Sunday, November 16, 2014

ಕಿಡಂಬಿ ಶ್ರೀಕಾಂತ್ ಮುಡಿಗೆ ಚೀನಾ ಸೂಪರ್ ಸೀರೀಸ್

ಕಿಡಂಬಿ ಶ್ರೀಕಾಂತ್ ಮುಡಿಗೆ ಚೀನಾ ಸೂಪರ್ ಸೀರೀಸ್ 
ಫುಝೋವು (ಚೀನಾ):  ಚೀನಾ ಓಪನ್ ಸೂಪರ್ ಸೀರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಚೀನಾದ ಲಿನ್ ಡಾನ್ ಅವರನ್ನು ಭಾನುವಾರ (16-11-2014) ಪರಾಭವಗೊಳಿಸುವ ಮೂಲಕ ಭಾರತದ ಕಿರಿಯ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ತಮ್ಮ ಚೊಚ್ಚಲ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದುಕೊಂಡರು.

 21ರ ಹರೆಯದ ಆಂಧ್ರಪ್ರದೇಶದ ಆಟಗಾರ ಅದ್ಭುತ ಆಟ ಆಡುವ ಮೂಲಕ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಲಿನ್ ಅವರನ್ನು 21-19, 21-17 ಪಾಯಿಂಟ್ ಅಂತರದಲ್ಲಿ ಸೋಲಿಸಿದರು. ಈ ರೋಚಕ ಪಂದ್ಯ ಇಲ್ಲಿ 46 ನಿಮಿಷ ಕಾಲ ನಡೆಯಿತು.

ಶ್ರೀಕಾಂತ್ ಅವರು ಕಳೆದ ವರ್ಷ ಥಾಯ್ಲೆಂಡ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್​ ಗೆದ್ದುಕೊಂಡಿದ್ದರು.

ಸೈನಾ ನೆಹ್ವಾಲ್​ಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ 

ಇದಕ್ಕೆ ಮುನ್ನ ಒಲಿಂಪಿಕ್​ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಜಪಾನಿನ ಕಿರಿಯ ಆಟಗಾರ್ತಿ ಅಕನೆ ಯಮಗುಂಚಿ ಅವರನ್ನು ಪರಾಭವಗೊಳಿಸುವ ಮೂಲಕ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
 ಸೈನಾ ಅವರು 17ರ ಹರೆಯದ ಅಕನೆ ಅವರನ್ನು ಹಕ್ಸಿಯಾ ಒಲಿಂಪಿಕ್ ಸ್ಪೋರ್ಟ್ ಸೆಂಟರ್​ನಲ್ಲಿ ನಡೆದ 42 ನಿಮಿಷಗಳ ಆಟದಲ್ಲಿ 21-12, 22-10 ಪಾಯಿಂಟ್ ಅಂತರದಲ್ಲಿ ಸೋಲಿಸಿದರು.


Saina Nehwal, Kidambi Srikanth Win China Open Titles

Kidambi Srikanth beat home favourite Lin Dan of China to record the biggest win in his career and win the prestigious China Open Super Series men's singles title.

 Saina Nehwal had earlier won the women's title by beating Japan's Akane Yamaguchi in straight sets.

Kidambi Srikanth recorded a rare feat by an Indian when he beat home favourite and two-time Olympic champion Lin Dan (21-19, 21-17) to win the China Open Super Series tournament on Sunday. This was the biggest win of his career so far.
The 21-year-old from Andhra Pradesh showed nerves of steel to produce a dominating performance which helped him see off five-time world champion Lin 21-19 21-17 in the men's singles final which lasted 46 minutes here.
Srikanth, who won the Thailand Open Grand Prix Gold last year, had finished runners-up at the 2014 India Open Grand Prix Gold event in Lucknow and was a quarter-finalist in this year's Malaysian Open.
Saina mixed her strokes well to dominate the rallies but she still found it difficult to find a chink in the Japanese's armour who returned everything that was directed at her.
At 18-18, Saina earned a point with a disguised net shot but the Indian hit one long and then missed another point to allow Akane to close in at 20-19. However, a couple of long shots by the Japanese swung the match other way, sealing the title in the Indian's name.

No comments:

Advertisement