Sunday, November 16, 2014

'ಆಧಾರ್' ಕಾರ್ಡ್ ಇಲ್ಲದವರಿಗೂ ಅಡುಗೆ ಅನಿಲ ನೇರ ನಗದು ಸಬ್ಸಿಡಿ

'ಆಧಾರ್' ಕಾರ್ಡ್ ಇಲ್ಲದವರಿಗೂ ಅಡುಗೆ ಅನಿಲ ನೇರ ನಗದು ಸಬ್ಸಿಡಿ
 ಪರಿಷ್ಕೃತ ಯೋಜನೆ ಜಾರಿ
 ನವದೆಹಲಿ: ಅಡುಗೆ ಅನಿಲ ಗ್ರಾಹಕರ ನೇರ ನಗದು ಸಬ್ಸಿಡಿ ಯೋಜನೆಯನ್ನು ಪೆಟ್ರೋಲಿಯಂ ಸಚಿವಾಲಯವು ಪರಿಷ್ಕರಿಸಿದ್ದು ಅದರಂತೆ ಆಧಾರ್ ಕಾರ್ಡ್ ಇಲ್ಲದವರಿಗೂ ಇದು ವಿಸ್ತರಣೆಯಾಗಿದೆ.

 ಯೋಜನೆಯು ಶನಿವಾರದಿಂದ 54 ಜಿಲ್ಲೆಗಳಲ್ಲಿ ಮತ್ತು ಜನವರಿ 1ರಿಂದ ರಾಷ್ಟ್ರಾದ್ಯಂತ 
ಅನ್ವಯಗೊಳ್ಳಲಿದೆ.

 'ಯೋಜನೆಗೆ ಈ ಮೊದಲೇ ಸೇರ್ಪಡೆಗೊಂಡವರು ಮತ್ತು ತಮ್ಮ ಬ್ಯಾಂಕ್ ಖಾತೆಗಳ ಮೂಲಕ ನಗದು ಸಬ್ಸಿಡಿ ಪಡೆದವರು ಇನ್ನು ಮುಂದೆ ಏನೂ ಮಾಡಬೇಕಾಗಿಲ್ಲ. ದೃಢಪಡಿಸಿಕೊಳ್ಳಲು ಅವರು ತಮ್ಮ ನಗದು ವರ್ಗಾವಣೆ ದೂರು ಸ್ಥಿತಿಗತಿಯನ್ನು -
http://mylpg.in/ ವೆಬ್​ಸೈಟ್​ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ತೈಲ ಸಚಿವಾಲಯ ಹೇಳಿಕೆ ತಿಳಿಸಿದೆ.

 'ತಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ ಎಂಬುದಾಗಿ ದೃಢ ಪಡಿಸುವ ಗ್ರಾಹಕರು, ನೇರವಾಗಿ ಆಧಾರ್ ಕಾರ್ಡ್​ನ್ನು ಹಾಜರು ಪಡಿಸದೆಯೇ ತಮ್ಮ ಬ್ಯಾಂಕ್ ಖಾತೆಗೆ ನಗದು ಸಬ್ಸಿಡಿ ಪಡೆಯಬಹುದು. ಆದರೆ ಆಧಾರ್ ಕಾರ್ಡ್ ಲಭಿಸಿದಾಗ ಅವರು ಆಧಾರ್ ಆಧಾರಿತ ನಗದು ವರ್ಗಾವಣೆ' ಯೋಜನೆಗೆ ಬದಲಾವಣೆ ಮಾಡಿಕೊಳ್ಳಬಹುದು' ಎಂದು ಹೇಳಿಕೆ ತಿಳಿಸಿದೆ.

 ನಗದು ವರ್ಗಾವಣೆ ಬಗ್ಗೆ ದೂರು ಸಲ್ಲಿಸದವರಿಗೆ ಮೂರು ತಿಂಗಳ 'ಗ್ರೇಸ್' ಅವಧಿ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಅವರಿಗೆ ಸಬ್ಸಿಡಿ ದರದಲ್ಲಿಯೇ ಸಿಲಿಂಡರ್ ಲಭಿಸುತ್ತದೆ. ಆ ಬಳಿಕ ಅವರಿಗೆ ಮೂರು ತಿಂಗಳ 'ರ್ಪಾಂಗ್' ಅವಧಿ ಇರುತ್ತದೆ. 'ರ್ಪಾಂಗ್' ಅವಧಿಯಲ್ಲಿ ಅವರು ಮಾರುಕಟ್ಟೆ ದರ ಪಾವತಿ ಮಾಡಿ ಸಿಲಿಂಡರ್ ಕೊಳ್ಳಬೇಕು. ರ್ಪಾಂಗ್ ಅವಧಿಯೊಳಗೆ ಒಮ್ಮೆ ಯೋಜನೆಗೆ ಸೇರ್ಪಡೆಯಾದರೆ ಅವರು ಪುನಃ ಸಬ್ಸಿಡಿಗೆ ಅರ್ಹರಾಗುತ್ತಾರೆ. ಅವರಿಗೆ ಬ್ಯಾಂಕ್ ಖಾತೆ ಮೂಲಕ ಸಬ್ಸಿಡಿ ಹಣ ವರ್ಗಾವಣೆಗೊಳ್ಳುತ್ತದೆ' ಎಂದು ಹೇಳಿಕೆ ಸ್ಪಷ್ಟ ಪಡಿಸಿದೆ.

 ಇದಲ್ಲದೆ ಅರ್ಹ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಮೊದಲ ಸಿಲಿಂಡರ್ ಗಾಗಿ ಬುಕಿಂಗ್ ಮಾಡಿದ ತತ್ ಕ್ಷಣವೇ ಖಾಯಂ ಮುಂಗಡ ಹಣ ಠೇವಣಿ ಇಡಲಾಗಿರುತ್ತದೆ. ಈ ಮುಂಗಡ ಠೇವಣಿಯು ಗ್ರಾಹಕರು ಮೊದಲ ಸಿಲಿಂಡರ್​ಗೆ ಮಾರುಕಟ್ಟೆ ದರದಲ್ಲಿ ಹೆಚ್ಚಿನ ಪಾವತಿ ಪಾವತಿ ಮಾಡಬೇಕಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಈಗ ಹೊಸದಾಗಿ ಯೋಜನೆಗೆ ಸೇರ್ಪಡೆಯಾಗುವವರಿಗೆ ಖಾಯಂ ಮುಂಗಡವನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ' ಎಂದೂ ಹೇಳಿಕೆ ತಿಳಿಸಿದೆ.

ಪರಿಷ್ಕೃತ ಯೋಜನೆಯು 11 ರಾಜ್ಯಗಳಲ್ಲಿ ಗುರುತಿಸಲಾದ 54 ಜಿಲ್ಲೆಗಳಲ್ಲಿ ಜಾರಿಗೆ ಬರಲಿದ್ದು ಸುಮಾರು 2.30 ಕೋಟಿ ಮನೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಈ ಜಿಲ್ಲೆಗಳಲ್ಲಿ ಶೇಕಡಾ 95ರಷ್ಟು ಮಂದಿ ಆಧಾರ್ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

The Direct Benefit transfer of LPG (DBTL) scheme


 in new Avatar

New Delhi: The Direct Benefit transfer of LPG (DBTL) scheme has been launched  in a new avatar. Under the modified version, it's not mandatory for consumers to link their Aadhaar numbers to LPG distributors to avail subsidy.

 All one needs is a bank account.

The modified scheme was launched in Tumakuru and Mysuru districts on Saturday, 16th November 2014  along with 52 other districts in the country.

 In other areas it will be launched from 1st January 2015.

No comments:

Advertisement