Sunday, November 10, 2019

ಬಾಲರಾಮನಿಗೆ ಜನುಮಭೂಮಿ, ಮಸೀದಿಗೆ ಪರ್ಯಾಯ ಭೂಮಿ

ಬಾಲರಾಮನಿಗೆ ಜನುಮಭೂಮಿ, ಮಸೀದಿಗೆ ಪರ್ಯಾಯ ಭೂಮಿ
ಸುಪ್ರೀಂಕೋರ್ಟ್ ಚಾರಿತ್ರಿಕ ತೀರ್ಪು, ದಶಕಗಳ ಅಯೋಧ್ಯಾ ವ್ಯಾಜ್ಯಕ್ಕೆ ತೆರೆ
ನವದೆಹಲಿ: ರಾಮಲಲ್ಲಾಗೆ ಅಯೋಧ್ಯೆಯ ವಿವಾದಿತ .೭೭ ಎಕರೆ ಜಾಗ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣಕ್ಕೆ ಎಕರೆ ಪರ್ಯಾಯ ಭೂಮಿ ನೀಡುವಂತೆ ಸರ್ವಾನುಮತದ ಐತಿಹಾಸಿಕ ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿದ್ದ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸೂಕ್ಷ್ಮದ ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದಕ್ಕೆ 2019 ನವೆಂಬರ್ 9ರ ಶನಿವಾರ ತೆರೆ ಎಳೆಯಿತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವ ಹಾಗೂ ನ್ಯಾಯಮೂರ್ತಿಗಳಾದ ಎಸ್.. ಬೋಬ್ಡೆ, ಡಿ.ವೈ.ಚಂದ್ರಚೂಡ್,  ಅಶೋಕ ಭೂಷಣ್ ಮತ್ತು ಎಸ್.. ನಜೀರ್ ಅವರನ್ನು ಒಳಗೊಂಡ ಪಂಚ ಸದಸ್ಯ ಸಂವಿಧಾನಪೀಠವು ಬಾಲ ರಾಮ ದೇವರನ್ನು ಪ್ರತಿನಿಧಿಸುವ ರಾಮ ಲಲ್ಲಾ ವಿರಾಜಮಾನ್ಗೆ ಮಂದಿರ ನಿರ್ಮಾಣಕ್ಕಾಗಿ .೭೭ ಎಕರೆ ಜಾಗವನ್ನು ನೀಡಬೇಕು ಮತ್ತು ಅದಕ್ಕಾಗಿ ಟ್ರಸ್ಟ್ ಒಂದನ್ನು ಕೇಂದ್ರ ಸರ್ಕಾರವು ರಚಿಸಬೇಕು ಎಂದು ಸರ್ವಾನುಮತದ ತೀರ್ಪು ನೀಡಿತು. ಟ್ರಸ್ಟ್ ರಚನೆಗೆ ಮೂರು ತಿಂಗಳ ಗಡುವು ನೀಡಿದ ಪೀಠ, ಅಲ್ಲಿಯವರೆಗೆ ಭೂಮಿಯು ಅಧಿಕೃತ ರಸೀವರ್ ಸುಪರ್ದಿಯಲ್ಲಿ ಇರಬೇಕು ಎಂದು ಆಜ್ಞಾಪಿಸಿತು.

ಒಳ ಮತ್ತು ಹೊರ ಪ್ರಾಂಗಣದ ಸ್ವಾಧೀನವನ್ನು ಟ್ರಸ್ಟಿಗಳ ಮಂಡಳಿಗೆ ಒಪ್ಪಿಸಬೇಕು. ಟ್ರಸ್ಟ್ ರೂಪುರೇಷೆಯನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕುಎಂದು ಸುಪ್ರೀಂಕೋರ್ಟ್  ತನ್ನ ೧೦೪೫ ಪುಟಗಳ ತೀರ್ಪಿನಲ್ಲಿ ಆಜ್ಞಾಪಿಸಿತು. ತೀರ್ಪನ್ನು ಸಿಜೆಐ ರಂಜನ್ ಗೊಗೋಯಿ ಅವರು ಓದಿ ಹೇಳಿದರು.

ರಾಮನು ಜನಿಸಿದ ಸ್ಥಳ ಅಯೋಧ್ಯೆ ಎಂಬ ಹಿಂದುಗಳ ನಂಬಿಕೆಯು ವಿವಾದಾತೀತ ಎಂದು ಹೇಳಿದ ಪೀಠವು, ರಾಮಲಲ್ಲಾನೇ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿತು. ವಿವಾದಿತ ಜಾಗ ರಾಮಲಲ್ಲಾನಿಗೆ ಸೇರಿದ್ದು, ಅಲ್ಲಿ ಮಂದಿರ ನಿರ್ಮಾಣಮಾಡಬೇಕು. ಮಂದಿರದ ಹೊಣೆಯನ್ನು ಟ್ರಸ್ಟಿಗೆ ವಹಿಸಬೇಕು ಎಂದು ಪೀಠ ಹೇಳಿತು.

ಬಾಬರಿ ಮಸೀದಿಯು ಖಾಲಿಜಾಗದಲ್ಲಿ ನಿರ್ಮಾಣಗೊಂಡಿಲ್ಲ, ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ ಎಂದು ಪೀಠವು ಹೇಳಿತು.

ಭೂಮಿಯು ಯಾರಿಗೆ ಸೇರಿದ್ದು ಎಂಬುದು ಕಾನೂನಿನ ವಿವಾದ. ಮಸೀದಿಗೆ ಹಾನಿ ಮಾಡಿದ್ದು, ಕಾನೂನನ್ನು ಕೈಗೆತ್ತಿಕೊಂಡದ್ದು ತಪ್ಪು ಎಂದು ಹೇಳಿದ ಪೀಠ, ಧರ್ಮ ಅಥವಾ ನಂಬಿಕೆಗಳ ಮೇಲಷ್ಟೇ ವ್ಯಾಜ್ಯ ಇತ್ಯರ್ಥ ಸಾಧ್ಯವಿಲ್ಲ. ಕಾನೂನಿನ ಪರಿಧಿಯಲ್ಲಷ್ಟೇ ಅದನ್ನು ಇತ್ಯರ್ಥ ಪಡಿಸಬಹುದು ಎಂದು ಹೇಳಿತು.

ಸರ್ಕಾರವು ೧೯೪೯ ಮತ್ತು ೧೯೯೨ರಲ್ಲಿ ಎರಡು ಬಾರಿ ತಪ್ಪೆಸಗಿದೆ, ಆದ್ದರಿಂದ ಮುಸ್ಲಿಮ್ ಕಕ್ಷಿದಾರರದ ಸುನ್ನಿ ವಕ್ಫ್ ಮಂಡಳಿಗೆ  ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಎಕರೆ ಪರ್ಯಾಯಭೂಮಿಯನ್ನು ನೀಡಬೇಕು ಪೀಠವು ಸರ್ಕಾರಕ್ಕೆ ಆದೇಶ ನೀಡಿತು.

ನಿರ್ಮೋಹಿ ಆಖಾಡವುಶೆಬಾಯಿಟ್ಅಥವಾ ರಾಮಲಲ್ಲಾನ ಭಕ್ತ ಅಲ್ಲ ಎಂಬುದಾಗಿ ಪೀಠ ಹೇಳುವುದರೊಂದಿಗೆ ನಿರ್ಮೋಹಿ ಆಖಾಡವು ಹಿನ್ನಡೆ ಅನುಭವಿಸಿತು. ಅಖಾಡದ ಅರ್ಜಿಯು ವಿಳಂಬಿತ ಅರ್ಜಿಯಾಗಿದ್ದು, ಸಮಯದ ಮಿತಿಯ ಕಾರಣಕ್ಕಾಗಿ ತಿರಸ್ಕೃತವಾಗಿದೆ ಎಂದು ಪೀಠವು ಹೇಳಿತು.

ಉನ್ನತ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನಾಯಕರಿಂದ ಶಾಂತಿ ಹಾಗೂ ಸೌಹಾರ್ದ ಕಾಯ್ದುಕೊಳ್ಳುವಂತೆ ಮಾಡಲಾದ ಮನವಿಗಳು ಮತ್ತು ದುಷ್ಕರ್ಮಿಗಳಿಂದ ಅಹಿತಕರ ಘಟನೆಗಳು ಸಂಭವಿಸಿದಂತೆ ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಭದ್ರತಾ ಕಟ್ಟೆಚ್ಚರದ ಮಧ್ಯೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿತು.

ಮಸೀದಿಯನ್ನು ಖಾಲಿ ಭೂಮಿಯಲ್ಲಿ ನಿರ್ಮಿಸಲಾಗಿರಲಿಲ್ಲ ಎಂದು ಹೇಳಿದ ತೀರ್ಪು, ಸಂರಚನೆಯೊಂದರ ಮೇಲೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂಬುದಾಗಿ ಭಾರತೀಯ ಪ್ರಾಕ್ತನ ಸಮೀಕ್ಷೆಯು (ಎಎಎಸ್) ನೀಡಿದ್ದ ವರದಿಗೆ ಒತ್ತು ನೀಡಿತು. ಆದರೆ ಪ್ರಾಕ್ತನ ಸಮೀಕ್ಷೆಯು ತನ್ನ ವರದಿಯಲ್ಲಿ ವಿವಾದಾತ್ಮಕ ಕಟ್ಟಡವನ್ನು ನಿರ್ಮಿಸಲು ದೇವಾಲಯವನ್ನು ಕೆಡವಲಾಗಿತ್ತು ಎಂಬುದಾಗಿ ಎಂಬ ನಿರ್ದಿಷ್ಟ ಅಭಿಪ್ರಾಯ ನೀಡಿಲ್ಲ ಎಂದೂ ತೀರ್ಪು ಉಲ್ಲೇಖಿಸಿತು.

ಒಳ ಪ್ರಾಂಗಣದ ಮೇಲಿನ ತನ್ನ ಹಕ್ಕುಗಳನ್ನ ಸಾಬೀತು ಪಡಿಸಲು ಮುಸ್ಲಿಮ್ ಕಕ್ಷಿದಾರರು ಸಮರ್ಥರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. ’ಮುಸ್ಲಿಮ್ ಕಕ್ಷಿದಾರರು ತಮಗೆ ಸ್ವಾಧೀನ ಪೂರ್ವಕ ನಿಯಂತ್ರಣ ಇದ್ದುದನ್ನು ಇಲ್ಲವೇ ಅಲ್ಲಿ ನಮಾಜ್ ನಡೆಯುತ್ತಿದ್ದುದನ್ನು ಸಾಬೀತು ಪಡಿಸುವಂತಹ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಪೀಠ ಹೇಳಿತು.

ಮುಸ್ಲಿಮರಷ್ಟೇ ಸ್ವಾಮ್ಯ ಹೊಂದಿದ್ದಾರೆ ಎಂಬುದನ್ನು ಸೂಚಿಸುವಂತಹ ಸಾಕ್ಷ್ಯಗಳು ಇಲ್ಲ. ರಾಮಛಬೂತ್ರ ಮತ್ತು ಸೀತಾ ರಸೋಯಿಯಲ್ಲಿ ಹಿಂದುಗಳು ಪೂಜೆ ಮಾಡುತ್ತಿದ್ದರು ಎಂಬ ವಾಸ್ತವವು ಹೊರ ಪ್ರಾಂಗಣದ ಮೇಲೆ ಹಿಂದುಗಳು ಅಡಚಣೆರಹಿತ ಸ್ವಾಮ್ಯ ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆಎಂದು ನಾಯಮೂರ್ತಿ ಗೊಗೋಯಿ ಹೇಳಿದರು. ಕೇವಲ ಶ್ರದ್ಧೆ ಮತ್ತು ನಂಬಿಕೆಯನ್ನು ಆಧರಿಸಿ ಹಕ್ಕನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದೂ ಅವರು ನುಡಿದರು.

ಶನಿವಾರ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ಕಲಾಪ ಆರಂಭಿಸುವುದಕ್ಕೆ ಒಂದು ದಿನ ಮುಂಚಿತವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಕರೆಸಿಕೊಂಡು ಆಡಳಿತವು ತೀರ್ಪಿನ ಬಳಿಕದ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿದೆಯೇ ಎಂದು ಸ್ವತಃ ಮನನ ಮಾಡಿಕೊಂಡಿದ್ದರು.

ಪ್ರಕರಣದ
ವಿಚಾರಣೆ ನಡೆಸಿದ್ದ ಐವರೂ ನ್ಯಾಯಮೂರ್ತಿಗಳ ಮನೆಗಳ ಸುತ್ತ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು.

೨೦೧೦ರ ಅಲಹಾಬಾದ್ ಹೈಕೋರ್ಟ್ ಭೂವಿವಾದದ ಮೇಲೆ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಮೇಲಿನ ದೈನಂದಿನ ವಿಚಾರಣೆಯನ್ನು ಸಂವಿಧಾನ ಪೀಠವು ಆಗಸ್ಟ್ ತಿಂಗಳಲ್ಲಿ ಆರಂಭಿಸಿತ್ತು. ಇದಕ್ಕೆ ಮುನ್ನ ನ್ಯಾಯಾಲಯದ ಹೊರಗೆ ಮಾತುಕತೆಗಳ ಮೂಲಕ ಸಂಧಾನ ನಡೆಸಲು ಅದು ಕೈಗೊಂಡ ಪ್ರಯತ್ನ ಫಲಪ್ರದವಾಗಿರಲಿಲ್ಲ.

ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತನ್ನ : ಬಹುಮತದ ತೀರ್ಪಿನಲ್ಲಿ ವಿವಾದಿತ .೭೭ ಎಕರೆ ಭೂಮಿಯನ್ನು ಸಮಾನವಾಗಿ ಕಕ್ಷಿದಾರರಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ್ ಮಧ್ಯೆ ಹಂಚಿಕೆ ಮಾಡುವಂತೆ ಆದೇಶ ನೀಡಿತ್ತು. ಹಿಂದೂಗಳು ಮತ್ತು ಮುಸ್ಲಿಮರಿಬ್ಬರಿಗೂ ವಿವಾದಿತ ಭೂಮಿಯ ಮೇಲೆ ಹಕ್ಕಿದೆ ಎಂದು ಹೈಕೋರ್ಟ್ ಪೀಠ ಹೇಳಿತ್ತು.

ಬಾಬರನ ಆದೇಶದ ಮೇರೆಗೆ ಕಮಾಂಡರ್ ಮೀರ್ ಬಾಕಿ ನಿರ್ಮಿಸಿದ್ದ ೧೬ನೇ ಶತಮಾನದ ವಿವಾದಿತ ಬಾಬರಿ ಮಸೀದಿ ಕಟ್ಟಡವನ್ನು ೧೯೯೨ರ ಡಿಸೆಂಬರ್ ೬ರಂದು ಹಿಂದೂ ಕರಸೇವಕರು ದ್ವಂಸಗೊಳಿಸಿದ್ದರು.

No comments:

Advertisement