ಗ್ರಾಹಕರ ಸುಖ-ದುಃಖ

My Blog List

Thursday, November 12, 2020

ಆತ್ಮನಿರ್ಭರ ೩.೦’: ಹೊಸ ಉದ್ಯೋಗ ಸೃಷ್ಟಿ, ಮನೆ ಕೊಳ್ಳುವವರಿಗೆ ತೆರಿಗೆ ರಿಯಾಯ್ತಿ

 ಆತ್ಮನಿರ್ಭರ .೦’: ಹೊಸ ಉದ್ಯೋಗ ಸೃಷ್ಟಿ, ಮನೆ ಕೊಳ್ಳುವವರಿಗೆ ತೆರಿಗೆ ರಿಯಾಯ್ತಿ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆ ಪುನಃಶ್ಚೇತನಕ್ಕಾಗಿ  ಹೊಸ ಉದ್ಯೋಗ ಸೃಷ್ಟಿ ಯೋಜನೆ, ರೈತರಿಗೆ ರಸಗೊಬ್ಬರ ಸಬ್ಸಿಡಿ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬೆಂಬಲ ಸಹಿತವಾಗಿ ಹಲವಾರು ಕ್ರಮಗಳನ್ನು 2020 ನವೆಂಬರ್ 12ರ ಗುರುವಾರ ಪ್ರಕಟಿಸಿದರು. ಇದು ಶನಿವಾರ ಆರಂಭವಾಗುವ ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರದ ಇನ್ನೊಂದು ಪ್ರಚೋದಕ ಕೊಡುಗೆಯಾಗಿದೆ.

"ನಾನು ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆಯನ್ನು (ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನಾ) ಘೋಷಿಸುತ್ತಿದ್ದೇನೆ, ಇದು ಕೋವಿಡ್ -೧೯ ಚೇತರಿಕೆಯ ಹಂತದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ತೇಜನ ನೀಡುತ್ತದೆ. ಇಪಿಎಫ್ ನೋಂದಾಯಿತ ಸಂಸ್ಥೆಗಳಲ್ಲಿ ತಿಂಗಳಿಗೆ ೧೫ ಸಾವಿರ ರೂ.ಗಿಂತ ಕಡಿಮೆ ವೇತನದಲ್ಲಿ ಉದ್ಯೋಗ ಸೇರುವವರಿಗೆ ಇದು ಅನ್ವಯವಾಗುತ್ತದೆ ಎಂದು ಸೀತಾರಾಮನ್ ಹೇಳಿದರು.

"ಇದು ೨೦೨೦ ಅಕ್ಟೋಬರ್ ೧ರಿಂದ ಜಾರಿಗೆ ಬರಲಿದೆ. ಅವುಗಳನ್ನು ಎರಡು ವರ್ಷಗಳವರೆಗೆ ಯೋಜನೆ ಅನ್ವಯಿಸುವುದು ಎಂದು ಅವರು ಹೇಳಿದರು.

ಆರ್ಥಿಕ ಚೇತರಿಕೆಯ ವಿವರಗಳನ್ನು ನೀಡಿದ ಅವರು, ಕಾಂಪೋಸಿಟ್ ಕೊಳ್ಳುವಿಕೆ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಅಕ್ಟೋಬರಿನಲ್ಲಿ ಶೇ ೫೮. ಕ್ಕೆ ಏರಿತು, ಹಿಂದಿನ ತಿಂಗಳಲ್ಲಿ ಇದು ಶೇ ೫೪. ರಷ್ಟಿತ್ತು. ಇದು ವರ್ಷಗಳಲ್ಲೇ ಅತ್ಯಂತ ಪ್ರಬಲ ಏರಿಕೆ ಎಂದು ವಿವರಿಸಿದರು.

ಇಂಧನ ಬಳಕೆಯ ಬೆಳವಣಿಗೆಯು ಅಕ್ಟೋಬರಿನಲ್ಲಿ ವರ್ಷಕ್ಕೆ ಶೇ ೧೨ ಕ್ಕೆ ಏರಿಕೆಯಾದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇಕಡಾ ೧೦ ರಷ್ಟು ಏರಿಕೆಯಾಗಿ .೦೫ ಲಕ್ಷ ಕೋಟಿ ರೂ.ಗೆ ತಲುಪಿದೆ. ದೈನಂದಿನ ರೈಲ್ವೆ ಸರಕು ಸಾಗಣೆ ಸರಾಸರಿ ಶೇಕಡಾ ೧೨ರಷ್ಟು ಇದ್ದುದು ಶೇಕಡಾ ೨೦ರಷ್ಟು ಹೆಚ್ಚಿದೆ. ಬ್ಯಾಂಕ್ ಸಾಲ ಶೇಕಡಾ .೧ರಷ್ಟು ಸುಧಾರಿಸಿದೆ ಎಂದು ಅವರು ನುಡಿದರು.

ಏಪ್ರಿಲ್-ಆಗಸ್ಟ್ನಲ್ಲಿ ೩೫.೩೭ ಬಿಲಿಯನ್ ಡಾಲರ್ಗೆ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಆಗಿದ್ದು, ವರ್ಷದಲ್ಲಿ ಶೇಕಡಾ ೧೩ ರಷ್ಟು ಏರಿಕೆ ಕಂಡಿದೆ. ೨೦೨೦-೨೧ರ ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಸಕಾರಾತ್ಮಕವಾದ ಬಲವಾದ ಬೆಳವಣಿಗೆಗೆ ಮರಳುವ ಸಾಧ್ಯತೆಯಿದೆ ಎಂದು ಆರ್ಬಿಐ ಮುನ್ಸೂಚನೆ ನೀಡಿದೆ ಎಂದು ಅವರು ಹೇಳಿದರು.

ಮನೆ ಮಾರಾಟ, ರಿಯಲ್ ಎಸ್ಟೇಟ್ಗೆ ರಿಯಾಯ್ತಿ

ವರ್ತುಲ ದರಕ್ಕಿಂತ ಕೋಟಿ ರೂ.ಗಳಷ್ಟು ಕಡಿಮೆ ಮೌಲ್ಯದ ಪ್ರಾಥಮಿಕ ವಸತಿ ಘಟಕಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲು ವಿತ್ತ ಸಚಿವರು ಆದಾಯ ತೆರಿಗೆ ನಿಯಮಗಳಲ್ಲಿ ಸಡಿಲಿಕೆ ಘೋಷಿಸಿದರು. ಇಲ್ಲಿಯವರೆಗೆ, ವಲಯ ದರ ಮತ್ತು ಒಪ್ಪಂದದ ಮೌಲ್ಯದ ನಡುವಿನ ಶೇಕಡಾ ೧೦ ರಷ್ಟು ವ್ಯತ್ಯಾಸಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು.

ವಸತಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು, ೨೦೨೧ ಜೂನ್ ೩೦ ರವರೆಗೆ ಕೋಟಿ ರೂ.ಗಳವರೆಗಿನ ಮೌಲ್ಯದ ವಸತಿ ಘಟಕಗಳ ಪ್ರಾಥಮಿಕ ಮಾರಾಟಕ್ಕೆ ಮಾತ್ರ ವ್ಯತ್ಯಾಸವನ್ನು ಈಗ ಶೇಕಡಾ ೨೦ ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. " ಕ್ರಮವು ಮನೆ ಖರೀದಿದಾರರು ಮತ್ತು ಪ್ರವರ್ತಕರು ಎದುರಿಸುತ್ತಿರುವ ಕಷ್ಟಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಾರಾಟವಾಗದ ದಾಸ್ತಾನುಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

 

ರೈತರಿಗೆ ೬೫,೦೦೦ ಕೋಟಿ ರೂ ರಸಗೊಬ್ಬರ ಸಬ್ಸಿಡಿ

ಆರ್ಥಿಕತೆಯನ್ನು ಉತ್ತೇಜಿಸುವ ತನ್ನ ಉತ್ತೇಜನ ಪ್ಯಾಕೇಜಿನ ಭಾಗವಾಗಿ ಹಣಕಾಸು ಸಚಿವರು ರೈತರಿಗೆ ೬೫,೦೦೦ ಕೋಟಿ ರೂ.ಗಳ ರಸಗೊಬ್ಬರ ಸಹಾಯಧನವನ್ನು ಘೋಷಿಸಿದರು. ರೈತರಿಗೆ ಸಾಕಷ್ಟು ರಸಗೊಬ್ಬರಗಳು ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಮುಂಬರುವ ಬೆಳೆ ಋತುವಿನಲ್ಲಿ ರಸಗೊಬ್ಬರಗಳನ್ನು ಸಕಾಲಿಕವಾಗಿ ಲಭಿಸುವಂತೆ ಮಾಡಲು ೬೫,೦೦೦ ಕೋಟಿ ರೂ. ಒದಗಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಗರಿಬ ಕಲ್ಯಾಣ ರೋಜಗಾರ್ ಯೋಜನೆಗಾಗಿ ೧೦,೦೦೦ ಕೋಟಿ ರೂ.ಗಳ ಹೆಚ್ಚುವರಿ ನಿಧಿಯನ್ನು ವಿನಿಯೋಗ ನೀಡಲಾಗುವುದು ಎಂದು ಅವರು ಹೇಳಿದರು. ಇದು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂದು ಸಚಿವರು ನುಡಿದರು.

ಸೀತಾರಾಮನ್ ಅವರು, "ಯೋಜನಾ ರಫ್ತುಗಳನ್ನು ಸಾಲಗಳ ಮೂಲಕ ಉತ್ತೇಜಿಸಲು ,೦೦೦ ಕೋಟಿ ರೂ. ಎಕ್ಸಿಮ್ ಬ್ಯಾಂಕಿಗೆ ಬಿಡುಗಡೆ ಮಾಡಲಾಗುವುದು. ಎಕ್ಸಿಮ್ ಬ್ಯಾಂಕ್ ಭಾರತೀಯ ಅಭಿವೃದ್ಧಿ ಮತ್ತು ಆರ್ಥಿಕ ನೆರವು ಯೋಜನೆ  ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೆರವು ಸಾಲವನ್ನು (ಎಲ್ಒಸಿ) ವಿಸ್ತರಿಸಿದೆ ಎಂದು ಹೇಳಿದರು.

 

ಕೋವಿಡ್ ಲಸಿಕೆಗೆ ೯೦೦ ಕೋಟಿ ರೂ.

ಇದಲ್ಲದೆ, ಭಾರತೀಯ ಕೋವಿಡ್ -೧೯ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಜೈವಿಕ ತಂತ್ರಜ್ಞಾನ ಇಲಾಖೆಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕೋವಿಡ್ ಸುರಕ್ಷಾ ಮಿಷನ್ ಅಡಿಯಲ್ಲಿ ೯೦೦ ಕೋಟಿ ರೂ. ಒದಗಿಸಲಾಗಿದೆ ಎಂದೂ ಸೀತಾರಾಮನ್ ವಿವರಿಸದರು.

 

ವಿದೇಶೀ ಮೀಸಲು ನಿಧಿ ಏರಿಕೆ

ದೇಶವು ಸಕ್ರಿಯ ಚೇತರಿಕೆ ಕಾಣುತ್ತಿದೆ ಎಂಬುದಾಗಿ ಹೇಳುವ ಮೂಲಕ ಆರ್ಥಿಕತೆಯ ಸ್ಥಿತಿಯನ್ನು ಕೂಡಾ ನಿರ್ಮಲಾ ಪ್ರಸ್ತುತ ಪಡಿಸಿದರು. ಭಾರತವು ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗಿದೆ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಮಿತಿಯೊಂದು ಹೇಳಿದ ದಿನವೇ ನಿರ್ಮಲಾ ಅವರು ಹೇಳಿಕೆ ನೀಡಿದ್ದಾರೆ. ಮಾರುಕಟ್ಟೆಗಳು ದಾಖಲೆಯ ಉನ್ನತ ಮಟ್ಟದಲ್ಲಿವೆ ಮತ್ತು ವಿದೇಶಿ ಮೀಸಲು ನಿಧಿಯು ೫೬೦ ಬಿಲಿಯನ್ (೫೬,೦೦೦ ಕೋಟಿ) ಅಮೆರಿಕನ್ ಡಾಲರುಗಳಿಗೆ ತಲುಪಿದೆ ಎಂದು ಸೀತಾರಾಮನ್ ಹೇಳಿದರು.

ಕಳೆದ ತಿಂಗಳುಗಳಲ್ಲಿ ಸರ್ಕಾರ ಘೋಷಿಸಿದ ಒನ್ ನೇಷನ್ ಒನ್ ರೇಷನ್ ಕಾರ್ಡ್, ಪಿಎಂ ಸ್ವನಿಧಿಯಂತಹ (ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ) ಇತ್ಯಾದಿ ಪ್ರಮುಖ ಯೋಜನೆಗಳಲ್ಲಿನ ಪ್ರಗತಿಯನ್ನು ವಿತ್ತ ಸಚಿವರು ಪಟ್ಟಿ ಮಾಡಿದರು.

೨೦೨೦ರ "ಸೆಪ್ಟೆಂಬರ್ ೧ರಿಂದ ಜಾರಿಗೆ ಬರುವಂತೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ಇಪ್ಪತ್ತೆಂಟು ರಾಜ್ಯಗಳು ಪಡಿತರ ಚೀಟಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಳಸುವಂತಹ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಇದು ಈಗ ೬೮. ಕೋಟಿ ಫಲಾನುಭವಿಗಳನ್ನು ಹೊಂದಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯಾವುದೇ ಎಫ್ಪಿಎಸ್ನಿಂದ ಫಲಾನುಭವಿಗಳು ತಮ್ಮ ಆಹಾರ ಧಾನ್ಯವನ್ನು ಪಡೆಯಬಹುದು ಎಂದು ಸೀತಾರಾಮನ್ ಹೇಳಿದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ), ಕಿಸಾನ್ ಕ್ರೆಡಿಟ್ ಕಾರ್ಡ್ಗಳು ಮತ್ತು ನಬಾರ್ಡ್ ಮೂಲಕ ರೈತರಿಗೆ ಧನಸಹಾಯ ನೀಡುವುದು ಹಣಕಾಸು ಸಚಿವರು ಹೇಳಿರುವ ಇತರ ಯೋಜನೆಗಳಲ್ಲಿ ಪ್ರಮುಖವಾಗಿವೆ.

ಭಾರತದಲ್ಲಿ ಬಲವಾದ ಆರ್ಥಿಕ ಚೇತರಿಕೆ ಇದೆ ಎಂದು ಅವರು ಹೇಳಿದರು. ಆರ್ಥಿಕತೆಯ ಸ್ಥಿತಿಯನ್ನು ಪ್ರಸ್ತುತಪಡಿಸಿದ ಸೀತಾರಾಮನ್, ಮಾರುಕಟ್ಟೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ ಮತ್ತು ಭಾರತದ ವಿದೇಶಿ ಮೀಸಲು ನಿಧಿಯು ೫೬೦ ಬಿಲಿಯನ್ (೫೬,೦೦೦ ಕೋಟಿ) ಅಮೆರಿಕನ್ ಡಾಲರುಗಳಿಗೆ ತಲುಪಿದೆ ಎಂದು ವಿತ್ತ ಸಚಿವರು ಹೇಳಿದರು.

ದೇಶದಲ್ಲಿ ಬೇಡಿಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಲಕ್ಷ ಕೋಟಿ ರೂ.ಗಳ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್) ಕೊಡುಗೆಗೆ ಅನುಮೋದನೆ ನೀಡಿದ ಒಂದು ದಿನದ ನಂತರ ಸೀತಾರಾಮನ್ ಅವರು ಹೊಸ ಕೊಡುಗೆ ಘೋಷಿಸಿದ್ದರೆ.

ನೀರು ಸರಬರಾಜು ಮತ್ತು ಘನತ್ಯಾಜ್ಯ ನಿರ್ವಹಣೆಯಂತಹ ಸಾಮಾಜಿಕ ಮೂಲಸೌಕರ್ಯಗಳಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ,೧೦೦ ಕೋಟಿ ರೂ. ಮೊತ್ತದ ಸುಸ್ಥಿರತೆಯ ಅಂತರ ನಿಧಿ (ವಿಜಿಎಫ್) ಯೋಜನೆಯನ್ನು ಕೂಡಾ ಕೇಂದ್ರ ಪ್ರಾರಂಭಿಸಿದೆ.

ಎರಡು ಕಾರ್ಯಕ್ರಮಗಳು ಭಾರತವನ್ನು ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲು ಮತ್ತು ದೇಶವು ಜಾಗತಿಕ ಮೌಲ್ಯ ಸರಪಳಿಯ ಒಂದು ಭಾಗವಾಗಿ ಉಳಿಯುವಂತೆ ನೋಡಿಕೊಳ್ಳಲು ಉದ್ದೇಶಿಸಿವೆ ಎಂದು ಸೀತಾರಾಮನ್ ಹೇಳಿದರು.

ಬುಧವಾರ ಘೋಷಿಸಲಾದ ೧೦ ವಲಯಗಳ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್) ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ,೪೫,೯೮೦ ಕೋಟಿ ರೂ.ಗಳ ಪ್ರೋತ್ಸಾಹ ಧನಗಳನ್ನು ಒಳಗೊಂಡಿದೆ. ಜೊತೆಗೆ ಮೊಬೈಲ್ ಉತ್ಪಾದನೆ ಮತ್ತು ನಿರ್ದಿಷ್ಟ ಎಲೆಕ್ಟ್ರಾನಿಕ್ ಘಟಕಗಳು (೪೦,೯೫೧ ಕೋಟಿ ರೂ.), ಔಷಧ  ಮಧ್ಯವರ್ತಿಗಳು ಮತ್ತು ಸಕ್ರಿಯ ಔಷಧೀಯ ಉತ್ಪನ್ನಗಳ ಅನುಷ್ಠಾನದಲ್ಲಿ ೫೧,೩೧೧ ಕೋಟಿ ರೂ. ,೯೪೦ ಕೋಟಿ ಔಷಧೀಯ ಮೌಲ್ಯದ ಪದಾರ್ಥಗಳು (ಎಪಿಐಗಳು), ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆ (,೪೨೦ ಕೋಟಿ ರೂ.) ಸೇರಿದೆ.

 

ಕೊರೋನಾ ಸಕ್ರಿಯ ಪ್ರಕರಣಗಳು ಇಳಿಕೆ

ಕೊರೋನಾವೈರಸ್ ಸಕ್ರಿಯ ಪ್ರಕರಣಗಳು ೧೦ ಲಕ್ಷದಿಂದ .೮೯ ಲಕ್ಷಕ್ಕೆ ಇಳಿದಿದ್ದು, ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್ಆರ್) ಶೇಕಡಾ .೪೭ ರಷ್ಟಿದೆ ಎಂದು ಸೀತಾರಾಮನ್ ಹೇಳಿದರು.

 

ಪ್ರಧಾನಿ ಮೋದಿ ಟ್ವೀಟ್

ಸಂಪುಟ ನಿರ್ಧಾರವು ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಯುವಕರಿಗೆ ಅವಕಾಶಗಳನ್ನು ನೀಡುತ್ತದೆ ಮತ್ತು ಭಾರತವನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

"ಇದು ನಮ್ಮ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಮತ್ತು ಆತ್ಮನಿರ್ಭರ ಭಾರತವನ್ನು ಅರಿತುಕೊಳ್ಳುವ ಪ್ರಮುಖ ಹೆಜ್ಜೆಯಾಗಿದೆ" ಎಂದು ಅವರು ಟ್ವೀಟಿನಲ್ಲಿ ಬರೆದಿದ್ದಾರೆ.

ಏತನ್ಮಧ್ಯೆ, ಸೀತಾರಾಮನ್ ಪ್ರಕಟಣೆಗೆ ಮುಂಚಿತವಾಗಿ ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳ ಲಾಭವನ್ನು ಲಾಕ್ ಮಾಡಿದ್ದರಿಂದ ಭಾರತೀಯ ಷೇರುಗಳು ಗುರುವಾರ ಎಂಟು ದಿನಗಳ ಗೆಲುವಿನ ಹಾದಿಯನ್ನು ಸ್ಥಗಿತಗೊಳಿಸಿದವು.

No comments:

Advertisement