಡಾಖ್ ಬಿಕ್ಕಟ್ಟು ಶೀಘ್ರ ಇತ್ಯರ್ಥ ಅಸಂಭವ

 ಎಲ್ಎಸಿಯಲ್ಲಿ ಲಕ್ಷ ಸೈನಿಕರು: ಲಡಾಖ್ ಬಿಕ್ಕಟ್ಟು ಶೀಘ್ರ ಇತ್ಯರ್ಥ ಅಸಂಭವ

ನವದೆಹಲಿ: ಭಾರತದ ಉತ್ತರ ಗಡಿಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ಧಕ್ಕೂ ಭಾರತ ಮತ್ತು ಚೀನಾದ  ಸುಮಾರು ಲಕ್ಷ ಸೈನಿಕರನ್ನು ನಿಯೋಜಿಸಲಾಗಿರುವುದರಿಂದ ಲಡಾಖ್ ಗಡಿ ಬಿಕ್ಕಟ್ಟಿಗೆ ಶೀಘ್ರ ಇತ್ಯರ್ಥ ಅಸಂಭವವಾಗಿದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 13ರ ಮಂಗಳವಾರ ತಿಳಿಸಿವೆ.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನತೆಯನ್ನು ನಿವಾರಿಸುವ ಪ್ರಯತ್ನದಲ್ಲಿ, ಭಾರತ ಮತ್ತು ಚೀನಾ ನಡುವೆ ಕೋರ್ ಕಮಾಂಡರ್-ಮಟ್ಟದ ಮಾತುಕತೆ ಅಕ್ಟೋಬರ್ ೧೨ ರಂದು ನಡೆಯಿತು. ಪ್ಯಾಂಗೊಂಗ್ ತ್ಸೋ ಸರೋವರದ ತೀರದಿಂದ ಮತ್ತು ಲಡಾಖ್ ಇತರ ಘರ್ಷಣೆ ಕೇಂದ್ರಗಳಿಂದ ಚೀನೀ ಸೈನಿಕರು ವಾಪಸಾಗಬೇಕು ಏಪ್ರಿಲ್ ತಿಂಗಳ ಯಥಾಸ್ಥಿತಿ ಪುನಃಸ್ಥಾಪಿಸಬೇಕು ಎಂದು ಸಭೆಯಲ್ಲಿ ಭಾರತ ಆಗ್ರಹಿಸಿತು, ಆದರೆ ಚೀನಾವು ಭಾರತದ ಸೈನಿಕರೇ ಮೊದಲು ವಾಪಸಾಗಬೇಕು ಎಂದು ಪಟ್ಟು ಹಿಡಿಯಿತು ಎಂದು ಮೂಲಗಳು ಹೇಳಿವೆ.

ಭಾರತ ಮತ್ತು ಚೀನಾದ ಸೇನಾ ಪ್ರತಿನಿಧಿಗಳ ಸಭೆ ೧೧ ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯಿತು. ಪೂರ್ವ ಲಡಾಖ್ ಎಲ್ಎಸಿಯ ಭಾರತದ ಭಾಗದಲ್ಲಿರುವ ಚುಶುಲ್ನಲ್ಲಿ ಉಭಯ ನಿಯೋಗಗಳ ಸಭೆ ಪ್ರಾರಂಭವಾಯಿತು. ಆದರೆ ಉಭಯ ಕಡೆಯವರೂ ಮೊದಲು ಸೇನಾ ವಾಪಸಾತಿಗೆ ಹಿಂಜರಿದ ಕಾರಣ ಲಡಾಖ್ ಬಿಕ್ಕಟ್ಟಿಗೆ ಆರಂಭಿಕ ಇತ್ಯರ್ಥ ಸಾಧ್ಯತೆಗಳು ಮಂಕಾಗಿವೆ ಎಂದು ಮೂಲಗಳು ಹೇಳಿವೆ. ಮೂಲಗಳ ಪ್ರಕಾರ ಉಭಯ ಕಡೆಗಳ ಒಟ್ಟು ,೦೦,೦೦೦ ಸೈನಿಕರು ಪ್ರದೇಶದಲ್ಲಿ ನಿಯೋಜನೆಗೊಂಡಿದ್ದಾರೆ.

ಭಾರತದ ಪರವಾಗಿ ನೇತೃತ್ವ ವಹಿಸಿದ್ದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್, ನವೀನ್ ಶ್ರೀವಾಸ್ತವ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಗೆ ಮುಂಚಿತವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ, ಐಎಎಫ್ ಮುಖ್ಯಸ್ಥ ಕುಮಾರ್ ಸಿಂಗ್ ಭದೌರಿಯಾ ಮತ್ತು ಭಾರತೀಯ ನೌಕಾಪಡೆಯ ಮುಖ್ಯಸ್ಥ ಕರಮ್ ಬೀರ್ ಸಿಂಗ್ ಅವರನ್ನೊಳಗೊಂಡ ಚೀನಾ ಅಧ್ಯಯನ ತಂಡ (ಸಿಎಸ್ಜಿ) ಅಕ್ಟೋಬರ್ ರಂದು ಸೇನಾ ಮಾತುಕತೆಗಾಗಿ ಭಾರತದ ಕಾರ್ಯತಂತ್ರವನ್ನು ಅಂತಿಮಗೊಳಿಸಿತ್ತು.

ಎತ್ತರವಾದ ನಿರ್ಣಾಯಕ ಪರ್ವತ ಪ್ರದೇಶಗಳಾದ ರೆಚಿನ್ ಲಾ, ರೆಜಾಂಗ್ ಲಾ, ಮುಕ್ಪಾರಿ ಮತ್ತು ಟೇಬಲ್ ಟಾಪ್ ಹಾಗೂ ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತ ತನ್ನ ಪಡೆಗಳನ್ನು ಹೆಚ್ಚಿಸಿದೆ. ಭಾರತೀಯ ಪಡೆಗಳು ಬ್ಲ್ಯಾಕ್ಟಾಪ್ ಬಳಿ ಸಾಕಷ್ಟು ಸಂಖ್ಯೆಯ ಸೈನಿಕರನ್ನು ನಿಯೋಜಿಸಿವೆ ಎಂದು ತಿಳಿದುಬಂದಿದೆ.

ಪ್ಯಾಂಗೊಂಗ್ ತ್ಸೊದಲ್ಲಿ ಚೀನಾ "ಪ್ರಚೋದನಕಾರಿ ಮಿಲಿಟರಿ ಚಲನವಲನ" ಕೈಗೊಂಡ ನಂತರ ಮೇಲೆ ತಿಳಿಸಿದ ಪ್ರಮುಖ ಕ್ಷೇತ್ರಗಳನ್ನು ಬಲಪಡಿಸುವ ಭಾರತದ ಕ್ರಮವನ್ನು ಅನುಸರಿಸಲಾಯಿತು.

ಆಗಸ್ಟ್ ೨೯ ಮತ್ತು ೩೦ ಮಧ್ಯರಾತ್ರಿಯಲ್ಲಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪೂರ್ವ ಲಡಾಖ್ನಲ್ಲಿ  ಬಿಕ್ಕಟ್ಟಿನ ಸಮಯದಲ್ಲಿ ಸೇನೆ ಮತ್ತು ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯ ಸಮಯದಲ್ಲಿ ಬಂದ ಒಮ್ಮತವನ್ನು ಉಲ್ಲಂಘಿಸಿತ್ತು ಮತ್ತು ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಚೋದನಕಾರಿ ಮಿಲಿಟರಿ ಚಲನವಲನಗಳನ್ನು  ನಡೆಸಿತ್ತು.

ಆದಾಗ್ಯೂ, ಪಿಎಲ್ಎಯ ಚಲನವನ್ನು ಭಾರತೀಯ ಪಡೆಗಳು ತಡೆದವು.

ಆರನೇ ಸುತ್ತಿನ ಸೇನಾ ಮಾತುಕತೆಯ ಸಮಯದಲ್ಲಿ, ಭಾರತ ಮತ್ತು ಚೀನಾ ಹೆಚ್ಚಿನ ಸೈನಿಕರನ್ನು ಮುಂಚೂಣಿಗೆ ಕಳುಹಿಸದಿರಲು ನಿರ್ಧರಿಸಿದ್ದವು ಮತ್ತು ನೆಲದ ಮೇಲಿನ ಸ್ಥಿತಿಗತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವುದನ್ನು ತಡೆಯಲಾಗಿತ್ತು.

ಸೆಪ್ಟೆಂಬರ್ ೧೦ ರಂದು ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಮಾವೇಶದ ಸಂದರ್ಭದಲ್ಲಿ ಜೈಶಂಕರ್ ಮತ್ತು ಅವರ ಚೀನಾದ ಸಹವರ್ತಿ ವಾಂಗ್ ಯಿ ನಡುವೆ ಐದು ಅಂಶಗಳ ಒಪ್ಪಂದಕ್ಕೆ ಬಂದ ನಂತರ ಸೇನಾ ಪ್ರತಿನಿಧಿಗಳು ಸಭೆ ನಡೆಸಿದರು.

ಮೇ ರಿಂದ ಪೂರ್ವ ಮತ್ತು ಲಡಾಖ್ ಅನೇಕ ಸ್ಥಳಗಳಲ್ಲಿ ಭಾರತೀಯ ಮತ್ತು ಚೀನಾದ ಸೇನೆಗಳು ಮುಖಾಮುಖಿಯಾದಂತೆ ತಡೆಹಿಡಿಯಲಾಗಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಉದ್ವಿಗ್ನತೆಯು ಅನೇಕ ಪಟ್ಟು ಹೆಚ್ಚಾಯಿತು. ಗಾಲ್ವಾನ್ ಘರ್ಷಣೆಯಲ್ಲಿ ೨೦ ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ವರದಿಗಳ ಪ್ರಕಾರ, ಚೀನಾ ಸುಮಾರು ೩೫-೪೦ ಸೈನಿಕರನ್ನು ಕಳೆದುಕೊಂಡಿತ್ತು, ಆದಾಗ್ಯೂ, ಬೀಜಿಂಗ್ ಇದುವರೆಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

No comments:

Advertisement