My Blog List

Saturday, October 17, 2020

ಪ್ರಧಾನಿ ಮೋದಿ ಸಲಹೆ: ಲಸಿಕೆ ವಿತರಣೆಗೆ ಚುನಾವಣೆ ಮಾದರಿ ವ್ಯವಸ್ಥೆ

 ಪ್ರಧಾನಿ ಮೋದಿ ಸಲಹೆ: ಲಸಿಕೆ ವಿತರಣೆಗೆ ಚುನಾವಣೆ ಮಾದರಿ ವ್ಯವಸ್ಥೆ

ನವದೆಹಲಿ: ಕೊರೋನವೈರಸ್ ಲಸಿಕೆ ವಿತರಣೆ ಮತ್ತು ವಿತರಣೆಯ ವ್ಯವಸ್ಥೆಗಳನ್ನು ಪರಿಶೀಲಿಸಲು 2020 ಅಕ್ಟೋಬರ್ 17ರ ಶನಿವಾರ ನಡೆದ ಸಭೆಯ ಅಧ್ಯಕ್ಷತೆ  ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಲಭ್ಯವಾದಾಗ ಜನಸಮುದಾಯದ ಎಲ್ಲ ಸದಸ್ಯರಿಗೂ ತ್ವರಿತವಾಗಿ ವಿತರಣೆ ಸಾಧ್ಯವಾಗುವಂತಹ ವ್ಯವಸ್ಥೆಯನ್ನು ರೂಪಿಸಲು ಸಲಹೆ ಮಾಡಿದರು.

ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡುವಾಗ ದೇಶದ ಭೌಗೋಳಿಕ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಾಗಣೆಗೆ ವ್ಯವಸ್ಥೆ ಮಾಡುವಂತೆ ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ಕಾರದ ಹೇಳಿಕೆಯ ಪ್ರಕಾರ, ಲಸಿಕೆ ಸಂಗ್ರಹ ಮತ್ತು ವಿತರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ಕಟ್ಟುನಿಟ್ಟಾಗಿ ಪರೀಕ್ಷಿಸಬೇಕು ಎಂದು ಪ್ರಧಾನಿ ಸೂಚಿಸಿದರು. ಲಸಿಕೆ ಪ್ರಮಾಣವನ್ನು ಶೈತ್ಯಾಗಾರದಲ್ಲಿ ಇಡುವ ಯೋಜನೆ, ಸಿರಿಂಜ್ ವ್ಯವಸ್ಥೆ, ಲಸಿಕೆ ನೀಡುವ ಚಿಕಿತ್ಸಾಲಯಗಳ ಮೇಲ್ವಿಚಾರಣೆ ಮಾಡುವ ಕಾರ್‍ಯ ವಿಧಾನಗಳು ಮತ್ತು ಪೂರಕ ಉಪಕರಣಗಳ ತಯಾರಿಕೆ ಮತ್ತು ದಾಸ್ತಾನು ಮಾಡುವಿಕೆ ಸಮಗ್ರ ಯೋಜನೆಯಲ್ಲಿ ಒಳಗೊಂಡಿರಬೇಕು ಎಂದು ಪ್ರಧಾನಿ ಹೇಳಿದರು.

ಕೋವಿಡ್ ಲಸಿಕೆಯ ಶೇಖರಣೆ, ವಿತರಣೆ ಮತ್ತು ನಿರ್ವಹಣೆಗಾಗಿ ವಿವರವಾದ ನೀಲನಕ್ಷೆಯನ್ನು ಸಿದ್ಧಪಡಿಸಲು ಕೋವಿಡ್-೧೯ ಸಲುವಾಗಿ ರಾಷ್ಟ್ರೀಯ ತಜ್ಞರ ಗುಂಪು (ಎನ್‌ಇಜಿವಿಎಸಿ) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲ ಸಂಬಂಧಿತ ಪಾಲುದರರೊಂದಿಗೆ ಸಮಾಲೋಚಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ. .

ರಾಷ್ಟ್ರೀಯ ಚುನಾವಣೆಗಳು ಮತ್ತು ವಿಪತ್ತು ನಿರ್ವಹಣಾ ಕಾರ್ಯ ವಿಧಾನಗಳ ಬಗೆಗಿನ ಭಾರತದ ನಡವಳಿಕೆಯತ್ತ ಬೊಟ್ಟು ಮಾಡಿದ ಪ್ರಧಾನಿ, ಲಸಿಕೆ ವಿತರಣೆಯ ಯೋಜನೆಗಾಗಿ ಅಧಿಕಾರಿಗಳು ಇವುಗಳಿಂದ ಕಲಿತುಕೊಂಡು ಅನ್ವಯಿಸಬೇಕು ಎಂದು ಸೂಚಿಸಿದರು.

ಶನಿವಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ತಿಂಗಳ ಆರಂಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ್ದ ಸಭೆಯಲ್ಲಿ ೨೦೨೧ರ ಜುಲೈ ವೇಳೆಗೆ ಸುಮಾರು ೨೫ ಕೋಟಿ ಜನರಿಗೆ - ಮುಖ್ಯವಾಗಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸರ್ಕಾರ ಯೋಜಿಸಿದೆ ಎಂದು ಹೇಳಿದ್ದರು.

ಕಳೆದ ೪೮ ಗಂಟೆಗಳಲ್ಲಿ ಪ್ರಧಾನಮಂತ್ರಿಯವರು ನಡೆಸಿದ ಎರಡನೇ ಸಭೆ ಇದಾಗಿದೆ. ಆರೋಗ್ಯ ಸಚಿವಾಲಯವು ಕೋವಿಡ್ ನಿಯಂತ್ರಣದಲ್ಲಿ ದೇಶದ  "ಅಭೂತಪೂರ್ವ" ಸಾಧನೆಯ ಬಗ್ಗೆ ವರದಿ ಮಾಡಿದ ಬಳಿಕ ಈದಿನದ ಸಭೆ ನಡೆಯಿತು. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು ೪೬ ದಿನಗಳಲ್ಲಿ ಇದೇ ಮೊದಲ ಬಾರಿಗೆ ಎಂಟು ಲಕ್ಷಕ್ಕಿಂತ ಕಡಿಮೆಯಾಗಿದೆ.

No comments:

Advertisement