ಭಾರತ -ಆಸಿಯಾನ್ ಕಾರ್ಯತಂತ್ರ ಸಹಭಾಗಿತ್ವ: ಪ್ರಧಾನಿ ಮೋದಿ
ನವದೆಹಲಿ: ಭಾರತ ಮತ್ತು ಆಸಿಯಾನ್‌ನ ಕಾರ್ಯತಂತ್ರದ ಸಹಭಾಗಿತ್ವವು ನಾವು ಹಂಚಿಕೊಂಡಿರುವ ಐತಿಹಾಸಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ೧೭ ನೇ ಆಸಿಯಾನ್-ಭಾರತ ಶೃಂಗಸಭೆಯನ್ನು ಉದ್ದೇಶಿಸಿ 2020 ನವೆಂಬರ್ 12ರ ಗುರುವಾರ ಮಾತನಾಡುತ್ತಾ ಹೇಳಿದರು.
‘ಆಸಿಯಾನ್ ಯಾವಾಗಲೂ ನಮ್ಮ ಆಕ್ಟ್ ಈಸ್ಟ್ ಪಾಲಿಸಿಯ ತಿರುಳು.
ಭಾರತದ ಹಿಂದೂ ಮಹಾಸಾಗರ-
ಶಾಂತ ಸಾಗರ
(ಇಂಡೋ ಪೆಸಿಫಿಕ್)
ಉಪಕ್ರಮ ಮತ್ತು ಆಸಿಯಾನ್‌ನ ಔಟ್ ಲುಕ್ ಆನ್ ಇಂಡೋ ಪೆಸಿಫಿಕ್ ನಡುವೆ ಹಲವು ಹೋಲಿಕೆಗಳಿವೆ’ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ಅವರು ಕೋವಿಡ್
-೧೯ ಸಾಂಕ್ರಾಮಿಕ ರೋಗದ ಬಗ್ಗೆ ಮಾತನಾಡುತ್ತಾ,
ಇತರ ವರ್ಷಗಳಂತೆ,
ಈ ವರ್ಷ ಸಭೆಯ ಯಾವುದೇ ‘ಕುಟುಂಬ ಫೋಟೋ’ ಇರುವುದಿಲ್ಲ ಎಂದು ಹೇಳಿದರು.
"ನಾವು ಪ್ರತಿ ವಲಯದಲ್ಲೂ ಭಾರತ ಮತ್ತು ಆಸಿಯಾನ್ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಬಯಸುತ್ತೇವೆ"
ಎಂದು ಪ್ರಧಾನಿ ಹೇಳಿದರು.
ಸಭೆ ವರ್ಚುಯಲ್ ಆಗಿದ್ದರೂ,
ಇದು ನಮ್ಮ ನಡುವಿನ ಅಂತರವನ್ನು ನಿವಾರಿಸುವ ಪ್ರಯತ್ನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ
(ಆಸಿಯಾನ್)
ಈ ಪ್ರದೇಶದ ಪ್ರಮುಖ ಗುಂಪುಗಳಲ್ಲಿ ಒಂದಾಗಿದೆ.
ಇಂಡೋನೇಷ್ಯಾ,
ಮಲೇಷ್ಯಾ,
ಫಿಲಿಪೈನ್ಸ್,
ಸಿಂಗಾಪುರ್,
ಥೈಲ್ಯಾಂಡ್,
ಬ್ರೂನಿ,
ವಿಯೆಟ್ನಾಂ,
ಲಾವೋಸ್,
ಮ್ಯಾನ್ಮಾರ್ ಮತ್ತು ಕಾಂಬೋಡಿಯಾ ಇದರ ಸದಸ್ಯರಾಗಿದ್ದಾರೆ.
ಭಾರತ,
ಅಮೆರಿಕ,
ಚೀನಾ,
ಜಪಾನ್ ಮತ್ತು ಆಸ್ಟ್ರೇಲಿಯಾ ಇದರ ಸಂವಾದ ಪಾಲುದಾರರು.
ವಿಯೆಟ್ನಾಂ ಪ್ರಧಾನಿ ನ್ಗುಯೆನ್ ಕ್ಸುವಾನ್ ಫುಕ್ ಈ ಸಭೆಯ ಸಹ-ಅಧ್ಯಕ್ಷರಾಗಿದ್ದರು.
"ಆಸಿಯಾನ್-ಇಂಡಿಯಾ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ನಾಯಕರು ಚರ್ಚಿಸುತ್ತಾರೆ ಮತ್ತು ಈ ಸಂದರ್ಭದಲ್ಲಿ ಆಸಿಯಾನ್-ಇಂಡಿಯಾ ಕಾರ್ಯಯೋಜನೆ
(೨೦೨೧-೨೦೨೫)
ಅಳವಡಿಸಿಕೊಳ್ಳುವ ಬಗ್ಗೆ ಟಿಪ್ಪಣಿ ನೀಡಲಿದ್ದಾರೆ.
ಕೋವಿಡ್ -೧೯,
ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ಮತ್ತು ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆಯೂ ಶೃಂಗಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಆಸಿಯಾನ್-ಇಂಡಿಯಾ ಕಾರ್ಯತಂತ್ರದ ಸಹಭಾಗಿತ್ವವು ಹಂಚಿಕೆಯ ಭೌಗೋಳಿಕ,
ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳ ಬಲವಾದ ಅಡಿಪಾಯದ ಮೇಲೆ ನಿಂತಿದೆ.
ಭಾರತದ ಆಕ್ಟ್ ಈಸ್ಟ್ ಪಾಲಿಸಿಯು ಆಸಿಯಾನ್ ಕೇಂದ್ರೀಯತೆಯನ್ನು ಒತ್ತಿಹೇಳುತ್ತದೆ,
ಇದು ಇದರ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ,
ಭಾರತವು ಆಸಿಯಾನ್ ಜೊತೆಗಿನ ತೊಡಗಿಸಿಕೊಳ್ಳುವಿಕೆಗೆ ಅಂಟಿಕೊಳ್ಳುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.
No comments:
Post a Comment