ಕೃಷಿ ಕಾನೂನು- ಅಂಶ-ಅಂಶ ಚರ್ಚೆಗೆ ಸಿದ್ಧ: ರೈತರಿಗೆ ಪ್ರಧಾನಿ ಭರವಸೆ
ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ರಾತ್ರೋರಾತ್ರಿ ತಂದದ್ದಲ್ಲ, ಸಾಕಷ್ಟು ಪರಿಶೀಲನೆಯ ಬಳಿಕ ತರಲಾಗಿದೆ. ಕಾನೂನುಗಳ ಅಂಶ -ಅಂಶಗಳ ಬಗೆಗೂ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಡಿಸೆಂಬರ್ 18ರ ಶುಕ್ರವಾರ ರೈತರಿಗೆ ಭರವಸೆ ನೀಡಿದರು.
ರೈತರನ್ನು ತಲುಪುವ ಕಾರ್ಯಕ್ರಮದ ಭಾಗವಾಗಿ ವಿಡಿಯೋ ಲಿಂಕ್ ಮೂಲಕ ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕನಿಷ್ಠ ಬೆಂಬಲ ಬೆಲೆ ಅಥವಾ ಮಂಡಿ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ ರೈತರು ಚಿಂತಿಸಬೇಕಾಗಿಲ್ಲ ಎಂದು ಸುಮಾರು ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಹೇಳಿದರು.
ಕೃಷಿ ಸಮುದಾಯದಿಂದ ಭಾರಿ ಪ್ರತಿಭಟನೆಗಳನ್ನು ಎದುರಿಸುತ್ತಿರುವ ಮೂರು ಹೊಸ ಕೃಷಿ-ಮಾರುಕಟ್ಟೆ ಸುಧಾರಣಾ ಕಾನೂನುಗಳ ಬಗ್ಗೆ ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು,
ದೆಹಲಿಯ ಗಡಿಯಲ್ಲಿ ೨೩ ನೇ ದಿನಕ್ಕೆ ೩೦ ಕ್ಕೂ ಹೆಚ್ಚು ರೈತ ಸಂಘಗಳ ಪ್ರತಿಭಟನೆ ಮುಂದುವರೆದಿರುವಂತೆಯೇ ಪ್ರತಿಯೊಂದು ವಿಷಯದ ಬಗ್ಗೆ ’ಕೈ ಜೋಡಿಸಿ ಮತ್ತು ತಲೆ ಬಾಗಿಸಿ’ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮೋದಿ ಹೇಳಿದರು.
"ದೇಶದ ರೈತರು ಮತ್ತು ಅವರ ಹಿತಾಸಕ್ತಿಗಳು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಸೇರಿವೆ’ ಎಂದು ಪ್ರಧಾನಿ ನುಡಿದರು. ಎಂದು ಪ್ರಧಾನಿ ಹೇಳಿದರು.
ಪ್ರತಿಪಕ್ಷಗಳ ಮೇಲೆ ತೀಕ್ಷ್ಣ ದಾಳಿ ಮಾಡಿದ ಮೋದಿ, ಕೃಷಿ ಕಾನೂನುಗಳ ಬಗ್ಗೆ ಮೂರು ದೊಡ್ಡ ಸುಳ್ಳುಗಳನ್ನು ಹರಡಲಾಗುತ್ತಿದೆ ಎಂದು ಆಪಾದಿಸಿದರು.
’ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆಯು ಕೊನೆಗೊಳ್ಳುತ್ತದೆ, ಮಂಡಿಗಳನ್ನು ಹಂತಹಂತವಾಗಿ ಹೊರಹಾಕಲಾಗುವುದು ಮತ್ತು ಕೃಷಿ ಕಾನೂನುಗಳಲ್ಲಿ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ರೈತರು ಒಪ್ಪಂದ ಮಾಡಿಕೊಂಡರೆ ಹೂಡಿಕೆದಾರರ ಕೈಯಲ್ಲಿ ತೊಂದರೆ ಅನುಭವಿಸುತ್ತಾರೆ ಎಂಬುದಾಗಿ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರು "ದಾರಿ ತಪ್ಪಿಸಲು ಕುಶಲತೆಯಿಂದ’ ನಡೆಯುತ್ತಿರುವ ರಾಜಕೀಯ ಪಕ್ಷಗಳ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪ್ರಧಾನಿ ಹೇಳಿದರು.
ಹೊಸ ಕಾನೂನುಗಳ ವಿರುದ್ಧ ಸಾರ್ವಜನಿಕವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡಿದ ಮೋದಿ, ಮನ್ನಣೆಯು ತಮ್ಮ ಪ್ರಣಾಳಿಕೆಯಲ್ಲಿ ಇದೇ ರೀತಿಯ ಕೃಷಿ ಕಾನೂನುಗಳನ್ನು ಭರವಸೆ ನೀಡಿದ ವಿರೋಧ ಪಕ್ಷಗಳಿಗೆ ಹೋಗುತ್ತಿಲ್ಲ ಬದಲಿಗೆ ಅದು ಪ್ರಧಾನ ಮಂತ್ರಿಗೆ ಹೋಗುತ್ತಿದೆ ಎಂಬ ಕಾರಣಕ್ಕಾಗಿ ಕೆಲವು ರಾಜಕೀಯ ಪಕ್ಷಗಳು ಸುಧಾರಣೆಗಳನ್ನು ವಿರೋಧಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.
"ಇಂದು ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಪರಿಶೀಲಿಸಿದರೆ, ಅವರ ಹಿಂದಿನ ಹೇಳಿಕೆಗಳನ್ನು ಕೇಳಿದರೆ ಮತ್ತು ಅವರ ಪತ್ರಗಳನ್ನು ನೋಡಿದರೆ, ಈ ಸುಧಾರಣೆಗಳು ಅವರು ಭರವಸೆ ನೀಡಿದ್ದಕ್ಕಿಂತ ಭಿನ್ನವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೈಗಳನ್ನು ಜೋಡಿಸಿ ವಿನಮ್ರವಾಗಿ ಎಲ್ಲ ಶ್ರೇಯಸ್ಸನ್ನು ಆ ಪಕ್ಷಗಳೇ ತೆಗೆದುಕೊಳ್ಳಲಿ ಎಂದು ನಾನು ಒತ್ತಾಯಿಸುತ್ತೇನೆ. ನಿಮ್ಮ ಎಲ್ಲ ಪ್ರಣಾಳಿಕೆಗಳಿಗೆ ನಾನು ಮನ್ನಣೆ ನೀಡುತ್ತೇನೆ’ ಎಂದು ಮೋದಿ ಹೇಳಿದರು.
ಈ ಕಾನೂನುಗಳ ವಿರುದ್ಧ ರೈತರನ್ನು ದಾರಿತಪ್ಪಿಸುವ ಮತ್ತು ಒಟ್ಟುಗೂಡಿಸುವ ಮೂಲಕ ವಿರೋಧ ಪಕ್ಷಗಳು ರಾಜಕೀಯ ಸುಗ್ಗಿಯನ್ನು ಪಡೆಯಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.
‘ಹಲವಾರು ವರ್ಷಗಳಿಂದ ರೈತರು ಸುಧಾರಣೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ಪಕ್ಷಗಳು ಅಧಿಕಾರದಲ್ಲಿದ್ದಾಗ, ಅವರು ಏನು ಮಾಡಿದರು? ಹಿಂದಿನ ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಒಂದೂವರೆ ಪಟ್ಟು ಹೆಚ್ಚಿಸುವಂತೆ ಶಿಫಾರಸು ಮಾಡಿದ ಸ್ವಾಮಿನಾಥನ್ ಆಯೋಗದ ವರದಿಯನ್ನು ಹಿಂದಿನ ಸರ್ಕಾರಗಳು ಮೂಲೆಗುಂಪು ಮಾಡಿದವು. ನಾವು ಆ ಕಡತವನ್ನು ದೂಳಿನ ಅಡಿಯಿಂದ ಮೇಲೆತ್ತಿ ತೆಗೆದು ರೈತರ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅದು ಮಾಡಿದ ಶಿಫಾರಸನ್ನು ಜಾರಿ ಮಾಡಿದ್ದೇವೆ’ ಎಂದು ಪ್ರಧಾನಿ ಹೇಳಿದರು.
ಕೃಷಿ ಸಾಲ ಮನ್ನಾ ಭರವಸೆಗಳ ಹಿನ್ನೆಲೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದರೂ ಇನ್ನೂ ಅವುಗಳನ್ನು ಈಡೇರಿಸಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವು ಭರವಸೆಗಳನ್ನು ಈಡೇರಿಸದೇ ಇರುವ ಬಗ್ಗೆ ಪ್ರಧಾನಿ ಬೊಟ್ಟು ಮಾಡಿದರು.
ಮೂರು ಕೃಷಿ ಕಾನೂನುಗಳ ವಿರುದ್ಧ ದಾರಿತಪ್ಪಿಸುವ ಅಭಿಯಾನಗಳನ್ನು ದೇಶಾದ್ಯಂತ ರೈತರು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಕಾನೂನುಗಳನ್ನು ರಾತ್ರೋರಾತ್ರಿ ತರಲಾಗಿಲ್ಲ ಎಂದು ಮೋದಿ ಹೇಳಿದರು. "ರೈತರು, ಕೃಷಿ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತು ತಜ್ಞರನ್ನು ರೈತ ಮುಖಂಡರೊಂದಿಗೆ ಸಮಾಲೋಚಿಸಲಾಗಿತ್ತು’ ಎಂದು ಮೋದಿ ಹೇಳಿದರು.
ಪ್ರಾಚೀನ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ತರಲು ಉದ್ದೇಶಿಸಿರುವ ಸುಧಾರಣೆಗಳನ್ನು ಮೋದಿ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಬಹುತೇಕ ಪಂಜಾಬಿನ ರೈತರು ಒತ್ತಾಯಿಸಿದ್ದಾರೆ. ಈ ಕೃಷಿ ಮಸೂದೆಗಳು ತಮ್ಮನ್ನು ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳ ಕೃಪಾಶ್ರಯಕ್ಕೆ ತಳ್ಳುತ್ತವೆ ಎಂದು ಚಳವಳಿ ನಿರತ ರೈತರು ಪ್ರತಿಪಾದಿಸುತ್ತಾರೆ.
ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ಪಡೆಯುವುದಾಗಿ ರೈತರಿಗೆ ತಿಳಿಸುವ ಮೂಲಕ ಸರ್ಕಾರವು ಅವರ ಕಳವಳಗಳನ್ನು ನಿವಾರಿಸಲು ಪ್ರಯತ್ನಿಸಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈತ ಸಂಘದ ಮುಖಂಡರ ನಡುವೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಈವರೆಗೆ ಅವು ಯಾವುವೂ ರೈತರನ್ನು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿಲ್ಲ.
No comments:
Post a Comment