My Blog List

Monday, November 23, 2020

ವಿವಾದಾತ್ಮಕ ಕಾನೂನು ಚರ್ಚೆಗೆ ಮುನ್ನ ಜಾರಿ ಇಲ್ಲ: ಪಿಣರಾಯಿ

 ವಿವಾದಾತ್ಮಕ ಕಾನೂನು ಚರ್ಚೆಗೆ ಮುನ್ನ ಜಾರಿ ಇಲ್ಲ: ಪಿಣರಾಯಿ

ತಿರುವನಂತಪುರಂ: ಪೊಲೀಸ್ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಿದ ಕೇರಳ ಸರ್ಕಾರದ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾದ ಬಳಿಕ  ಹೆಜ್ಜೆ ಹಿಂದಿಟ್ಟಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಗೆ ಮುನ್ನ ಅದನ್ನು ಜಾರಿಗೊಳಿಸಲಾಗುವುದಿಲ್ಲ ಎಂದು 2020 ನವೆಂಬರ 23ರ ಸೋಮವಾರ ಹೇಳಿದ್ದಾರೆ.

ಕೇರಳ ಪೊಲೀಸ್ ಕಾಯ್ದೆಯ ತಿದ್ದುಪಡಿಯನ್ನು "ವಾಕ್ಚಾತುರ್ಯ ಅಥವಾ ನಿಷ್ಪಕ್ಷಪಾತ ಪತ್ರಿಕೋದ್ಯಮದ ವಿರುದ್ಧ ಯಾವುದೇ ರೀತಿಯಲ್ಲಿ ಬಳಸಲಾಗುವುದಿಲ್ಲ" ಎಂದು ಮುನ್ನ ಹೇಳಿದ್ದ ಮುಖ್ಯಮಂತ್ರಿಯವರುಕೇರಳ ವಿಧಾನಸಭೆಯಲ್ಲಿ ವಿವರವಾದ ಚರ್ಚೆಗೆ ಮುನ್ನ ವಿವಾದಾತ್ಮಕ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ಭರವಸೆ ನೀಡಿದರು.

ಎಲ್ಲ ಕಡೆಯ ಅಭಿಪ್ರಾಯಗಳನ್ನು ಆಲಿಸಲಾಗುವುದು ಮತ್ತು ನಂತರ ಮಾತ್ರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯನ್ ಹೇಳಿದರು.

ಕೇರಳ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಘೋಷಣೆಯ ಬೆನ್ನಲ್ಲೇ, ವಿಭಿನ್ನ ಭಾಗಗಳಿಂದ ವಿಭಿನ್ನ ಅಭಿಪ್ರಾಯಗಳು ಮೂಡಿದವು. ಎಡ ಪ್ರಜಾತಾಂತ್ರಕ ರಂಗವನ್ನು ಬೆಂಬಲಿಸಿದ್ದವರು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿಂತವರು ಕಳವಳ ವ್ಯಕ್ತಪಡಿಸಿದರು. ಹಿನ್ನೆಲೆಯಲ್ಲಿ ನಾವು ಕಾನೂನನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಿಲ್ಲ. ಬಗ್ಗೆ ವಿವರವಾದ ಚರ್ಚೆಗಳು ವಿಧಾನಸಭೆಯಲ್ಲಿ ನಡೆಯಲಿದ್ದು, ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಿದ ನಂತರ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದರು.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಸಹಿ ಹಾಕಿದ ಸುಗ್ರೀವಾಜ್ಞೆಯ ವಿರುದ್ಧ ಎಲ್ಲ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ತಿದ್ದುಪಡಿಯು ಯಾವುದೇ ರೀತಿಯಲ್ಲಿ ಅವಹೇಳನಕಾರಿ ಅಥವಾ ಮಾನಹಾನಿಕರ ಎಂದು ಕಂಡುಬಂದಲ್ಲಿ ವಿಷಯವನ್ನು ಹರಡಿದ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತದೆ. ಶಿಕ್ಷೆಗಳಲ್ಲಿ ಮೂರು ವರ್ಷಗಳ ಸೆರೆವಾಸ, ೧೦,೦೦೦ ರೂಪಾಯಿಗಳ ದಂಡ ಅಥವಾ ಎರಡೂ ಸೇರಿವೆ.

ತಿದ್ದುಪಡಿಯು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಆದರೆ ವಿಪಕ್ಷಗಳ ಆರೋಪವನ್ನು ಮುಖ್ಯಮಂತ್ರಿ ವಿಜಯನ್ ತಿರಸ್ಕರಿಸಿದ್ದರು. ಸಾಮಾಜಕ ಮಾಧ್ಯಮದ ದುರುಪಯೋಗ ಮತ್ತು ವ್ಯಕ್ತಿಗಳ ವರ್ಚಸ್ಸಿಗೆ ಮಸಿ ಬಳಿಯಲಾಗುತ್ತಿರುವ ಅಂಶಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

ಸದರಿ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ನಿರ್ಧರಿಸಿದ್ದಾರೆ.

ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವzಲ್ಲಿ ಯುಡಿಎಫ್ ನಾಯಕರು ಹುತಾತ್ಮರ ಚೌಕದಿಂದ ರಾಜ್ಯ ಸಚಿವಾಲಯದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

೧೧೮ . ಬೆದರಿಕೆ, ನಿಂದನೆ, ಅವಮಾನಕರ ಅಥವಾ ಮಾನಹಾನಿ ಮಾಡುವ  ಯಾವುದೇ ವಿಷಯದ ಸೃಷ್ಟಿ, ವ್ಯಕ್ತಪಡಿಸುವಿಕೆ, ಪ್ರಕಟಿಸುವಿಕೆ ಅಥವಾ ಪ್ರಸಾರ ಮಾಡುವಿಕೆಗೆ ಶಿಕ್ಷೆ. ಒಬ್ಬ ವ್ಯಕ್ತಿ ಅಥವಾ ವರ್ಗದ ವ್ಯಕ್ತಿಗಳನ್ನು ಬೆದರಿಸುವುದು, ನಿಂದಿಸುವುದು, ಅವಮಾನಿಸುವುದು ಅಥವಾ ಮಾನಹಾನಿ ಮಾಡುವುದು, ಅದು ಸುಳ್ಳು ಎಂದು ತಿಳಿದುಕೊಂಡು, ಅಂತಹ ವ್ಯಕ್ತಿಗಳ ಮನಸ್ಸಿಗೆ, ಪ್ರತಿಷ್ಠೆಗೆ ಅಥವಾ ಅಂತಹ ವ್ಯಕ್ತಿಯ ಅಥವಾ ವರ್ಗದ ವ್ಯಕ್ತಿಗಳ ಆಸ್ತಿಗೆ ಅಥವಾ ಅವರು ಆಸಕ್ತಿ ಹೊಂದಿರುವ ಯಾವುದೇ ವಿಚಾರಕ್ಕೆ ಧಕ್ಕೆ ಉಂಟು ಮಾಡಿದ ಅಪರಾಧ ಸಾಬೀತಾದರೆ, ಮೂರು ವರ್ಷಗಳವರೆಗೆ ಸೆರೆವಶ ಅಥವಾ ಹತ್ತು ಸಾವಿರ ರೂಪಾಯಿ ದಂಡ ಅಥವಾ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸುಗ್ರೀವಾಜ್ಞೆಯು ಹೇಳುತ್ತದೆ.

ಕೋವಿಡ್-೧೯ ಸ್ಫೋಟಗೊಂಡಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಗ್ರಾಫ್, ನಕಲಿ ಪ್ರಚಾರ ಮತ್ತು ದ್ವೇಷದ ಮಾತುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಡರಂಗ ಸರ್ಕಾರ, ಸೈಬರ್ ದಾಳಿಯು ಖಾಸಗಿ ಜೀವನಕ್ಕೆ ದೊಡ್ಡ ಬೆದರಿಕೆಯಾಗಿರುವುದರಿಂದ ಮತ್ತು ಇಂತಹ ಅಪರಾಧಗಳ ವಿರುದ್ಧ ಹೋರಾಡಲು ಅಸ್ತಿತ್ವದಲ್ಲಿ ಇರುವ ಕಾನೂನು ನಿಬಂಧನೆಗಳು ಅಸಮರ್ಪಕವಾಗಿರುವುದರಿಂದ ಪೊಲೀಸ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆಎಂದು ಹೇಳಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಐಟಿ ಕಾಯ್ದೆಯ ಸೆಕ್ಷನ್ ೬೬- ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ ೧೧೮ (ಡಿ) ರದ್ದುಪಡಿಸಿದ್ದರೂ, ಕೇಂದ್ರವು ಬೇರೆ ಯಾವುದೇ ಕಾನೂನು ಚೌಕಟ್ಟನ್ನು ಪರಿಚಯಿಸಿಲ್ಲ ಎಂದು ಅದು ಹೇಳಿದೆ. " ಸನ್ನಿವೇಶದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಿದ ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ" ಎಂದು ಸರ್ಕಾರ ಪ್ರತಿಪಾದಿಸಿದೆ.

No comments:

Advertisement