Tuesday, July 1, 2008

ಇಂದಿನ ಇತಿಹಾಸ History Today ಜೂನ್ 27

ಇಂದಿನ ಇತಿಹಾಸ

ಜೂನ್ 27

ಮೂರು ವರ್ಷಗಳಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಡಾ. ಬಿ.ಎ. ವಿವೇಕ ರೈ ಅವರು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡರು.

2007: ಸದ್ದುಗದ್ದಲ ಇಲ್ಲದೆ ಕೆಲಸ ಮಾಡುವ ಲೇಬರ್ ಪಕ್ಷದ ನಾಯಕ ಗಾರ್ಡನ್ ಬ್ರೌನ್ ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಇದೇ ಪಕ್ಷದ ಟೋನಿ ಬ್ಲೇರ್ ಅವರ 10 ವರ್ಷದ ಆಡಳಿತಕ್ಕೆ ತೆರೆ ಬಿತ್ತು.

2007: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಆರೋಪಿಗಳಾಗಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್. ಎಸ್. ಶರ್ಮಾ ಮತ್ತು ಮತ್ತಿಬ್ಬರು ಪೊಲೀಸ್ ಅಧಿಕಾರಿಗಳನ್ನು ಸಾಕ್ಷ್ಯಗಳ ಕೊರತೆಯ ಕಾರಣ ಪುಣೆಯ ವಿಶೇಷ ನ್ಯಾಯಾಲಯ ಆರೋಪಮುಕ್ತ ಗೊಳಿಸಿತು.

2007: ಮೂರು ವರ್ಷಗಳಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಡಾ. ಬಿ.ಎ. ವಿವೇಕ ರೈ ಅವರು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡರು.

2007: ಕಾರ್ಮಿಕ ಮುಖಂಡ, ಸ್ವಾತಂತ್ರ್ಯ ಹೋರಾಟಗಾರ ಎಡ ಪಂಥೀಯ ನಾಯಕ ಕೆ.ಆರ್. ನಾಯಕ್ (78) ಅವರು ತುಮಕೂರಿನಲ್ಲಿ ಈದಿನ ನಿಧನರಾದರು.

2006: ಗೋವಾದ ರಾಷ್ಟ್ರೀಯ ಸಾಗರ ಭೂಗರ್ಭ ವಿಜ್ಞಾನ ಸಂಸ್ಥೆಯ 55 ವರ್ಷದ ಸಾಗರ ಭೂಗರ್ಭ ವಿಜ್ಞಾನಿ ಅನಿಲ್ ಬಾಲ್ಸಂಕರ್ ಅವರು ಲಿಮ್ಕಾ ದಾಖಲೆ ಸೇರಲು ಪಣಜಿಯಲ್ಲಿ ಮಾಧ್ಯಮ, ಕ್ಯಾಮರಾಗಳು, ವೈದ್ಯರ ಮುಂದೆ ಇಚ್ಛಾಶಕ್ತಿಯನ್ನು ಬಳಸಿ ಬೇಕೆಂದಾಗ ತಮ್ಮ ರೋಮಗಳನ್ನು ನಿಮಿರಿಸಿದರು..! (ನೆಟ್ಟಗೆ ನಿಲ್ಲಿಸಿದರು..!) ಈ ವಿಜ್ಞಾನಿ ಕಳೆದ 25 ವರ್ಷಗಳಿಂದ ತಮ್ಮ ಕೂದಲುಗಳನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ನೆಟ್ಟಗೆ ನಿಲ್ಲಿಸುವ ಕಲೆ ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ಪರಿಣಾಮವಾಗಿ ಬಾಲ್ಸಂಕರ್ ಅವರು ತಮ್ಮ ಮನಸ್ಸಿನ ಮೂಲಕವಾಗಿ ಏಕಾಗ್ರತೆ ಸಾಧಿಸಿದ ಐದಾರು ಸೆಕೆಂಡುಗಳಲ್ಲಿ, ಅವರ ಕೈಗಳು, ಕಾಲುಗಳು, ಕಂಕುಳ ರೋಮಗಳು ನೆಟ್ಟಗೆ ನಿಲ್ಲುತ್ತವೆ.

2006: ಲಾಹೋರಿನಲ್ಲಿ ಇರುವ ಏಕೈಕ ಕೃಷ್ಣ ದೇವಾಲಯವನ್ನು ಕೆಡವಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲು ಲಾಹೋರಿಗೆ ಬನ್ನಿ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ಎಜಾಜುಲ್ ಹಕ್ ಅವರು ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಕೋರಿದರು.

1979: ಅಮೆರಿಕದ ಬಾಕ್ಸರ್ ಮಹಮ್ಮದ್ ಅಲಿ ಬಾಕ್ಸಿಂಗ್ ನಿಂದ ತಮ್ಮ ನಿವೃತ್ತಿ ಘೋಷಿಸಿದರು. ಜಗತ್ತಿನ ಮಹಾನ್ ಹೆವಿವೇಯ್ಟ್ ಬಾಕ್ಸರ್ಗಳಲ್ಲಿ ಇವರು ಒಬ್ಬರು. 20ನೇ ಶತಮಾನದ ಮಹಾನ್ ಅಥ್ಲೆಟ್ ಗಳಲ್ಲೂ ಒಬ್ಬರೆಂದು ಖ್ಯಾತರಾಗಿದ್ದಾರೆ. 1967: ಜಗತ್ತಿನ ಪ್ರಪ್ರಥಮ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್) ಲಂಡನ್ನಿನ ಎನ್ ಫೀಲ್ಡಿನಲ್ಲಿ ಸ್ಥಾಪನೆಗೊಂಡಿತು. ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಯದ್ಲಲಿ ಮಾನವ ನೆರವು ಇಲ್ಲದೆಯೇ ಹಣ ಹಿಂತೆಗೆದುಕೊಳ್ಳಲು, ಬ್ಯಾಲೆನ್ಸ್ ನೋಡಿಕೊಳ್ಳಲು ಈ ಎಲೆಕ್ಟ್ರಾನಿಕ್ ಯಂತ್ರ ಅವಕಾಶ ಕಲ್ಪಿಸುತ್ತದೆ.

1961: ಕ್ಯಾಂಟರ್ಬರಿ ಕ್ಯಾಥೆಡ್ರಲ್ ನಲ್ಲಿ 100ನೇ ಕ್ಯಾಂಟರ್ ಬರಿ ಆಚರ್್ ಬಿಷಪ್ ಆಗಿ ಆರ್ಥರ್ ಮೈಕೆಲ್ ರಾಮ್ ಸೆ ಅವರಿಗೆ ಪಟ್ಟಗಟ್ಟಲಾಯಿತು.

1943: ಸಂಗೀತ ಕಲಾವಿದರ, ಸಂಗೀತ ತಜ್ಞರ ಮನೆತನದಲ್ಲಿ ಹುಟ್ಟಿ ಸಂಗೀತ ವಿದುಷಿ ಎನಿಸಿಕೊಂಡು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಹಾಡಿ ಮೋಡಿ ಮಾಡಿದ ಗಾಯಕಿ ಸರೋಜಾ ನಟರಾಜನ್ ಜನನ.

1839: ಪಂಜಾಬಿನ ಮಹಾರಾಜ ರಣಜಿತ್ ಸಿಂಗ್ ತನ್ನ 58ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಮೃತನಾದ. ಆತನ ನಾಲ್ವರು ಪತ್ನಿಯರು ಮತ್ತು 7 ಮಂದಿ ದಾಸಿಯರು ಸಿಂಗ್ ಚಿತೆಗೆ ಹಾರಿ ಆತ್ಮಾರ್ಪಣೆ ಮಾಡಿಕೊಂಡರು. ರಣಜಿತ್ ಸಿಂಗ್ ಸಾವಿನ ಆರು ವರ್ಷಗಳಿಗೂ ಕಡಿಮೆ ಅವದಿಯಲ್ಲಿ ಆತ ಕಟ್ಟ್ದಿದ ಸಿಖ್ ರಾಜ್ಯ ನಾಯಕರ ಪೈಪೋಟಿಯಿಂದ ಉಂಟಾದ ಆಂತರಿಕ ಗೊಂದಲದ ಪರಿಣಾಮವಾಗಿ ಪತನಗೊಂಡಿತು.

1829: ವಾಷಿಂಗ್ಟನ್ ಡಿ.ಸಿ.ಯ ಸ್ಮಿತ್ ಸೋನಿಯನ್ ಇನ್ ಸ್ಟಿಟ್ಯೂಟ್ ಸ್ಥಾಪನೆಗೆ ನಿಧಿ ಒದಗಿಸಿದ ಇಂಗ್ಲಿಷ್ ವಿಜ್ಞಾನಿ ಜೇಮ್ಸ್ ಸ್ಮಿತ್ ಸನ್ (1765-1829) ಜಿನೋವಾದಲ್ಲಿ ಮೃತನಾದ. ತಾನು ಜನಿಸಿದ ಸಂದರ್ಭ ಕುರಿತ ವಿವಾದಗಳ ಅಸಮಾಧಾನದ ಹಿನ್ನೆಲೆಯಲ್ಲಿ ಆತ ತನ್ನ ಹಣವನ್ನೆಲ್ಲ ಅಮೆರಿಕದ ಸಂಸ್ಥೆಗೆ ನೀಡಿದ. 1904ರಲ್ಲಿ ಆತನ ಅಸ್ಥಿಯನ್ನು ಬಿಗಿ ಭದ್ರತೆಯ ಮಧ್ಯೆ ಅಮೆರಿಕಕ್ಕೆ ತಂದು ಸ್ಮಿತ್ ಸೋನಿಯನ್ ಸಂಸ್ಥೆಯ ಮೂಲ ಕಟ್ಟಡದಲ್ಲಿ ಇರಿಸಲಾಯಿತು.

No comments:

Advertisement