Wednesday, October 28, 2020

ಭಾರತದ ಸಾರ್ವಭೌಮತೆಗೆ ಬೆಂಬಲ: ಅಮೆರಿಕ ನಿಲುವಿಗೆ ಚೀನಾ ಸಿಡಿಮಿಡಿ

 ಭಾರತದ ಸಾರ್ವಭೌಮತೆಗೆ ಬೆಂಬಲ: ಅಮೆರಿಕ ನಿಲುವಿಗೆ ಚೀನಾ ಸಿಡಿಮಿಡಿ

ಬೀಜಿಂಗ್: ಚೀನಾ-ಭಾರತದ ಗಡಿ ವಿವಾದವು ದ್ವಿಪಕ್ಷೀಯ ವಿಷಯವಾಗಿದೆ ಎಂದು 2020 ಅಕ್ಟೋಬರ್ 28 ಬುಧವಾರ ಹೇಳಿದ ಚೀನಾ, ’ಇಂಡೋ-ಪೆಸಿಫಿಕ್ ನೀತಿ ಹಳಸಲು ಶೀತಲ ಸಮರ ತಂತ್ರಎಂದು ಹೇಳುವ ಮೂಲಕ ಅಮೆರಿಕದ ಪ್ರಯತ್ನಗಳನ್ನು ತಳ್ಳಿಹಾಕಿತು.

ನವದೆಹಲಿಯಲ್ಲಿ ಮಂಗಳವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ನೀಡಿದ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿತು. ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ನಡೆಯುತ್ತಿರುವ ಸೇನಾ ಮುಖಾಮುಖಿಯಲ್ಲಿ ಅಮೆರಿಕವು ಭಾರತದೊಂದಿಗೆ ನಿಂತಿದೆ ಎಂದು ಪೊಂಪಿಯೊ ಹೇಳಿದ್ದರು.

"ಚೀನಾ ಮತ್ತು ಭಾರತದ ನಡುವಿನ ಗಡಿ ವ್ಯವಹಾರಗಳು ಉಭಯ ದೇಶಗಳ ನಡುವಿನ ವಿಷಯಗಳಾಗಿವೆ. ಈಗ ಗಡಿಯುದ್ದಕ್ಕೂ ಪರಿಸ್ಥಿತಿ ಸಾಮಾನ್ಯವಾಗಿ ಸ್ಥಿರವಾಗಿದೆ. ಸಮಾಲೋಚನೆ ಮತ್ತು ಮಾತುಕತೆಗಳ ಮೂಲಕ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯತ್ನದಲ್ಲಿ ಉಭಯ ಕಡೆಯರೂ ಇದ್ದಾರೆಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಬುಧವಾರ ಬೀಜಿಂಗ್ನಲ್ಲಿ ನಡೆದ ಸಚಿವಾಲಯದ ನಿಯಮಿತ ಸಮಾವೇಶದಲ್ಲಿ ಹೇಳಿದರು.

ಚೀನಾ-ಭಾರತ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಪೊಂಪಿಯೊ ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಮುಂದಾಗಿರುವ ಪ್ರಶ್ನೆಗೆ ವಾಂಗ್ ಪ್ರತಿಕ್ರಿಯಿಸಿದರು.

ಜೂನ್ ೧೫ ರಂದು ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರನ್ನು ಉಲ್ಲೇಖಿಸಿದ, ಪೊಂಪಿಯೊ ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ವಾಷಿಂಗ್ಟನ್ ನವದೆಹಲಿಯೊಂದಿಗೆ ನಿಲ್ಲುತ್ತದೆ ಎಂದು ಮಂಗಳವಾರ, ಹೇಳಿದ್ದರು.

ವಾಸ್ತವಿಕ ಸಂಖ್ಯೆಗಳು ಬರುವುದು ಕಷ್ಟ, ಆದರೆ ಉಭಯ ಸೇನೆಗಳೂ ಪೂರ್ವ ಲಡಾಖ್ ಎಲ್ಎಸಿಯ ಉದ್ದಕ್ಕೂ ಬಹು ಘರ್ಷಣೆಯ ಸ್ಥಳಗಳಲ್ಲಿ ಮೇ ತಿಂಗಳಿನಿಂದೀಚೆಗೆ ಸಾವಿರಾರು ಸೈನಿಕರನ್ನು ನಿಯೋಜಿಸಿವೆ ಎನ್ನಲಾಗಿದೆ. ಇದು ದಶಕಗಳಲ್ಲೇ ಅತ್ಯಂತ ನಿಕೃಷ್ಟ ಮಿಲಿಟರಿ ಮುಖಾಮುಖಿಯಾಗಿದೆ.

ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದ ಟೀಕೆಗೆ ಗಮನ ಕೇಂದ್ರೀಕರಿಸಿದ ವಾಂಗ್,  ಯಾವುದೇ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಯು ಪ್ರದೇಶದ ಶಾಂತಿ ಮತ್ತು ಸ್ಥಿರತೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಿರಬೇಕು ಎಂದು ನಾವು ಯಾವಾಗಲೂ ನಂಬುತ್ತೇವೆ. ಇದು ಮೂರನೇ ವ್ಯಕ್ತಿಯ ಹಿತಾಸಕ್ತಿಗಳಿಗೆ ಹಾನಿ ಮಾಡಬಾರದುಎಂದು ಹೇಳಿದರು.

ಮಧ್ಯೆ, ಪ್ರಾದೇಶಿಕ ಅಭಿವೃದ್ಧಿಯ ಯಾವುದೇ ಪರಿಕಲ್ಪನೆಯು ಶಾಂತಿಯುತ ಅಭಿವೃದ್ಧಿ ಮತ್ತು ಗೆಲುವು-ಗೆಲುವಿನ ಸಹಕಾರದ ಸಾಂದರ್ಭಿಕ ಪ್ರವೃತ್ತಿಗೆ ಅನುಗುಣವಾಗಿರಬೇಕು. ಅಮೆರಿಕ ಪ್ರಸ್ತಾಪಿಸಿದ ಇಂಡೋ-ಪೆಸಿಫಿಕ್ ಕಾರ್ಯತಂತ್ರವು ಹಳತಾದ ಶೀತಲ ಸಮರದ ಮನಸ್ಥಿತಿ ಹಾಗೂ ಮುಖಾಮುಖಿ ಮತ್ತು ಭೌಗೋಳಿಕ ರಾಜಕೀಯ ಆಟವನ್ನು ಸೂಚಿಸುತ್ತಿದೆಎಂದು ಅವರು ನುಡಿದರು.

ಸಮುದ್ರ ವ್ಯಾಪಾರ ಮಾರ್ಗಗಳಿಂದಾಗಿ ನಿರ್ಣಾಯಕವಾಗಿರುವ ಸಮುದ್ರ ಸಂಚಾರದ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟುಕೊಂಡು ಮತ್ತು ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸುವ ಗುರಿ ಇಟ್ಟುಕೊಂಡು ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ರೂಪಿಸಿರುವ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಚೀನಾ ಗ್ರಹಿಸುತ್ತದೆ ಎಂದು ಅವರು ಹೇಳಿದರು.

"ಇದು ಅಮೆರಿಕದ ಪ್ರಾಬಲ್ಯವನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ. ಇದು ಪ್ರದೇಶದ ಸಾಮಾನ್ಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಇದನ್ನು ನಿಲ್ಲಿಸುವಂತೆ ನಾವು ಅಮೆರಿಕವನ್ನು ಒತ್ತಾಯಿಸುತ್ತೇವೆಎಂದು ಅವರು ಹೇಳಿದರು.

ಪೊಂಪಿಯೊ ಅವರ ಶ್ರೀಲಂಕಾ ಭೇಟಿಯ ಬಗ್ಗೆ ಕೇಳಿದಾಗ ವಾಂಗ್, ಅಮೆರಿಕವನ್ನು ಟೀಕಿಸಿದರು.

"ಭಾರತದಲ್ಲಿ ಪೊಂಪಿಯೊ ಅವರ ಟೀಕೆಗಳಿಗೆ ಸಂಬಂಧಿಸಿದ ಪ್ರಶ್ನೆಗೆ ನಾನು ಪ್ರತಿಕ್ರಿಯಿಸಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ದೇಶಗಳನ್ನು ಆಯ್ಕೆ ಮಾಡಲು ಒತ್ತಾಯಿಸುವುದು ಅಮೆರಿಕದ ಕೆಲವು ರಾಜಕಾರಣಿಗಳ ಚಾಳಿಯಾಗಿದೆ ಎಂದು ಹೇಳಲು ನಾನು ಬಯಸುತ್ತೇನೆಎಂದು ವಾಂಗ್ ನುಡಿದರು.

ವಕ್ತಾರರು ಲಂಕಾದ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ, ಕೊಲಂಬೊ ತನ್ನ ವಿದೇಶಿ ಸಂಬಂಧಗಳನ್ನು ತನ್ನ ನಾಗರಿಕರ ಇಚ್ಛೆ ಮತ್ತು ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿ ನಿರ್ವಹಿಸುತ್ತದೆ, ವಿದೇಶಿ ಶಕ್ತಿಗಳ ಕುಮ್ಮಕ್ಕಿಗೆ ಅನುಗುಣವಾಗಿ ಅಲ್ಲ ಎಂದು ಹೇಳಿದರು.

ಶ್ರೀಲಂಕಾ ಮತ್ತು ಚೀನಾ ಸಾಂಪ್ರದಾಯಿಕ ಮಿತ್ರ ನೆರೆಹೊರೆ ದೇಶಗಳು. ಸಮಾನ ನೆಲೆಯ ಮಾತುಕತೆ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ನಾವು ಸ್ನೇಹಪರ ಸಹಕಾರವನ್ನು ನಡೆಸುತ್ತಿದ್ದೇವೆ, ಅದು ಉಭಯ ಜನರಿಗೆ ಸ್ಪಷ್ಟವಾದ ಪ್ರಯೋಜನಗಳನ್ನು ತರುತ್ತದೆ. ಇತರ ಜನರು ಅಥವಾ ಇತರ ದೇಶಗಳ ಯಾವುದೇ ಅಪನಿಂದೆಗಳಿಂದ ಇದನ್ನು ಎಂದಿಗೂ ಬದಲಾಯಿಸಲಾಗುವುದಿಲಎಂದು ವಾಂಗ್ ಹೇಳಿದರು.

"ನಮ್ಮ ಕಾರ್ಯತಂತ್ರದ ಸಹಕಾರಿ ಸಹಭಾಗಿತ್ವವನ್ನು ವಿಸ್ತರಿಸಲು ಮತ್ತು ಆಳಗೊಳಿಸಲು, ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ತರಲು ಮತ್ತು ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ನಾವು ಶ್ರೀಲಂಕಾದೊಂದಿಗೆ ಕೆಲಸ ಮಾಡುತ್ತೇವೆಎಂದು ವಾಂಗ್ ನುಡಿದರು.

No comments:

Advertisement