My Blog List

Monday, December 7, 2020

ಆಗ್ರಾ ಮೆಟ್ರೋ ರೈಲು ಯೋಜನೆ: ಮೊದಲ ಹಂತದ ಉದ್ಘಾಟನೆ

 ಆಗ್ರಾ ಮೆಟ್ರೋ ರೈಲು ಯೋಜನೆ: ಮೊದಲ ಹಂತದ ಉದ್ಘಾಟನೆ

ನವದೆಹಲಿ/ ಲಕ್ನೋ: ‘ಅಭಿವೃದ್ಧಿಗಾಗಿ ಸುಧಾರಣೆ ಕ್ರಮಗಳು ಅತ್ಯಗತ್ಯವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  2020 ಡಿಸೆಂಬರ್ 07ರ ಸೋಮವಾರ ಪ್ರತಿಪಾದಿಸಿದರು.

ಆಗ್ರಾ ಮೆಟ್ರೋ ರೈಲು ಯೋಜನೆಯ (ಎಎಂಆರ್ಪಿ) ನೇ ಹಂತದ ನಿರ್ಮಾಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಎಲ್ಲ ಕ್ಷೇತ್ರಗಳ ಸಮಗ್ರ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಹೊಸ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ, ‘ಕೆಲವು ಕಾನೂನುಗಳು ಹಿಂದಿನ ಶತಮಾನದಲ್ಲಿ ಉತ್ತಮವಾಗಿದ್ದವು. ಆದರೆ, ಈಗ ಅಂತಹ ಕಾನೂನುಗಳು ಅಪ್ರಸ್ತುತವಾಗಿವೆ ಎಂದು ಅವರು ನುಡಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸುಧಾರಣೆ ಕ್ರಮಗಳು ಭಾಗಶಃ ಜಾರಿಗೆ ಬರುತ್ತಿದ್ದವು ಅಥವಾ ಅವ್ಯವಸ್ಥೆಯಿಂದ ಕೂಡಿರುತ್ತಿದ್ದವು. ಈಗ ಸುಧಾರಣೆ ಕ್ರಮಗಳಿಂದ ಜನರ ಜೀವನಮಟ್ಟ ಸುಧಾರಿಸುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರ ಬದುಕು ಸರಳ ಮತ್ತು ಸುಂದರವಾಗಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಮೋದಿ ಹೇಳಿದರು.

,೦೦೦ ಕೋಟಿ ರೂ.ಗಳ ಮೌಲ್ಯದ ಮೆಟ್ರೋ ಯೋಜನೆಯು ಆಗ್ರಾದಲ್ಲಿ ಸ್ಮಾರ್ಟ್ ಸೌಲಭ್ಯಗಳ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದರು.

"ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಒಂದು ದೊಡ್ಡ ಸಮಸ್ಯೆ ಎಂದರೆ ಯೋಜನೆಗಳನ್ನು ಘೋಷಿಸಲಾಯಿತು ಆದರೆ ನಿಧಿಗಳ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಲಾಗಿಲ್ಲ. ಆದ್ದರಿಂದ, ಯೋಜನೆಗಳು ವರ್ಷಗಳ ಕಾಲ ಎಳೆಯುತ್ತಲೇ ಇದ್ದವು. ಹೊಸ ಯೋಜನೆಗಳನ್ನು ಪ್ರಾರಂಭಿಸುವುದರ ಜೊತೆಗೆ ಅವುಗಳಿಗೆ ಹಣವನ್ನು ವ್ಯವಸ್ಥೆ ಮಾಡುವ ಬಗ್ಗೆ ನನ್ನ ಸರ್ಕಾರ ಗಮನಹರಿಸಿದೆ ಎಂದು ಪ್ರಧಾನಿ ಹೇಳಿದರು.

"ಸ್ವದೇಶ ದರ್ಶನ್ ಮತ್ತು ಪ್ರಸಾದ್ ನಂತಹ ಯೋಜನೆಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ಪ್ರಯತ್ನದಿಂದ ಭಾರತ ಈಗ ಪ್ರವಾಸ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ೩೪ ನೇ ಸ್ಥಾನದಲ್ಲಿದೆ. ೨೦೧೩ ರಲ್ಲಿ ಸೂಚ್ಯಂಕದಲ್ಲಿ ಭಾರತ ೬೫ ನೇ ಸ್ಥಾನದಲ್ಲಿತ್ತು ಎಂದು ಅವರು ನುಡಿದರು.

ಕೊರೋನವೈರಸ್ ಸಾಂಕ್ರಾಮಿಕ ಪರಿಸ್ಥಿತಿಯು ಸುಧಾರಿಸುತ್ತಿರುವುದರಿಂದ, ಶೀಘ್ರದಲ್ಲೇ ಪ್ರವಾಸೋದ್ಯಮ ಕ್ಷೇತ್ರದ ಮೋಡಿ ಮತ್ತೆ ಮರಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ನುಡಿದರು.

ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ಆಧುನಿಕ ತಂತ್ರಜ್ಞಾನದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

,೩೭೯.೬೨ ಕೋಟಿ ರೂಪಾಯಿ ವೆಚ್ಚದ ಆಗ್ರಾ ಮೆಟ್ರೊ ಯೋಜನೆ ಎರಡು ಕಾರಿಡಾರುಗಳನ್ನು ಒಳಗೊಂಡಿದ್ದು, ಒಟ್ಟು ೨೯. ಕಿಲೋ ಮೀಟರ್ ಉದ್ದ ರೈಲು ಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಶೀಘ್ರ ಕೋವಿಡ್ ಲಸಿಕೆ

ಇದೇ ಸಂದರ್ಭದಲ್ಲಿ ಕೋವಿಡ್-೧೯ ಲಸಿಕೆ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ಕೊರೊನಾ ವೈರಸ್ ಲಸಿಕೆಗೆ ದೇಶವು ಇನ್ನಷ್ಟು ದಿನ ಕಾಯಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ಸೋಂಕು ಹರಡುವಿಕೆ ತಡೆಗೆ ಕೈಗೊಳ್ಳಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನೂ ಮುಂದುವರೆಸುವಂತೆ ಕರೆ ನೀಡಿದ ಪ್ರಧಾನಿ ಮೋದಿ, ಯಾವುದೇ ಕಾರಣಕ್ಕೂ ಮೈಮರೆಯಬೇಡಿ ಎಂದು ಮನವಿ ಮಾಡಿದರು.

ನಾನು ಈಗಾಗಲೇ ಹಲವು ವಿಜ್ಞಾನಿಗಳನ್ನು ಭೇಟಿ ಮಾಡಿದ್ದೇನೆ, ಕೊರೊನಾ ವೈರಸ್ ಲಸಿಕೆ ಕೆಲವೇ ದಿನಗಳಲ್ಲಿ ಸಿಗಲಿದೆ ಎಂಬ ದೃಢ ಭರವಸೆಯನ್ನು ಪ್ರಧಾನಿ ವ್ಯಕ್ತ ಪಡಿಸಿದರು.

ಇದೇ ವೇಳೆ, ದೇಶದ ಜನರು ಮುಖಗವಸು (ಫೇಸ್ ಮಾಸ್ಕ್) ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ಕೋವಿಡ್ ಶಿಷ್ಟಾಚಾರ ಕ್ರಮಗಳನ್ನೂ ಅನುಸರಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ ಎಂದು ಪ್ರಧಾನಿ ಮನವಿ ಮಾಡಿದರು.

ಸಮಾರಂಭವು ಆಗ್ರಾದ ೧೫ ಬೆಟಾಲಿಯನ್ ಪಿಎಸಿ ಪೆರೇಡ್ ಮೈದಾನದಲ್ಲಿ ಬೆಳಿಗ್ಗೆ ೧೨: ೧೫ ಕ್ಕೆ ಪ್ರಾರಂಭವಾಯಿತು. ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರಂಭದಲ್ಲಿ ಪಾಲ್ಗೊಂಡರು.

ಯೋಜನೆಯು ಎರಡು ಕಾರಿಡಾರ್ಗಳಲ್ಲಿ ಹರಡಿದೆ ಮತ್ತು ಆಗ್ರಾದ ಜನರಜೀವನವನ್ನು ಹಸನುಗೊಳಿಸುತ್ತದೆ ಮತ್ತು ರೋಮಾಂಚಕ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.

ಆಗ್ರಾ ಮೆಟ್ರೋ ಯೋಜನೆ

ಸಿಸಿಎಸ್ ವಿಮಾನ ನಿಲ್ದಾಣದಿಂದ ಮುನ್ಶಿಪುಲಿಯಾವರೆಗಿನ ೨೩ ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರಿನಲ್ಲಿ ಲಕ್ನೋ ಮೆಟ್ರೊದ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರ ಜೊತೆಗೆ ಕಳೆದ ವರ್ಷ ಮಾರ್ಚ್ ರಂದು ಪ್ರಧಾನಿ ಮೋದಿ ಅವರು ಆಗ್ರಾ ಮೆಟ್ರೋ ಯೋಜನೆಯನ್ನು ಉದ್ಘಾಟಿಸಿದ್ದರು.

           * ಆಗ್ರಾ ಮೆಟ್ರೋ ಯೋಜನೆಯು ಒಟ್ಟು ೨೯. ಕಿ.ಮೀ ಉದ್ದದ ಎರಡು ಕಾರಿಡಾರುಗಳನ್ನು ಒಳಗೊಂಡಿದೆ.

           * ಇದು ಪ್ರಮುಖ ಪ್ರವಾಸಿ ಆಕರ್ಷಣೆಗಳಾದ ತಾಜ್ ಮಹಲ್, ಆಗ್ರಾ ಕೋಟೆ, ಸಿಕಂದ್ರವನ್ನು ರೈಲ್ವೆ ನಿಲ್ದಾಣಗಳು ಮತ್ತು ನಗರದ ಬಸ್ ನಿಲ್ದಾಣಗಳೊಂದಿಗೆ ಸಂಪರ್ಕಿಸುತ್ತದೆ.

           * ಮೆಟ್ರೊ ಸೇವೆಗಳು ಐತಿಹಾಸಿಕ ನಗರಕ್ಕೆ ಪರಿಸರ ಸ್ನೇಹಿ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಅನ್ನು ಒದಗಿಸುತ್ತದೆ.

           * ಇದು ನಗರದ ೨೬ ಲಕ್ಷ ನಿವಾಸಿಗಳಿಗೆ ದೈನಂದಿನ ಮತ್ತು ಸಾಂದರ್ಭಿಕ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಿದೆ.

           * ಸ್ಥಳೀಯ ನಿವಾಸಿಗಳಲ್ಲದೆ, ಆಗ್ರಾ ಮೆಟ್ರೋ ಪ್ರತಿ ವರ್ಷ ನಗರಕ್ಕೆ ಭೇಟಿ ನೀಡುವ ೬೦ ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೂ ಆಗ್ರಾ ಮೆಟ್ರೋ ಸೇವೆ ಸಲ್ಲಿಸಲಿದೆ.

           * ಎಎಂಆರ್ಪಿ ಅಂದಾಜು ವೆಚ್ಚ ,೩೭೯ ಕೋಟಿ ರೂ.

           * ಸಂಪೂರ್ಣ ಯೋಜನೆ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 

No comments:

Advertisement