My Blog List

Monday, December 7, 2020

ಚೀನಾದಿಂದ ಭಾರತಕ್ಕೆ ಆಮದು ಕುಗ್ಗಿತು, ರಫ್ತು ಏರಿತು

 ಚೀನಾದಿಂದ ಭಾರತಕ್ಕೆ ಆಮದು ಕುಗ್ಗಿತು, ರಫ್ತು ಏರಿತು

ಬೀಜಿಂಗ್: ಗಡಿ ಸೇನಾ ಘರ್ಷಣೆ ಮತ್ತು ಕೊರೋನವೈರಸ್ ಸಾಂಕ್ರಾಮಿಕ ರೋಗವು ಆರ್ಥಿಕ ಸ್ಥಿತಿಗತಿ ಮೇಲೆ ಬೀರಿದ ಪ್ರಭಾವದ ಹೊರತಾಗಿಯೂ ೨೦೨೦ರ ಸಾಲಿನ ಮೊದಲ ೧೧ ತಿಂಗಳಲ್ಲಿ ಚೀನಾಕ್ಕೆ ಭಾರತದ ರಫ್ತು ಶೇಕಡಾ ೧೬ರಷ್ಟು ಹೆಚ್ಚಾಗಿದೆ ಎಂದು ಚೀನಾದ ಕಸ್ಟಮ್ಸ್ ಅಂಕಿಸಂಖ್ಯೆಗಳು 2020 ಡಿಸೆಂಬರ್ 07ರ ಸೋಮವಾರ ತೋರಿಸಿತು.

ಇದಕ್ಕೆ ವ್ಯತಿರಿಕ್ತವಾಗಿ, ಇದೇ ಅವಧಿಯಲ್ಲಿ ಭಾರತವು ಚೀನಾದಿಂದ ಕಡಿಮೆ ಆಮದು ಮಾಡಿಕೊಂಡಿದ್ದು, ಇದು ಶೇಕಡಾ ೧೩ರಷ್ಟು ಕುಸಿತವನ್ನು ತೋರಿಸುತ್ತದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ಉಲ್ಲೇಖಿಸಿದ ಮಾಹಿತಿ ತೋರಿಸಿತು.

ಪೂರ್ವ ಲಡಾಖ್ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಮೇ ತಿಂಗಳಿನಿಂದ ನಡೆಯುತ್ತಿರುವ ಗಡಿ ಘರ್ಷಣೆಯನ್ನು ಬೀಜಿಂಗ್ ರಾಜಕೀಯಗೊಳಿಸದ ಕಾರಣ ಚೀನಾಕ್ಕೆ ಭಾರತದ ರಫ್ತು ಏರಿಕೆಯಾಗುತ್ತಿದೆ. ಆದರೆ ನವದೆಹಲಿಯು ಚೀನಾದಿಂದ ಭಾರತಕ್ಕೆ ಬರುವ ಆಮದು ವಸ್ತುಗಳ ಮೇಲೆ ಕಡಿವಾಣ ಹಾಕಿದೆ ಎಂಬುದರತ್ತ ಚೀನಾದ ರಾಜ್ಯ ಮಾಧ್ಯಮಗಳು ಬೊಟ್ಟು ಮಾಡಿವೆ.

ಸಾಂಕ್ರಾಮಿಕ ರೋಗದಿಂದಾಗಿ ಭಾರತಕ್ಕೆ ಚೀನಾದ ರಫ್ತು ಕುಸಿತವು ಭಾರತದಲ್ಲಿ ಆಂತರಿಕ ಬೇಡಿಕೆ ಕುಸಿಯಲು ಕಾರಣವಾಗಿದೆ ಎಂದು ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಇತ್ತೀಚಿನ ದ್ವಿಪಕ್ಷೀಯ ವ್ಯಾಪಾರ ಅಂಕಿ ಅಂಶಗನ್ನು ಉಲ್ಲೇಖಿಸಿರುವ ವರದಿಯಲ್ಲಿ ತಿಳಿಸಿದೆ.

"ಸೋಮವಾರ ಬಿಡುಗಡೆಯಾದ ಕಸ್ಟಮ್ಸ್ ಮಾಹಿತಿಯ ಪ್ರಕಾರ, ಅಮೆರಿಕನ್ ಡಾಲರ್ ಪರಿಭಾಷೆಯಲ್ಲಿ ಚೀನಾ ಜನವರಿಯಿಂದ ನವೆಂಬರವರೆಗೆ ಭಾರತಕ್ಕೆ ಸುಮಾರು ೫೯೦೦ ಕೋಟಿ (೫೯ ಬಿಲಿಯನ್) ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ, ಇದು ಶೇಕಡಾ ೧೩ರಷ್ಟು ಕಡಿಮೆಯಾಗಿದೆ. ವರ್ಷದ ಮೊದಲ ೧೦ ತಿಂಗಳಲ್ಲಿ ಶೇಕಡಾ ೧೬.೨ರಷ್ಟು ಕುಸಿvಕ್ಕೆ ಹೋಲಿಸಿದರೆ ಕುಸಿತ ಸ್ವಲ್ಪ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

"ಆದಾಗ್ಯೂ, ಅವಧಿಯಲ್ಲಿ ಭಾರತವು ಚೀನಾದಿಂದ ಮಾಡಿಕೊಂಡಿರುವ ಆಮದುಗಳು ಶೇಕಡಾ ೧೬ರಷ್ಟು ಏರಿಕೆಯಾಗಿದ್ದು, ನೆರೆಯ ರಾಷ್ಟ್ರದೊಂದಿಗಿನ ಆರ್ಥಿಕ ಸಂವಹನಗಳನ್ನು ರಾಜಕೀಯಗೊಳಿಸುವುದರಿಂದ ಚೀನಾ ದೂರವಿರುವುದನ್ನು ತೋರಿಸುತ್ತದೆ" ಎಂದು ತಜ್ಞರನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಚೀನಾದಿಂದ ತಯಾರಾದ ಉತ್ಪನ್ನಗಳ ಒಳಹರಿವನ್ನು ನಿರ್ಬಂಧಿಸಲು, ಹೆಚ್ಚುತ್ತಿರುವ ಸುಂಕದ ಅಡೆತಡೆಗಳು ಸೇರಿದಂತೆ, ನಿಗ್ರಹ-ತರಹದ ಕ್ರಮಗಳನ್ನು ಹೆಚ್ಚಿಸುತ್ತಿರುವುದು ಚೀನಾದ ಬಗ್ಗೆ ಭಾರತ ಸರ್ಕಾರದಿಂದ ವ್ಯಕ್ತವಾಗುತ್ತಿರುವಪೂರ್ವಾಗ್ರಹ ಮನೋಭಾವವನ್ನು ತೋರಿಸುತ್ತದೆ ಎಂದು ವರದಿ ಹೇಳಿದೆ.

"ಭಾರತ ಸರ್ಕಾರದ ವರ್ತನೆಗೆ ಹೋಲಿಸಿದರೆ, ರಾಜಕೀಯ ಘರ್ಷಣೆಗಳ ಹೊರತಾಗಿಯೂ ಚೀನಾ ಭಾರತದಿಂದ ಹೆಚ್ಚಿನದನ್ನು ಆಮದು ಮಾಡಿಕೊಳ್ಳುತ್ತಲೇ ಇದೆ ಎಂದು ಅದು ಹೇಳಿದೆ.

"ಭಾರತದಿಂದ ಚೀನಾದ ಆಮದು ಮೊದಲ ೧೧ ತಿಂಗಳಲ್ಲಿ ಸುಮಾರು ೧೯೦೦ ಕೋಟಿ ಡಾಲರ್ ಮೌಲ್ಯದ್ದಾಗಿದ್ದು, ಇದು ಶೇಕಡಾ ೧೬ರಷ್ಟು ಹೆಚ್ಚಾಗಿದೆ.’

ಬೀಜಿಂಗಿನ ಭಾರತೀಯ ರಾಯಭಾರ ಕಚೇರಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ೨೦೧೯ ರಲ್ಲಿ ಚೀನಾದ ಸಾವಯವ ರಾಸಾಯನಿಕಗಳು, ರಸಗೊಬ್ಬರಗಳು, ಪ್ರತಿಜೀವಕಗಳು ಮತ್ತು ಅಲ್ಯೂಮಿನಿಯಂ ಫಾಯಿಲ್ಗಳಿಗೆ ಭಾರತ ಅತಿದೊಡ್ಡ ಖರೀದಿ ತಾಣವಾಗಿದೆ.

"ಚೀನಾಕ್ಕೆ ಭಾರತದ ಉನ್ನತ ರಫ್ತುಗಳಲ್ಲಿ ಸಾವಯವ ರಾಸಾಯನಿಕಗಳು, ಕಬ್ಬಿಣದ ಅದಿರುಗಳು, ಅಪೂರ್ಣ ವಜ್ರಗಳು, ಮೀನು ಮತ್ತು ಕಠಿಣಚರ್ಮಿಗಳು, ಹತ್ತಿ, ಗ್ರಾನೈಟ್ ಕಲ್ಲು ಇತ್ಯಾದಿಗಳು ಸೇರಿವೆ ಎಂದು ಭಾರತೀಯ ದೂತಾವಾಸದ ಮಾಹಿತಿ ತೋರಿಸಿದೆ.

೨೦೧೯ ರಲ್ಲಿ ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ ಒಂದು ದಶಕದಲ್ಲಿ ಮೊದಲ ಬಾರಿಗೆ ಕಡಿಮೆಯಾಯಿತು.

೨೦೧೯ ರಲ್ಲಿ, ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆಯು ಶೇ.೨ರಷ್ಟು ಕಡಿಮೆಯಾಗಿದೆ, ಇದು ೨೦೦೫ ನಂತರದ ಕೊರತೆಯ ಮೊದಲ ಇಳಿಕೆಯಾಗಿದ್ದು ಮೌಲ್ಯವು ೫೬೯೫ ಕೋಟಿ (೫೬.೯೫ ಬಿಲಿಯನ್) ಆಗಿತ್ತು.

೨೦೧೯ ರಲ್ಲಿ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರ ೯೨೮೯ ಕೋಟಿ (೯೨.೮೯ ಬಿಲಿಯನ್) ಅಮೆರಿಕನ್ ಡಾಲರಿಗೆ ತಲುಪಿದೆ.

ಅಮೆರಿಕ, ಜಪಾನ್, ಹಾಂಗ್ಕಾಂಗ್, ದಕ್ಷಿಣ ಕೊರಿಯಾ, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ವಿಯೆಟ್ನಾಂ, ಮಲೇಷ್ಯಾ, ಬ್ರೆಜಿಲ್ ಮತ್ತು ರಷ್ಯಾವನ್ನು ಅನುಸರಿಸಿ ೨೦೧೯ ರಲ್ಲಿ ಭಾರತವು ಚೀನಾದ ೧೨ ನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿತ್ತು.

ಏತನ್ಮಧ್ಯೆ, ಚೀನಾದ ಸರ್ಕಾರಿ ಮಾಧ್ಯಮವು ಚೀನಾವು ಭಾರತೀಯ ಅಕ್ಕಿ ಖರೀದಿಸಿರುವುದನ್ನು ಎಚ್ಚರಿಕೆಯಿಂದ ಸ್ವಾಗತಿಸಿದೆ.

ರಿಯಾಯ್ತಿ ದರದ ಪ್ರಸ್ತಾಪ ಇದ್ದುದರಿಂದ ಕಳೆದ ವಾರ, ಚೀನಾ ದಶಕಗಳಲ್ಲಿ ಮೊದಲ ಬಾರಿಗೆ ಭಾರತೀಯ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು.

ನವದೆಹಲಿಯ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಭಾರತೀಯ ವ್ಯಾಪಾರಿಗಳು ಡಿಸೆಂಬರ್-ಫೆಬ್ರವರಿ ಸಾಗಣೆಗೆ ,೦೦,೦೦೦ ಟನ್ ಮುರಿದ ಅಕ್ಕಿಯನ್ನು ಪ್ರತಿ ಟನ್ನಿಗೆ ಸುಮಾರು ೩೦೦ ಡಾಲರಿನಂತೆ ರಫ್ತು ಮಾಡಲು ಒಪ್ಪಂದ ಮಾಡಿಕೊಂಡರು.

" ಖರೀದಿಯು ಕೇವಲ ವಾಣಿಜ್ಯ ಕ್ರಮವಾಗಿತ್ತು, ಏಕೆಂದರೆ ಭಾರತೀಯ ಅಕ್ಕಿಯ ಬೆಲೆ - ಪ್ರತಿ ಟನ್ಗೆ  ೩೦೦ ಡಾಲರುಗಳಾಗಿದ್ದು ಅದರ ದೇಶೀಯ ಸಹವರ್ತಿಗಳಿಗಿಂತ ಅಗ್ಗವಾಗಿದೆ, ಮತ್ತು ಅಕ್ಕಿ ಮುಖ್ಯವಾಗಿ ಮನುಷ್ಯರಿಗಿಂತ ಹೆಚ್ಚಾಗಿ ಪಶು ಆಹಾರವಾಗಿ ಬಳಕೆಯಾಗುತ್ತದೆ ಎಂದು ಧಾನ್ಯಕ್ಕೆ ಸಂಬಂಧಿಸಿದಂತೆ ಪರಿಣತಿ ಹೊಂದಿರುವ ಎನ್ಗ್ರೈನ್.ಕಾಮ್ ವೆಬ್ ಸೈಟಿನ ಮುಖ್ಯ ಸಂಪಾದಕ ಶಾನ್ವೇ, ಸರ್ಕಾರೀ ಮಾಧ್ಯಮಗಳಿಗೆ ತಿಳಿಸಿದ್ದಾರೆ.

No comments:

Advertisement